SRH vs RCB Predicted Playing 11: ಸನ್​ರೈಸರ್ಸ್ ಹೈದರಾಬಾದ್​ಗೆ ರಾಯಲ್ ಚಾಲೆಂಜ್! ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಇಲ್ಲಿದೆ

ಕಳೆದ ಪಂದ್ಯದ ಲೆಕ್ಕಾಚಾರದ ಹೊರತಾಗಿ ಎರಡೂ ತಂಡಗಳನ್ನು ನಿರ್ಲಕ್ಷಿಸುವಂತಿಲ್ಲ. ಸೋತ ಸನ್​ರೈಸರ್ಸ್ ಕೂಡ ಬಲಿಷ್ಠ ತಂಡವನ್ನೇ ಹೊಂದಿದ್ದು ಇಂದಿನ ಪಂದ್ಯದಲ್ಲಿ ಪುಟಿದೇಳುವ ಎಲ್ಲಾ ಸಾಧ್ಯತೆಯೂ ಇದ್ದೇ ಇದೆ. ಆರ್​ಸಿಬಿ ಪಟ್ಟುಬಿಡದೆ ಗೆಲುವಿನ ಸರಣಿ ಮುಂದುವರಿಸುವ ಉತ್ಸಾಹದಲ್ಲೇ ಇದೆ.

SRH vs RCB Predicted Playing 11: ಸನ್​ರೈಸರ್ಸ್ ಹೈದರಾಬಾದ್​ಗೆ ರಾಯಲ್ ಚಾಲೆಂಜ್! ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಇಲ್ಲಿದೆ
ಸನ್​ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು
Follow us
TV9 Web
| Updated By: ganapathi bhat

Updated on:Apr 05, 2022 | 12:36 PM

ಚೆನ್ನೈ: ಐಪಿಎಲ್ ಟೂರ್ನಿಯ 6ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಐಪಿಎಲ್ 2021ರ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ದಾಖಲಿಸಿ, ಇಂದಿನ ಪಂದ್ಯವನ್ನೂ ಗೆಲ್ಲುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ ಸನ್​ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಮುಂದೆ ಸೋತ ನೋವಿನಿಂದ ಹೊರಬರುವ ನಿರೀಕ್ಷೆಯಲ್ಲಿದೆ.

ಕಳೆದ ಪಂದ್ಯದ ಲೆಕ್ಕಾಚಾರದ ಹೊರತಾಗಿ ಎರಡೂ ತಂಡಗಳನ್ನು ನಿರ್ಲಕ್ಷಿಸುವಂತಿಲ್ಲ. ಸೋತ ಸನ್​ರೈಸರ್ಸ್ ಕೂಡ ಬಲಿಷ್ಠ ತಂಡವನ್ನೇ ಹೊಂದಿದ್ದು ಇಂದಿನ ಪಂದ್ಯದಲ್ಲಿ ಪುಟಿದೇಳುವ ಎಲ್ಲಾ ಸಾಧ್ಯತೆಯೂ ಇದ್ದೇ ಇದೆ. ಆರ್​ಸಿಬಿ ಪಟ್ಟುಬಿಡದೆ ಗೆಲುವಿನ ಸರಣಿ ಮುಂದುವರಿಸುವ ಉತ್ಸಾಹದಲ್ಲೇ ಇದೆ.

ಈ ಮೊದಲ ಪಂದ್ಯದಲ್ಲಿ ಸನ್​ರೈಸರ್ಸ್ ಪರ ಬೇರ್​ಸ್ಟೋ ಹಾಗೂ ಮನೀಶ್ ಪಾಂಡೆ ಉತ್ತಮ ಆಟವಾಡಿದ್ದರು. ಬೌಲಿಂಗ್ ವಿಭಾಗದಲ್ಲಿ ರಶೀದ್ ಖಾನ್ ಕಡಿಮೆ ರನ್ ಬಿಟ್ಟುಕೊಟ್ಟದ್ದರ ಹೊರತಾಗಿ ಇತರ ಬೌಲರ್​ಗಳು ಹೇಲಿಕೊಳ್ಳುವ ಆಟ ಆಡಲಿಲ್ಲ. ಬೆಂಗಳೂರು ಪರ ಕೊಹ್ಲಿ, ಮ್ಯಾಕ್ಸ್​ವೆಲ್, ಡಿವಿಲಿಯರ್ಸ್ ಭರವಸೆಯ ಆಟವಾಡಿದ್ದರು. ಬೌಲಿಂಗ್ ವಿಭಾಗದಲ್ಲಿ ಹರ್ಷಲ್ ಪಟೇಲ್ ಮುಖ್ಯ 5 ವಿಕೆಟ್ ಕಿತ್ತು ಮಿಂಚಿದ್ದರು. ಉಳಿದ ಆಟಗಾರರು ಕೂಡ ಆರ್​ಸಿಬಿ ಪರ ಯಶಸ್ವಿ ಆಟ ತೋರಿದರೆ ತಂಡ ಗೆಲ್ಲುವ ಸಾಧ್ಯತೆ ಹೆಚ್ಚೇ ಇದೆ.

ಸನ್​ರೈಸರ್ಸ್ ಹೈದರಾಬಾದ್ ಸಂಭಾವ್ಯ ತಂಡ:

1) ಡೇವಿಡ್ ವಾರ್ನರ್ (ನಾಯಕ) 2) ವೃದ್ಧಿಮಾನ್ ಸಹಾ 3) ಮನೀಶ್ ಪಾಂಡೆ 4) ಜಾನಿ ಬೈರ್‌ಸ್ಟೋವ್ 5) ವಿಜಯ್ ಶಂಕರ್ 6) ಅಬ್ದುಲ್ ಸಮದ್ 7) ಜೇಸನ್ ಹೋಲ್ಡರ್ 8) ರಶೀದ್ ಖಾನ್ 9) ಭುವನೇಶ್ವರ್ ಕುಮಾರ್ 10) ಸಂದೀಪ್ ಶರ್ಮಾ / ಶಹಬಾಜ್ ನದೀಮ್ 11) ಟಿ.ನಟರಾಜನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ:

1) ವಿರಾಟ್ ಕೊಹ್ಲಿ (ನಾಯಕ) 2) ದೇವದತ್ ಪಡಿಕ್ಕಲ್ 3) ರಜತ್ ಪಾಟಿದಾರ್ 4) ಗ್ಲೆನ್ ಮ್ಯಾಕ್ಸ್ ವೆಲ್ 5) ಎಬಿ ಡಿವಿಲಿಯರ್ಸ್ 6) ವಾಷಿಂಗ್ಟನ್ ಸುಂದರ್ 7) ಡೇನಿಯಲ್ ಕ್ರಿಶ್ಚಿಯನ್ 8) ಕೈಲ್ ಜಾಮಿಸನ್ 9) ಹರ್ಷಲ್ ಪಟೇಲ್ 10) ಮೊಹಮ್ಮದ್ ಸಿರಾಜ್ 11) ಯುಜ್ವೇಂದ್ರ ಚಹಾಲ್

ಇದನ್ನೂ ಓದಿ: IPL 2021: ಫುಲ್​ ಜೋಶ್​ನಲ್ಲಿರುವ ಆರ್​ಸಿಬಿ ಮತ್ತು ಗಾಯಗೊಂಡ ಸನ್​ರೈಸರ್ಸ್​ ಹೈದರಾಬಾದ್ ಮಧ್ಯೆ ಹಣಾಹಣಿ ಇಂದು

ಇದನ್ನೂ ಓದಿ: IPL 2021 RCB vs SRH Preview: ದೇವದತ್ ಪಡಿಕ್ಕಲ್ ಇಂದು ಆಡಲಿರುವುದರಿಂದ ಆರ್​ಸಿಬಿ ತಂಡದ ಬ್ಯಾಲೆನ್ಸ್ ಉತ್ತಮಗೊಳ್ಳಲಿದೆ

Published On - 5:21 pm, Wed, 14 April 21

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ