ಉಚ್ಚಾಟನೆಯಿಂದ ಬಹಳ ಸಂತೋಷವಾಗಿದೆ, ಪಕ್ಷದ ಕ್ರಮವನ್ನು ಸ್ವಾಗತಿಸುತ್ತೇನೆ: ಎಸ್ ಟಿ ಸೋಮಶೇಖರ್
ಪಕ್ಷದ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಣಯದಿಂದ ಬಹಳ ಸಂತೋಷವಾಗಿದೆ, ಅದನ್ನು ಸ್ವಾಗತಿಸುತ್ತೇನೆ, ಇಂಥದೊಂದು ನಿರ್ಧಾರವನ್ನು ವರಿಷ್ಠರು ತೆಗೆದುಕೊಳ್ಳುತ್ತಾರೆ ಅಂತ ಗೊತ್ತಿತ್ತು, ಅದರೆ ಯಾವಾಗ ಅದು ಹೊರಬೀಳಬಹುದು ಎಂಬ ಕುತೂಹಲ ಮಾತ್ರ ಇತ್ತು, ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಅದರಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಸೋಮಶೇಖರ್ ಹೇಳಿದರು.
ಬೆಂಗಳೂರು, ಮೇ 27: ಬಿಜೆಪಿಯಿಂದ ಉಚ್ಚಾಟಿತರಾಗಿರುವ ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್, ವರಿಷ್ಠರ ನಿರ್ಧಾರ ತನ್ನಲ್ಲಿ ಆಶ್ಚರ್ಯವನ್ನೇನೂ ಹುಟ್ಟಿಸಿಲ್ಲ, ಕ್ರಮ ನಿರೀಕ್ಷಿಸಲಾಗಿತ್ತು ಎಂದು ಹೇಳಿದರು. ನಗರದಲ್ಲಿ ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಸೋಮಶೇಖರ್, ಶಿಸ್ತು ಸಮಿತಿಯಿಂದ (disciplinary committee) ತನಗೆ ನೋಟೀಸ್ ಜಾರಿಯಾಗಿದ್ದು ನಿಜ, ತಾನು ನೀಡಿದ ಉತ್ತರದಲ್ಲಿ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಲ್ಲ ಮತ್ತು ಪಕ್ಷಕ್ಕೆ ಮುಜುಗುರ ಉಂಟಾಗುವ ರೀತಿಯಲ್ಲಿ ನಡೆದುಕೊಂಡಿಲ್ಲ, ಅಂತ ಹೇಳಿದ್ದೆ. ಶಿಸ್ತು ಸಮಿತಿಯು ಸ್ಥಳೀಯ ನಾಯಕತ್ವ ಹೇಳುವುದಕ್ಕೆ ಹೆಚ್ಚಿನ ಬೆಲೆ ನೀಡುತ್ತದೆ ಎಂದು ಹೇಳಿದರು. ಮುಂದಿನ ನಡೆ ಬಗ್ಗೆ ಯೋಚಿಸಿಲ್ಲ, ಚುನಾವಣೆಗೆ ಇನ್ನೂ 3 ವರ್ಷ ಸಮಯವಿದೆ, ಬೆಂಬಲಿಗರು ಹೇಳಿದ್ದನ್ನು ಕೇಳುತ್ತೇನೆ ಎಂದು ಸೋಮಶೆಖರ್ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ