ಉಚ್ಚಾಟನೆಗೊಂಡ ಸೋಮಶೇಖರ್ ಮತ್ತು ಶಿವರಾಂರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿದ ಪ್ರದೀಪ್ ಈಶ್ವರ್
ಬಿಜೆಪಿಯ ಸುಮಾರು 25 ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲು ಡಿಕೆ ಶಿವಕುಮಾರ್ ರೆಡಿ ಮಾಡಿಟ್ಟುಕೊಂಡಿದ್ದಾರೆ, ಅದೊಂದು ವೇಳೆ ನಡೆದರೆ ಬಿಜೆಪಿ ಮತ್ತು ಜೆಡಿಎಸ್ ಗತಿಯೇನು ಎಂಬ ಯೋಚನೆ ಶುರುವಾಗಿದೆ, ಇದರ ಬಗ್ಗೆ ಅಶೋಕ, ವಿಜಯೇಂದ್ರ ಇಲ್ಲವೇ ಕುಮಾರಸ್ವಾಮಿ ಕೇಳಿದರೆ ಉತ್ತರ ಕೊಡುತ್ತೇನೆ, ಬೇರೆ ನಾಯಕರು ಕೇಳಿದರೆ ಕೊಡಲ್ಲ ಎಂದು ಪ್ರದೀಪ್ ಈಶ್ವರ್ ಹೇಳುತ್ತಾರೆ.
ಚಿಕ್ಕಬಳ್ಳಾಪುರ, ಮೇ 27: ರಾಜಕೀಯ ವಲಯಗಳಲ್ಲಿ ಇವತ್ತು ಬಿಜೆಪಿಯಿಂದ ಉಚ್ಚಾಟನೆಗೊಂಡ ಎಸ್ ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರದ್ದೇ ಚರ್ಚೆ. ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತಾವೇ ಮುಂದಿನ ಕೆಪಿಸಿಸಿ ಅಧ್ಯಕ್ಷರೇನೋ ಎಂಬಂತೆ ಪ್ರತಿಕ್ರಿಯೆ ನೀಡಿದರು. ಸೋಮಶೇಖರ್ ಮತ್ತು ಹೆಬ್ಬಾರ್ ಅವರು ಇಷ್ಟು ದಿನ ಬಿಜೆಪಿಯಲ್ಲಿದ್ದರು ಅಂತ ಆ ಪಕ್ಷದ ನಾಯಕರು (BJP leaders) ಅಂದುಕೊಂಡಿದ್ದೇ ಮೂರ್ಖತನ, ಅವರಿಬ್ಬರು ಮೊದಲಿಂದಲೂ ಕಾಂಗ್ರೆಸ್ ಜೊತೆ ಇದ್ದರು ಅಂತ ಹೇಳುವ ಪ್ರದೀಪ್ ವೆಲ್ಕಂ ಟು ಕಾಂಗ್ರೆಸ್ ಶಿವರಾಂ ಸರ್ ಸೋಮಶೇಖರ್ ಸರ್ ಎನ್ನುತ್ತಾರೆ. ಕಾಂಗ್ರೆಸ್ ಸೇರುವ ಬಗ್ಗೆ ಅವರಿಬ್ಬರೂ ಮಾತಾಡಿಲ್ಲ, ಅದರೆ ಪ್ರದೀಪ್ ಮಾತ್ರ ಅವರಿಬ್ಬರನ್ನು ಕೆಪಿಸಿಸಿ ಅಧ್ಯಕ್ಷನಂತೆ ತಮ್ಮ ಪಕ್ಷಕ್ಕೆ ಸ್ವಾಗತಿಸುತ್ತಾರೆ!
ಇದನ್ನೂ ಓದಿ: ನಮ್ಮ ಕಾರ್ಯಕರ್ತರನ್ನು ಬಿಜೆಪಿ ಕಾರ್ಯಕ್ರಮಗಳಲ್ಲಿ ನುಗ್ಗಿಸಿ ಅಡ್ಡಿಪಡಿಸೋದು ನಮಗೂ ಗೊತ್ತು: ಪ್ರದೀಪ್ ಈಶ್ವರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

