IPL 2021 RR vs DC Preview: ಗಾಯಗೊಂಡ ರಾಜಸ್ಥಾನ್​ ರಾಯಲ್ಸ್​ಗೆ ನಿರ್ಭಯ ಡೆಲ್ಲಿ ಕ್ಯಾಪಿಟಲ್ಸ್ ಎದುರಾಳಿ

IPL 2021 RR vs DC Preview: ಗಾಯಗೊಂಡ ರಾಜಸ್ಥಾನ್​ ರಾಯಲ್ಸ್​ಗೆ ನಿರ್ಭಯ ಡೆಲ್ಲಿ ಕ್ಯಾಪಿಟಲ್ಸ್ ಎದುರಾಳಿ
ಡೆಲ್ಲಿ ಕ್ಯಾಪಿಟಲ್ಸ್ ತಂಡ

ರಾಜಸ್ಥಾನ್​ ರಾಯಲ್ಸ್​ ತಂಡ ಪೆಟ್ಟು ತಿಂದಿದೆ. ಬೆನ್​ ಸ್ಟೋಕ್ಸ್​ ಗಾಯಗೊಂಡಿದ್ದಾರೆ. ಬೆರಳು ಮುರಿದುಕೊಂಡು IPL 2021 ಟೂರ್ನಮೆಂಟ್​ನಿಂದಲೇ ಹೊರಬಿದ್ದಿದ್ದಾರೆ.

sadhu srinath

|

Apr 15, 2021 | 1:13 PM


ಪ್ರಸಕ್ತ IPL 2021 ಸೀಸನ್​ನಲ್ಲಿ ಮೊದಲ ಪಂದ್ಯವನ್ನು ಆಡಿರುವ ರಾಜಸ್ಥಾನ್​ ರಾಯಲ್ಸ್​ ತಂಡ  ಎಡವಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಪಂದ್ಯ ಗೆದ್ದು ಕೇಕೆ ಹಾಕಿದೆ . ಹಿಂದಿನ IPL 2020 ಸೀಸನ್​ ಫೈನಲ್ಸ್​ ತಲುಪಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಬಗ್ಗುಬಡಿದು 7 ವಿಕೆಟ್​ಗಳ​ ಪರಿಪೂರ್ಣ ಜಯ ಸಾಧಿಸಿದೆ. ಇದಕ್ಕೆ ವಿರುದ್ಧವಾಗಿ ಸಂಜು ಸ್ಯಾಮ್ಸನ್ಸ್​ ತಂಡದ ಕ್ಯಾಪ್ಟನ್​ ಆಗಿ ಮೊದಲ ಪಂದ್ಯದಲ್ಲೇ ಗಳಿಸಿದ ಅದ್ಭುತ ಶತಕ ನೀರಿನಲ್ಲಿ ಮಾಡಿದ ಹೋಮದಂತಾಯಿತು. ಪಂಜಾಬ್​ ಕಿಂಗ್ಸ್​ ತಂಡದ ವಿರುದ್ಧ ಕೇವಲ ನಾಲ್ಕೇ ರನ್​ಗಳಿಂದ ತಂಡ ಸೋಲನುಭವಿಸಿಬಿಟ್ಟಿತು.

ರಾಜಸ್ಥಾನ್​ ರಾಯಲ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳೆರಡೂ ಗುರುವಾರ ವಾಂಖೆಡೆ ಸ್ಟೇಡಿಯಂನಲ್ಲಿ ಪರಸ್ಪರ ಎದುರಾಡಲಿವೆ. ಇದು IPL 2021 ಋತುಮಾನದ ಏಳನೇ ಪಂದ್ಯವಾಗಲಿದೆ. ಇಂದಿನ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದತ್ತ ಒಂದು ನೋಟ ಬೀರಿದಾಗ ಅದು ಆತ್ಮವಿಶ್ವಾಸದಿಂದ ತುಂಬಿರುವುದು ಗೋಚರವಾಗುತ್ತದೆ. ಅದೇ ರಾಜಸ್ಥಾನ್​ ರಾಯಲ್ಸ್ ತಂಡದ ವಿಷಯದಲ್ಲಿ ಈ ಮಾತು ಹೇಳಲಾಗುವುದಿಲ್ಲ. ಮೊದಲ ಬಾರಿಗೆ ಐಪಿಎಲ್ ಆಡಿದಾಗ ಚೊಚ್ಚಲ ಕಿರೀಟ ಧರಿಸಿದ್ದ ರಾಜಸ್ಥಾನ್​ ರಾಯಲ್ಸ್ ತಂಡವು ಬೆನ್​ ಸ್ಟೋಕ್ಸ್​ರ ಮುರಿದ ಬೆರಳಿನಿಂದಾಗಿ ಕುಸಿದುಬಿದ್ದಂತಾಗಿದೆ. ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಟೂರ್ನಿಯಿಂದಲೇ ಹೊರಗೆ ಬಿದ್ದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಲಾಬಲ:
ಯುವ ಪಡೆಯೊಂದಿಗೆ ಆತ್ಮವಿಶ್ವಾಸದಿಂದ ಪುಟಿಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿಯ ಐಪಿಎಲ್​ ಕಪ್​ ಅನ್ನು ತನ್ನದಾಗಿಸಿಕೊಳ್ಳುವ ತವಕದಲ್ಲಿದೆ. ‘ಉತ್ತಮ ಆರಂಭ ಪಡೆದಿದ್ದೇ ಆದರೆ ಅರ್ಧ ಗೆದ್ದಂತೆ’ ಎಂಬ ನಾಣ್ಣುಡಿಯಂತಿದೆ ಡೆಲ್ಲಿ ಕ್ಯಾಪಿಟಲ್ಸ್ ಆರಂಭ. ಕ್ಯಾಪ್ಟನ್​ ರಿಷಬ್​ ಪಂತ್​ ಅತ್ಯುತ್ತಮ ಫಾರಂನಲ್ಲಿದ್ದಾರೆ. ಪೃಥ್ವಿ ಷಾ ಮತ್ತು ಶಿಖರ್​ ಧವನ್​ ಇಬ್ಬರೂ ತಲಾ ಅರ್ಧ ಶತಕ ಬಾರಿಸಿದ್ದಾರೆ. ಕ್ಯಾಪ್ಟನ್ಸಿ ನಾಕ್​ ಆಡಿದ ಪಂತ್​ ಕೊನೆಯಲ್ಲಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. ಹಾಗೆ ನೋಡಿದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಲ್ಲ ಬ್ಯಾಟ್ಸ್​ಮನ್​ಗಳೂ ತಮ್ಮ ಕೊಡುಗೆ ನೀಡಿದ್ದಾರೆ.

ಅದೇ ತಂಡದ ಬೌಲರ್​ಗಳು ರನ್​ಗಳನ್ನು ಸಿಕ್ಕಾಪಟ್ಟೆ ನೀಡಿಬಿಟ್ಟರು. ಆದರೆ ಅವೇಶ್​ ಖಾನ್​ ಮತ್ತು ಕ್ರಿಸ್​ ವೋಕ್ಸ್​ ನಿಜಕ್ಕೂ ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ರವಿಚಂದ್ರನ್​ ಅಶ್ವಿನ್​ ಮತ್ತು ಅಮಿತ್​ ಮಿಶ್ರಾ ತಿಣುಕಾಡಿದರಾದರೂ ರಾಜಸ್ಥಾನ್​ ರಾಯಲ್ಸ್ ವಿರುದ್ಧ ನುರಿತ ಈ ಇಬ್ಬರೂ ಬೌಲರ್​ಗಳು ಸಿಡಿದೇಳುವುದು ಖಚಿತ. ರಾಜಸ್ಥಾನ್​ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸದ್ಯಕ್ಕೆ ಆಟಗಾರರನ್ನು ಬದಲಿಸುವ ಮಾತೇ ಇಲ್ಲ. ಅದೇ ತಂಡ ರಿಪೀಟ್​ ಷೋ ನೀಡಲು ಸಜ್ಜಾಗಿದೆ ಎಂದು ಹೇಳಬಹುದು.

ರಾಜಸ್ಥಾನ್​ ರಾಯಲ್ಸ್ ತಂಡ ಬಲಾಬಲ:
ಪ್ರಸಕ್ತ ಋತುವಿನಲ್ಲಿ ಇನ್ನೂ ಆರು ಪಂದ್ಯಗಳು ನಡೆದಿವೆಯಷ್ಟೇ. ಆದರೆ ರಾಜಸ್ಥಾನ್​ ರಾಯಲ್ಸ್ ಅದಾಗಲೇ ಕಳಾಹೀನಗೊಂಡಿದೆ. ಅದರಲ್ಲೂ ಈಗ ಬೆನ್​ ಸ್ಟೋಕ್ಸ್​ ಗಾಯಗೊಂಡಿದ್ದೇ ತಂಡ ಇನ್ನಷ್ಟು ಪೇಲವಗೊಂಡಿದೆ. ಜೊಫ್ರಾ ಆರ್ಚರ್​ ಇಲ್ಲ ಎಂಬುದು ಒಂದು ಸಂಗತಿಯಾದರೆ ಇದೀಗ ವಿಶ್ವದ ಅತ್ಯುತ್ತಮ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಆಡ್ತಿಲ್ಲ ಎಂಬ ಸಂಗತಿಯೂ ರಾಜಸ್ಥಾನ್​ ರಾಯಲ್ಸ್ ತಂಡವನ್ನು ಮತ್ತಷ್ಟು ಘಾಸಿಗೊಳಿಸಿದೆ. ಈ ತಂಡವು ತಕ್ಷಣವೇ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದಲ್ಲಿ ಈ ಟೂರ್ನಿಯು ತಂಡಕ್ಕೆ ದುರಂತಮಯವಾಗಲಿದೆ.

ಡೆಲ್ಲಿ ವಿರುದ್ಧ ಸೆಟೆದೇಳಲು ಲಿಯಾಮ್​ ಲಿವಿಂಗ್​ಸ್ಟೋನ್​ ಈಗಾಗಲೇ ಸಜ್ಜಾಗಿರುವುದು ಆಶಾದಾಯಕವಾಗಿದೆ. ಜೊತೆಗೆ ತಂಡವು ತೀರಾ ನಿರಾಶಾದಾಯಕವಾಗಬೇಕಿಲ್ಲ. ಕ್ಯಾಪ್ಟನ್ಸಿ ನಾಕ್​ ಆಡಿರುವ ಶತಕವೀರ ಸಂಜು ಸ್ಯಾಮ್ಸನ್ ಇತರೆ ಆಟಗಾರರಿಗೆ ಭರವಸೆ ತುಂಬಬಲ್ಲರು. ಜಾಸ್​ ಬಟ್ಲರ್​ ರಾಜಸ್ಥಾನ್​ ರಾಯಲ್ಸ್ ತಂಡಕ್ಕೆ ಪಂದ್ಯ ಗೆಲ್ಲುವ ಆಟ ಆಡಬೇಕಿದೆ. ಕ್ರಿಸ್ ಮೋರಿಸ್ ಆಲ್​ರೌಡರ್​ ಆಗಿರುವುದಷ್ಟೇ ಅಲ್ಲ; ಗೇಮ್​ ಚೇಂಜರ್​ ಆಗಿಯೂ ತಮ್ಮ ಪ್ರದರ್ಶನ ನೀಡಬೇಕಿದೆ.

ಪಂಜಾಬ್​ ಕಿಂಗ್ಸ್​ ವಿರುದ್ಧ ರಾಜಸ್ಥಾನ್​ ರಾಯಲ್ಸ್ ಬೌಲರ್​ಗಳು ಸುಖಾಸುಮ್ನೆ 221 ರನ್​ ನೀಡಿಬಿಟ್ಟರು ಅನಿಸುತ್ತದೆ. ಆದರೆ ಎಡಗೈ ವೇಗದ ಬೌಲರ್ ಚೇತನ್​ ಸಖಾರಿಯಾ ಅತ್ಯುತ್ತಮ ಪ್ರದರ್ಶನ ನೀಡಿದರು. ಸ್ಲೋ ಬಾಲ್, ಯಾರ್ಕರ್​ ಬೌನ್ಸರ್​​.. ಹೀಗೆ ತಮ್ಮ ಬತ್ತಳಿಕೆಯಲ್ಲಿನ ಎಲ್ಲ ಅಸ್ತ್ರಗಳನ್ನೂ ಅವರು ಕರಾರುವಕ್ಕಾಗಿ ಪ್ರಯೋಗಿಸಿಬಿಟ್ಟರು. ಇದರಿಂದ ಪಂಜಾಬ್​ ಕಿಂಗ್ಸ್​ ಬ್ಯಾಟ್ಸ್​ಮನ್​ಗಳು ರನ್​ಗಾಗಿ ತಿಣುಕಾಡಿದ್ದು ಸ್ಪಷ್ಟವಾಗಿತ್ತು.

ರಾಜಸ್ಥಾನ್​ ರಾಯಲ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರಸ್ಪರ ಹಣಾಹಣಿ:
IPL ನಲ್ಲಿ ಇದುವರೆಗೂ ಎರಡೂ ತಂಡಗಳು 22 ಬಾರಿ ಎದುರಾಬದುರಾ ಆಡಿವೆ. ಇದೇ ಸಂಖ್ಯೆಗೆ ತಕ್ಕಂತೆ ಎರಡೂ ತಂಡಗಳು 11 ಬಾರಿ ಗೆದ್ದಿವೆ. ಆದರೆ ತಾಜಾ ಗೆಲುವಿನಿಂದ ಬೀಗುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಇಂದಿನ ಪಂದ್ಯವನ್ನು ತನ್ನತ್ತ ವಾಲಿಸಿಕೊಳ್ಳಬಹುದು ಅನಿಸುತ್ತದೆ. IPL 2020ಟೂರ್ನಿಯಲ್ಲಿ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಎರಡೂ ಪಂದ್ಯಗಳನ್ನು ಗೆದ್ದಿದ್ದವು.

ಏನೆಲ್ಲಾ ನಿರೀಕ್ಷಿಸಬಹುದು?:
ವಾಂಖೇಡೆ ಸ್ಟೇಡಿಯಂನಲ್ಲಿ ಇಂದಿನ ಪಂದ್ಯದಲ್ಲಿ ರನ್​ಗಳ ಮಳೆಯೇ ಸುರಿಯಬಹುದು. ಮುಂಬೈನಲ್ಲಿ ಇದುವರೆಗೂ ಆಡಿರುವ ಎರಡೂ ಪಂದ್ಯಗಳನ್ನು ನೋಡಿದಾಗ ಪಿಚ್​ ಬ್ಯಾಟ್ಸ್​ಮನ್​ಗಳಿಗೆ ಸಹಕಾರಿ ಎನ್ನಬಹುದು. ಎರಡೂ ತಂಡಗಳಲ್ಲಿ ಸಖತ್​ ಬ್ಯಾಟ್ಸ್​ಮನ್​ಗಳಿದ್ದಾರೆ. ಬೌಂಡರಿ – ಸಿಕ್ಸರ್​ಗಳ ಆರ್ಭಟ ಜೋರಾಗಿ ಕಾಣಬರಲಿದೆ.

ಸಂಭವನೀಯ ಆಟಗಾರರು:
ಡೆಲ್ಲಿ ಕ್ಯಾಪಿಟಲ್ಸ್- ಶಿಖರ್ ಧವನ್, ಪೃಥ್ವಿ ಷಾ, ಅಜಿಂಕ್ಯಾ ರಹಾನೆ, ರಿಷಬ್​ ಪಂತ್ (ಕ್ಯಾಪ್ಟನ್-ವಿಕೆಟ್​ ಕೀಪರ್), ಮರ್ಕ್ಯುಸ್ ಸ್ಟೋಯಿನ್ಸ್, ಶಿಮ್ರಾನ್ ಹೆಟ್​ಮೇಯರ್, ಕ್ರಿಸ್ ವೋಕ್ಸ್​, ರವಿಚಂದ್ರನ್​ ಅಶ್ವಿನ್, ಟಾಮ್ ಕರ್ರನ್, ಅಮಿತ್​ ಮಿಶ್ರಾ, ಅವೇಶ್​ ಖಾನ್.

ರಾಜಸ್ಥಾನ್​ ರಾಯಲ್ಸ್​:
ಮನನ್ ವೋರಾ, ಲಿಯಾಮ್ ಲಿವಿಂಗ್​ಸ್ಟೋನ್, ಸಂಜು ಸ್ಯಾಮ್ಸನ್(ಕ್ಯಾಪ್ಟನ್-ವಿಕೆಟ್​ ಕೀಪರ್), ಜೋಸ್​ ಬಟ್ಲರ್, ರಿಯಾನ್ ಪರಾಗ್, ಮುಸ್ತಾಫಿಜರ್ ರಹಮಾನ್

Follow us on

Related Stories

Most Read Stories

Click on your DTH Provider to Add TV9 Kannada