AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಒಂದು ಗ್ಲೋಬಲ್ ಸಿಟಿ ಅನ್ನೋದನ್ನು ಪಿಎಂ ಮೋದಿ ಅರ್ಥಮಾಡಿಕೊಂಡಿದ್ದಾರೆ: ಶಿವಕುಮಾರ್

ಬೆಂಗಳೂರು ಒಂದು ಗ್ಲೋಬಲ್ ಸಿಟಿ ಅನ್ನೋದನ್ನು ಪಿಎಂ ಮೋದಿ ಅರ್ಥಮಾಡಿಕೊಂಡಿದ್ದಾರೆ: ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 11, 2025 | 12:13 PM

Share

ರಾಜ್ಯದ ಬಿಜೆಪಿ ಸಂಸದರನ್ನು ಖಾಲಿ ಡಬ್ಬಗಳಿಗೆ ಹೋಲಿಸಿದ ಶಿವಕುಮಾರ್, ಯಾರ ಹೆಸರನ್ನೂ ಉಲ್ಲೇಖಿಸಲು ಇಷ್ಟಪಡಲ್ಲ, ಆದರೆ, ಅವರು ರಾಜ್ಯಕ್ಕೆ ಒಂದೇ ಒಂದು ರೂಪಾಯಿ ಅನುದಾನ ತಂದಿಲ್ಲ, ಖಾಲಿ ಡಬ್ಬಗಳಂತೆ ಸದ್ದು ಮಾಡೋದೊಂದು ಅವರಿಗೆ ಗೊತ್ತು, ಬೆಂಗಳೂರಿಗೆ ಅವರಿಂದ ಏನೂ ನೆರವು ಸಿಕ್ಕಿಲ್ಲ, ನಗರದ ಅಭಿವೃದ್ಧಿ ಅವರ ಜಬಾಬ್ದಾರಿಯಲ್ಲವೇ? ಎಂದು ಕೇಳಿದರು.

ಬೆಂಗಳೂರು, ಆಗಸ್ಟ್ 11: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ನಿನ್ನೆಯ ಮೆಟ್ರೋ ರೈಲು ಕಾರ್ಯಕ್ರಮ ಬೆಂಗಳೂರಿಗೆ ಸಂಬಂಧಿಸಿದ್ದು ಮತ್ತು ತಾನು ಬೆಂಗಳೂರು ಸಚಿವನಾಗಿದ್ದರೂ (Bengaluru in charge minister) ತನಗೆ ಮಾತಾಡುವ ಅವಕಾಶ ಸಿಗಲಿಲ್ಲ, ಆದರೆ ಬೆಂಗಳೂರು ನಗರದ ಪ್ರಾಮುಖ್ಯತೆ ಮತ್ತು ಅದಕ್ಕೆ ಏನು ಬೇಕಾಗಿದೆ ಅನ್ನೋದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಹೇಳಿದ್ದೇನೆ ಎಂದರು. ಬೆಂಗಳೂರು ಒಂದು ಗ್ಲೋಬಲ್ ಸಿಟಿ ಮತ್ತು ನಗರದ ಮೂಲಕ ಜಗತ್ತನ್ನು ನೋಡಬೇಕೆಂಬ ಸಂಗತಿಯನ್ನು ಪ್ರಧಾನಿ ಮೋದಿ ಮನವರಿಕೆ ಮಾಡಿಕೊಂಡಿದ್ದಾರೆ, ನಗರಕ್ಕೆ ಮಹತ್ವದ ಸ್ಥಾನಮಾನ ಸಿಗಲು ಎಲ್ಲ ಸರ್ಕಾರಗಳು ಕಾರಣವಾಗಿವೆ, ಕೇವಲ ತಾನು ಮತ್ತು ತಮ್ಮ ಸರ್ಕಾರ ಅಂತಲ್ಲ, ನಗರದ ಮತ್ತಷ್ಟು ಅಭಿವೃದ್ಧಿಗೆ ಇನ್ನೂ ಹಣ ಬೇಕು, ಸಂಸತ್ತಿನಲ್ಲಿ ರಾಜ್ಯದ ಪ್ರತಿನಿಧಿಗಳು ಪ್ರಧಾನಿಯವರೊಂದಿಎಗ ಚರ್ಚೆ ನಡೆಸಿ ಅನುದಾನ ತರುವ ಪ್ರಯತ್ನ ಮಾಡಬೇಕು ಎಂದು ಶಿವಕುಮಾರ್ ಹೇಳಿದರು.

ಇದನ್ನೂ ಓದಿ:  ಸರಿಯಾದ ಸಾಕ್ಷಿ ನೀಡಿ, ಡಿಕ್ಲರೇಷನ್​ಗೆ ಸಹಿ ಮಾಡಿ; ಡಿಕೆ ಶಿವಕುಮಾರ್​​ಗೆ ಕರ್ನಾಟಕದ ಚುನಾವಣಾಧಿಕಾರಿ ಸೂಚನೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ