Artificial Intelligence
ಕೃತಕ ಬುದ್ಧಿಮತ್ತೆ (Artificial Intelligence) ಎಂಬುದು ಮಾನವನ ಬುದ್ಧಿಶಕ್ತಿಯನ್ನು ತಂತ್ರಜ್ಞಾನ ಅಥವಾ ಕಂಪ್ಯೂಟರ್ ವ್ಯವಸ್ಥೆಗಳ ಮೂಲಕ ಅನುಕರಿಸುವ ಅತ್ಯಾಧುನಿಕ ವಿಜ್ಞಾನವಾಗಿದೆ. ಸಾಮಾನ್ಯ ಕಂಪ್ಯೂಟರ್‌ಗಳು ನೀಡಿರುವ ನಿರ್ದಿಷ್ಟ ಸೂಚನೆಗಳನ್ನು (Instructions) ಮಾತ್ರ ಪಾಲಿಸುತ್ತವೆ. ಆದರೆ, ಎಐ ತಂತ್ರಜ್ಞಾನವು ಮಾನವನಂತೆ ಸ್ವಂತವಾಗಿ ಆಲೋಚಿಸುವುದು, ಹೊಸ ವಿಷಯಗಳನ್ನು ಕಲಿಯುವುದು, ಸಮಸ್ಯೆಗಳನ್ನು ವಿಶ್ಲೇಷಿಸಿ ಪರಿಹರಿಸುವುದು ಮತ್ತು ಸ್ವತಂತ್ರವಾಗಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಮೆಷಿನ್ ಲರ್ನಿಂಗ್ (Machine Learning) ಮತ್ತು ಡೀಪ್ ಲರ್ನಿಂಗ್ (Deep Learning) ತಂತ್ರಜ್ಞಾನಗಳನ್ನು ಬಳಸಿ, ಎಐ ವ್ಯವಸ್ಥೆಗಳು ಭಾರಿ ಪ್ರಮಾಣದ ಡೇಟಾವನ್ನು ವಿಶ್ಲೇಷಿಸಿ ದಿನದಿಂದ ದಿನಕ್ಕೆ ತಮ್ಮ ಕಾರ್ಯಕ್ಷಮತೆಯನ್ನು ತಾವೇ ಸುಧಾರಿಸಿಕೊಳ್ಳುತ್ತವೆ. ಆಧುನಿಕ ಯುಗದಲ್ಲಿ ಶಿಕ್ಷಣ, ಆರೋಗ್ಯ, ಹಣಕಾಸು ಮತ್ತು ತಂತ್ರಜ್ಞಾನ ರಂಗಗಳಲ್ಲಿ ಎಐ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತಿದೆ.
ಇನ್ನೂ ಹೆಚ್ಚು ಓದಿಲಂಗು ಲಗಾಮು ತಪ್ಪಿದ ಎಐ ಏಜೆಂಟ್ಗಳು; ಸರ್ಕಾರಿ ವೆಬ್ಸೈಟ್ಗಳ ಮೇಲೆಯೇ ದಾಳಿ; ಕಂಗೆಟ್ಟ ಓಪನ್ಎಐ
ಓಪನ್ಎಐನ ರೋಗ್ ಏಜೆಂಟ್ಗಳು ವಿವಿಧ ಸರ್ಕಾರಿ ಜಾಲತಾಣಗಳನ್ನೇ ಹ್ಯಾಕ್ ಮಾಡಲು ಯತ್ನಿಸಿದ ಘಟನೆ ಎಐ ಜಗತ್ತನ್ನು ಎಚ್ಚರಿಸಿದೆ. ಇದರ ಬೆನ್ನಲ್ಲೇ ಓಪನ್ಎಐ ಸಂಸ್ಥೆ ತನ್ನ ಶಕ್ತಿಶಾಲಿ ಮಾಡಲ್ಗಳಿಗೆ ಮುಂದಿನ ಹಂತದ ಟ್ರೈನಿಂಗ್ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಎಐ ಟೆಕ್ನಾಲಜಿ ಅಭಿವೃದ್ಧಿಗೊಳ್ಳುತ್ತಿರುವ ವೇಗಕ್ಕೆ ಕಡಿವಾಣ ಹಾಕದಿದ್ದರೆ ಅಪಾಯ ಎನ್ನುವ ವಾದಕ್ಕೆ ಪುಷ್ಟಿ ಸಿಕ್ಕಂತಾಗಿದೆ.
- Vijaya Sarathy SN
- Updated on: Sep 29, 2026
- 1:30 pm
ಗೂಗಲ್ನಿಂದ ‘ಪ್ರಾಜೆಕ್ಟ್ ಸನ್ಕ್ಯಾಚರ್’; ಬಾಹ್ಯಾಕಾಶದಲ್ಲಿ ನಡೆಯಲಿದೆ ಟಿಪಿಯು ಪರೀಕ್ಷೆ; ಡಾಟಾ ಸೆಂಟರ್ಸ್ ಸಮಸ್ಯೆ ನಿವಾರಣೆಯತ್ತ ಹೆಜ್ಜೆ
ಭೂಮಿಯ ಮೇಲೆ ವಿಪರೀತವಾಗಿ ವಿದ್ಯುತ್ ಮತ್ತು ನೀರು ಬೇಡುವ ಡಾಟಾ ಸೆಂಟರ್ಗಳ ದಾಹ ತಣಿಸಲು ಮನುಷ್ಯರ ಹೊಸ ಪ್ರಯತ್ನ ನಡೆದಿದೆ. ಗೂಗಲ್ ಸಂಸ್ಥೆ ಬಾಹ್ಯಾಕಾಶದಲ್ಲಿ ಡಾಟಾ ಸೆಂಟರ್ ನಿರ್ಮಿಸುವ ಪ್ರಯೋಗ ಮಾಡುತ್ತಿದೆ. ಪ್ರಾಜೆಕ್ಟ್ ಸನ್ ಕ್ಯಾಚರ್ನಲ್ಲಿ ಒಂದು ಸೆಟಿಲೈಟ್ನಲ್ಲಿ ಟಿಪಿಯುವನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಪರೀಕ್ಷಿಸಲು ನಿರ್ಧರಿಸಿದೆ.
- Vijaya Sarathy SN
- Updated on: Sep 25, 2026
- 4:14 pm
ಎಐನಿಂದ ವಿಶ್ವವಿನಾಶವಾಗುತ್ತಾ? ಚಾನ್ಸೇ ಇಲ್ಲ ಎನ್ನುತ್ತಾರೆ ಎನ್‌ವಿಡಿಯಾ ಮುಖ್ಯಸ್ಥ ಜೆನ್ಸೆನ್ ಹುವಾಂಗ್
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಅಭಿವೃದ್ಧಿ ಇದೇ ವೇಗದಲ್ಲಿ ಸಾಗಿದರೆ ಮಾನವ ಸಂತತಿಗೆ ಉಳಿಗಾಲ ಇಲ್ಲವಾ? ಇಂಥ ಎಚ್ಚರಿಕೆಗಳನ್ನು ಹಲವು ನೀಡುತ್ತಿದ್ದಾರೆ. ಆದರೆ, ಎಐ ಚಿಪ್ ತಯಾರಿಸುವ ಎನ್ವಿಡಿಯಾದ ಸಿಇಒ ಜೆನ್ಸೆನ್ ಹುವಾಂಗ್ ಭಿನ್ನ ನಿಲುವು ಹೊಂದಿದ್ದಾರೆ. ಎಐ ಆವಿಷ್ಕಾರಗಳಿಂದ ಯಾವ ಅಪಾಯವೂ ಆಗದು ಎಂದಿದ್ದಾರೆ. ಆದರೆ, ಟೆಕ್ನಾಲಜಿ ಕಂಪನಿಗಳು ಸುರಕ್ಷತೆ ಕಾಯ್ದುಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
- Vijaya Sarathy SN
- Updated on: Sep 20, 2026
- 12:44 pm
ಎಐ ಕೈಮೀರುವ ಮುನ್ನ ವೇಗಕ್ಕೆ ಬ್ರೇಕ್ ಹಾಕಬೇಕು ಎಂದ ಆಂಥ್ರೋಪಿಕ್ ಸಿಇಒ; ಹೌದೆಂದ ಸ್ಯಾಮ್ ಆಲ್ಟ್ಮನ್, ಇಲಾನ್ ಮಸ್ಕ್
ಕೃತಕ ಬುದ್ಧಿಮತ್ತೆಯನ್ನು ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂಬ ವಿಚಾರದಲ್ಲಿ ಟೆಕ್ ನೇತಾರರ ಮಧ್ಯೆ ಸಹಮತ ಏರ್ಪಟ್ಟಂತಿದೆ. ಎಐ ವೇಗಕ್ಕೆ ಕಡಿವಾಣ ಹಾಕದೇ ಹೋದರೆ ಮನುಷ್ಯರ ಸಂಗತಿಯೇ ನಿರ್ನಾಮ ಆಗುತ್ತದೆ ಎಂದು ಮಾಜಿ ಎಐ ವಿಜ್ಞಾನಿ ಹೇಳಿದ್ದು ಚರ್ಚೆಯ ಸರಕಾಗಿದೆ. ಆಂಥ್ರೋಪಿಕ್, ಓಪನ್ ಎಐ, ಸ್ಪೇಸ್ಎಕ್ಸ್ ಸಿಇಒಗಳಾದ ಡೆರಿಯೋ ಅಮೋಡೈ, ಸ್ಯಾಮ್ ಆಲ್ಟ್ಮನ್ ಮತ್ತು ಇಲಾನ್ ಮಸ್ಕ್ ಈ ಅನಿಸಿಕೆ ಒಪ್ಪಿದ್ದಾರೆ.
- Vijaya Sarathy SN
- Updated on: Sep 13, 2026
- 4:24 pm
ಎಐನಿಂದ ದೊಡ್ಡ ಕಂಪನಿಗಳಲ್ಲಿ ಕೆಲಸಕ್ಕೆ ಕತ್ತರಿ ಬೀಳಬಹುದು; ಲಕ್ಷಾಂತರ ಸಣ್ಣ ಕಂಪನಿಗಳಿಂದ ಉದ್ಯೋಗಸೃಷ್ಟಿ: ನಂದನ್ ನಿಲೇಕಣಿ
ಎಐ ಯುಗದಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆಯಿಂದ ಉದ್ಯೋಗನಷ್ಟವಾಗಬಹುದು ಎಂಬುದನ್ನು ನಂದನ್ ನಿಲೇಕಣಿ ಒಪ್ಪಿದ್ದಾರೆ. ದೊಡ್ಡ ಕಂಪನಿಗಳಲ್ಲಿ ಕೆಲಸ ಹೋಗಬಹುದು, ಆದರೆ, ಭಾರೀ ಸಂಖ್ಯೆಯಲ್ಲಿರುವ ಸಣ್ಣ ಕಂಪನಿಗಳು ಉದ್ಯೋಗ ರಕ್ಷಿಸುತ್ತವೆ ಎಂದಿದ್ದಾರೆ. ಯುವಜನರು ಎಐ ಸಾಧನಗಳನ್ನು ಬಳಸುವ ಕೌಶಲ್ಯ ಕಲಿಯಬೇಕು ಎಂದು ನಿಲೇಕಣಿ ತಿಳಿಹೇಳಿದ್ದಾರೆ.
- Vijaya Sarathy SN
- Updated on: Sep 10, 2026
- 6:28 pm
ಮಾನವರನ್ನು ನುಂಗಿ ನೀರು ಕುಡಿಯುತ್ತದಾ ಎಐ? ಓಪನ್ಎಐ, ಆಂಥ್ರೋಪಿಕ್ ರಿಸರ್ಚರ್ನಿಂದ ಭಯಾನಕ ಸತ್ಯ ಬೆಳಕಿಗೆ
ಎಐ ಲ್ಯಾಬ್ಗಳು ಸೂಪರ್ ಇಂಟೆಲಿಜೆನ್ಸ್ ಸಿಸ್ಟಂಗಳನ್ನು ನಿರ್ಮಿಸಲು ಪೈಪೋಟಿ ನಡೆಸುತ್ತಿವೆ. ಆದರೆ ಈ ಸೂಪರ್ ಎಐ ಸಿಸ್ಟಂಗಳು ಮನುಷ್ಯರ ವಿನಾಶ ಮಾಡಲಿವೆ ಎಂದು ಅದೇ ಕ್ಷೇತ್ರರ ಪರಿಣಿತರೊಬ್ಬರು ಎಚ್ಚರಿಸಿದ್ದಾರೆ. ಆಂಥ್ರೋಪಿಕ್ನಲ್ಲಿ ಹಿರಿಯ ಎಐ ರಿಸರ್ಚರ್ ಆಗಿರುವ ಜೆಕಬ್ ಕಾಕ್ಸನ್ ಎಂಬುವವರು ಈ ಎಚ್ಚರಿಕೆ ನೀಡಿದ್ದಾರೆ. ಜವಾಬ್ದಾರಿ ಇಲ್ಲದೇ ಎಐ ಸಿಸ್ಟಂಗಳನ್ನು ಬೆಳೆಸಲಾಗುತ್ತಿದೆ ಎಂದು ಆರೋಪಿಸಿರುವ ಅವರು ಆಂಥ್ರೋಪಿಕ್ಗೆ ರಾಜೀನಾಮೆ ನೀಡಿದ್ದಾರೆ.
- Vijaya Sarathy SN
- Updated on: Sep 9, 2026
- 1:50 pm
ಎಐ ಆರ್ಥಿಕತೆ ನಿರ್ಮಿಸಲು ಭಾರತದ ವೇಗ ಹೆಚ್ಚಬೇಕು: ಎನ್‌ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್
ಎಐ ತಂತ್ರಜ್ಞಾನ ಅಭಿವೃದ್ಧಿಯ ಫಲ ಪಡೆಯಲು ಭಾರತ ತನ್ನ ಪ್ರಯತ್ನಗಳನ್ನು ಮುಂದುವರಿಸಬೇಕು ಎಂದು ಎನ್‌ವಿಡಿಯಾ (NVIDIA) ಸಿಇಒ ಜೆನ್ಸನ್ ಹುವಾಂಗ್ (Jensen Huang) ತಿಳಿಸಿದ್ದಾರೆ. ಹತ್ತು ವರ್ಷದ ಹಿಂದೆಯೇ ಪ್ರಧಾನಿಗಳು ಎಐ ಬಗ್ಗೆ ಮಾತನಾಡುತ್ತಿದ್ದುದನ್ನು ಕಂಡು ತಾನು ಚಕಿತಗೊಂಡಿದ್ದೆ ಎಂದಿದ್ದಾರೆ ಹುವಾಂಗ್.
- Vijaya Sarathy SN
- Updated on: Sep 3, 2026
- 1:48 pm
ದಕ್ಷಿಣ ಕೊರಿಯಾದಲ್ಲಿ ಎಲ್ಲಾ ವ್ಯಕ್ತಿಗಳಿಗೂ ಉಚಿತ ಎಐ ಸೇವೆ; ಟೋಕನ್ಗಳಿಗೂ ಮಿತಿ ಇಲ್ಲ
South Korea launching AI for All to its people: ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳ ಎತ್ತರದಲ್ಲಿರುವ ದಕ್ಷಿಣ ಕೊರಿಯಾ ದೇಶದಲ್ಲಿ ಜನರಿಗೆ ಉಚಿತವಾಗಿ ಮತ್ತು ಮುಕ್ತವಾಗಿ ಎಐ ಬಳಸಲು ಅವಕಾಶ ಮಾಡಲಾಗುತ್ತಿದೆ. ಅಲ್ಲಿರುವ ಜನರಿಗೆ ಉಚಿತ ಎಐ ಸೇವೆಗಳು ಹಾಗೂ ಅಸೀಮಿತವಾಗಿ ಟೋಕನ್ ಬಳಸಲು ಸರ್ಕಾರ ಅವಕಾಶ ಕೊಡುತ್ತಿದೆ. ಎಐ ಫಾರ್ ಆಲ್ ಯೋಜನೆಯನ್ನು ಸೆಪ್ಟೆಂಬರ್ನಲ್ಲಿ ಜಾರಿಗೆ ತರಲಿದೆ.
- Vijaya Sarathy SN
- Updated on: Aug 30, 2026
- 7:37 pm