ಕಣ್ಣಿನ ದೃಷ್ಟಿ ಮಂದ ಆಗ್ತಾ ಇದ್ಯಾ? ಮಾತ್ರೆ, ಆಪರೇಷನ್ ಮೊರೆ ಹೋಗುವ ಬದಲು ಈ ಆಹಾರಗಳನ್ನು ಸೇವಿಸಿ
ನಮ್ಮ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಒಳ್ಳೆಯ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ. ಮಾತ್ರವಲ್ಲ ಆಹಾರದಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ಚಿಕ್ಕ ವಯಸ್ಸಿನಲ್ಲಿಯೇ ಕಾಡುವಂತಹ ಕಣ್ಣಿನ ಸಮಸ್ಯೆಗಳಿಂದ ದೂರ ಉಳಿಯಬಹುದು. ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಆಹಾರಗಳು ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ಆಹಾರ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಯಾವ ಆಹಾರ ನಮ್ಮ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಮ್ಮ ಕಣ್ಣುಗಳನ್ನು ಆರೋಗ್ಯವಾಗಿಟ್ಟುಕೊಳ್ಳಲು, ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಪ್ರತಿದಿನ ಸರಿಯಾದ, ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ, ಕಣ್ಣುಗಳು ಅಗತ್ಯವಾದ ಶಕ್ತಿಯನ್ನು ಪಡೆದುಕೊಳ್ಳುತ್ತೇವೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ (Mobile) ನೋಡುವವರು, ಕಂಪ್ಯೂಟರ್ ಗಳಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇಂತಹ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ಕಣ್ಣಿನ ಆರೋಗ್ಯ (Healthy Eyes) ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಹಾಗಾಗಿ ಆಹಾರದಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ಚಿಕ್ಕ ವಯಸ್ಸಿನಲ್ಲಿಯೇ ಕಾಡುವಂತಹ ಕಣ್ಣಿನ ಸಮಸ್ಯೆಗಳಿಂದ ದೂರ ಉಳಿಯಬಹುದು. ಹಾಗಾದರೆ ಯಾವ ಆಹಾರ ನಮ್ಮ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಕ್ಯಾರೆಟ್
ಗಜರಿ ಅಥವಾ ಕ್ಯಾರೆಟ್‌ನಲ್ಲಿ ಹೆಚ್ಚಿನ ಮಟ್ಟದ ಬೀಟಾ ಕ್ಯಾರೋಟಿನ್ ಎಂಬ ಅಂಶವಿದ್ದು, ಇದು ದೃಷ್ಟಿ ಹೆಚ್ಚಿಸುವ ವಿಟಮಿನ್ ಎ ಯ ಒಂದು ರೂಪವಾಗಿದೆ. ಅವು ಕಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಆದ್ದರಿಂದ, ವಾರಕ್ಕೆ ಕನಿಷ್ಠ 3 ರಿಂದ 4 ಬಾರಿ ಕ್ಯಾರೆಟ್ ತಿನ್ನುವುದರಿಂದ ಕಣ್ಣಿನ ಆರೋಗ್ಯ ಚೆನ್ನಾಗಿರುತ್ತದೆ.
ಪಾಲಕ್
ಈ ಎಲೆಗಳ ಸೊಪ್ಪು ವಿಟಮಿನ್ ಎ ಮತ್ತು ಸಿಯಿಂದ ಸಮೃದ್ಧವಾಗಿದೆ, ಜೊತೆಗೆ ಲುಟೀನ್ ಎಂಬ ಶಕ್ತಿಶಾಲಿ ಉತ್ಕರ್ಷಣ ನಿರೋಧಕವೂ ಇದೆ. ಇದು ಕಣ್ಣುಗಳ ಉರಿಯೂತದಿಂದ ರಕ್ಷಿಸುತ್ತದೆ. ಹಾಗಾಗಿ ಪಾಲಕ್ ಸೊಪ್ಪಿನಿಂದ ಅನೇಕ ರೀತಿಯ ಪ್ರಯೋಜನಗಳು ದೇಹಕ್ಕೆ ಲಭ್ಯವಾಗುತ್ತದೆ.
ಟೊಮೆಟೊ
ಈ ತರಕಾರಿಯಲ್ಲಿರುವ ಲೈಕೋಪೀನ್ ಎಂಬ ವಸ್ತುವು ಕಣ್ಣಿನ ಕೋಶಗಳನ್ನು ಹಾನಿಕಾರಕ ರಾಡಿಕಲ್‌ಗಳಿಂದ ರಕ್ಷಿಸುತ್ತದೆ. ಟೊಮೆಟೊವನ್ನು ಹಾಗೆಯೇ ಅಥವಾ ಪ್ರತಿನಿತ್ಯ ಸೇವಿಸಿಸುವಂತಹ ಆಹಾರಗಳಲ್ಲಿ ಬಳಸುವುದರಿಂದ ಕಣ್ಣುಗಳಿಗೆ ತುಂಬಾ ಪ್ರಯೋಜನವಾಗುತ್ತದೆ.
ಸಿಹಿ ಆಲೂಗಡ್ಡೆ
ವಿಟಮಿನ್ ಎ ಯಿಂದ ಸಮೃದ್ಧವಾಗಿರುವ ಸಿಹಿ ಆಲೂಗಡ್ಡೆಗಳು ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ. ಮಾತ್ರವಲ್ಲ ಕೆಲವು ವ್ಯಕ್ತಿಗಳಲ್ಲಿ ರಾತ್ರಿ ಕಂಡುಬರುವಂತಹ ದೃಷ್ಟಿ ಸಮಸ್ಯೆಗಳಿಂದ ಮುಕ್ತಿ ನೀಡುವುದಕ್ಕೆ ಅವು ಸಹಾಯ ಮಾಡುತ್ತವೆ.
ಬೆಟ್ಟದ ನೆಲ್ಲಿಕಾಯಿ
ನಮ್ಮಲ್ಲಿ ಸಿಗುವ ಬೆಟ್ಟದ ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ವಿಟಮಿನ್ ಸಿ ಜೊತೆಗೆ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ರಸವನ್ನು ಸೇವಿಸುವುದರಿಂದ ಕಣ್ಣಿನ ಕೋಶಗಳ ಬೆಳವಣಿಗೆಯ ಪ್ರಕ್ರಿಯೆ ಸುಧಾರಣೆಯಾಗುತ್ತದೆ.
ಪಪ್ಪಾಯಿ
ಈ ಹಣ್ಣಿನಲ್ಲಿ ಬೀಟಾ- ಕ್ಯಾರೋಟಿನ್, ವಿಟಮಿನ್ ಸಿ, ಇ ಮತ್ತು ವಿವಿಧ ರೀತಿಯ ಉತ್ಕರ್ಷಣ ನಿರೋಧಕಗಳು ಇರುತ್ತವೆ. ಇದು ಕಣ್ಣುಗಳನ್ನು ಬೆಳಕಿಗೆ ಸೂಕ್ಷ್ಮವಾಗಿಸುವ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇ
ವಾಲ್ನಟ್ಸ್
ಒಮೆಗಾ-3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿರುವ ವಾಲ್ನಟ್ಸ್ ಗಳು ಕಣ್ಣಿನ ಕೋಶಗಳಿಗೆ ತೇವಾಂಶವನ್ನು ಒದಗಿಸುತ್ತವೆ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್‌ನಂತಹ ಸಮಸ್ಯೆಗಳನ್ನು ತಡೆಯುವುದಕ್ಕೆ ಸಹಾಯ ಮಾಡುತ್ತದೆ.
ಕಿತ್ತಳೆ
ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಕಿತ್ತಳೆ ಹಣ್ಣು ನಮ್ಮ ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅವು ಕಣ್ಣುಗಳೊಳಗಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಕಣ್ಣಿನಲ್ಲಿರುವ ರಕ್ತನಾಳಗಳ ಆರೋಗ್ಯ ಹೆಚ್ಚಿಸುತ್ತೆ ಈ ಆಹಾರಗಳು
ಮೊಟ್ಟೆಗಳು
ಸಾಮಾನ್ಯವಾಗಿ ಮೊಟ್ಟೆಗಳಲ್ಲಿ ಕಂಡುಬರುವ ಲುಟೀನ್ ಮತ್ತು ಸತುವು ಕಣ್ಣಿನ ಮಧ್ಯ ಭಾಗದಲ್ಲಿರುವ ಕೋಶಗಳನ್ನು ರಕ್ಷಿಸುತ್ತದೆ, ವಯಸ್ಸಾದ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ದಿನಕ್ಕೆ ಒಂದು ಮೊಟ್ಟೆ ತಿನ್ನುವುದು ತುಂಬಾ ಪ್ರಯೋಜನಕಾರಿ.
ಬಾದಾಮಿ
ಪ್ರತಿನಿತ್ಯ ಬಾದಾಮಿ ತಿನ್ನುವುದರಿಂದ ವಿಟಮಿನ್ ಇ ಅಂಶವನ್ನು ಪಡೆದುಕೊಳ್ಳಬಹುದು. ಇದು ಪ್ರಬಲವಾದ ಉತ್ಕರ್ಷಣ ನಿರೋಧಕವಾಗಿದೆ. ಅವು ದೃಷ್ಟಿ ಸಂಬಂಧಿತ ಸಮಸ್ಯೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದಿನಕ್ಕೆ 5 ರಿಂದ 7 ಬಾದಾಮಿ ತಿನ್ನುವುದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:20 pm, Mon, 4 August 25




