AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜೆ ಮನೆಗೆ ಗೋಬಿ ಮಂಚೂರಿ ತಂದು, ದೇವರ ಪ್ರಸಾದ ಹಂಚಿ ಮಲಗಿದ್ದ ಯುವಕ ಬೆಳಗಾಗುವಷ್ಟರಲ್ಲಿ ಹೆಣವಾದ: ಸಿಸಿಟಿವಿಯಲ್ಲಿ ಸ್ಫೋಟಕ ದೃಶ್ಯ

ತುಮಕೂರಿನ ಜಕ್ಕೇನಹಳ್ಳಿಯಲ್ಲಿ ನಡೆದ ಮುತ್ತುರಾಜ್ ಹತ್ಯೆ ಪ್ರಕರಣ ರೋಚಕ ತಿರುವು ಪಡೆದಿದೆ. ಬೆಂಗಳೂರಿನಿಂದ ಮರಳಿದ ಮೂರೇ ದಿನಕ್ಕೆ ಯುವಕ ಬರ್ಬರವಾಗಿ ಕೊಲೆಯಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳಿಂದ ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿದೆ. ಇದರ ಆಧಾರದ ಮೇಲೆ, ಮೃತ ಯುವಕನ ತಾಯಿಯೇ ಕೊಲೆಯಲ್ಲಿ ಭಾಗಿಯಾಗಿರುವ ಶಂಕೆಯಿದ್ದು, ತಾಯಿ ಶಿವಮ್ಮ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

ಸಂಜೆ ಮನೆಗೆ ಗೋಬಿ ಮಂಚೂರಿ ತಂದು, ದೇವರ ಪ್ರಸಾದ ಹಂಚಿ ಮಲಗಿದ್ದ ಯುವಕ ಬೆಳಗಾಗುವಷ್ಟರಲ್ಲಿ ಹೆಣವಾದ: ಸಿಸಿಟಿವಿಯಲ್ಲಿ ಸ್ಫೋಟಕ ದೃಶ್ಯ
ಮುತ್ತುರಾಜ್ ಹತ್ಯೆ ಪ್ರಕರಣ
ಜಗದೀಶ ಬಿ.
| Edited By: |

Updated on: Nov 23, 2026 | 6:13 PM

Share

ತುಮಕೂರು, ನ.23: ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ತೆರಳಿದ್ದ ಯುವಕನೊಬ್ಬ ಎರಡು ತಿಂಗಳ ಬಳಿಕ ಸ್ವಗ್ರಾಮಕ್ಕೆ ವಾಪಸಾದ ಮೂರೇ ದಿನಕ್ಕೆ ಬರ್ಬರವಾಗಿ ಹತ್ಯೆಯಾದ ಘಟನೆ ತುಮಕೂರು ತಾಲೂಕಿನ ಜಕ್ಕೇನಹಳ್ಳಿಯಲ್ಲಿ ನಡೆದಿದೆ. ಮುತ್ತುರಾಜ್ (33) ಕೊಲೆಯಾದ ಯುವಕನಾಗಿದ್ದು, ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ತುಮಕೂರು ಗ್ರಾಮಾಂತರ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಮಹತ್ವದ ಸುಳಿವು ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜನ್ಮ ನೀಡಿದ ತಾಯಿ ಶಿವಮ್ಮ ಅವರನ್ನೇ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿರುವುದು ಪ್ರಕರಣಕ್ಕೆ ರೋಚಕ ತಿರುವು ನೀಡಿದೆ.

ತುಮಕೂರು ತಾಲೂಕಿನ ಜಕ್ಕೇನಹಳ್ಳಿ ನಿವಾಸಿಯಾದ ಮುತ್ತುರಾಜ್, ಅಡುಗೆ ಕೆಲಸದಲ್ಲಿ ನಿಸ್ಸೀಮನಾಗಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಭಟ್ಟನಾಗಿ ಕೆಲಸ ಮಾಡುತ್ತಿದ್ದ. ಎರಡು ತಿಂಗಳ ಹಿಂದೆ ಬೆಂಗಳೂರಿಗೆ ತೆರಳಿ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ ಈತ, ಕಳೆದ ಶುಕ್ರವಾರವಷ್ಟೇ ಕೆಲಸ ಬಿಟ್ಟು ಊರಿಗೆ ಮರಳಿದ್ದ. ಭಾನುವಾರ ಸಂಜೆ ಮನೆಗೆ ಗೋಬಿ ಮಂಚೂರಿ ತಂದುಕೊಟ್ಟಿದ್ದ ಮುತ್ತುರಾಜ್, ಬಳಿಕ ದೇವಸ್ಥಾನಕ್ಕೆ ತೆರಳಿ ಪ್ರಸಾದ ತಂದು ಎಲ್ಲರಿಗೂ ಹಂಚಿದ್ದ. ರಾತ್ರಿ ಮನೆಯ ಮುಂಭಾಗದಲ್ಲೇ ಚಾಪೆ ಹಾಸಿಕೊಂಡು ಮಲಗಿದ್ದ ಈತನ ತಲೆ ಹಾಗೂ ಕಿವಿ ಭಾಗಕ್ಕೆ ಬಲವಾದ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆಗೈಯ್ಯಲಾಗಿದೆ.

ಸೋಮವಾರ ಬೆಳಗ್ಗೆ ಮುತ್ತುರಾಜ್ ಸಹೋದರಿ ನರಸಮ್ಮ ಮನೆಯಿಂದ ಹೊರಬಂದಾಗ, ಚಾಪೆಯ ಮೇಲೆ ಮಲಗಿದ್ದ ಮುತ್ತುರಾಜ್ ತಲೆಯ ಮೇಲೆ ಕಂಬಳಿ ಹೊದಿಸಲಾಗಿತ್ತು. ಮಲಗಿದ್ದಾನೆಂದು ಭಾವಿಸಿ ಎಬ್ಬಿಸಲು ಹೋದಾಗ ರಕ್ತದ ಕಲೆ ಕಂಡು ಬೆಚ್ಚಿಬಿದ್ದಿದ್ದಾರೆ. ಬಳಿಕ ಹತ್ತಿರದಿಂದ ನೋಡಿದಾಗ ಆತ ಕೊಲೆಯಾಗಿರುವುದು ದೃಢಪಟ್ಟಿದೆ.

ಇದನ್ನೂ ಓದಿ: 3,600 ರೂ. ದರ ಕೊಡಲೇಬೇಕು, ಬಿಡುವ ಪ್ರಶ್ನೆ ಇಲ್ಲ: ಕಾರ್ಖಾನೆ ಮಾಲೀಕರ ಮೊಂಡುತನಕ್ಕೆ ಹಾವೇರಿ ಡಿಸಿ ಕಚೇರಿ ಎದುರು ರೈತರ ಕಿಡಿ

ಸಿಸಿಟಿವಿ ದೃಶ್ಯದಲ್ಲಿ ರೋಚಕ ಟ್ವಿಸ್ಟ್:

ಮೃತ ಮುತ್ತುರಾಜ್ ತಂದೆ ಪುಟ್ಟಯ್ಯ, ತಾಯಿ ಶಿವಮ್ಮ, ತಂಗಿ ನರಸಮ್ಮ ಹಾಗೂ ಆಕೆಯ ಪುಟ್ಟ ಮಗನೊಂದಿಗೆ ವಾಸವಿದ್ದ. ಅವಿವಾಹಿತನಾಗಿದ್ದ ಈತನಿಗೆ ಕೆಲವು ಮಹಿಳೆಯರ ಸಂಪರ್ಕವಿತ್ತು ಎನ್ನಲಾಗಿದೆ. ಯಾವುದೇ ಗಲಾಟೆ ಇಲ್ಲದಿದ್ದರೂ ರಾತ್ರಿ ವೇಳೆ ಈ ಹತ್ಯೆ ನಡೆದಿರುವುದು ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿತ್ತು. ಘಟನಾ ಸ್ಥಳಕ್ಕೆ ತುಮಕೂರು ಎಎಸ್‌ಪಿ ಗೋಪಾಲ್ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಲಭ್ಯವಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರಿಗೆ ಕೊಲೆಯ ಹಿಂದಿನ ಮಹತ್ವದ ರಹಸ್ಯ ಸುಳಿವು ಸಿಕ್ಕಿದೆ. ಮೇಲ್ನೋಟಕ್ಕೆ ಮನೆಯವರಿಂದಲೇ ಈ ಕೃತ್ಯ ನಡೆದಿರುವ ಬಲವಾದ ಅನುಮಾನ ವ್ಯಕ್ತವಾಗಿದ್ದು, ಸದ್ಯ ಮೃತ ಮುತ್ತುರಾಜ್ ತಾಯಿ ಶಿವಮ್ಮ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರ ತನಿಖೆಯ ಬಳಿಕವಷ್ಟೇ ಕೊಲೆಯ ನಿಖರ ಕಾರಣ ಹೊರಬೀಳಬೇಕಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
ಬೆನ್ನುನೋವು: ಜೈಲಿನ ಹೊರಗಡೆ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ದರ್ಶನ್ ಅರ್ಜಿ
ಬೆನ್ನುನೋವು: ಜೈಲಿನ ಹೊರಗಡೆ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ದರ್ಶನ್ ಅರ್ಜಿ
ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸದಿರುವುದು ಕಾಂಗ್ರೆಸ್​ಗೆ ಮಾರಕ: ರಾಜಣ್ಣ
ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸದಿರುವುದು ಕಾಂಗ್ರೆಸ್​ಗೆ ಮಾರಕ: ರಾಜಣ್ಣ
ಶಾಸಕ ಸ್ಥಾನಕ್ಕೆ ರಾಜೀನಾಮೆ: ನುಡಿದಂತೆ ನಡೆದ ನಯನಾ ಮೋಟಮ್ಮ!
ಶಾಸಕ ಸ್ಥಾನಕ್ಕೆ ರಾಜೀನಾಮೆ: ನುಡಿದಂತೆ ನಡೆದ ನಯನಾ ಮೋಟಮ್ಮ!
ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಗೆ ಬದುಕಿನ ಸಂಕಷ್ಟ
ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಗೆ ಬದುಕಿನ ಸಂಕಷ್ಟ
ಜಪಾನ್ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದ ಸಿಎಂ ಡಿಕೆ ಶಿವಕುಮಾರ್
ಜಪಾನ್ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದ ಸಿಎಂ ಡಿಕೆ ಶಿವಕುಮಾರ್
ಕೋಲಾರದ ಗಡಿ ಗ್ರಾಮದ ಬಳಿ ಒಂಟಿ ಕಾಡಾನೆ ಪ್ರತ್ಯಕ್ಷ
ಕೋಲಾರದ ಗಡಿ ಗ್ರಾಮದ ಬಳಿ ಒಂಟಿ ಕಾಡಾನೆ ಪ್ರತ್ಯಕ್ಷ
ಮತ್ತೆ ಕ್ಯಾಪ್ಟನ್ ಆಗಲು ಗಗನ್-ಗಾನವಿ ದ್ರೋಹ? ವಿಡಿಯೋ
ಮತ್ತೆ ಕ್ಯಾಪ್ಟನ್ ಆಗಲು ಗಗನ್-ಗಾನವಿ ದ್ರೋಹ? ವಿಡಿಯೋ
ರಸ್ತೆಯೋ ಅಥವಾ ಕಸದ ತೊಟ್ಟಿಯೋ? ಪದ್ಮನಾಭನಗರದ ಬೃಂದಾವನ ಲೇಔಟ್ ಬಳಿ ಕಸದ ರಾಶಿ
ರಸ್ತೆಯೋ ಅಥವಾ ಕಸದ ತೊಟ್ಟಿಯೋ? ಪದ್ಮನಾಭನಗರದ ಬೃಂದಾವನ ಲೇಔಟ್ ಬಳಿ ಕಸದ ರಾಶಿ
ಕೋಲಾರ: ವಾಲಿಬಾಲ್ ಕೋಚ್‌ ನಿರಂತರ ಅತ್ಯಾಚಾರದಿಂದ ಗರ್ಭಿಣಿಯಾದ ವಿದ್ಯಾರ್ಥಿನಿ
ಕೋಲಾರ: ವಾಲಿಬಾಲ್ ಕೋಚ್‌ ನಿರಂತರ ಅತ್ಯಾಚಾರದಿಂದ ಗರ್ಭಿಣಿಯಾದ ವಿದ್ಯಾರ್ಥಿನಿ
ಗುಂಜಾ ನರಸಿಂಹಸ್ವಾಮಿ ದೇಗುಲದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ
ಗುಂಜಾ ನರಸಿಂಹಸ್ವಾಮಿ ದೇಗುಲದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ