KKR vs MI, IPL 2021: 30 ಬಾಲ್​ಗೆ 31 ರನ್ ಗಳಿಸಲು ಆಗದೇ ಸೋತ ಕೋಲ್ಕತ್ತಾ; ಅಚ್ಚರಿಯಿಂದ ಪ್ರತಿಕ್ರಿಯೆ ನೀಡಿದ ಹಿರಿಯ ಕ್ರಿಕೆಟಿಗರು

ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಅನಾವಶ್ಯಕ ಶಾಟ್​ಗಳಿಗೆ ತೊಡಗಿ, ಕೆಕೆಆರ್ ದಾಂಡಿಗರು ಕೈಸುಟ್ಟುಕೊಂಡರು. ಮುಂಬೈ ಪರ ಕೃನಾಲ್ ಪಾಂಡ್ಯ ಡೆತ್ ಓವರ್​ಗಳಲ್ಲಿ ಉತ್ತಮ ಆಟವಾಡಿ, ಗೆಲುವಿಗೆ ಸಹಕರಿಸಿದರು.

KKR vs MI, IPL 2021: 30 ಬಾಲ್​ಗೆ 31 ರನ್ ಗಳಿಸಲು ಆಗದೇ ಸೋತ ಕೋಲ್ಕತ್ತಾ; ಅಚ್ಚರಿಯಿಂದ ಪ್ರತಿಕ್ರಿಯೆ ನೀಡಿದ ಹಿರಿಯ ಕ್ರಿಕೆಟಿಗರು
ನಾಲ್ಕು ವಿಕೆಟ್ ಪಡೆದು ಕೊಲ್ಕತ್ತಾ ನೈಟ್​ ರೈಡರ್ಸ್​ ಬ್ಯಾಟಿಂಗ್ ಬೆನ್ನೆಲುಬು ಮುರಿದ ರಾಹುಲ್ ಚಹರ್
Follow us
TV9 Web
| Updated By: ganapathi bhat

Updated on:Apr 05, 2022 | 12:36 PM

ಚೆನ್ನೈ: ಮಂಗಳವಾರ ಇಲ್ಲಿನ ಎಮ್.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಕೋಲ್ಕತ್ತಾ ತಂಡ ಗೆಲುವಿನ ಸನಿಹಕ್ಕೆ ಹೋಗಿ, ಕೊನೆಯ ಹಂತದಲ್ಲಿ ಹೀನಾಯ ಸೋಲು ಕಂಡಿತು. ಐಪಿಎಲ್ ರನ್ ವೇಗಕ್ಕೆ ಹೋಲಿಸಿದರೆ, ಸಣ್ಣದು ಎಂದೇ ಹೇಳಬಹುದಾದ ಮೊತ್ತವನ್ನು ಬೆನ್ನಟ್ಟಲು ಕೂಡ ಕೋಲ್ಕತ್ತಾಗೆ ಸಾಧ್ಯವಾಗದೇ ಹೋಯಿತು. ಆರಂಭಿಕವಾಗಿ ಉತ್ತಮ ಆಟವಾಡಿದ ಕೋಲ್ಕತ್ತಾ, ಮಧ್ಯಮ ಕ್ರಮಾಂಕದಲ್ಲಿ ಅಚ್ಚರಿಯ ರೀತಿಯಲ್ಲಿ ಕುಸಿತ ಕಂಡಿತು. 30 ಬಾಲ್​ಗೆ 31 ರನ್ ಗಳಿಸಲೂ ಆಗದೆ ಪರದಾಡಿತು.

28 ಬಾಲ್​ಗೆ 31 ರನ್ ಗಳಿಸುವ ಸುಲಭ ಸವಾಲು ಕೋಲ್ಕತ್ತಾ ಮುಂದಿತ್ತು. ಈ ವೇಳೆ, ದಿನೇಶ್ ಕಾರ್ತಿಕ್ ಹಾಗೂ ರಸ್ಸೆಲ್ ಕ್ರೀಸ್​ನಲ್ಲಿ ಇದ್ದರು. ಸಾಲದ್ದಕ್ಕೆ ಅವರಿಬ್ಬರೂ ಕೊನೆಯ ಓವರ್​ವರೆಗೆ ಆಟವಾಡಿದ್ದರು. ಇಷ್ಟಾದರೂ ಕೋಲ್ಕತ್ತಾ ತಂಡ 10 ರನ್​ಗಳ ಸೋಲು ಕಂಡಿತು! ಈ ಬಗ್ಗೆ ಹಿರಿಯ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್, ಸಂಜಯ್ ಮಾಂಜ್ರೇಕರ್, ಆಕಾಶ್ ಛೋಪ್ರಾ ಆಶ್ಚರ್ಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಅನಾವಶ್ಯಕ ಶಾಟ್​ಗಳಿಗೆ ತೊಡಗಿ, ಕೆಕೆಆರ್ ದಾಂಡಿಗರು ಕೈಸುಟ್ಟುಕೊಂಡರು. ಮುಂಬೈ ಪರ ಕೃನಾಲ್ ಪಾಂಡ್ಯ ಡೆತ್ ಓವರ್​ಗಳಲ್ಲಿ ಉತ್ತಮ ಆಟವಾಡಿ, ಗೆಲುವಿಗೆ ಸಹಕರಿಸಿದರು. ಕೊನೆಯ ಓವರ್​ನಲ್ಲಿ ಕೋಲ್ಕತ್ತಾ 6 ಬಾಲ್​ಗೆ 15 ರನ್ ಗಳಿಸಬೇಕಾದ ಸ್ಥಿತಿ ಬಂತು. ಲಾಸ್ಟ್ ಓವರ್ ಬೌಲ್ ಮಾಡಿದ ಬೋಲ್ಟ್ ಮುಂಬೈಯನ್ನು ಗೆಲುವಿನ ದಡ ಮುಟ್ಟಿಸಲು ಯಶಸ್ವಿಯಾದರು.

ಈ ಹೀನಾಯ ಸೋಲಿನ ಬಗ್ಗೆ ಹಿರಿಯ ಕ್ರಿಕೆಟಿಗರ ಅಭಿಪ್ರಾಯವೇನು? ಮೊದಲ ಇನ್ನಿಂಗ್ಸ್ ಬೌಲ್ ಮಾಡಿದ ಕೋಲ್ಕತ್ತಾ ಕೂಡ ಉತ್ತಮ ಪ್ರದರ್ಶನ ನೀಡಿತ್ತು. ಹೀಗಾಗಿ ನಿನ್ನೆ ಪಿಚ್ ಬೌಲಿಂಗ್​ಗೆ ಸಹಕರಿಸಿತ್ತು ಎಂಬ ಅಭಿಪ್ರಾಯ ಕೇಳಿಬಂದವು. ಈ ವಿಚಾರವಾಗಿ ಸಂಜಯ್ ಮಾಂಜ್ರೇಕರ್, ಇದು ಪಿಚ್​ನ ವಿಚಾರ ಎಂದಷ್ಟೇ ಸಾಧ್ಯವಿಲ್ಲ ಎಂದು ಹೀಗೆ ಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬ ಹಿರಿಯ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಇದು ಉಡಾಫೆ ಮನಸ್ಥಿತಿಯಿಂದ ಒದಗಿದ ಫಲಿತಾಂಶ ಎಂದು, ಮುಂಬೈ ಬೌಲರ್​ಗಳನ್ನು ಪ್ರಶಂಸಿಸಿದ್ದಾರೆ. ಆಕಾಶ್ ಛೋಪ್ರಾ, ಇದು ಹೇಗಾಯ್ತು? ‘ಇನ್ಕ್ರೆಡಿಬಲ್ ಪ್ರೀಮಿಯರ್ ಲೀಗ್’ ಎಂದು ನಿನ್ನೆಯ ಮ್ಯಾಚ್​ನ್ನು ಕುರಿತು ಹೇಳಿದ್ದಾರೆ. ವೆಂಕಟೇಶ್ ಪ್ರಸಾದ್ ಕೂಡ ಮುಂಬೈ ತಂಡದ ಆಟವನ್ನು ಹೊಗಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: RR vs PBKS, IPL 2021: ಕೊನೆಯ ಓವರ್​ನಲ್ಲಿ ಸಿಂಗಲ್ ಓಟ ನಿರಾಕರಿಸಿದ ಸಂಜು ಸ್ಯಾಮ್ಸನ್​ಗೆ ಕ್ರಿಕೆಟ್ ದಿಗ್ಗಜರು ರಿಯಾಕ್ಟ್ ಮಾಡಿದ್ದು ಹೀಗೆ

ಇದನ್ನೂ ಓದಿ: KKR vs MI, IPL 2021: ರೋಚಕ ಪಂದ್ಯದಲ್ಲಿ ಗೆದ್ದ ಮುಂಬೈ; ಗೆಲುವಿನ ಸನಿಹದಲ್ಲಿ ಎಡವಿದ ಕೋಲ್ಕತ್ತಾ

Published On - 3:26 pm, Wed, 14 April 21

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ