AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬರುತ್ತಿದೆ ಸೂಪರ್​ಇಂಟೆಲಿಜೆನ್ಸ್, ಹುಷಾರ್’ – ತಂತ್ರಜ್ಞಾನ ಭವಿಷ್ಯದ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ ಎಐ ವಿಜ್ಞಾನಿ ಕರೆ

ಮೆಟಾ ಎಐ ಮುಖ್ಯಸ್ಥ ಅಲೆಕ್ಸಾಂಡರ್ ವಾಂಗ್, ಕೃತಕ ಬುದ್ಧಿಮತ್ತೆಯು ಸೂಪರ್‌ಇಂಟೆಲಿಜೆನ್ಸ್‌ ಹಂತಕ್ಕೆ ಸಾಗುತ್ತಿರುವುದರ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಮಾನವಕುಲ AI ಮೇಲೆ ನಿಯಂತ್ರಣ ಕಳೆದುಕೊಳ್ಳುವ ಅಪಾಯವಿದ್ದು, ಸಮಾಜದ ಭವಿಷ್ಯವನ್ನು AI ಸಿಸ್ಟಂಗಳಿಗೆ ಒಪ್ಪಿಸಬಾರದು ಎಂದಿದ್ದಾರೆ. ಬದಲಾಗಿ, AI ಅನ್ನು ಮಾನವ ಸಬಲೀಕರಣಕ್ಕಾಗಿ ಬಳಸಿಕೊಂಡು, ಪ್ರತಿಯೊಬ್ಬರಿಗೂ ಹೆಚ್ಚಿನ ಸ್ವಾಯತ್ತತೆ ನೀಡುವ ಹೊಸ ಮಾರ್ಗವನ್ನು ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದ್ದಾರೆ.

‘ಬರುತ್ತಿದೆ ಸೂಪರ್​ಇಂಟೆಲಿಜೆನ್ಸ್, ಹುಷಾರ್’ - ತಂತ್ರಜ್ಞಾನ ಭವಿಷ್ಯದ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ ಎಐ ವಿಜ್ಞಾನಿ ಕರೆ
ಎಐImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 23, 2026 | 5:51 PM

Share

ಕ್ಯಾಲಿಫೋರ್ನಿಯಾ, ನವೆಂಬರ್ 23: ಕೃತಕ ಬುದ್ಧಿಮತ್ತೆಯು (AI) ‘ಸೂಪರ್‌ಇಂಟೆಲಿಜೆನ್ಸ್’ ಹಂತದತ್ತ ಸಾಗುತ್ತಿದ್ದು, ಮಾನವ ನಿಯಂತ್ರಣ ಮತ್ತು ಸಬಲೀಕರಣದ ದೃಷ್ಟಿಯಿಂದ ಎಐ ಭವಿಷ್ಯದ ಕುರಿತು ಮರುಚಿಂತನೆ ನಡೆಸುವಂತೆ ಮೆಟಾ ಮುಖ್ಯ ಎಐ ಅಧಿಕಾರಿ ಅಲೆಕ್ಸಾಂಡರ್ ವಾಂಗ್ ಎಚ್ಚರಿಸಿದ್ದಾರೆ. ಮೆಟಾದಲ್ಲಿ ಎಐ ಮುಖ್ಯಸ್ಥರಾಗಿರುವ ಅಲೆಕ್ಸಾಂಡರ್ ವಾಂಗ್ (Alexandr Wang) ಅವರು ‘ಎಕ್ಸ್’ (X) ಬ್ಲಾಗ್ ಪೋಸ್ಟ್‌ನಲ್ಲಿ ಈ ಕುರಿತು ಲೇಖನವೊಂದನ್ನು ಹಂಚಿಕೊಂಡಿದ್ದರೆ.

“ಮುಂದಿನ ಒಂದು ವರ್ಷದಲ್ಲಿ ಮಾನವಕುಲ ಹೇಗೆ ನಡೆದುಕೊಳ್ಳುತ್ತದೆ ಎಂಬುದು ನಾವು ಮುಂದೆ ಯಾವ ಭವಿಷ್ಯದ ಜಗತ್ತಿನಲ್ಲಿ ಬದುಕುತ್ತೇವೆ ಎಂಬುದರ ಮೇಲೆ ಪರಿಣಾಮ ಬೀರಲಿದೆ” ಎಂದು ಅವರು ಹೇಳಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಮಾನವ ಸಾಮರ್ಥ್ಯವನ್ನು ಮೀರಿಸಲು ಎಐಗೆ ಬುದ್ಧಿಮತ್ತೆಯ ಕೊರತೆ ದೊಡ್ಡ ತೊಡರೇನಲ್ಲ ಎಂಬುದನ್ನು ಎಐನ ಬೆಳವಣಿಗೆಯು ತೋರಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಏಷ್ಯಾ ಪವರ್ ಇಂಡೆಕ್ಸ್​ನಲ್ಲಿ ಭಾರತದ ಶಕ್ತಿ ಹೆಚ್ಚಳ; ಹೂಡಿಕೆಯಲ್ಲಿ ಚೀನಾ ಮೀರಿಸಿದ ಭಾರತ; ನಾಯಕತ್ವದಲ್ಲಿ ಮೋದಿ ನಂ. 2

ರೀಮಾನ್ ಹೈಪೋಥೆಸಿಸ್ ಸಾಬೀತುಪಡಿಸುವ ಮಟ್ಟಕ್ಕೆ ಏರಿದ ಎಐ

167 ವರ್ಷಗಳಷ್ಟು ಹಳೆಯ ಗಣಿತ ಸಮಸ್ಯೆಯಾದ ‘ರೀಮನ್ ಹೈಪೋಥೆಸಿಸ್’ (Riemann Hypothesis) ಸಾಬೀತುಪಡಿಸುವ ಮೈಲಿಗಲ್ಲಿಗೆ ಇದನ್ನು ಅವರು ಹೋಲಿಸಿದ್ದಾರೆ. ‘ಎಐ ಸಿಸ್ಟಂನ ನೆರವಿನಿಂದ ರೀಮನ್ ಹೈಪೋಥೆಸಿಸ್ ಅನ್ನು ಸಾಬೀತುಪಡಿಸಲು ಸಾಧ್ಯವಾಗಿದೆ ಎಂದರೆ, ಮಾನನರಿಗೆ ಪೂರ್ಣವಾಗಿ ಅರ್ಥವಾಗದ ಸಾಮರ್ಥ್ಯಗಳನ್ನು ತೋರಿಸಿದಂತಾಗಿದೆ’ ಎಂದಿದ್ದಾರೆ.

ನವೆಂಬರ್ 21ರಂದು ಆಂಥ್ರೋಪಿಕ್‌ನ ಗಣಿತಜ್ಞರೊಬ್ಬರು ಕ್ಲಾಡ್ ನೆರವಿನಿಂದ ರೀಮನ್ ಹೈಪೋಥಿಸಿಸ್ ಸಮಸ್ಯೆಯನ್ನು ಬಗೆಹರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಇದು ಗಣಿತ ಪರಿಣಿತರನ್ನು ಅಚ್ಚರಿಗೊಳಿಸಿದೆ. ಈ ಗಣಿತ ಸಮಸ್ಯೆಗೆ ಪರಿಹಾರ ಹುಡುಕಲು ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟು ತಲೆಕೆಡಿಸಿಕೊಂಡ ಗಣಿತಜ್ಞರ ಸಂಖ್ಯೆ ಬಹಳ ಹೆಚ್ಚಿದೆ. ಹೀಗಾಗಿ, ರೀಮನ್ ಹೈಪೋಥೆಸಿಸ್ ಅನ್ನು ಎಐ ಮೂಲಕ ಸಾಬೀತುಪಡಿಸಲಾಗಿರುವ ವಿಚಾರ ಸಾಮಾನ್ಯದ ಸಂಗತಿ ಅಲ್ಲ. ಮನುಷ್ಯನ ಬೌದ್ಧಿಕ ಸಾಮರ್ಥ್ಯ ಮೀರಿದ್ದೆಂದು ಹೇಳಲಾಗುತ್ತದೆ. ಹೀಗಾಗಿ, ಎಐನ ಸಾಮರ್ಥ್ಯದ ಬಗ್ಗೆ ದಿಗ್ಮೂಢಗೊಳ್ಳುತ್ತಿರುವವರ ಸಂಖ್ಯೆ ಏರುತ್ತಿದೆ.

ಎಐನಿಂದಲೇ ಎಐ ರಿಸರ್ಚ್…

2024ರ ಡಿಸೆಂಬರ್‌ನಲ್ಲಿ ಎಐ ಮಾಡಲ್​ಗಳು ಅಮೆರಿಕನ್ ಇನ್ವಿಟೇಷನಲ್ ಮ್ಯಾಥಮೆಟಿಕ್ಸ್ ಎಕ್ಸಾಮಿನೇಷನ್ (AIME) ಕಠಿಣ ಪ್ರಶ್ನೆಗಳಿಗೆ ಉತ್ತರಿಸಲು ಆರಂಭಿಸಿದ್ದೇ ವೇಗದ ಬೆಳವಣಿಗೆಯ ಆರಂಭಿಕ ಸೂಚನೆಯಾಗಿತ್ತು ಎಂದು ವಾಂಗ್ ನೆನಪಿಸಿಕೊಂಡಿದ್ದಾರೆ.

ಎಐ ಸಂಶೋಧನೆಯು ರೀಮನ್ ಹೈಪೊಥೆಸಿಸ್​ಗಿಂತ ಹೆಚ್ಚಿನ ಬೌದ್ಧಿಕ ಸಾಮರ್ಥ್ಯ ಬೇಡುವುದಿಲ್ಲ ಎಂಬುದನ್ನು ಹೆಚ್ಚಿನ ಸಂಶೋಧಕರು ಒಪ್ಪಿಕೊಳ್ಳುತ್ತಾರೆ. ಎಐ ಸಂಶೋಧನೆಯನ್ನು ಸ್ವಯಂಚಾಲಿತಗೊಳಿಸುವಷ್ಟು ಸಾಮರ್ಥ್ಯ ಎಐ ಮಾಡಲ್​ಗಿಗೆ ಬರಲಿದೆ. ಜೀವಶಾಸ್ತ್ರ, ಶಸ್ತ್ರಾಸ್ತ್ರ ಮತ್ತು ಅರ್ಥಶಾಸ್ತ್ರ ಸಂಶೋಧನೆಗಳನ್ನೂ ಇವು ಭಾರಿ ವೇಗದಲ್ಲಿ ಮುನ್ನಡೆಸಬಲ್ಲವು ಎಂದು ವಾಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: ಈ ಹಬ್ಬದ ಸೀಸನ್​ನಲ್ಲಿ ಭಾರತದಲ್ಲಿ ಪ್ರಚಂಡ ಸಂಖ್ಯೆಯಲ್ಲಿ ವಾಹನಗಳ ಮಾರಾಟ; 2026ರಲ್ಲಿ 3 ಕೋಟಿ ಗಡಿ ದಾಟುವ ನಿರೀಕ್ಷೆ

ಮಾನವ ನಿಯಂತ್ರಣ ಮತ್ತು ಸಬಲೀಕರಣದ ಅಗತ್ಯ

ಎಐ ಸಿಸ್ಟಂಗಳು ಅನಿಯಂತ್ರಿತ ಸ್ವಯಂ-ಸುಧಾರಣೆ (recursive self-improvement) ಕಾಣಲಿವೆ. ಎಲ್ಲಾ ಕ್ಷೇತ್ರಗಳಲ್ಲೂ ಮಾನವರಿಗಿಂತ 1,000 ಪಟ್ಟು ಹೆಚ್ಚು ಸಮರ್ಥವಾಗಿರುವ ಸೂಪರ್‌ಇಂಟೆಲಿಜೆನ್ಸ್ ಸಿಸ್​ಟಂಗಳು ಬರಲಿವೆ. ಇವುಗಳ ಮೇಲೆ ಮಾನವಕುಲ ನಿಯಂತ್ರಣ ಉಳಿಸಿಕೊಳ್ಳಲು ಸಾಧ್ಯವೇ ಎಂದು ಮೆಟಾದ ಚೀಫ್ ಎಐ ಆಫಿಸರ್ ಪ್ರಶ್ನಿಸಿದ್ದಾರೆ.

ಎಎಸ್‌ಐ (ASI- Artificial Super Intelligence) ಅನಿವಾರ್ಯ ಮತ್ತು ಅದನ್ನು ಸುರಕ್ಷಿತವಾಗಿ ಮಾಡುವುದಷ್ಟೇ ಏಕೈಕ ಸಮಸ್ಯೆ ಎಂಬ ‘ಸೋಮಾರಿತನದ ಚಿಂತನೆ’ಯನ್ನೂ ವಾಂಗ್ ಟೀಕಿಸಿದ್ದಾರೆ.

ಸಮಾಜದ ನಿಯಂತ್ರಣವನ್ನು ಎಐ ಸಿಸ್ಟಂಗಳಿಗೆ ಹಸ್ತಾಂತರಿಸುವುದನ್ನು ಒಪ್ಪಿಕೊಳ್ಳಬಾರದು; ಬದಲಾಗಿ ಎಲ್ಲಾ ಮಾನವರಿಗೆ ಹೆಚ್ಚಿನ ಸ್ವಾಯತ್ತತೆ ಮತ್ತು ಸಬಲೀಕರಣ ನೀಡುವ ಸಕಾರಾತ್ಮಕ ಭವಿಷ್ಯಕ್ಕಾಗಿ ಎಐ ಉದ್ಯಮವು ಹೊಸ ಮಾರ್ಗದಲ್ಲಿ ಸಾಗಬೇಕು ಎಂದು ಅವರು ಕರೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬೆನ್ನುನೋವು: ಜೈಲಿನ ಹೊರಗಡೆ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ದರ್ಶನ್ ಅರ್ಜಿ
ಬೆನ್ನುನೋವು: ಜೈಲಿನ ಹೊರಗಡೆ ಚಿಕಿತ್ಸೆ ಪಡೆಯಲು ಅನುಮತಿ ಕೋರಿ ದರ್ಶನ್ ಅರ್ಜಿ
ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸದಿರುವುದು ಕಾಂಗ್ರೆಸ್​ಗೆ ಮಾರಕ: ರಾಜಣ್ಣ
ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸದಿರುವುದು ಕಾಂಗ್ರೆಸ್​ಗೆ ಮಾರಕ: ರಾಜಣ್ಣ
ಶಾಸಕ ಸ್ಥಾನಕ್ಕೆ ರಾಜೀನಾಮೆ: ನುಡಿದಂತೆ ನಡೆದ ನಯನಾ ಮೋಟಮ್ಮ!
ಶಾಸಕ ಸ್ಥಾನಕ್ಕೆ ರಾಜೀನಾಮೆ: ನುಡಿದಂತೆ ನಡೆದ ನಯನಾ ಮೋಟಮ್ಮ!
ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಗೆ ಬದುಕಿನ ಸಂಕಷ್ಟ
ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಗೆ ಬದುಕಿನ ಸಂಕಷ್ಟ
ಜಪಾನ್ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದ ಸಿಎಂ ಡಿಕೆ ಶಿವಕುಮಾರ್
ಜಪಾನ್ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದ ಸಿಎಂ ಡಿಕೆ ಶಿವಕುಮಾರ್
ಕೋಲಾರದ ಗಡಿ ಗ್ರಾಮದ ಬಳಿ ಒಂಟಿ ಕಾಡಾನೆ ಪ್ರತ್ಯಕ್ಷ
ಕೋಲಾರದ ಗಡಿ ಗ್ರಾಮದ ಬಳಿ ಒಂಟಿ ಕಾಡಾನೆ ಪ್ರತ್ಯಕ್ಷ
ಮತ್ತೆ ಕ್ಯಾಪ್ಟನ್ ಆಗಲು ಗಗನ್-ಗಾನವಿ ದ್ರೋಹ? ವಿಡಿಯೋ
ಮತ್ತೆ ಕ್ಯಾಪ್ಟನ್ ಆಗಲು ಗಗನ್-ಗಾನವಿ ದ್ರೋಹ? ವಿಡಿಯೋ
ರಸ್ತೆಯೋ ಅಥವಾ ಕಸದ ತೊಟ್ಟಿಯೋ? ಪದ್ಮನಾಭನಗರದ ಬೃಂದಾವನ ಲೇಔಟ್ ಬಳಿ ಕಸದ ರಾಶಿ
ರಸ್ತೆಯೋ ಅಥವಾ ಕಸದ ತೊಟ್ಟಿಯೋ? ಪದ್ಮನಾಭನಗರದ ಬೃಂದಾವನ ಲೇಔಟ್ ಬಳಿ ಕಸದ ರಾಶಿ
ಕೋಲಾರ: ವಾಲಿಬಾಲ್ ಕೋಚ್‌ ನಿರಂತರ ಅತ್ಯಾಚಾರದಿಂದ ಗರ್ಭಿಣಿಯಾದ ವಿದ್ಯಾರ್ಥಿನಿ
ಕೋಲಾರ: ವಾಲಿಬಾಲ್ ಕೋಚ್‌ ನಿರಂತರ ಅತ್ಯಾಚಾರದಿಂದ ಗರ್ಭಿಣಿಯಾದ ವಿದ್ಯಾರ್ಥಿನಿ
ಗುಂಜಾ ನರಸಿಂಹಸ್ವಾಮಿ ದೇಗುಲದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ
ಗುಂಜಾ ನರಸಿಂಹಸ್ವಾಮಿ ದೇಗುಲದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ