IPL 2021: ಟೂರ್ನಿಯಿಂದ ಬೆನ್ ಸ್ಟೋಕ್ಸ್ ಹೊರಕ್ಕೆ; ಆರ್​ಆರ್​ನಲ್ಲಿ ಸ್ಟೋಕ್ಸ್ ಸ್ಥಾನ ತುಂಬುವ ಆಟಗಾರರು ಇವರೇನಾ?

ಪಂಜಾಬ್ ತಂಡದ ವಿರುದ್ಧದ ಪಂದ್ಯದಲ್ಲಿ ಗೈಲ್ ಹೊಡೆತವನ್ನು ಕ್ಯಾಚ್ ಪಡೆಯಲು ಹೋಗಿ ಸ್ಟೋಕ್ಸ್ ಎಡಕೈ ಬೆರಳ ಗಾಯಕ್ಕೆ ತುತ್ತಾಗಿದ್ದರು. ಇನ್ನಿಂಗ್ಸ್​ನ 10ನೇ ಓವರ್​ನಲ್ಲಿ ಹೀಗಾಗಿತ್ತು. ಈ ಗಾಯದ ಕಾರಣಕ್ಕೆ ಸ್ಟೋಕ್ಸ್ ಇಡೀ ಟೂರ್ನಿಯಿಂದಲೇ ಹೊರಗುಳಿಯಬೇಕಾಗಿ ಬಂದಿದೆ.

IPL 2021: ಟೂರ್ನಿಯಿಂದ ಬೆನ್ ಸ್ಟೋಕ್ಸ್ ಹೊರಕ್ಕೆ; ಆರ್​ಆರ್​ನಲ್ಲಿ ಸ್ಟೋಕ್ಸ್ ಸ್ಥಾನ ತುಂಬುವ ಆಟಗಾರರು ಇವರೇನಾ?
ಬೆನ್ ಸ್ಟೋಕ್ಸ್
Follow us
TV9 Web
| Updated By: ganapathi bhat

Updated on:Apr 05, 2022 | 12:36 PM

ಐಪಿಎಲ್ ಟೂರ್ನಮೆಂಟ್ ಆರಂಭವಾಗಿ ಕೆಲವು ದಿನಗಳಷ್ಟೇ ಕಳೆದಿವೆ. ಲೀಗ್ ಹಂತದ 5 ಪಂದ್ಯಗಳಾಗಿದ್ದು, ಇಂದು (ಏಪ್ರಿಲ್ 14) 6ನೇ ಪಂದ್ಯ ಚೆನ್ನೈನ ಚಿದಂಬರಂ ಮೈದಾನದಲ್ಲಿ ನಡೆಯಲಿದೆ. ಈ ನಡುವೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಘಾತ ಎದುರಾಗಿದೆ. ರಾಯಲ್ಸ್ ಅತಿ ಅಮೂಲ್ಯ ಆಟಗಾರ ಎಂದೇ ಗುರುತಿಸಿಕೊಂಡಿದ್ದ ಬೆನ್ ಸ್ಟೋಕ್ಸ್ ಐಪಿಎಲ್ 2021ರಿಂದ ಹೊರಬಿದ್ದಿದ್ದಾರೆ. ಕೈ ಬೆರಳಿನ ಗಾಯದ ಕಾರಣಕ್ಕೆ ಅವರು ಐಪಿಎಲ್ ಆವೃತ್ತಿಯಿಂದಲೇ ನಿರ್ಗಮಿಸುವಂತಾಗಿದೆ.

ಬೆನ್ ಸ್ಟೋಕ್ಸ್ ರಾಜಸ್ಥಾನ್ ರಾಯಲ್ಸ್ ತಂಡದ ಬಹುಮುಖ್ಯ ಆಟಗಾರ. ಇಂಡಿಯನ್​ ಪ್ರೀಮಿಯರ್ ಲೀಗ್‌ನಲ್ಲಿ, ವಿದೇಶಿ ಆಟಗಾರರು ಕೂಡ ಬಹುಮುಖ್ಯ ಪಾತ್ರವಹಿಸುತ್ತಾರೆ. ಅನೇಕ ವಿದೇಶಿ ಆಟಗಾರರು ಐಪಿಎಲ್‌ನಲ್ಲಿ ಆಯಾ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಅಂತಹ ಒಂದು ಹೆಸರು ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಆಗಿತ್ತು. ಸ್ಟೋಕ್ಸ್ ರಾಯಲ್ಸ್ ತಂಡದ ಪ್ರಮುಖ ಆಲ್​ರೌಂಡರ್​ ಆಗಿದ್ದರು.

ಅಂಥ ಬಹುನಿರೀಕ್ಷಿತ ಆಟಗಾರ ಸ್ಟೋಕ್ಸ್, ಮೊನ್ನೆ ನಡೆದ ಪಂಜಾಬ್ ತಂಡದ ವಿರುದ್ಧದ ಪಂದ್ಯದಲ್ಲಿ ಗೈಲ್ ಹೊಡೆತವನ್ನು ಕ್ಯಾಚ್ ಪಡೆಯಲು ಹೋಗಿ ಎಡಕೈ ಬೆರಳ ಗಾಯಕ್ಕೆ ತುತ್ತಾಗಿದ್ದರು. ಇನ್ನಿಂಗ್ಸ್​ನ 10ನೇ ಓವರ್​ನಲ್ಲಿ ಹೀಗಾಗಿತ್ತು. ಈ ಗಾಯದ ಕಾರಣಕ್ಕೆ ಸ್ಟೋಕ್ಸ್ ಇಡೀ ಟೂರ್ನಿಯಿಂದಲೇ ಹೊರಗುಳಿಯಬೇಕಾಗಿ ಬಂದಿದೆ.

2019 ರಲ್ಲಿ ಇಂಗ್ಲೆಂಡ್ ಗೆದ್ದ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಸ್ಟೋಕ್ಸ್ ಅವರ ಸಾಧನೆ ಇತಿಹಾಸದಲ್ಲಿ ದಾಖಲಾಗಿತ್ತು. ವಿಶ್ವಕಪ್ ನಂತರ, ಸ್ಟೋಕ್ಸ್ ಆಸ್ಟ್ರೇಲಿಯಾ ವಿರುದ್ಧ ಆಡಿದ ಟೆಸ್ಟ್ ಸರಣಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ನ್ಯೂಜಿಲೆಂಡ್ ಮೂಲದ ಕ್ರಿಕೆಟಿಗ ಇದುವರೆಗೆ ನಾಲ್ಕು ಐಪಿಎಲ್ ಆಡಿದ್ದಾರೆ.

ಸ್ಟೋಕ್ಸ್ 2017 ರಲ್ಲಿ ಮೊದಲ ಬಾರಿಗೆ ಐಪಿಎಲ್ ಗೆ ಪಾದಾರ್ಪಣೆ ಮಾಡಿದರು. ನಂತರ ಸ್ಟೋಕ್ಸ್ ಅನ್ನು ರೈಸಿಂಗ್ ಪುಣೆ ಸೂಪರ್‌ಜೆಂಟ್ಸ್ 14.5 ಕೋಟಿ ಮೊತ್ತಕ್ಕೆ ಖರೀದಿಸಿದರು. ಆ ಆವೃತ್ತಿಯಲ್ಲಿ ಐಪಿಎಲ್‌ನ ಅತ್ಯಂತ ದುಬಾರಿ ವಿದೇಶಿ ಆಟಗಾರ ಸ್ಟೋಕ್ಸ್ ಆಗಿದ್ದರು. ನಂತರ ಅವರ ದಾಖಲೆಯನ್ನು ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಮುರಿದರು. ಇದುವರೆಗೆ ಐಪಿಎಲ್‌ನಲ್ಲಿ ಸ್ಟೋಕ್ಸ್ 42 ಪಂದ್ಯಗಳನ್ನು ಆಡಿ ಎರಡು ಶತಕ, ಎರಡು ಅರ್ಧಶತಕಗಳೊಂದಿಗೆ 920 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ ಸ್ಟೋಕ್ಸ್ ನಾಲ್ಕು ಐಪಿಎಲ್ ಹೆಸರುಗಳಲ್ಲಿ ಒಟ್ಟು 28 ವಿಕೆಟ್ ಪಡೆದಿದ್ದಾರೆ.

ಸ್ಟೋಕ್ಸ್ ಬದಲಿ ಆಟಗಾರ ಯಾರಾಗಬಹುದು? – ಬೆನ್ ಸ್ಟೋಕ್ಸ್ ಬದಲಾಗಿ ಆ ಸ್ಥಾನಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದ ಯಾವ ಆಟಗಾರ ಸೂಕ್ತವಾಗಬಹುದು ಎಂದು ಯೋಚಿಸಿದರೆ, ಡೇವಿಡ್ ಮಿಲ್ಲರ್ ಹೆಸರು ಮುಂಚೂಣಿಯಲ್ಲಿದೆ. ಐಪಿಎಲ್​ನಲ್ಲಿ ವೇಗದ ಆಟ ಆಡಬಲ್ಲ, ಉತ್ತಮ ಫೀಲ್ಡಿಂಗ್ ಕೂಡ ಮಾಡಬಲ್ಲ ಸಾಮರ್ಥ್ಯ ಮಿಲ್ಲರ್​ಗೆ ಇದೆ.

– ಲಿಯಾಮ್ ಸಿವಿಂಗ್​ಸ್ಟನ್ ಸ್ಟೋಕ್ಸ್ ಬದಲಿಗೆ ಮತ್ತೊಂದು ಆಯ್ಕೆ. ಇಂಗ್ಲೆಂಡ್ ಕ್ರಿಕೆಟಿಗ ಲಿವಿಂಗ್​ಸ್ಟನ್ ಇದುವರೆಗೆ ಐಪಿಎಲ್​ನಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಿಲ್ಲ. ಆದರೆ, ಉತ್ತಮ ಆಟವಾಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

– ಆಂಡ್ರ್ಯೂ ಟೈ ಸ್ಟೋಕ್ಸ್​ಗೆ ಬದಲಿಯಾಗಿ ತಂಡ ಸೇರಬಲ್ಲ ಮತ್ತೊಂದು ಆಯ್ಕೆ. ಸ್ಟೋಕ್ಸ್ ಬೌಲಿಂಗ್ ವಿಭಾಗದಲ್ಲೂ ಯೋಗ್ಯ ಆಟಗಾರನಾಗಿದ್ದ. ಸ್ಟೋಕ್ಸ್ ನಿರ್ಗಮನದಿಂದ ಬೌಲಿಂಗ್ ವಿಭಾಗವನ್ನೂ ಗಟ್ಟಿಗೊಳಿಸುವ ಅಗತ್ಯತೆ ಇದೆ. ಹಾಗಾಗಿ ಇಂಗ್ಲಿಷ್ ಬೌಲರ್ ಟೈ ಪ್ಲೇಯಿಂಗ್ ಇಲೆವೆನ್​ಗೆ ಆಯ್ಕೆಯಾಗಬಹುದು.

– ಓಪನಿಂಗ್​ನಲ್ಲಿ ಕಣಕ್ಕಿಳಿದಿದ್ದ ಸ್ಟೋಕ್ಸ್ ಬದಲಿಯಾಗಿ ಮತ್ತೊಬ್ಬ ಓಪನರ್ ಬೇಕೆಂದರೆ ಯಶಸ್ವಿ ಜೈಸ್ವಾಲ್ ತಂಡ ಸೇರುವ ಸಾಧ್ಯತೆ ಇದೆ. ರಾಜಸ್ಥಾನ್ ತಂಡದಲ್ಲಿ ಬೇಕಾದಷ್ಟು ಬೌಲರ್​ಗಳು ಇದ್ದಾರೆ. ಹಾಗಾಗಿ ತಂಡಕ್ಕೆ ಉತ್ತಮ ದಾಂಡಿಗನಾಗಿ ಅನುಜ್ ರಾವತ್ ಕೂಡ ಆಯ್ಕೆಯಾಗಬಹುದು.

ಇದನ್ನೂ ಓದಿ: KKR vs MI, IPL 2021: 30 ಬಾಲ್​ಗೆ 31 ರನ್ ಗಳಿಸಲು ಆಗದೇ ಸೋತ ಕೋಲ್ಕತ್ತಾ; ಅಚ್ಚರಿಯಿಂದ ಪ್ರತಿಕ್ರಿಯೆ ನೀಡಿದ ಹಿರಿಯ ಕ್ರಿಕೆಟಿಗರು

ಇದನ್ನೂ ಓದಿ: RR vs PBKS, IPL 2021: ಕೊನೆಯ ಓವರ್​ನಲ್ಲಿ ಸಿಂಗಲ್ ಓಟ ನಿರಾಕರಿಸಿದ ಸಂಜು ಸ್ಯಾಮ್ಸನ್​ಗೆ ಕ್ರಿಕೆಟ್ ದಿಗ್ಗಜರು ರಿಯಾಕ್ಟ್ ಮಾಡಿದ್ದು ಹೀಗೆ

Published On - 4:39 pm, Wed, 14 April 21

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು