ತಮ್ಮ ಪಕ್ಷದ ನಾಯಕ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣ ಹೇಳಿದರೆ ಹೇಗೆ? ಅದು ಶಿಸ್ತಿನ ಉಲ್ಲಂಘನೆ: ಸೋಮಶೇಖರ್
ರಾಜಣ್ಣ ರಾಜೀನಾಮೆ ವಿಷಯವನ್ನು ತನಗೆ ಕೇಳಿದರೆ ಹೇಗೆ ಎಂದು ನಗುತ್ತಾ ಹೇಳುವ ಸೋಮಶೇಖರ್, ಸತ್ಯ ಹೇಳಿದ್ದಕ್ಕೆ ರಾಜಣ್ಣ ಭಾರೀ ಬೆಲೆ ತೆತ್ತಿದ್ದಾರೆ ಅಂತ ಬಿಜೆಪಿ ನಾಯಕರು ಹೇಳುತ್ತಿದ್ದಾರೆ ಅಂತ ಪತ್ರಕರ್ತರು ಹೇಳಿದಾಗ; ಸತ್ಯ ಮತ್ತು ಅಸತ್ಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳೋರು ನಾವಲ್ಲ, ಪಕ್ಷದ ಶಿಸ್ತಿನ ಉಲ್ಲಂಘನೆಯಾಗಿದೆ ಅಂತ ಕಾಂಗ್ರೆಸ್ ನಾಯಕರು ಭಾವಿಸಿದಂತಿದೆ ಎಂದರು.
ಬೆಂಗಳೂರು, ಆಗಸ್ಟ್ 11: ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಎಸ್ ಟಿ ಸೋಮಶೇಖರ್ ಇಂದು ವಿಧಾನ ಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತಾಡುತ್ತಾ, ಕೆಎನ್ ರಾಜಣ್ಣ (KN Rajanna) ಯಾಕೆ ರಾಜೀನಾಮೆ ನೀಡಿದ್ದಾರೋ ಗೊತ್ತಿಲ್ಲ, ಒಂದು ವೇಳೆ ರಾಹುಲ್ ಗಾಂಧಿ ವಿರುದ್ಧ ಮಾತಾಡಿದ್ದಕ್ಕೆ ಈ ಸನ್ನಿವೇಶ ಸೃಷ್ಟಿಯಾಗಿದ್ದರೆ, ರಾಜಣ್ಣ ಮಾತಾಡಿದ್ದು ತಪ್ಪು ಎನ್ನುತ್ತೇನೆ ಅಂತ ಹೇಳಿದರು. ರಾಹುಲ್ ಗಾಂಧಿ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ ಮತ್ತು ಬೆಂಗಳೂರಿಗೆ ಬಂದು ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಅಂತ ಮಾತಾಡಿದ್ದಾರೆ, ಹಾಗಿರುವಾಗ ಸಂಪುಟದಲ್ಲಿ ಹಿರಿಯ ಸಚಿವರಾಗಿರುವ ರಾಜಣ್ಣ ಅವರು, ರಾಹುಲ್ ಮಾತಾಡಿದ್ದು ಸರಿಯಲ್ಲ ಅಂತ ಹೇಳಿದ್ದು ತಪ್ಪು ಎಂದು ಸೋಮಶೇಖರ್ ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಮತ್ತು ಶಿವಕುಮಾರ್ ದಿಗ್ಗಜರು, ಧೀಮಂತ ನಾಯಕರು ಮತ್ತು ಮಣ್ಣಿನ ಮಕ್ಕಳು: ಸೋಮಶೇಖರ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

