ಎಸ್​ಬಿಐ ಫಿಕ್ಸೆಡ್ ಡೆಪಾಸಿಟ್ಸ್ ವರ್ಸಸ್ ಅಂಚೆ ಕಚೇರಿ ಡೆಪಾಸಿಟ್ಸ್; ಎಲ್ಲಿ, ಎಷ್ಟು ಬಡ್ಡಿ ಸಿಗುತ್ತದೆ?

SBI Fixed Deposits Vs Post Office term deposits: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಫ್​​ಡಿಗೂ ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್​ನಲ್ಲಿ ದೊರೆಯುವ ಬಡ್ಡಿ ದರದ ವ್ಯತ್ಯಾಸದ ಬಗ್ಗೆ ಲೇಖನ ಇಲ್ಲಿದೆ.

  • TV9 Web Team
  • Published On - 16:20 PM, 13 Apr 2021
ಎಸ್​ಬಿಐ ಫಿಕ್ಸೆಡ್ ಡೆಪಾಸಿಟ್ಸ್ ವರ್ಸಸ್ ಅಂಚೆ ಕಚೇರಿ ಡೆಪಾಸಿಟ್ಸ್; ಎಲ್ಲಿ, ಎಷ್ಟು ಬಡ್ಡಿ ಸಿಗುತ್ತದೆ?
ಸಾಂದರ್ಭಿಕ ಚಿತ್ರ

ಹಲವರ ಪಾಲಿಗೆ ಅತ್ಯಂತ ಸುರಕ್ಷಿತ ಹಾಗೂ ಜನಪ್ರಿಯ ಹೂಡಿಕೆಗಳಲ್ಲಿ ಒಂದು ಎನಿಸಿಕೊಂಡಿದೆ ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್ಸ್). ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಸೇರಿದಂತೆ ಎಲ್ಲ ಟಾಪ್ ಬ್ಯಾಂಕ್​ಗಳಲ್ಲೂ ಅಲ್ಪಾವಧಿ ಮತ್ತು ದೀರ್ಘಾವಧಿ ಠೇವಣಿಗಳನ್ನು ಇಡಬಹುದು. ಅಗತ್ಯಕ್ಕೆ ತಕ್ಕಂತೆ ಬೇಕಾದ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಬ್ಯಾಂಕ್​ಗಳನ್ನು ಹೊರತುಪಡಿಸಿ ಅಂಚೆ ಕಚೇರಿಗಳಲ್ಲೂ ಎಫ್​ಡಿ ಡೆಪಾಸಿಟ್ ಆರಂಭಿಸಬಹುದು. ಅಂಚೆ ಕಚೇರಿಯ ಟೈಮ್ ಡೆಪಾಸಿಟ್​ಗೆ ಪ್ರತಿ ಮೂರು ತಿಂಗಳಿಗೊಮ್ಮೆ ದರ ಪರಿಷ್ಕರಣೆ ಮಾಡಲಾಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫಿಕ್ಸೆಡ್ ಡೆಪಾಸಿಟ್ಸ್
ಈ ತಿಂಗಳ ಆರಂಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಫಿಕ್ಸೆಡ್ ಡೆಪಾಸಿಟ್ಸ್​ಗಳ ಮೇಲಿನ ಬಡ್ಡಿ ದರವನ್ನು ಸ್ವಲ್ಪ ಮಟ್ಟಿಗೆ ಪರಿಷ್ಕರಣೆ ಮಾಡಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 10ರಿಂದ ಎಸ್​ಬಿಐನಿಂದ ಹಿರಿಯ ನಾಗರಿಕರಿಗೆ ಶೇ 5.40 ವಾರ್ಷಿಕ ರಿಟರ್ನ್ ನೀಡುತ್ತಿದೆ. ಇತರ ರೀಟೇಲ್ ಡೆಪಾಸಿಟ್ ಗ್ರಾಹಕರಿಗೆ ಅಥವಾ 2 ಕೋಟಿ ರೂ. ಒಳಗಿನ ಡೆಪಾಸಿಟ್​ಗೆ- ಮೆಚ್ಯೂರಿಟಿ ಅವಧಿ ಒಂದು ವರ್ಷ ಮೇಲ್ಪಟ್ಟು ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಡೆಪಾಸಿಟ್​ಗೆ ಶೇ 4.90 ಬಡ್ಡಿ ನೀಡುತ್ತಿದೆ. ಇದು sbi.co.in ವೆಬ್​ಸೈಟ್​ನಿಂದ ತಿಳಿದುಬಂದಿರುವ ಮಾಹಿತಿ. ಅದು ಸದ್ಯಕ್ಕೆ ನೀಡುತ್ತಿರುವ ಶೇ 5.60 ಮತ್ತು ಶೇ 5.10ಗಿಂತ 20 ಬೇಸಿಸ್ ಪಾಯಿಂಟ್ ಕಡಿಮೆ ಆಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈಚಿನ ಬಡ್ಡಿ ದರ ಹೀಗಿದೆ:
ಮೆಚ್ಯೂರಿಟಿ ಅವಧಿ                 ಸಾರ್ವಜನಿಕರಿಗೆ                            ಹಿರಿಯ ನಾಗರಿಕರಿಗೆ
7ರಿಂದ 45 ದಿನಗಳು                        ಶೇ 2.90                                     ಶೇ 3.40
46ರಿಂದ 179 ದಿನಗಳು                    ಶೇ 3.90                                     ಶೇ 4.40
180ರಿಂದ 210 ದಿನಗಳು                  ಶೇ 4.40                                     ಶೇ 4.90
211ರಿಂದ 1 ವರ್ಷಕ್ಕಿಂತ ಕಡಿಮೆ           ಶೇ 4.40                                    ಶೇ 4.90
1 ವರ್ಷದಿಂದ 2 ವರ್ಷದೊಳಗೆ              ಶೇ 5.10                                     ಶೇ 5.60
2 ವರ್ಷದಿಂದ 3 ವರ್ಷದೊಳಗೆ               ಶೇ 5.10                                    ಶೇ 5.60
3 ವರ್ಷದಿಂದ 5 ವರ್ಷದೊಳಗೆ               ಶೇ 5.30                                    ಶೇ 5.80
5 ವರ್ಷದಿಂದ 10 ವರ್ಷದೊಳಗೆ             ಶೇ 5.40                                    ಶೇ 6.20

ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್ಸ್
ಅಂಚೆ ಕಚೇರಿಯ ಟರ್ಮ್ ಡೆಪಾಸಿಟ್ ಸ್ಕೀಮ್​ಗಳು ಬ್ಯಾಂಕ್ ಎಫ್​.ಡಿ.ಗಳ ರೀತಿಯಲ್ಲೇ ಇರುತ್ತವೆ. ಒಂದು ವರ್ಷದಿಂದ 5 ವರ್ಷದ ಅವಧಿಗೆ ಡೆಪಾಸಿಟ್ ಮಾಡಬಹುದು. ಅಂಚೆ ಕಚೇರಿ ಠೇವಣಿ ಯೋಜನೆ ಏಪ್ರಿಲ್ 1, 2021ರಂದು ಪರಿಷ್ಕರಣೆ ಆಗಿದೆ. ಪೋಸ್ಟ್ ಆಫೀಸ್​ನಲ್ಲಿ 1ರಿಂದ 3 ವರ್ಷದ ಅವಧಿಯ ಠೇವಣಿಗೆ ವಾರ್ಷಿಕ ಶೇ 5.5ರಷ್ಟು ಬಡ್ಡಿ ನೀಡಲಾಗುತ್ತದೆ. 5 ವರ್ಷದ ಅವಧಿಗೆ ಶೇ 6.7ರಷ್ಟು ಬಡ್ಡಿ ನೀಡುತ್ತದೆ.

ಇವುಗಳಿಗೆ ಭಾರತ ಸರ್ಕಾರದ ಬೆಂಬಲ ಇದೆ. ಆದ್ದರಿಂದ ಮೆಚ್ಯೂರಿಟಿ ಮತ್ತು ಅಸಲು ಮೊತ್ತವನ್ನು ಪಡೆಯುವುದು ಸಮಸ್ಯೆಯಲ್ಲ. ಹೂಡಿಕೆದಾರರ ಕೈಗೆ ಬರುವ ಬಡ್ಡಿ ಪೂರ್ಣ ಪ್ರಮಾಣದಲ್ಲಿ ತೆರಿಗೆ ಬೀಳುವಂತಾದರೂ 5 ವರ್ಷಗಳ ಅವಧಿಯ ಡೆಪಾಸಿಟ್ಸ್​ಗೆ ಆದಾಯ ತೆರಿಗೆ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ.

ಇದನ್ನೂ ಓದಿ: SBI Multi Option Deposit Scheme: ಎಸ್​ಬಿಐ ಮಲ್ಟಿ ಆಪ್ಷನ್ ಡೆಪಾಸಿಟ್ ಸ್ಕೀಮ್ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳಿವು

(Here is the calculation of interest on SBI vs post office term deposit returns.