AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಣ್ಣಿಮೆ, ಅಮಾವಾಸ್ಯೆಗಳಲ್ಲಿ ಪ್ರಯಾಣ ಮಾಡಬಾರದು.. ಏಕೆ ಗೊತ್ತಾ?

ಅಮಾವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ದುಷ್ಟ ಶಕ್ತಿಗಳ ಕಾಟ ಹೆಚ್ಚಿರುತ್ತೆ ಅಂತಾ ಪುರಾಣಗಳಲ್ಲಿ ಹೇಳಲಾಗಿದೆ. ಹೀಗಾಗೇ ಆ ದಿನಗಳನ್ನು ದೋಷಿತ ಕಾಲ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಆ ಸಮಯದಲ್ಲಿ ತೊಂದರೆಯಾಗೋ ಸಾಧ್ಯತೆ ಹೆಚ್ಚಿರೋದ್ರಿಂದ ಈ ಮೇಲಿನ ನಿಯಮಗಳನ್ನು ಪಾಲಿಸಿದ್ರೆ ತೊಂದರೆಗಳು ನಿವಾರಣೆಯಾಗುತ್ತೆ ಎನ್ನಲಾಗುತ್ತೆ.

ಹುಣ್ಣಿಮೆ, ಅಮಾವಾಸ್ಯೆಗಳಲ್ಲಿ ಪ್ರಯಾಣ ಮಾಡಬಾರದು.. ಏಕೆ ಗೊತ್ತಾ?
ಅಮಾವಾಸ್ಯೆಯ ರಾತ್ರಿ
ಆಯೇಷಾ ಬಾನು
|

Updated on: Apr 12, 2021 | 7:07 AM

Share

ನಾವು ಎಲ್ಲಿಗಾದರೂ ಹೋಗಬೇಕು ಎಂದುಕೊಂಡರೆ ದಿನ, ಗಳಿಗೆ ನೋಡೋದು ಕಡಿಮೆ. ಈಗಿನ ಕಾಲದ ಯೂತ್ಸ್ ಯಾವ ಶುಭ ಸಮಯಕ್ಕೂ ಕಾಯುವುದಿಲ್ಲ. ಆದ್ರೆ ಧರ್ಮ ಶಾಸ್ತ್ರದ ಪ್ರಕಾರ, ಯಾವ ಯಾವ ದಿನಗಳಲ್ಲಿ ಯಾವ ದಿಕ್ಕಿನ ಕಡೆಗೆ ಪ್ರಯಾಣ ಮಾಡಬೇಕು? ಯಾವ ದಿಕ್ಕಿನ ಕಡೆಗೆ ಪ್ರಯಾಣ ಮಾಡಬಾರದು ಅನ್ನೋದನ್ನು ಉಲ್ಲೇಖಿಸಲಾಗಿದೆ. ಪುರಾಣಗಳ ಪ್ರಕಾರ, ಪ್ರಯಾಣ ಆರಂಭಿಸೋಕೂ ಮುಂಚೆ ದೇವರನ್ನು ಪ್ರಾರ್ಥಿಸಿ, ಪ್ರಯಾಣಕ್ಕೆ ತೆರಳೋ ವಾಹನಕ್ಕೆ ಪೂಜೆ ಸಲ್ಲಿಸಬೇಕು. ನಂತರ ಪ್ರಯಾಣವನ್ನು ಆರಂಭಿಸಬೇಕು ಎನ್ನಲಾಗುತ್ತೆ. ಹಾಗಿದ್ರೆ ಯಾವ ದಿನ, ಯಾವ ದಿಕ್ಕಿನ ಕಡೆ ಪ್ರಯಾಣಿಸಬಾರದು ಅನ್ನೋದನ್ನು ಇಲ್ಲಿ ತಿಳಿಯಿರಿ.

ಯಾವ ದಿನ, ಯಾವ ದಿಕ್ಕಿನ ಕಡೆ ಪ್ರಯಾಣ ಮಾಡಬಾರದು? 1.ನವಮಿ, ಪಾಡ್ಯಮಿಯಲ್ಲಿ ಪೂರ್ವ ದಿಕ್ಕಿನ ಕಡೆ ಪ್ರಯಾಣಿಸಬಾರದು. 2.ವಿಜಯದಶಮಿ ದಿನ ಉತ್ತರ ದಕ್ಕಿನ ಕಡೆ ಪ್ರಯಾಣಿಸಬಾರದು. 3.ತದಿಗೆ, ಏಕಾದಶಿಯಂದು ಆಗ್ನೇಯ ದಿಕ್ಕಿನ ಕಡೆ ಪ್ರಯಾಣಿಸಬಾರದು. 4.ಚೌತಿ, ದ್ವಾದಶಿಗಳಲ್ಲಿ ನೈಋತ್ಯ ದಿಕ್ಕಿನ ಕಡೆ ಪ್ರಯಾಣಿಸಬಾರದು. 5.ಹುಣ್ಣಿಮೆ, ಸಪ್ತಮಿಗಳಲ್ಲಿ ವಾಯುವ್ಯ ದಿಕ್ಕಿನ ಕಡೆ ಪ್ರಯಾಣಿಸಬಾರದು. 6.ಅಮಾವಾಸ್ಯೆ, ಅಷ್ಟಮಿ ದಿನಗಳಲ್ಲಿ ಈಶಾನ್ಯ ದಿಕ್ಕಿನ ಕಡೆಗೂ ಪ್ರಯಾಣಿಸಬಾರದು.

ಈ ಮೇಲೆ ತಿಳಿಸಿದ ದಿನಗಳಲ್ಲೇ ಪ್ರಯಾಣ ಮಾಡುವ ಅನಿವಾರ್ಯತೆ ಇದ್ದಲ್ಲಿ ಕೆಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎನ್ನುತ್ತೆ ಧರ್ಮಶಾಸ್ತ್ರ.

ಪ್ರಯಾಣ ಮಾಡಬೇಕಾದ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳು 1.ಪ್ರಯಾಣ ಮಾಡುವ ವಾಹನಕ್ಕೆ ಪೂಜೆ ಸಲ್ಲಿಸಬೇಕು 2.ಪ್ರಯಾಣವನ್ನು ಆರಂಭಿಸೋಕೂ ಮೊದಲು ದೇವಸ್ಥಾನಕ್ಕೆ ತೆರಳಬೇಕು. 3.ದೇವರನ್ನು ಭಕ್ತಿಯಿಂದ ಪ್ರಾರ್ಥಿಸಬೇಕು. 4.ಪ್ರಯಾಣದ ಸಮಯದಲ್ಲಿ ಸಂತರ ಧ್ವನಿಯಲ್ಲಿನ ಭಜನೆ ಕೇಳಬೇಕು. 5.ಪ್ರಯಾಣಿಕರು ಸತತವಾಗಿ ದೇವರ ನಾಮ, ಜಪಗಳನ್ನು ಮಾಡಬೇಕು. 6.ವಾಹನ ಸವಾರರು ಸಾವಕಾಶವಾಗಿ ವಾಹನ ಓಡಿಸಬೇಕು.

ಅಮಾವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ದುಷ್ಟ ಶಕ್ತಿಗಳ ಕಾಟ ಹೆಚ್ಚಿರುತ್ತೆ ಅಂತಾ ಪುರಾಣಗಳಲ್ಲಿ ಹೇಳಲಾಗಿದೆ. ಹೀಗಾಗೇ ಆ ದಿನಗಳನ್ನು ದೋಷಿತ ಕಾಲ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಆ ಸಮಯದಲ್ಲಿ ತೊಂದರೆಯಾಗೋ ಸಾಧ್ಯತೆ ಹೆಚ್ಚಿರೋದ್ರಿಂದ ಈ ಮೇಲಿನ ನಿಯಮಗಳನ್ನು ಪಾಲಿಸಿದ್ರೆ ತೊಂದರೆಗಳು ನಿವಾರಣೆಯಾಗುತ್ತೆ ಎನ್ನಲಾಗುತ್ತೆ.

ಇದನ್ನೂ ಓದಿ: ಸೂಯೆಜ್ ಕಾಲುವೆಯಲ್ಲಿ ದೈತ್ಯ ಹಡಗು ಮತ್ತೆ ತೇಲಲು ಹುಣ್ಣಿಮೆ ಚಂದ್ರನೇ ಕಾರಣ!

(Why Should Not Travel on Hunnime and Amavasya Night)

ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು