AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021 SRH vs RCB Match 6 live streaming: ಆರ್​ಸಿಬಿ vs ಎಸ್​ಆರ್​ಹೆಚ್ ನಡುವೆ ಪಂದ್ಯ ಎಲ್ಲಿ ಮತ್ತು ಯಾವಾಗ? ಉಳಿದೆಲ್ಲ ಮಾಹಿತಿ ಇಲ್ಲಿದೆ

ಆರ್​ಸಿಬಿ ತಂಡದ ಮೂಲಗಳ ಪ್ರಕಾರ ಕೊವಿಡ್​-19 ಸೋಂಕಿನಿಂದ ಚೇತರಿಸಿಕೊಂಡಿರುವ ದೇವದತ್ ಪಡಿಕ್ಕಲ್ ಬುಧವಾರದ ಪಂದ್ಯಕ್ಕೆ ಲಭ್ಯರಿದ್ದಾರೆ. ಇದೇ ತಂಡದ ಡೇನಿಯಲ್ ಸ್ಯಾಮ್ಸ್ ಕೊವಿಡ್ ಸೋಂಕಿಗೊಳಗಾಗಿದ್ದು ಆಯ್ಕೆಗೆ ಲಭ್ಯರಿರುವುದಿಲ್ಲ. ಹೈದರಾಬಾದ ತಂಡಕ್ಕೆ ಗಾಯಾಳುಗಳ ಸಮಸ್ಯೆ ಇಲ್ಲ.

IPL 2021 SRH vs RCB Match 6 live streaming: ಆರ್​ಸಿಬಿ vs ಎಸ್​ಆರ್​ಹೆಚ್ ನಡುವೆ ಪಂದ್ಯ ಎಲ್ಲಿ ಮತ್ತು ಯಾವಾಗ? ಉಳಿದೆಲ್ಲ ಮಾಹಿತಿ ಇಲ್ಲಿದೆ
ಡೇವಿಡ್​ ವಾರ್ನರ್ ಮತ್ತು ವಿರಾಟ್​ ಕೊಹ್ಲಿ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Skanda

Updated on: Apr 14, 2021 | 7:24 AM

ಚೆನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಇಂಡಿಯನ್​ ಪ್ರಿಮೀಯರ್​ ಲೀಗ್ 14ನೇ ಆವೃತ್ತಿಯ ಆರನೇ ಪಂದ್ಯ ಬುಧವಾರ ಚೆನೈನ ಎಮ್​ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡು ತಂಡಗಳಿಗೂ ಇದು ಈ ಆವೃತ್ತಿಯ ಎರಡನೇ ಪಂದ್ಯ. ಚೆನೈನ ಪಿಚ್​ ಸಾಂಪ್ರದಾಯಿಕವಾಗಿ ಸ್ಪಿನ್ನರ್​ಗಳಿಗೆ ನೆರವಾಗವುದರಿಂದ ಆರ್​ಸಿಬಿ ಮತ್ತು ಎಸ್​ಆರ್​ಎಚ್ ತಂಡದ ಸ್ಪಿನ್ನರ್​ಗಳು ಪಿಚ್​ನ ನೆರವು ಪಡೆಯಲಿದ್ದಾರೆ. ಹಾಗೆ ನೋಡಿದರೆ ಎರಡೂ ತಂಡಗಳಲ್ಲಿ ಉತ್ತಮ ಸ್ಪಿನರ್​ಗಳಿದ್ದಾರೆ. ವಿರಾಟ್ ಕೊಹ್ಲಿ ಪಡೆಯಲ್ಲಿ ಯುಜ್ವೇಂದ್ರ ಚಹಲ್, ವಾಷಿಂಗ್ಷನ್ ಸುಂದರ್ ಮತ್ತು ಅಡಂ ಜಂಪಾ ಮೊದಲಾದವರಿದ್ದರೆ, ಹೈದರಾಬಾದ್ ಟೀಮಿನಲ್ಲಿ ರಶೀದ್ ಖಾನ್, ಮೊಹಮ್ಮದ್​ ನಬಿ ಇದ್ದಾರೆ.

ಈ ಎರಡು ತಂಡಗಳ ನಡುವೆ ಇದುವರೆಗೆ ನಡೆದಿರುವ ಪಂದ್ಯಗಳ ಬಗ್ಗೆ ಒಂದಿಷ್ಟು ಕ್ಲುಪ್ತ ಮಾಹಿತಿ ಇಲ್ಲಿದೆ.

ಮೊದಲ ಇನ್ನಿಂಗ್ಸ್ ಸರಾಸರಿ ಮೊತ್ತ

ಚಿದಂಬರಂ ಸ್ಟೇಡಿಯಂನಲ್ಲಿ ಮೊದಲು ಬ್ಯಾಟ್ ಮಾಡುವ ತಂಡಗಳ ಸರಾಸರಿ ಮೊತ್ತ 163 ಆಗಿದೆ.

ಚೇಸ್ ಮಾಡುವ ಸಂದರ್ಭಗಳಲ್ಲಿ ಯಶಸ್ಸಿನ ದಾಖಲೆ

ಈ ಮೈದಾನದಲ್ಲಿ ಚೇಸ್ ಮಾಡುವ ತಂಡಗಳ ಯಶಸ್ಸಿನ ಪ್ರಮಾಣ ಶೇಕಡಾ 53.7 ರಷ್ಟಿದೆ

ಎಸ್​ಆರ್​ಹೆಚ್ ಮತ್ತು ಆರ್​ಸಿಬಿ ಮುಖಾಮುಖಿ ಸೆಣಸು ಐಪಿಎಲ್​ನಲ್ಲಿ ದಕ್ಷಿಣ ಭಾರತದ ಈ ಎರಡು ತಂಡಗಳ ನಡುವೆ 18 ಬಾರಿ ಸೆಣಸಾಟ ನಡೆದಿದೆ, ಅವುಗಳಲ್ಲಿ ಹೈದರಾಬಾದ 10 ಬಾರಿ ಗೆದ್ದರೆ ಬೆಂಗಳೂರು 7 ಬಾರಿ ಗೆಲುವು ಕಂಡಿದೆ. ಒಮ್ಮೆ ಫಲಿತಾಂಶ ಬಂದಿಲ್ಲ. 2020ರ ಐಪಿಎಲ್​​ನಲ್ಲಿ ಇವೆರಡು ತಂಡಗಳು ಮೂರು ಬಾರಿ ಸೆಣಸಿದವು. ಒಮ್ಮೆ ವಿರಾಟ್​ ಕೊಹ್ಲಿ ಪಡೆ ಗೆದ್ದರೆ ಎರಡು ಬಾರಿ ವಾರ್ನರ್ ತಂಡ ಯಶ ಸಾಧಿಸಿತು.

ಗರಿಷ್ಠ ಮತ್ತು ಕನಿಷ್ಠ ಸ್ಕೊರ್​ಗಳು ಆರ್​ಸಿಬಿ ಗರಿಷ್ಠ ಸ್ಕೋರ್ 227 ಮತ್ತು ಕನಿಷ್ಠ ಸ್ಕೋರ್ 113 ಆಗಿದೆ, ಹೈದರಾಬಾದ್ ಟೀಮಿನ ಗರಿಷ್ಠ ಸ್ಕೋರ್ 231 ಮತ್ತು ಅತ್ಯಂತ ಕಡಿಮೆ ಮೊತ್ತ 135 ಆಗಿದೆ.

ಹೈದರಾಬಾದ್ ಮತ್ತು ಬೆಂಗಳೂರು ತಂಡಗಳ ಗಾಯಾಳುಗಳು ಮತ್ತು ಅವರ ಲಭ್ಯತೆ ಆರ್​ಸಿಬಿ ತಂಡದ ಮೂಲಗಳ ಪ್ರಕಾರ ಕೊವಿಡ್​-19 ಸೋಂಕಿನಿಂದ ಚೇತರಿಸಿಕೊಂಡಿರುವ ದೇವದತ್ ಪಡಿಕ್ಕಲ್ ಬುಧವಾರದ ಪಂದ್ಯಕ್ಕೆ ಲಭ್ಯರಿದ್ದಾರೆ. ಇದೇ ತಂಡದ ಡೇನಿಯಲ್ ಸ್ಯಾಮ್ಸ್ ಕೊವಿಡ್ ಸೋಂಕಿಗೊಳಗಾಗಿದ್ದು ಆಯ್ಕೆಗೆ ಲಭ್ಯರಿರುವುದಿಲ್ಲ. ಹೈದರಾಬಾದ್​ ತಂಡಕ್ಕೆ ಗಾಯಾಳುಗಳ ಸಮಸ್ಯೆ ಇಲ್ಲ.

ವಿರಾಟ್​ ಕೊಹ್ಲಿ ಮತ್ತು ಡೇವಿಡ್ ವಾರ್ನರ್​ ತಂಡಗಳ ನಡುವೆ ಮಹತ್ವದ ಪಂದ್ಯ ಬುಧವಾರದಂದು ಎಲ್ಲಿ ನಡೆಯಲಿದೆ? ಈ ಪಂದ್ಯ ಚೆನೈನ ಎಮ್ ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪಂದ್ಯವು ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ ಅಂತ ನಿಮಗೆ ಗೊತ್ತಿರಬಹುದು ಸಂಜೆ ಎಂದಿನಂತೆ 7.30 ಕ್ಕೆ ಪಂದ್ಯ ಆರಂಭವಾಗಲಿದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.

ಯಾವ ಟಿವಿ ಚಾನೆಲ್‌ಗಳು ಪಂದ್ಯವನ್ನು ಪ್ರಸಾರ ಮಾಡುತ್ತವೆ? ಸದರಿ ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿಯೂ ಲಭ್ಯವಿರುತ್ತದೆ. ಇದಲ್ಲದೆ, ನೀವು ಲೈವ್ ಮಾಹಿತಿಗಾಗಿ ಮತ್ತು ಓವರ್ ಟು ಓವರ್ ಅಪ್​ಡೆಟ್​ಗಾಗಿ ಟಿವಿ9 ಡಿಜಿಟಲ್ ಲೈವ್​ಬ್ಲಾಗ್​ ವೀಕ್ಷಿಸಬಹುದು

ಸಂಭಾವ್ಯ ತಂಡಗಳು:

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್​ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಎ ಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್​ವೆಲ್​, ಡೇನಿಯಲ್ ಕ್ರಿಶ್ಚಿಯನ್, ವಾಷಿಂಗ್ಟನ್ ಸುಂದರ್, ಕೈಲ್ ಜೇಮಿಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್ ಮತ್ತು ಶಾಹ್​ಬಾಜ್ ಅಹ್ಮದ್.

ಸನ್​ರೈಸರ್ಸ್ ಹೈದರಾಬಾದ್: ಡೇವಿಡ್ ವಾರ್ನರ್ (ನಾಯಕ), ವೃದ್ಧಿಮಾನ್ ಸಹಾ, ಜಾನಿ ಬೇರ್​ಸ್ಟೋ, ಮನೀಶ್​ ಪಾಂಡೆ, ಅಬ್ದುಲ್ ಸಮದ್, ವಿಜಯ್ ಶಂಕರ್, ಮೊಹಮ್ಮದ್ ನಬಿ, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಸಂದೀಪ್ ಶರ್ಮ

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ 350 ಸಿಕ್ಸರ್ ಬಾರಿಸಿದ ಮೊದಲ ಆಟಗಾರನೆಂಬ ದಾಖಲೆ ಬರೆದ ‘ಯೂನಿವರ್ಸ್ ಬಾಸ್’ ಕ್ರಿಸ್ ಗೇಲ್

ಕಾಳಿಂಗ ಸರ್ಪವನ್ನು ಇಷ್ಟು ಹತ್ತಿರದಿಂದ ನೋಡಿದ್ದೀರಾ?
ಕಾಳಿಂಗ ಸರ್ಪವನ್ನು ಇಷ್ಟು ಹತ್ತಿರದಿಂದ ನೋಡಿದ್ದೀರಾ?
ಸರಿಗಮಪ ಫಿನಾಲೆ ಟಿಕೆಟ್ ಪಡೆದ ಆರಾಧ್ಯಾ ರಾವ್ ಧ್ವನಿ ಅದೆಷ್ಟು ಸುಮಧುರ ಕೇಳಿ
ಸರಿಗಮಪ ಫಿನಾಲೆ ಟಿಕೆಟ್ ಪಡೆದ ಆರಾಧ್ಯಾ ರಾವ್ ಧ್ವನಿ ಅದೆಷ್ಟು ಸುಮಧುರ ಕೇಳಿ
ನಿನ್ನ ಜುಟ್ಟು ಹಿಡಿದು ಹೊಡಿತೀನಿ: ಕಿತ್ತಾಡಿಕೊಂಡ ಅಭಿಷೇಕ್ - ದಿಗ್ವೇಶ್
ನಿನ್ನ ಜುಟ್ಟು ಹಿಡಿದು ಹೊಡಿತೀನಿ: ಕಿತ್ತಾಡಿಕೊಂಡ ಅಭಿಷೇಕ್ - ದಿಗ್ವೇಶ್
ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ವೃಷಭ ರಾಶಿಯವರಿಗೆ 7 ಗ್ರಹಗಳ ಶುಭಫಲ! ಉಳಿದ ರಾಶಿಗಳ ಫಲಾಫಲ ಇಲ್ಲಿದೆ ನೋಡಿ
ವೃಷಭ ರಾಶಿಯವರಿಗೆ 7 ಗ್ರಹಗಳ ಶುಭಫಲ! ಉಳಿದ ರಾಶಿಗಳ ಫಲಾಫಲ ಇಲ್ಲಿದೆ ನೋಡಿ
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ