ರಾಜಣ್ಣನವರ ರಾಜೀನಾಮೆ ವಿಷಯ ಕೇವಲ ಮಾಧ್ಯಮಗಳಲ್ಲಿ ಮಾತ್ರ ಹರಿದಾಡುತ್ತಿದೆ: ಪ್ರಿಯಾಂಕ್ ಖರ್ಗೆ
ರಾಜಣ್ಣ ಅವರಿಂದ ಹಾಸನ ಉಸ್ತುವಾರಿ ಸಚಿವನ ಜವಾಬ್ದಾರಿಯನ್ನು ಕಿತ್ತುಕೊಂಡಿಲ್ಲ, ಅವರೇ ನೀಡಿರುವ ಹೇಳಿಕೆಯ ಪ್ರಕಾರ ಹಾಸನದ ಮೇಲೆ ಅವರಿಗೆ ಗಮನ ಹರಿಸಲು ಟೈಮು ಸಿಗದಂತಾಗಿತ್ತು, ಯಾವ ಜಿಲ್ಲೆಗೆ ಯಾವ ಸಚಿವನನ್ನು ಉಸ್ತುವಾರಿಯನ್ನಾಗಿ ಮಾಡಬೇಕೆನ್ನುವುದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ವಿಚಾರ, ರಾಜಣ್ಣ ಅವರು ಹೈಕಮಾಂಡ್ ವಿರುದ್ಧ ಮಾತಾಡಿದ್ದಾರೆನ್ನುವುದು ಸುಳ್ಳು ಎಂದು ಖರ್ಗೆ ಹೇಳಿದರು.
ಬೆಂಗಳೂರು, ಆಗಸ್ಟ್ 11: ಕೆಎನ್ ರಾಜಣ್ಣ ರಾಜೀನಾಮೆ (KN Rajanna resignation) ವಿಷಯದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಅವರು ರಾಜೀನಾಮೆ ಸಲ್ಲಿಸಿದ್ದಾರೆ ಅಂತ ಸಿಎಂ ಇನ್ನೂ ಹೇಳಿಲ್ಲ ಮತ್ತು ಹೈಕಮಾಂಡ್ನಿಂದ ಯಾವುದೇ ನಿರ್ದೇಶನ ಬಂದಿಲ್ಲ, ವಿಷಯ ಮಾಧ್ಯಮಗಳಲ್ಲಿ ಮಾತ್ರ ಚರ್ಚೆ ಆಗುತ್ತಿದೆ, ರಾಜಣ್ಣನವರು ಸದನದಲ್ಲೇ ಇದ್ದಾರೆ, ಹೊರಬಂದ ಬಳಿಕ ಹೇಳಿಕೆ ನೀಡುತ್ತಾರೆ ಎಂದು ಹೇಳಿದರು. ರಾಜಣ್ಣ ಅವರು ಮಹಾದೇವಪುರ ಚುನಾವಣಾ ಅಕ್ರಮದ ಬಗ್ಗೆ ಮಾತಾಡಿಲ್ಲ, ಪ್ರಕ್ರಿಯೆ ಬಗ್ಗೆ ಮಾತ್ರ ಅವರು ಹೇಳಿದ್ದಾರೆ, ರಾಹುಲ್ ಗಾಂಧಿಯವರು ಚುನಾವಣಾ ಅಯೋಗದ ವಿರುದ್ಧ ಹೋರಾಡುತ್ತಿದ್ದಾರೆ ಮತ್ತು ಅವರಿಗೆ ದೇಶದೆಲ್ಲೆಡೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಖರ್ಗೆ ಹೇಳಿದರು.
ಇದನ್ನೂ ಓದಿ: ನಾವು ಆಟ ಆಡಲು ವಿದೇಶಕ್ಕೆ ಹೋಗ್ತಿಲ್ಲ: ಅಮೆರಿಕಕ್ಕೆ ತೆರಳಲು ಅನುಮತಿ ನೀಡದ್ದಕ್ಕೆ ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

