IPL 2021: ತಂಡಕ್ಕೆ ರಸ್ಸೆಲ್ ನೀಡುವ ಕಾಣಿಕೆಗಳನ್ನು ಕೊಂಡಾಡಿದ ಕೆಕೆಆರ್ ನಾಯಕ ಮಾರ್ಗನ್

ರಸ್ಸೆಲ್ ಬೌಲಿಂಗ್​ನಲ್ಲೂ ಗಮನಾರ್ಹ ಪ್ರದರ್ಶನಗಳನ್ನು ನೀಡಿದ್ದಾರೆ. ತಮ್ಮ ವೇಗದ ಬೌಲಿಂಗ್ ಮೂಲಕ 62 ವಿಕೆಟ್​ಗಳನ್ನು ಅವರು ಜೇಬಿಗಿಳಿಸಿದ್ದಾರೆ. ಈ ಟೂ​ರ್ನಿಯಲ್ಲಿ ಅವರು ಅತ್ಯುತ್ತಮ ಬೌಲಿಂಗ್ ಸಾಧನೆ 4/20 ಆಗಿದೆ. ಡೆತ್ ಓವರ್​ಗಳಲ್ಲಿ ಅವರು ತೋರುವ ನಿಯಂತ್ರಣ ಮತ್ತು ನಿಖರತೆ ಬೆರಗು ಮೂಡಿಸುತ್ತದೆ.

IPL 2021: ತಂಡಕ್ಕೆ ರಸ್ಸೆಲ್ ನೀಡುವ ಕಾಣಿಕೆಗಳನ್ನು ಕೊಂಡಾಡಿದ ಕೆಕೆಆರ್ ನಾಯಕ ಮಾರ್ಗನ್
ಆಂಡ್ರೂ ರಸ್ಸೆಲ್
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Skanda

Updated on: Apr 13, 2021 | 10:13 AM

ಸನ್​ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಅಡಿದ ಪಂದ್ಯದಲ್ಲಿ 18ನೇ ಓವರ್ ಬೌಲ್ ಮಾಡಿ ಕೇವಲ 6ರನ್ ನೀಡಿದ ನಂತರ 20 ನೇ ಓವರ್​ನಲ್ಲಿ ಎದುರಾಳಿ ಬ್ಯಾಟ್ಸ್​ಮನ್​ಗಳಿಗೆ ಗೆಲ್ಲಲು 22 ರನ್​ಗಳನ್ನು ಬೇಕಿದ್ದಾಗ ಕರಾರುವಕ್ಕಾದ ಬೌಲಿಂಗ್ ಪ್ರದರ್ಶನದ ಮೂಲಕ ಕೇವಲ 11 ರನ್ ನೀಡಿದ ಕೆರೀಬಿಯನ್ ದ್ವೀಪಗಳ ದೈತ್ಯ ಆಂದ್ರೆ ರಸ್ಸೆಲ್​. ಅವರು ಒಬ್ಬ ಬೌಲರ್​ ಹಾಗೂ ಆಲ್​ರೌಂಡರ್​ ಆಗಿ ಟೀಮಿಗೆ ನೀಡುವ ಕಾಣಿಕೆಯನ್ನು ಕೊಲ್ಕತ್ತಾ ನೈಟ್​ರೈಡರ್ಸ್ ಟೀಮಿನ ನಾಯಕ ಅಯಾನ್ ಮಾರ್ಗನ್ ಕೊಂಡಾಡಿದ್ದಾರೆ. ಕೊನೆ ಓವರ್​ ಆರಂಭವಾದಾಗ 54 ರನ್ ಗಳಿಸಿ ಆಡುತ್ತಿದ್ದ ಮನೀಶ್ ಪಾಂಡೆ ಮತ್ತುಅಬ್ದುಲ್ ಸಮದ್ ಜೋಡಿಯಾಗಿದ್ದರು. 19ನೇ ಓವರ್​ನಲ್ಲಿ ಪ್ಯಾಟ್​ ಕಮ್ಮಿನ್ಸ್ ಅವರ ಎಸೆತಗಳಿಗೆ ಎರಡು ಸಿಕ್ಸರ್ ಬಾರಿಸಿದ್ದ ಅಬ್ದುಲ್ ಸಮದ್ ಕ್ರೀಸ್​ನಲ್ಲಿ ನಿಂತು ಅಬ್ಬರಿಸಲು ಸಜ್ಜಾಗಿದ್ದರು. ಆದರೆ, ಆ ಸಂದರ್ಭದಲ್ಲಿ ರಸ್ಸೆಲ್ ಪಿನ್-ಪಾಯಿಂಟ್ ಯಾರ್ಕರ್​ಗಳನ್ನು ಎಸೆದು ತಮ್ಮ ತಂಡಕ್ಕೆ ಗೆಲುವು ದಕ್ಕಿಸಿಕೊಟ್ಟರು.

ಪಂದ್ಯದ ನಂತರ ರಸ್ಸೆಲ್ ಅವರ ಸಾಧನೆಯನ್ನು ಮುಕ್ತಕಂಠದಿಂದ ಕೊಂಡಾಡಿದ ಮಾರ್ಗನ್, ‘ಬಹಳ ವರ್ಷಗಳಿಂದ ರಸ್ಸೆಲ್ ಅವರು ಕೆಕೆಆರ್ ತಂಡದ ಒಂದು ದೊಡ್ಡ ಭಾಗವಾಗಿದ್ದಾರೆ. ಒಬ್ಬ ಆಟಗಾರನಲ್ಲಿ ಅಂಥ ಪ್ರತಿಭೆ ಮತ್ತು ಸಾಮರ್ಥ್ಯವಿದ್ದರೆ ಅವನು ಟೀಮಿಗೆ ಯಾವುದೇ ಸಂದರ್ಭದಲ್ಲಿ ದೊಡ್ಡ ಕಾಣಿಕೆಯನ್ನು ನೀಡಬಲ್ಲ. ಡೆತ್​​ ಓವರ್​ಗಳಲ್ಲಿ ಬೌಲ್ ಮಾಡುವುದು ಸಾಮಾನ್ಯ ಮಾತಲ್ಲ, ಅವರು ಅದ್ಭುತವಾದ ನಿಯಂತ್ರಣದೊಂದಿಗೆ ಬೌಲ್​ ಮಾಡಿ ಗೆಲುವಿನ ಗೆರೆಯನ್ನು ದಾಟಿಸಿದರು,’ ಎಂದಿದ್ದಾರೆ.

ಈ ಪಂದ್ಯದಲ್ಲಿ ರಸ್ಸೆಲ್ ಕೇವಲ ಐದು ರನ್​ ಗಳಿಸಿ ಔಟಾದರೂ, ಅವರು ಬ್ಯಾಟ್​ ಕೈಯಲ್ಲಿ ಹಿಡಿದು ಪ್ರತಿಬಾರಿ ಕ್ರೀಸಿಗೆ ಬರುವಾಗಲೆಲ್ಲ ಎದುರಾಳಿ ಶಿಬಿರದಲ್ಲಿ ಭೀತಿ ಮೂಡಿಸುತ್ತಾರೆ. ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಅವರು ಇದುವರಗೆ ಆಡಿರುವ 75 ಪಂದ್ಯಗಳಿಂದ 1,522 ರನ್​ಗಳನ್ನು ನಂಬಲಸದಳ 181.83 ಸ್ಟ್ರೈಕ್ ರೇಟ್​ನಲ್ಲಿ ಚಚ್ಚಿದ್ದಾರೆ. ಅದರಲ್ಲಿ 129 ಸಿಕ್ಸ್​ಗಳು ಮತ್ತು 106 ಬೌಂಡರಿಗಳಿವೆ.

ರಸ್ಸೆಲ್ ಬೌಲಿಂಗ್​ನಲ್ಲೂ ಗಮನಾರ್ಹ ಪ್ರದರ್ಶನಗಳನ್ನು ನೀಡಿದ್ದಾರೆ. ತಮ್ಮ ವೇಗದ ಬೌಲಿಂಗ್ ಮೂಲಕ 62 ವಿಕೆಟ್​ಗಳನ್ನು ಅವರು ಜೇಬಿಗಿಳಿಸಿದ್ದಾರೆ. ಈ ಟೂ​ರ್ನಿಯಲ್ಲಿ ಅವರು ಅತ್ಯುತ್ತಮ ಬೌಲಿಂಗ್ ಸಾಧನೆ 4/20 ಆಗಿದೆ. ಡೆತ್ ಓವರ್​ಗಳಲ್ಲಿ ಅವರು ತೋರುವ ನಿಯಂತ್ರಣ ಮತ್ತು ನಿಖರತೆ ಬೆರಗು ಮೂಡಿಸುತ್ತದೆ.

ನಿಮಗೆ ಗೊತ್ತಿರುವ ಹಾಗೆ ರವಿವಾರದಂದು ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಹೈದರಾಬಾದ್ ತಂಡ ಕೊಲ್ಕತ್ತಾ ತಂಡವನ್ನು ಬ್ಯಾಟ್​ ಮಾಡುವಂತೆ ಆಮಂತ್ರಿಸಿತು. ಭಾರೀ ನಿರೀಕ್ಷೆ ಹುಟ್ಟಿಸಿರುವ ಶುಭಮನ್ ಗಿಲ್ ಕೇವಲ 15 ರನ್​ ಗಳಿಸಿ ಔಟಾದರು. ಆದರೆ ಅವರ ಜೊತೆಗಾರ ನಿತಿಶ್ ರಾಣಾ ಸಿಡಿಲಬ್ಬರದ ಹೊಡೆತಗಳನ್ನು ಬಾರಿಸಿ ಕೇವಲ 46 ಎಸೆತಗಳಲ್ಲಿ 80 ರನ್ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ರಾಹುಲ್ ತ್ರಿಪಾಠಿ ಕೇವಲ 29 ಎಸೆತಗಳಲ್ಲಿ 53 ರನ್ ಚಚ್ಚಿದರು. ಇನ್ನಿಂಗ್ಸ್​ ಅಂತ್ಯದಲ್ಲಿ ಲಾಂಗ್ ಹ್ಯಾಂಡಲ್ ಉಪಯೋಗಿಸಿದ ಕೆಕೆಆರ್ ಮಾಜಿ ಕ್ಯಾಪ್ಟನ್​ ದಿನೇಶ್ ಕಾರ್ತಿಕ್ 9 ಎಸೆತಗಳಲ್ಲಿ 22 ರನ್ ಬಾರಿಸಿದರು. ಇವರೆಲ್ಲರ ಕೊಡುಗೆಯಿಂದ ಕೊಲ್ಕತ್ತಾ ತಂಡ 20 ಓವರ್​ಗಳಲ್ಲಿ 187/6 ಮೊತ್ತ ದಾಖಲಿಸಿತು.

ಆ ಮೊತ್ತವನ್ನು ಹೈದರಾಬಾದ್ ತಂಡ ಬೆನ್ನಟ್ಟಿದಾಗ ಆರಂಭಿಕ ಆಟಗಾರ ಮತ್ತು ನಾಯಕ ಡೇವಿಡ್​ ವಾರ್ನರ್​ ಅವರನ್ನು ಅಗ್ಗವಾಗಿ ಕಳೆದುಕೊಂಡಿತು. ಅವರ ಜೊತೆಗಾರ ವೃದ್ಧಿಮಾನ್​ ಸಹಾ ಕೂಡ ಬೇಗ ಔಟಾದರು. ಹೈದರಾಬಾದ ಟೀಮನ್ನು ಅಪಾಯದಿಂದ ಪಾರು ಮಾಡಿ ಇನ್ನಿಂಗ್ಸ್ ಕಟ್ಟಿ ಬೆಳೆಸಿದವರು ಜಾನಿ ಬೇರ್​ಸ್ಟೋ ಮತ್ತು ಕನ್ನಡಿಗೆ ಮನೀಶ್ ಪಾಂಡೆ. ಬೇರ್​ಸ್ಟೋ 55 ರನ್ ಗಳಿಸಿ ಔಟಾದರು. ನಂತರ ಆಡಲು ಬಂದ ಮೊಹಮ್ಮದ್ ನಬಿ ಮತ್ತು ವಿಜಯ್ ಶಂಕರ್ ಕ್ರಮವಾಗಿ 14 ಮತ್ತು 11 ರನ್ ಗಳಿಸಿ ಔಟಾದರು. ಅಬ್ದುಲ್ ಸಮದ್ ಕೆಲ ಭರ್ಜರಿ ಹೊಡೆತಗಳನ್ನು ಬಾರಿಸಿದರಾದರೂ ಟೀಮಿಗೆ ಗೆಲುವು ದೊರಕಿಸಿಕೊಡುವುದು ಸಾಧ್ಯವಾಗಲಿಲ್ಲ. ಪಾಂಡೆ 61 ರನ್ ಗಳಿಸಿ ಅಜೇಯರಾಗುಳಿದರು.

ಇದನ್ನೂ ಓದಿ: Chris Gayle IPL 2021 PBKS Team Player: ಕೆರಿಬಿಯನ್ ದೈತ್ಯ ಗೇಲ್ ಅಬ್ಬರಿಸಲು ಆರಂಭಿಸಿದರೆ ಎದುರಾಳಿ ತಂಡಗಳ ಸೋಲು ಖಚಿತ

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ