AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಫುಲ್​ ಜೋಶ್​ನಲ್ಲಿರುವ ಆರ್​ಸಿಬಿ ಮತ್ತು ಗಾಯಗೊಂಡ ಸನ್​ರೈಸರ್ಸ್​ ಹೈದರಾಬಾದ್ ಮಧ್ಯೆ ಹಣಾಹಣಿ ಇಂದು

ಈ ಹಿಂದೆ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಹೀನಾಯವಾಗಿ ಸೋತಿದ್ದ ನಮ್ಮ ಆರ್​ಸಿಬಿ ತಂಡ ಈ ಬಾರಿ ಫುಲ್​ ಜೋಶ್​ನಲ್ಲಿದ್ದು, ಸನ್​ರೈಸರ್ಸ್​ ವಿರುದ್ಧ ಸೇಡು ಸೀರಿಕೊಳ್ಳಲು ತವಕಿಸುತ್ತಿದೆ. ಇಂದು ಬುಧವಾರ ರಾತ್ರಿ ಚೆನ್ನೈನಲ್ಲಿ ಎರಡೂ ತಂಡಗಳು ಪರಸ್ಪರ ಸೆಣಸಲಿವೆ.

IPL 2021: ಫುಲ್​ ಜೋಶ್​ನಲ್ಲಿರುವ ಆರ್​ಸಿಬಿ ಮತ್ತು ಗಾಯಗೊಂಡ ಸನ್​ರೈಸರ್ಸ್​ ಹೈದರಾಬಾದ್ ಮಧ್ಯೆ ಹಣಾಹಣಿ ಇಂದು
ಆರ್​ಸಿಬಿ ಮತ್ತು ಸನ್​ರೈಸರ್ಸ್​ ಹೈದರಾಬಾದ್ ಮಧ್ಯೆ ಹಣಾಹಣಿ ಇಂದು
ಸಾಧು ಶ್ರೀನಾಥ್​
| Edited By: |

Updated on: Apr 14, 2021 | 4:43 PM

Share

ಹಾಲಿ IPL 2021 ಆವೃತ್ತಿಯ 6ನೇ ಪಂದ್ಯ ಇಂದು ಆರ್​ಸಿಬಿ ಮತ್ತು ಸನ್​ರೈಸರ್ಸ್​ ಹೈದರಾಬಾದ್ ತಂಡಗಳ ನಡುವೆ ನಡೆಯಲಿದೆ. IPL 2021ರ ಮೊದಲ ಪಂದ್ಯದಲ್ಲೇ ನಮ್ಮದೇ ಹೆಮ್ಮೆಯ ಆರ್​ಸಿಬಿ ತಂಡ ಬಲಾಢ್ಯ ಮುಂಬೈಗೆ ಕೊನೆಯ ಎಸೆತದಲ್ಲಿ ಮಣ್ಣುಮುಕ್ಕಿಸಿ, ಶುಭಾರಂಭ ಮಾಡಿದೆ. ಅದೇ ಸನ್​ರೈಸರ್ಸ್​ ಹೈದರಾಬಾದ್ ತಂಡವು ಕೋಲ್ಕತಾ ನೈಟ್​ ರೈಡರ್ಸ್​ ವಿರುದ್ಧ 10 ರನ್​ಗಳ ಸೋಲುಂಡಿತ್ತು. ಸತತವಾಗಿ ಮತ್ತೊಂದು ಪಂದ್ಯ ಗೆಲ್ಲುವ ತವಕದಲ್ಲಿರುವ ಆರ್​ಸಿಬಿ ತಂಡ ಅಂಕ ಪಟ್ಟಿಯಲ್ಲಿ ಮೇಲೇರುವ ಗುರಿಹೊಂದಿದೆ. ಅದೇ ಸನ್​ರೈಸರ್ಸ್​ ಹೈದರಾಬಾದ್ ತಂಡವು ಗೆಲುವು ಸಾಧಿಸಿ, ಅಂಕದ ಖಾತೆ ತೆರೆಯುವ ಉಮೇದಿಯಲ್ಲಿದೆ.

ಹಾಗೆ ನೋಡಿದರೆ ಆರ್​ಸಿಬಿ ತಂಡಕ್ಕೆ ಸನ್​ರೈಸರ್ಸ್​ ಹೈದರಾಬಾದ್ ಅಂದ್ರೆ ಸಿಂಹಸ್ವಪ್ನ. IPL 2016 ರ ಆವೃತ್ತಿಯಲ್ಲಿ ಫೈನಲ್ಸ್​​ನಲ್ಲಿ ಆರ್​ಸಿಬಿ ತಂಡವು ಸನ್​ರೈಸರ್ಸ್​ ಹೈದರಾಬಾದ್ ಎದುರು ಮಂಡಿಯೂರಿತ್ತು. ಮತ್ತೆ, ಕಳೆದ ಸೀಸನ್​ನಲ್ಲಿಯೂ ಎಲಿಮೇನಟರ್​​ ಹಂತದಲ್ಲಿ ಇದೇ ಸನ್​ರೈಸರ್ಸ್​ ಹೈದರಾಬಾದ್ ತಂಡವು ಅಮೋಘ ಪ್ರದರ್ಶನ ನೀಡಿ, ಆರ್​ಸಿಬಿ ತಂಡವನ್ನು ಪಂದ್ಯಾವಳಿಯಿಂದ ಹೊರಕ್ಕೆ ಹಾಕಿತ್ತು. ಈ ಹಿನ್ನೆಲೆಯಲ್ಲಿ ಇಂದು ನಡೆಯುವ ಪಂದ್ಯದದಲ್ಲಿ ಕ್ರಿಕೆಟ್​ ಪ್ರೇಮಿಗಳು ಏನೆಲ್ಲಾ ನಿರೀಕ್ಷಿಸಬಹುದು ಎಂಬುದನ್ನು ತುಲನಾತ್ಮಕವಾಗಿ ನೋಡಿದಾಗ…

ವಿರಾಟ್​ ಕೊಹ್ಲಿ ವರ್ಸಸ್ ಭುವನೇಶ್ವರ್​ ಕುಮಾರ್: ನಮ್ಮ ಅಧಿನಾಯಕ, ಆರ್​ಸಿಬಿ ಕಪ್ತಾನ ವಿರಾಟ್​ ಕೊಹ್ಲಿ ಇದುವರೆಗೂ ಭುವನೇಶ್ವರ್​ ಕುಮಾರ್ ತಮ್ಮತ್ತ ಎಸೆದಿರುವ 54 ಬಾಲ್​ಗಳಲ್ಲಿ 64 ರನ್​ಗಳನ್ನು ಗಳಿಸಿದ್ದಾರೆ. ಇದೇ ವೇಳೆ, ಭುವನೇಶ್ವರ್​ ಕುಮಾರ್ ಅವರು ಎರಡು ಬಾರಿ ವಿರಾಟ್​ ಕೊಹ್ಲಿ ವಿಕೆಟ್​ ಕೆಡವಿದ್ದಾರೆ. ಪವರ್​ಪ್ಲೇ ನಲ್ಲಿ ಈ ಇಬ್ಬರೂ ಆಟಗಾರರು ತಮ್ಮ ಬತ್ತಳಿಕೆಯಲ್ಲಿ ಏನೆಲ್ಲ ಆಸ್ತ್ರಗಳನ್ನು ಪ್ರಯೋಗಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಭುವನೇಶ್ವರ್​ ಕುಮಾರ್ ನಿಧಾನಗತಿಯ ಬಾಲ್​ಗಳನ್ನು ಎಸೆಯುವುದರಲ್ಲಿ ನಿಷ್ಣಾತರು. ಅದು ವಿರಾಟ್​ ಕೊಹ್ಲಿಗೆ ನುಂಗಲಾರದ ತುತ್ತಾಗಲಿದೆ. ಮೊನ್ನೆಯ ಮೊದಲ ಪಂದ್ಯದಲ್ಲಿ ಅದಾಗಲೇ ಜಸ್ಪ್ರೀತ್​ ಬುಮ್ರಾ ಎಸೆದ ಇಂತಹುದೇ ಸ್ಲೋ ಬಾಲ್​ಗೆ ವಿರಾಟ್​ ಕೊಹ್ಲಿ ಎಲ್​ಬಿಡಬ್ಲ್ಯು ಆಗಿದ್ದರು. ಇದೀಗ ಆರ್​ಸಿಬಿ ತಂಡ ಮೊದಲ ಬ್ಯಾಟ್​ ಮಾಡಿದ್ದೇ ಆದರೆ ವಿರಾಟ್​ ಕೊಹ್ಲಿ ಇಂತಹ ಅಪಾಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಪವರ್​ಪ್ಲೇನಲ್ಲಿ ಹೆಚ್ಚು ಹೆಚ್ಚು ರನ್​ಗಳಿಸಲು ವಿರಾಟ್​ ಸಜ್ಜಾಗಿರಬೇಕು.

IPL Stats: ವಿರಾಟ್​ ಕೊಹ್ಲಿ ವರ್ಸಸ್ ಭುವನೇಶ್ವರ್​ ಕುಮಾರ್ ವಿರಾಟ್​ ಕೊಹ್ಲಿ: ಇನ್ನಿಂಗ್ಸ್​- 185, ರನ್​ – 5911, ಸರಾಸರಿ – 130.63 ಭುವನೇಶ್ವರ್​ ಕುಮಾರ್: ಮ್ಯಾಚ್​ಗಳು – 122, ವಿಕೆಟ್​ಗಳು – 137, ಸರಾಸರಿ – 24.07, ಎಕಾನಮಿ – 7.27

ರಶೀದ್​ ಖಾನ್​ ವರ್ಸಸ್​ ಎಬಿ ಡಿ ವಿಲಿಯರ್ಸ್: ಇದು ನಿಜಕ್ಕೂ ಇಂದಿನ ಪಂದ್ಯದ ಕುತೂಹಲಕಾರಿ ಕಾಳಗವೆನಿಸಲಿದೆ. ಕೆಕೆಆರ್​ ವಿರುದ್ಧ ರಶೀದ್​ ಖಾನ್​ ಲಯಕ್ಕೆ ಮರಳಿದ್ದರೆ ಕ್ರಿಕೆಟ್​ ಮಾಂತ್ರಿಕ ಎಬಿ ಡಿ ವಿಲಿಯರ್ಸ್ ಮುಂಬೈ ಇಂಡಿಯನ್ಸ್​ ವಿರುದ್ಧ ಅದಾಗಲೇ ತಮ್ಮ ವಿರಾಟ ರೂಪ ತೋರಿಸಿ, ಈ ಸೀಸನ್​ನಲ್ಲಿಯೂ ನಾನು ಎಂದಿನಂತೆ ಬ್ಯಾಟ್​ ಬೀಸಲು ಸಿದ್ಧನಿದ್ದೇನೆ ಎಂದು ಘೋಷಿಸಿದ್ದಾರೆ. ಒಬ್ಬರೂ ಪರಸ್ಪರ ಕಾದಾಡಲು ಸಜ್ಜಾಗಿದ್ದಾರೆ.

ಚೆನ್ನೈ ಅಂಕಣ ಸ್ಪಿನ್ನರ್​ಗಳಿಗೆ ಹೇಳಿಮಾಡಿಸಿದಂತಿದೆ. ಹಾಗಾಗಿ, ಇಂದು ಆರ್​ಸಿಬಿ ವಿರುದ್ಧ ಸನ್​ ರೈಸರ್ಸ್​ ತಂಡಕ್ಕೆ ರಶೀದ್​ ಖಾನ್​ ಪ್ರಮುಖ ಅಸ್ತ್ರವಾಗಲಿದ್ದಾರೆ. ಅಣ್ಣಾ ಡಿ ವಿಲಿಯ್ಸ್​ಗೂ ಗೊತ್ತು ತಮ್ಮ ತಂಡಕ್ಕೆ ತಾವೆಷ್ಟು ಅನಿವಾರ್ಯ ಎಂಬುದು. ಹಾಗಾಗಿ, ರಶೀದ್​ ಖಾನ್​ ವಿರುದ್ಧ ಸೆಟೆದು ನಿಂತು ತಂಡಕ್ಕೆ ಆಸರೆಯಾಗುವುದಕ್ಕೆ ಡಿ ವಿಲಿಯ್ಸ್ ಮನಸ್ಸು ಮಾಡಿದರೆ ಪ್ರೇಕ್ಷಕರಿಗೆ ಆಟ ಬೊಂಬಾಟವಾಗಲಿದೆ.

IPL Stats: ಎಬಿ ಡಿ ವಿಲಿಯರ್ಸ್ ವರ್ಸಸ್ ರಶೀದ್​ ಖಾನ್ ರಶೀದ್​ ಖಾನ್​: ಮ್ಯಾಚ್​ಗಳು – 63, ವಿಕೆಟ್​ಗಳು – 77, ಸರಾಸರಿ – 20.27, ಎಕಾನಮಿ – 6.24 ಎಬಿ ಡಿ ವಿಲಿಯರ್ಸ್: ಇನ್ನಿಂಗ್ಸ್​- 157, ರನ್​ – 4897, ಸರಾಸರಿ – 40.47 ಸ್ಟ್ರೈಕ್​ ರೇಟ್​ – 152.13

ಮೊಹಮದ್​ ಸಿರಾಜ್​ ವರ್ಸಸ್​ ಡೇವಿಡ್​ ವಾರ್ನರ್: ಮೊಹಮದ್​ ಸಿರಾಜ್​ ಬೌಲಿಂಗ್​ನಲ್ಲಿ ಡೇವಿಡ್​ ವಾರ್ನರ್ 15 ಬಾಲ್​ಗಳಲ್ಲಿ 25 ರನ್​ ಬಾರಿಸಿದ್ದಾರೆ. ಒಮ್ಮೆ ಮಾತ್ರ ಸಿರಾಜ್​ಗೆ ವಿಕೆಟ್​ ಒಪ್ಪಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ಸರಣಿಯಲ್ಲಿ ಡೇವಿಡ್​ ವಾರ್ನರ್ ಅವರನ್ನು ಆರಂಭದಲ್ಲಿಯೇ ಮೊಹಮದ್​ ಸಿರಾಜ್​ ಮನೆಗೆ ಕಳಿಸುತ್ತಿದ್ದರು.

ಡೇವಿಡ್​ ವಾರ್ನರ್ ವಿರುದ್ಧ ಆಫ್​ ಸ್ಟಂಪ್​ ಮೇಲೆ ಬಾಲ್​ ಎಸೆದು ಔಟ್​ಸೈಡ್​ ಎಡ್ಜ್​ ಆಗುವಂತೆ ನೋಡಿಕೊಳ್ಳುವಲ್ಲಿ ಸಿರಾಜ್​ ಯಶಸ್ವಿಯಾಗಿದ್ದರು. ಮೊಹಮದ್​ ಸಿರಾಜ್​ ಇಂದು ಸಹ ಅದೇ ತಂತ್ರಗಾರಿಕೆ ಪ್ರಯೋಗಿಸಿದರೆ ಸನ್​ರೈಸರ್ಸ್​ ಹೈದರಾಬಾದ್ ತಂಡದ ಬ್ಯಾಟ್ಸ್​ಮನ್​ಗಳು ಎಡವುವುದು ಸಹಜವಾದೀತು. ಉತ್ತಮ ಸ್ಕೋರ್​ ಗಳಿಸುವುದಾಗಲಿ ಅಥವಾ ಉತ್ತಮ ಮೊತ್ತದ ಸವಾಲು ಒಡ್ಡುವುದಕ್ಕೂ ಪರದಾಡಬೇಕಾದೀತು.

IPL Stats: ಮೊಹಮದ್​ ಸಿರಾಜ್​ ವರ್ಸಸ್​ ಡೇವಿಡ್​ ವಾರ್ನರ್: ಮೊಹಮದ್​ ಸಿರಾಜ್​: ಮ್ಯಾಚ್​ಗಳು – 36, ವಿಕೆಟ್​ಗಳು – 39, ಸರಾಸರಿ – 28.36, ಎಕಾನಮಿ – 8.97 ಡೇವಿಡ್​ ವಾರ್ನರ್: ಇನ್ನಿಂಗ್ಸ್​- 143, ರನ್​ – 5257, ಸರಾಸರಿ – 42.4, ಸ್ಟ್ರೈಕ್​ ರೇಟ್​ – 141.47

ಏಕದಿನ ಪಂದ್ಯಗಳಲ್ಲಿ ಓಪನರ್​ ಆಗಿ ಜಾನ್ಸನ್​ ಬೇಯರ್​ಸ್ಟೋ ಗುಣಮಟ್ಟದ ಪೇಸರ್​​ಗಳ ಎದುರು ಪರದಾಡುತ್ತಾರೆ. ಆದರೆ ಸನ್​ರೈಸರ್ಸ್​ ಹೈದರಾಬಾದ್ ತಂಡದ ಪರ ಆಡುವಾಗ ಕೆಳಹಂತದಲ್ಲಿ ಬ್ಯಾಟಿಂಗ್​ಗೆ ಬರುವ ಜ್ಯಾಮಿಸನ್, ನ್ಯೂಜಿಲ್ಯಾಂಡ್​ನ ಎತ್ತರದ ಬೌಲರ್​ ಜಾನ್ಸನ್​ ಬೇಯರ್​ಸ್ಟೋ ವಿರುದ್ಧ ಆಡಬೇಕಿದೆ.

ಜಾನ್ಸನ್​ ಬೇಯರ್​ಸ್ಟೋ ಅದಾಗಲೇ ತಮ್ಮ ನ್ಯೂಜಿಲ್ಯಾಂಡ್​ ತಂಡದ ಪರ ಅತ್ಯುತ್ತಮವಾಗಿ ಬೌಲ್​ ಮಾಡುತ್ತಿದ್ದಾರೆ. ಇದೀಗ ಐಪಿಎಲ್​ನಲ್ಲಿಯೂ ಅದೇ ವರಸೆ ತೋರುವ ಹುಮ್ಮಸ್ಸಿನಲ್ಲಿದ್ದಾರೆ. ಆರ್​ಸಿಬಿ ತಂಡವೂ ಭಾರೀ ಮೊತ್ತವನ್ನು ಚೆಲ್ಲಿಯೇ ಜಾನ್ಸನ್​ ಬೇಯರ್​ಸ್ಟೋರನ್ನು ಖರೀದಿ ಮಾಡಿದೆ.

IPL Stats: ಜಾನ್ಸನ್​ ಬೇಯರ್​ಸ್ಟೋ ವರ್ಸಸ್​ ಕೇಯ್ಲ್​ ಜ್ಯಾಮಿಸನ್: ಕೇಯ್ಲ್​ ಜ್ಯಾಮಿಸನ್: ಮ್ಯಾಚ್ – 1, ವಿಕೆಟ್ – 1, ಸರಾಸರಿ – 27, ಎಕಾನಮಿ – 6.75

ಜಾನ್ಸನ್​ ಬೇಯರ್​ಸ್ಟೋ: ಇನ್ನಿಂಗ್ಸ್​- 22, ರನ್​ – 845, ಸರಾಸರಿ – 42.25, ಸ್ಟ್ರೈಕ್​ ರೇಟ್​ – 142.02

ಹರ್ಷಲ್​ ಪಟೇಲ್​ ವರ್ಸಸ್​ ಮನೀಶ್​ ಪಾಂಡೆ: ಬೌಲರ್​ ಹರ್ಷಲ್​ ಪಟೇಲ್​ ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್​ ಕಬಳಿಸಿದ್ದಾರೆ. ಇದರಿಂದ ಆತನಲ್ಲಿ ಆತ್ಮವಿಶ್ವಾಸ ತುಂಬಿತುಳುಕುತ್ತಿದೆ. ಇನ್ನು, ಮನೀಶ್​ ಪಾಂಡೆ ಸಹ ಉತ್ತಮ ಇನ್ನಿಂಗ್​ ಆಡಿದ್ದಾರಾದರೂ ಅವರ ತಂಡ ದಡ ಸೇರುವಲ್ಲಿ ಎಡವಿತು ಅಷ್ಟೇ.

ಇದನ್ನೂ ಓದಿ: IPL 2021: ಟೂರ್ನಿಯಿಂದ ಬೆನ್ ಸ್ಟೋಕ್ಸ್ ಹೊರಕ್ಕೆ; ಆರ್​ಆರ್​ನಲ್ಲಿ ಸ್ಟೋಕ್ಸ್ ಸ್ಥಾನ ತುಂಬುವ ಆಟಗಾರರು ಇವರೇನಾ?

ಇದನ್ನೂ ಓದಿ: KKR vs MI, IPL 2021: 30 ಬಾಲ್​ಗೆ 31 ರನ್ ಗಳಿಸಲು ಆಗದೇ ಸೋತ ಕೋಲ್ಕತ್ತಾ; ಅಚ್ಚರಿಯಿಂದ ಪ್ರತಿಕ್ರಿಯೆ ನೀಡಿದ ಹಿರಿಯ ಕ್ರಿಕೆಟಿಗರು

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್