AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಫ್ಲೈಯಿಂಗ್ ಫಿಲಿಪ್: ಇದಪ್ಪಾ ಕ್ಯಾಚ್ ಅಂದ್ರೆ..!

VIDEO: ಫ್ಲೈಯಿಂಗ್ ಫಿಲಿಪ್: ಇದಪ್ಪಾ ಕ್ಯಾಚ್ ಅಂದ್ರೆ..!

ಝಾಹಿರ್ ಯೂಸುಫ್
|

Updated on: Jul 13, 2025 | 12:56 PM

Share

West Indies vs Australia, 3rd Test: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 225 ರನ್​ಗಳಿಸಿ ಆಲೌಟ್ ಆಗಿದೆ. ವೆಸ್ಟ್ ಇಂಡೀಸ್ ಪರ ಶಮರ್ ಜೋಸೆಫ್ 17.3 ಓವರ್​ಗಳಲ್ಲಿ ಕೇವಲ 33 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಜಸ್ಟಿನ್ ಗ್ರೀವ್ಸ್ ಹಾಗೂ ಜೇಡನ್ ಸೀಲ್ಸ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿದು ವೆಸ್ಟ್ ಇಂಡೀಸ್​ನ ಅ್ಯಂಡರ್ಸನ್ ಫಿಲಿಪ್ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಜಮೈಕಾದ ಸಬೀನಾ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಸ್ಫೋಟಕ ದಾಂಡಿಗ ಟ್ರಾವಿಸ್ ಹೆಡ್ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ ಜಸ್ಟಿನ್ ಗ್ರೀವ್ಸ್​ ಎಸೆದ 65ನೇ ಓವರ್​ನ ಕೊನೆಯ ಎಸೆತದಲ್ಲಿ ಮಿಡ್ ಆನ್​ನತ್ತ ಭರ್ಜರಿ ಹೊಡೆತಕ್ಕೆ ಮುಂದಾಗಿದ್ದರು.

ಈ ವೇಳೆ ಅಲ್ಲೇ ಫೀಲ್ಡಿಂಗ್​ನಲ್ಲಿದ್ದ ಅ್ಯಂಡರ್ಸನ್ ಫಿಲಿಪ್ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿಯುವ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ವಿಶೇಷ ಎಂದರೆ ಈ ಫಿಲಿಪ್ ಈ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಬದಲಿ ಆಟಗಾರನಾಗಿ ಫೀಲ್ಡಿಂಗ್​ಗೆ ಬಂದಿದ್ದ ಅ್ಯಂಡರ್ಸನ್ ಫಿಲಿಪ್ ಅತ್ಯುತ್ತಮ ಕ್ಷೇತ್ರರಕ್ಷಣೆಯ ಮೂಲಕ ಟ್ರಾವಿಸ್ ಹೆಡ್ (20) ಔಟ್ ಆಗಲು ಮುಖ್ಯ ಕಾರಣರಾದರು.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 225 ರನ್​ಗಳಿಸಿ ಆಲೌಟ್ ಆಗಿದೆ. ವೆಸ್ಟ್ ಇಂಡೀಸ್ ಪರ ಶಮರ್ ಜೋಸೆಫ್ 17.3 ಓವರ್​ಗಳಲ್ಲಿ ಕೇವಲ 33 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಜಸ್ಟಿನ್ ಗ್ರೀವ್ಸ್ ಹಾಗೂ ಜೇಡನ್ ಸೀಲ್ಸ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದ್ದಾರೆ.