AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ ರೌಡಿಶೀಟರ್​ ಸಂತೋಷ್​ ​ಹತ್ಯೆ ಪ್ರಕರಣ: ಆರೋಪಿಗಳು ಪೊಲೀಸರ ಮುಂದೆ ಶರಣು

ದಾವಣಗೆರೆಯಲ್ಲಿ ರೌಡಿಶೀಟರ್ ಸಂತೋಷ್ ಕುಮಾರ್ ಹತ್ಯೆ ಪ್ರಕರಣದಲ್ಲಿ 10 ಆರೋಪಿಗಳು ಹೊಳಲ್ಕೆರೆ ಪೊಲೀಸರ ಎದುರು ಶರಣಾಗಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ 12 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹತ್ಯೆಯಾದ ಸಂತೋಷ್ ಕುಮಾರ್ ಅವರ ಆಪ್ತರೇ ಹೆಚ್ಚಿನ ಆರೋಪಿಗಳು. ಬುಳ್ಳ ನಾಗ ಹತ್ಯೆಯಲ್ಲೂ ಇವರೇ ಭಾಗಿ ಎನ್ನಲಾಗಿದೆ. ಸಂತೋಷ್ ಕುಮಾರ್ ತನ್ನ ಸಹಚರರಿಗೆ ನೀಡಿದ್ದ ವಾಗ್ದಾನ ಉಳಿಸಿಕೊಳ್ಳದ ಕಾರಣ ಈ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದೆ.

ದಾವಣಗೆರೆ ರೌಡಿಶೀಟರ್​ ಸಂತೋಷ್​ ​ಹತ್ಯೆ ಪ್ರಕರಣ: ಆರೋಪಿಗಳು ಪೊಲೀಸರ ಮುಂದೆ ಶರಣು
ಶರಣಾದ ಆರೋಪಿಗಳು
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: ವಿವೇಕ ಬಿರಾದಾರ|

Updated on: May 06, 2025 | 9:02 PM

Share

ದಾವಣಗೆರೆ, ಮೇ 06: ರೌಡಿಶೀಟರ್​ ಸಂತೋಷ್​ ಕುಮಾರ್​ ಹತ್ಯೆ ಪ್ರಕರಣದ 10 ಮಂದಿ ಆರೋಪಿಗಳು ಹೊಳಲ್ಕೆರೆ ಠಾಣೆ ಪೊಲೀಸರ ಎದುರು ಶರಣಾಗಿದ್ದಾರೆ. ಪ್ರಕರಣ ಸಂಬಂಧ 12 ಜನರ ವಿರುದ್ಧ ದಾವಣಗೆರೆಯ (Davangere) ವಿದ್ಯಾನಗರ ಠಾಣೆಯಲ್ಲಿ ಎಫ್​ಐಆರ್​​ ದಾಖಲಾಗಿದೆ. ಮೃತ ಸಂತೋಷ್​ ಕುಮಾರ್ ಪತ್ನಿ ಶ್ರುತಿ ದೂರಿನ ಮೇರೆಗೆ ಆರೋಪಿಗಳಾದ ಕಾರ್ತಿಕ್​(22), ಚವಳಿ ಸಂತು(30), ನವೀನ್(26) ನವೀನ್(26), ಗುಂಡಪ್ಪ(32), ಬಸವರಾಜ್(22), ಹನುಮಂತಪ್ಪ(23), ಗಿಡ್ಡ ವಿಜಿ(27), ಚಿಕ್ಕಮ್ಮನಹಳ್ಳಿ ಶಿವು(30), ಕಡ್ಡಿ ರಾಘು(27), ಪ್ರಶಾಂತ್(28) ಮತ್ತು ನಿಟ್ಟುವಳ್ಳಿಯ ಗಣಿ ಸೇರಿದಂತೆ ಇತರರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಬಹುತೇಕ ಆರೋಪಿಗಳು ಹತ್ಯೆಯಾದ ಸಂತೋಷ್​ ಕುಮಾರ್​ನ ಆಪ್ತರಾಗಿದ್ದಾರೆ. ರೌಡಿಶೀಟರ್ ಬುಳ್ಳ ನಾಗನ ಹತ್ಯೆಯಲ್ಲೂ ಇದೇ ಆರೋಪಿಗಳು ಭಾಗಿಯಾಗಿದ್ದರು. ಇದೇ ಗ್ಯಾಂಗ್​ನಿಂದ ಸಂತೋಷ್​ ಕುಮಾರ್ ಅಲಿಯಾಸ್ ಕಣುಮಾ ಹತ್ಯೆಯಾಗಿದೆ. ಸೋಮವಾರ ದಾವಣಗೆರೆಯ ಸೋಮೇಶ್ವರ ಆಸ್ಪತ್ರೆ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಸಂತೋಷ್​ ಕುಮಾರ್​ನನ್ನು ಆರೋಪಿಗಳು ಹತ್ಯೆಗೈದಿದ್ದರು.

ಕೊಲೆಯಾದ ರೌಡಿಶೀಟರ್ ಕಣುಮ​ ಸಂತೋಷ್​ ಕುಮಾರ್ ಮೂಲತಃ ಚಿತ್ರದುರ್ಗ ಜಿಲ್ಲೆಯ ಹಿರಿಯೂರ ಬಳಿಯ ಮಾರಿ ಕಣವಿ ನಿವಾಸಿಯಾಗಿದ್ದನು. ಸಂತೋಷ ಕುಮಾರ್​ ತಾಯಿಯ ತವರು ದಾವಣಗೆರೆಯಾದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ನೆಲೆಸಿದ್ದರು. ಕಣುಮ ಬೆಳೆಯುವುದರ ಜೊತೆಗೆ ಸೊಪ್ಪು ಮಾರುತ್ತಿದ್ದನು. ನಂತರ, ರೌಡಿಸಂಗೆ ಇಳಿದ ಕಣುಮ ಸಂತೋಷ ಕುಮಾರ್​ ದಾವಣಗೆರೆ ಜಿಲ್ಲೆಯಲ್ಲಿನ ರೌಡಿಶೀಟರ್ ಗಳಾದ ಬುಳ್ಳ್ ನಾಗಾ, ಜೈಮ್ ಯೋಗಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದನು.

ಇದನ್ನೂ ಓದಿ
Image
ಸುಹಾಸ್ ಶೆಟ್ಟಿ ಕೊಲೆಗೆ ವಿದೇಶದಿಂದ ಹಣ ಸಂದಾಯವಾಗಿರುವ ಶಂಕೆ
Image
ಸುಹಾಸ್ ಶೆಟ್ಟಿ ಕೊಲೆ: ಇಲ್ಲಿದೆ ಆರೋಪಿಗಳ ಪ್ಲ್ಯಾನ್​​ನ ಇನ್​ಸೈಡ್ ಡಿಟೇಲ್ಸ್
Image
ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಮಂಗಳೂರಿನ 3 ಕಡೆ ಚಾಕು ಇರಿತ: 7 ಜನರ ಬಂಧನ
Image
ಸುಹಾಸ್ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿರುವ ಇಬ್ಬರು ಹಿಂದೂಗಳು ಯಾರು?

ಇದನ್ನೂ ಓದಿ: ಕೊಡಗು: ಕಾಫಿ ತೋಟದಲ್ಲಿ ಗುಂಡಿಕ್ಕಿ ವ್ಯಕ್ತಿಯ ಕೊಲೆ

ಅವರೆಲ್ಲ ಹತರಾದ ಮೇಲೆ ಇತನೇ ದಾವಣಗೆರಯಲ್ಲಿ ಕಿಂಗ್ ಆಗಿದ್ದನು. ಅಡಿಕೆ ತೋಟ ಮಾಡಿಕೊಂಡು, ರಿಯಲ್ ಎಸ್ಟೇಟ್ ಉದ್ಯಮ ಮಾಡಿಕೊಂಡಿದ್ದನು. ಆದರೆ, ತನ್ನ ಸಹಚರರಿಗೆ ನೀಡಿದ್ದ ವಾಗ್ದಾನ್ ಪೂರೈಸಿರಲಿಲ್ಲ. ಈ ಕಾರಣಕ್ಕೆ ರೌಡಿಶೀಟರ್​ ಸಂತೋಷ ಕುಮಾರ್​ನನ್ನು ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ