ರೌಡಿಶೀಟರ್ ಉಪನಾಮದಿಂದ ಮುಕ್ತಿ, ತುಮಕೂರು ವಿಭಾಗದ ರೌಡಿಗಳು ಹೇಳೋದೇನು?
ಕಳೆದ 8 ವರ್ಷಗಳ ಅವಧಿಯಲ್ಲಿ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರದವರಿಗೆ ರೌಡಿಶೀಟರ್ ಹೆಸರಿಂದ ಮುಕ್ತ ಮಾಡಲಾಗುವುದಂತೆ. ತುಮಕೂರು ಜಿಲ್ಲೆಯ ತುಮಕೂರು, ಕುಣಿಗಲ್, ತಿಪಟೂರು, ಮಧುಗಿರಿ ಮತ್ತು ಶಿರಾ ವಿಭಾಗದ ರೌಡಿಶೀಟರ್ಗಳನ್ನು ತುಮಕೂರು ಎಸ್ಪಿ ಕಚೇರಿಯ ಡಿಅರ್ ಮೈದಾನಕ್ಕೆ ಕರೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಒಬ್ಬೊಬ್ಬ ರೌಡಿಯದು ಒಂದೊಂದು ಕತೆ.
ತುಮಕೂರು, ಮೇ 27: ಸುಮಾರು ವರ್ಷಗಳಿಂದ ಪೊಲೀಸ್ ದಾಖಲೆಗಳಲ್ಲಿ (police records) ಮತ್ತು ಸಮಾಜದಲ್ಲಿ ರೌಡಿಶೀಟರ್ ಆಗಿ ಉಲ್ಲೇಖಿಸಲ್ಪಟ್ಟವರಿಗೆ ನಿಮ್ಮನ್ನು ರೌಡಿಶೀಟರ್ ಉಪನಾಮದಿಂದ ಮುಕ್ತಗೊಳಿಸಲಾಗುತ್ತಿದೆ ಅಂತ ಹೇಳಿದಾಗ ಸಹಜವಾಗೇ ಖುಷಿಯಾಗುತ್ತದೆ. ತುಮಕೂರು ಎಸ್ ಪಿ ಶೋಕ್ ವೆಂಕಟ್ ರೌಡಿಶೀಟರ್ಗಳ ಪುನರಾವಲೋಕನ ಸಭೆ ಕರೆದು ಜಿಲ್ಲೆಯ ಸುಮಾರು 91 ರೌಡಿಶೀಟರ್ ಗಳ ಕಡತಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ನವಾಬ್ ಪಾಶಾ ಹೆಸರಿನ ಹಿರಿಯ ವ್ಯಕ್ತಿಯೊಬ್ಬರು ಒಬ್ಬ ರೌಡಿಶೀಟರ್ ಆಗಿ ಕಳೆದ 18 ವರ್ಷಗಳಲ್ಲಿ ಅನುಭವಿಸಿದ ನೋವು, ಯಾತನೆ, ಅರೋಗ್ಯ ಮತ್ತು ಕೌಟುಂಬಿಕ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ದಾವಣಗೆರೆ ರೌಡಿಶೀಟರ್ ಸಂತೋಷ್ ಹತ್ಯೆ ಪ್ರಕರಣ: ಆರೋಪಿಗಳು ಪೊಲೀಸರ ಮುಂದೆ ಶರಣು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos

