IPL 2021 RCB vs SRH Preview: ದೇವದತ್ ಪಡಿಕ್ಕಲ್ ಇಂದು ಆಡಲಿರುವುದರಿಂದ ಆರ್ಸಿಬಿ ತಂಡದ ಬ್ಯಾಲೆನ್ಸ್ ಉತ್ತಮಗೊಳ್ಳಲಿದೆ
ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿರುವ ವಿರಾಟ್ ಕೊಹ್ಲಿ ಪಡೆ ಆತ್ಮವಿಶ್ವಾಸದಿಂದ ಬೀಗುತ್ತಿದೆ ಮತ್ತು ಬುಧವಾರದ ಪಂದ್ಯಕ್ಕೆ ಟೀಮಿನ ರೆಗ್ಯುಲರ್ ಓಪನರ್ ಮತ್ತು ಭಾರೀ ಪ್ರತಿಭಾವಂತ ಆಟಗಾರ ದೇವದತ್ ಪಡಿಕ್ಕಲ್ ವಾಪಸ್ಸಾಗಲಿರುವುದರಿಂದ ಟೀಮಿನ ಬ್ಯಾಲೆನ್ಸ್ ಮತ್ತಷ್ಟು ಉತ್ತಮಗೊಳ್ಳಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಆರನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ಬುಧವಾರ ನಡೆಯಲಿದೆ. ಎರಡೂ ತಂಡಗಳು ಈ ಸೀಸನ್ನಲ್ಲಿ ಒಂದೊಂದು ಪಂದ್ಯವನ್ನು ಆಡಿದ್ದು ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ಟೀಮನ್ನು ಸೋಲಿಸಿದರೆ, ಹೈದರಾಬಾದ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋತಿತ್ತು. ಮೊದಲ ಪಂದ್ಯವನ್ನು ಸೋತ ಡೇವಿಡ್ ವಾರ್ನರ್ ಅವರ ಹೈದರಾಬಾದ್ ತಂಡ ತಾನು ಎಡವಿದ್ದೆಲ್ಲಿ ಅಂತ ಆತ್ಮಾವಲೋಕನ ಮಾಡಿಕೊಂಡಿರುತ್ತದೆ. ಖುದ್ದು ವಾರ್ನರ್ ಈ ಪಂದ್ಯದಲ್ಲಿ ಫೇಲಾಗಿದ್ದರು. ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಲು ಬಂದ ವೃದ್ಧಿಮಾನ್ ಸಹಾ ಕೂಡ ರನ್ ಗಳಿಸಲು ವಿಫಲರಾದರು. ಹೈದರಾಬಾದ್ ತಂಡ ಈ ಪ್ರಯೋಗ ಅಂದರೆ, ಸಹಾ ಅವರನ್ನು ಓಪನರ್ ಅಗಿ ಕಳಿಸಿದ್ದು-ಫೇಲ್ ಆಗಿದ್ದರಿಂದ ಬುಧವಾರದ ಪಂದ್ಯದಲ್ಲಿ ಸಹಾ ಜಾಗದಲ್ಲಿ ಬೇರೆ ಅಟಗಾರ ಇನ್ನಿಂಗ್ಸ್ ಆರಂಬಿಸಬಹುದು.
ಕಳೆದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ 40 ಎಸೆತಗಳಲ್ಲಿ 55 ರನ್ ಬಾರಿಸಿದ ಜಾನಿ ಬೇರ್ಸ್ಟೋ, 44 ಎಸೆತಗಳಲ್ಲಿ ಅಜೇಯ 61 ರನ್ ಬಾರಿಸಿದ ಮನೀಶ್ ಪಾಂಡೆ ಹೈದರಾಬಾದ್ಗೆ ಆಸರೆಯಾದರು. ಆದರೆ ಕೊನೆಯ ಓವರ್ಗಳಲ್ಲಿ ಪಾಂಡೆ ಬೌಂಡರಿಗಳನ್ನು ಬಾರಿಸಲು ವಿಫಲರಾಗಿದ್ದರಿಂದ ಹೈದರಾಬಾದ ಪಂದ್ಯ ಸೋಲಬೇಕಾಯಿತು. ಬೌಲಿಂಗ್ ವಿಭಾಗದಲ್ಲಿ ತಂಡದ ನೆಚ್ಚಿನ ಬೌಲರ್ಗಳಾಗಿರುವ ಭುವನೇಶ್ವರ್ ಕುಮಾರ್ ಮತ್ತು ಸಂದೀಪ್ ಶರ್ಮ ದಂಡನೆಗೊಳಗಾದರು.
ಆದರೆ ಸ್ಪಿನ್ನರ್ಗಳ ಉತ್ತಮ ದಾಳಿ ವೇಗದ ಬೌಲರ್ಗಳ ವೈಫಲ್ಯವನ್ನು ಮರೆಸಿತು. ಅಫ್ಘಾನಿಸ್ತಾನದ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ತಲಾ ಎರಡು ವಿಕೆಟ್ ಪಡೆದರು. ಭುವಿ ಮತ್ತು ಟಿ ನಟರಾಜನ್ ಒಂದೊಂದು ವಿಕೆಟ್ ಗಿಟ್ಟಿಸಿದರು. ಬೌಲಿಂಗ್ ದಾಳಿ ಓಕೆ, ಆದರೆ ಹೈದರಾಬಾದ್ ತಂಡಕ್ಕೆ ಬೇಕಿರುವುದು ಮಿಡ್ಲ್ ಆರ್ಡರ್ಲ್ಲಿ ಒಬ್ಬ ಫಿನಿಶರ್. ಜೊತೆಗೆ ಮೂರು ಇಲ್ಲವೇ ನಾಲ್ಕನೇ ಕ್ರಮಾಂಕದಲ್ಲಿ ಒಬ್ಬ ಸ್ಫೋಟಕ ಬ್ಯಾಟ್ಸ್ಮನ್ನ ಅಗತ್ಯವೂ ತಂಡಕ್ಕಿದೆ. ಆರ್ಸಿಬಿ ವಿರುದ್ಧ ಅಡಲಿರುವ ಪಂದ್ಯದಲ್ಲಿ ಈ ನ್ಯೂನತೆಯನ್ನು ಅದು ಸರಿಪಡಿಸಿಕೊಂಡೇ ಕಣಕ್ಕಿಳಿಯಬಹುದು.
ಅತ್ತ, 5 ಬಾರಿಯ ಚಾಂಪಿಯನ್ಸ್ ಆದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿರುವ ವಿರಾಟ್ ಕೊಹ್ಲಿ ಪಡೆ ಆತ್ಮವಿಶ್ವಾಸದಿಂದ ಬೀಗುತ್ತಿದೆ ಮತ್ತು ಬುಧವಾರದ ಪಂದ್ಯಕ್ಕೆ ಟೀಮಿನ ರೆಗ್ಯುಲರ್ ಓಪನರ್ ಮತ್ತು ಭಾರೀ ಪ್ರತಿಭಾವಂತ ಆಟಗಾರ ದೇವದತ್ ಪಡಿಕ್ಕಲ್ ವಾಪಸ್ಸಾಗಲಿರುವುದರಿಂದ ಟೀಮಿನ ಬ್ಯಾಲೆನ್ಸ್ ಮತ್ತಷ್ಟು ಉತ್ತಮಗೊಳ್ಳಲಿದೆ. ಮುಂಬೈ ವಿರುದ್ದ 29 ಎಸೆತಗಳಲ್ಲಿ 33 ರನ್ ಬಾರಿಸಿದ ಕೊಹ್ಲಿ ಬುಧವಾರದ ಪಂದ್ಯದಲ್ಲಿ ಬಿಗ್ ಇನ್ನಿಂಗ್ಸ್ ಆಡುವ ಸಂಕಲ್ಪದೊಂದಿಗೆ ಕಣಕ್ಕಿಳಿಯಲಿದ್ದಾರೆ.
All those magneto memes are wrong.
THIS is perfection?#PlayBold #WeAreChallengers #IPL2021 pic.twitter.com/nc4pc5NBSz
— Royal Challengers Bangalore (@RCBTweets) April 12, 2021
ಭಾರಿ ಮೊತ್ತಕ್ಕೆ ಖರೀದಿಯಾಗಿರುವ ಆಸ್ಟ್ರೇಲಿಯಾದ ಗ್ಲೆನ್ ಮಾಕ್ಸ್ವೆಲ್ ಆರ್ಸಿಬಿ ಪರ 28 ಎಸೆತಗಳಲ್ಲಿ 38 ರನ್ ಬಾರಿಸಿದರು. ಟೀಮಿನ ಆಪತ್ಬಾಂಧವ ಎಬಿ ಡಿವಿಲಿಯರ್ಸ್ 27 ಎಸೆತಗಳಲ್ಲಿ 48 ನ್ ಬಾರಿಸಿ ಟೀಮಿನ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದರು. ಬೌಲಿಂಗ್ ವಿಭಾಗದಲ್ಲಿ, 5 ವಿಕೆಟ್ ಕಬಳಿಸಿದ ಹರ್ಷಲ್ ಪಟೇಲ್ ತನ್ನ ಸಾಮರ್ಥ್ಯವನ್ನು ಅಂಡರ್ ಎಸ್ಟಿಮೇಟ್ ಮಾಡುತ್ತಿದ್ದವರಿಗೆ ತಕ್ಕ ಜವಾಬು ನೀಡಿದರು. ಇನ್ನಿಬ್ಬರು ವೇಗಿಗಳಾದ ಕೈಲ್ ಜೇಮಿಸನ್ ಮತ್ತು ಮೊಹಮ್ಮದ್ ಸಿರಾಜ್ ಉತ್ತಮವಾಗಿ ಬೌಲ್ ಮಾಡಿದರು. ಪ್ರತಿಬಾರಿ ಉತ್ತಮ ಪ್ರದರ್ಶನಗಳನ್ನು ನೀಡುತ್ತಿದ್ದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಹೈದರಾಬಾದ್ ಬ್ಯಾಟ್ಸ್ಮನ್ಗಳ ಕೈಯಲ್ಲಿ ಚೆನ್ನಾಗಿ ಚಚ್ಚಿಸಿಕೊಂಡರು.
ಪಡಿಕ್ಕಲ್ ಅವರನ್ನು ಅಡುವ ಇಲೆವೆನ್ನಲ್ಲಿ ಸೇರಿಸಿಕೊಳ್ಳುವುದನ್ನು ಬಿಟ್ಟರೆ ಬೇರೆ ಬದಲಾವಣೆಗಳನ್ನು ಆರ್ಸಿಬಿ ಮಾಡಲಿಕ್ಕಿಲ್ಲ.