ವಾರದಿಂದ ದಿನವಿಡೀ ಸರತಿ ಸಾಲಲ್ಲಿ ಕಾದರೂ ಸಿಗದ ಯೂರಿಯಾ ಮತ್ತು ಡಿಎಪಿ, ಯಾದಗಿರಿ ರೈತ ಕಂಗಾಲು
ಸುತ್ತಮುತ್ತಲಿನ ಭಾಗಗಳ ರೈತರು ಒಂದು ವಾರದಿಂದ ಶಹಾಪುರದಲ್ಲಿರುವ ಅಗ್ರೋ ಕೇಂದ್ರಕ್ಕೆ ಎಡತಾಕುತ್ತಿದ್ದಾರೆ ಆದರೆ ಯೂರಿಯಾ ಮಾತ್ರ ಸಿಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದರೆ ಅನ್ನ ನೀರು ಬಿಟ್ಟು ಬೆಳಗ್ಗೆಯಿಂದ ಸಾಯಂಕಾಲದವರೆಗೆ ಕಾಯ್ದು ಗೊಬ್ಬರ ಸಿಗದೆ ವಾಪಸ್ಸು ಊರುಗಳಿಗೆ ಹೋಗುವ ಜನರ ಬಗ್ಗೆ ಯಾರು ಯೋಚಿಸುತ್ತಾರೆ? ಸರ್ಕಾರಕ್ಕಂತೂ ತಮ್ಮ ಕಷ್ಟದ ಪರಿವೆಯೇ ಇಲ್ಲ ಎಂದು ರೈತರು ಹೇಳುತ್ತಾರೆ.
ಯಾದಗಿರಿ, ಆಗಸ್ಟ್ 9: ಈ ಸಲ ಮಳೆ ಚೆನ್ನಾಗಿ ಆಗುತ್ತಿದೆ ಅಂತ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ಯಾದಗಿರಿ ಭಾಗದ (Yadgir region) ರೈತರು ಯೂರಿಯಾ ಮತ್ತು ಡಿಎಪಿಯ ಅಭಾವ ತಲೆದೋರಿರುವುದರಿಂದ ಕಂಗೆಟ್ಟಿದ್ದಾರೆ. ಜಿಲ್ಲೆಯ ಶಹಾಪುರ ಪಟ್ಟಣದಲ್ಲಿರುವ ಅಗ್ರೋ ಕೇಂದ್ರವೊಂದರ ಮುಂದೆ ಬೆಳಗ್ಗೆ 5 ಗಂಟೆಯಿಂದ ಸಾಲುಗಟ್ಟಿ ಸಿಗದ ರಸಗೊಬ್ಬರಕ್ಕಾಗಿ ಕಾಯುತ್ತಿರುವ ರೈತ ಮಹಿಳೆ ಮತ್ತು ರೈತರು ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬರಿಗೆ ಒಂದು ಚೀಲ ಮಾತ್ರ ಗೊಬ್ಬರ ಕೊಡುತ್ತಿರುವುದರಿಂದ ರೈತ ಮಹಿಳೆಯರು ಶಾಲೆಗೆ ಹೋಗುವ ತಮ್ಮ ಮಕ್ಕಳನ್ನೂ ಕರೆತಂದು ಸರತಿ ಸಾಲಿನಲ್ಲಿ ಕೂರಿಸಿದ್ದಾರೆ.
ಇದನ್ನೂ ಓದಿ: Explainer: ನರೇಂದ್ರ ಮೋದಿಯವರ ಸರ್ಕಾರ ಡಿಎಪಿ ಮೇಲಿನ ಸಬ್ಸಿಡಿಯನ್ನು ಶೇಕಡಾ 140ರಷ್ಟು ಏರಿಸಿದ್ದು ಯಾಕೆ ಗೊತ್ತಾ?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

