AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಬಹುದಿನದ ನಿರೀಕ್ಷೆ ಇಂದು ಸಾಕಾರಗೊಳ್ಳಬಹುದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಶ್ರಾವಣ ಮಾಸ ಶುಕ್ಲ ಪಕ್ಷದ ದ್ವಾದಶೀ ತಿಥಿ ಮಂಗಳವಾರ ಪಿತ್ತದಿಂದ ರೋಗ, ಜಾಡ್ಯತೆಯ ನಿವಾರಣೆ, ತಂದೆಯಿಂದ ಅಕಾರಣ ನಿಂದನೆ, ಲಾಭ ಪಡೆಯಲು ಹಲವರಿಂದ ತಂತ್ರ ಇವೆಲ್ಲ ಈ ದಿನದ ವಿಶೇಷ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ನಿಮ್ಮ ಬಹುದಿನದ ನಿರೀಕ್ಷೆ ಇಂದು ಸಾಕಾರಗೊಳ್ಳಬಹುದು
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ|

Updated on: Aug 05, 2025 | 1:00 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಆಶ್ಲೇಷಾ, ವಾರ: ಮಂಗಳ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಮೂಲಾ, ಯೋಗ: ಬ್ರಹ್ಮ, ಕರಣ: ವಣಿಜ, ಸೂರ್ಯೋದಯ – 06 : 18 am, ಸೂರ್ಯಾಸ್ತ – 06 : 59 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:49 – 17:24 ಗುಳಿಕ ಕಾಲ 12:39 – 14:14 ಯಮಗಂಡ ಕಾಲ 09:28 – 11:04

ತುಲಾ ರಾಶಿ: ನೀವು ಕೇಳಿದ್ದಕ್ಕಿಂತ ಹೆಚ್ಚು ಸಾಲ ಸಿಕ್ಕಿದೆ ಎಂಬ ಸಂತಸ ಇದೆ. ಆದರೆ ಅದರ ಬಡ್ಡಿಯ ಬಗ್ಗೆಯೂ ಚಿಂತನೆ ನಡೆಸುವುದು ಮುಖ್ಯ. ನಿಮಗೆ ಸಿಗುವ ಜಯದಿಂದ ಕುಟುಂಬಕ್ಕೆ ಸಂತಸ. ನಿಮಗೆ ಸಮಾಜಮುಖೀ ಕಾರ್ಯವನ್ನು ಮಾಡಲು ಉತ್ಸಾಹವಿದ್ದು ನಿಮಗೆ ಮಾರ್ಗದರ್ಶನದ ಕೊರತೆ ಕಾಣಬಹುದು. ಅನ್ನಸಂತರ್ಪಣೆಯ ಪುಣ್ಯವು ಪ್ರಾಪ್ತವಾಗಲಿದೆ. ಸಂಗಾತಿಯ ವಿಚಾರದಲ್ಲಿ ನೀವು ನಿರ್ಲಕ್ಷ್ಯ ತೋರಿಸಿದ್ದೀರಿ ಎಂದು ನಿಮ್ಮನ್ನು ದೂರಬಹುದು. ಅಕಾರಣಾವಾಗಿ ನಿಂದನೆ ಸರಿಯಲ್ಲ. ನಿಮ್ಮ ಮೇಲೆ ಅಪನಂಬಿಕೆಗಳು ಬರಬಹುದು. ವೈಯಕ್ತಿಕ ಖರ್ಚುಗಳ ಬಗ್ಗೆ ಲಕ್ಷ್ಯವಿರಲಿ. ತಂದೆಯ ಸಹಕಾರವು ನಿಮಗೆ ಸಿಗಲಿದೆ‌. ಸೋಲಿಂದ ಹೆದರುವ ಅವಶ್ಯಕತೆ ಇಲ್ಲ.‌ ಧೃತಿಗೆಡದೇ ಕಾರ್ಯವನ್ನು ಸಾಧಿಸಲು ಯೋಜನೆಯನ್ನು ಹೂಡಿ. ಜೀವನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಗಟ್ಟಿಯಾದ ತೀರ್ಮಾನವನ್ನು ಪಡೆಯುವುದು ಕಷ್ಟವಾಗುವುದು. ವಿವಾದವನ್ನು ಮಾಡಿಕೊಳ್ಳಲು ಮನಸ್ಸಾಗದು. ವಿಶ್ವಾಸವನ್ನು ಉಳಿಸಿಕೊಳ್ಳುವ ಬಗ್ಗೆ ನಿಮ್ಮ ಪ್ರಯತ್ನ ಇರುವುದು.

ವೃಶ್ಚಿಕ ರಾಶಿ: ನಿಮ್ಮ ಅಸ್ಮಿತೆಯನ್ನು ತೋರಿಸಿಕೊಡುವಿರಿ. ನಿಮ್ಮ‌ ಸಮಾನರಿಗೂ ಕೆಲವು ಸಂದರ್ಭದಲ್ಲಿ ಗೌರವ ಕೊಡಬೇಕಾಗುವುದು. ಮಕ್ಕಳ ವಿಚಾರದಲ್ಲಿ ಸಂತೋಷವಿರಲಿದೆ. ಸ್ತ್ರೀಯರು ಪುರುಷರನ್ನೂ ಪುರುಷರು ಸ್ತ್ರೀಯರನ್ನು ದ್ವೇಷಿಸುವರು. ಔಷಧವನ್ನು ಸೇವಿಸುವಾಗ ಅದರ ಮುಕ್ತಾಯದ ದಿನವನ್ನು ನೋಡಿಕೊಳ್ಳಿ. ಹಾಳಾದ ಔಷಧಿಂದ ಅಪಾಯ ಬರುವುದು. ಪಾಲುದಾರಿಕೆಯ ವ್ಯವಹಾರಗಳಲ್ಲಿ ಸಂಯಮವಿರಲಿ. ಕಷ್ಟವು ನಿಮ್ಮನ್ನು ಒಂದರಮೇಲೊಂದು ಬಂದು ಕಾಡಿದರೂ ನಿಮ್ಮ ಧೈರ್ಯವು ಕುಗ್ಗದು. ಹೊಸ ಕೆಲಸವನ್ನು ನೀವು ಆರಂಭಿಸುವ ಹುನ್ನಾರವು ಒಳ್ಳೆಯದೇ. ಧಾರ್ಮಿಕ ವೃತ್ತಿಯಲ್ಲಿ ಇರುವವರಿಗೆ ಶುಭಫಲ. ಹಣದ ಚಿಂತೆ ಇರಲಿದ್ದು ಹೊಂದಿಸಿಕೊಳ್ಳಲು ಬೇಕಾದ ಕ್ರಮವನ್ನು ಕೈಗೊಳ್ಳುವಿರಿ. ನಿಮ್ಮ ದೌರ್ಬಲ್ಯಗಳನ್ನು ನೀವು ಇಂದು ಅವಲೋಕನ ಮಾಡಿಕೊಳ್ಳಬಹುದು. ಸಂದರ್ಭಕ್ಕೆ ಯೋಗ್ಯವಾದ ಮಾತುಗಳನ್ನು ನೀವಾಡಿ. ನಿಮ್ಮ ಸೋಲನ್ನು ಸಾಧಾರಣಕ್ಕೆ ಒಪ್ಪಿಕೊಳ್ಳಲಾರಿರಿ. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ.

ಧನು ರಾಶಿ: ಸಂಗಾತಿ ಅಭಿಪ್ರಾಯ ಸರಿಯಿಲ್ಲದಿದ್ದರೂ ಒಪ್ಪಿಕೊಳ್ಳಬೇಕಾಗುವುದು. ಕಾನೂನಿಗೆ ಸಮ್ಮತವಾದ ಕಾರ್ಯವನ್ನು ಮಾಡುವಿರಿ. ನಿಮ್ಮ ತಿಳಿವಳಿಕೆಯ ಮಟ್ಟವು ಇತರರಿಗೆ ತಿಳಿಯಲಿದೆ. ನಿಮ್ಮ ಬಹುದಿನದ ನಿರೀಕ್ಷೆ ಇಂದು ಸಾಕಾರಗೊಳ್ಳಬಹುದು. ಕೃಷಿಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಿರಿ. ನಕಾರಾತ್ಮಕ ಚಿಂತನೆಯನ್ನು ಮಾಡಿ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ದುಃಖವನ್ನು ಮರೆಯುವ ಸಂದರ್ಭವು ಬರಲಿದೆ. ವಿದೇಶದ ಶಿಕ್ಷಣಕ್ಕಾಗಿ ಅಲ್ಪ ಸಾಲ ಮಾಡಬೇಕಾಗುವುದು. ನಿಮಗೆ ಇಂದು ಅಪರಿಚಿತರಿಂದ ಅಪಮಾನವಾಗಬಹುದು. ನಿಮ್ಮ ಅಭಿಮಾನಕ್ಕೆ ತೊಂದರೆಯಾಗಬಹುದು. ಖಾಸಗಿ ಉದ್ಯೋಗಿಗಳಿಗೆ ವೇತನ ಹೆಚ್ಚಳಕ್ಕೆ ನಿಮ್ಮನ್ನು ಹಾಗೂ ನಿಮ್ಮ ಕಾರ್ಯವನ್ನೂ ವೀಕ್ಷಿಸಬಹುದು. ಹೂಡಿಕೆಯಿಂದ ಲಾಭವಾಗುವ ವಿಧಾನ ತಿಳಿಯುವಿರಿ. ವಿದ್ಯಾರ್ಥಿಗಳು ಪ್ರೋತ್ಸಾಹದ ಕೊರತೆಯಿಂದ ಹಿಂದೆ ಉಳಿದಾರು. ಯಾರಮೇಲೂ ಒತ್ತಡಬೇಡ. ಸಂಗಾತಿಯ ಮಾತುಗಳು ನಿಮಗೆ ಅನಿರೀಕ್ಷಿತ ಆದೀತು. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಇರುವಿರಿ.

ಮಕರ ರಾಶಿ: ಎಲ್ಲವೂ ಅರ್ಥವಾದಂತೆ ಅನಿಸದರೂ ಅನಂತರ ಖಾಲಿ ಖಾಲಿಯಾದ ಅನುಭವ. ಇಂದು ನೀವು ಬೇರೆಯವರ ಕಷ್ಟಕ್ಕೆ ಸ್ಪಂದಿಸಬೇಕಾಗಬಹುದು. ಸ್ವಂತ ಕಾರ್ಯಕ್ಕೆ ಸಮಯವನ್ನು ಪ್ರಯತ್ನಪೂರ್ವಕವಾಗಿ ತೆಗೆದುಕೊಳ್ಳಬೇಕಾಗಬಹುದು. ನಿರುದ್ಯೋಗದ ಬಗ್ಗೆ ನಿಮಗೆ ಬೇಸರವಾಗಬಹುದು. ಮುಗ್ಧತೆಯನ್ನು ಎಲ್ಲಾದರಲ್ಲಿ ತೋರಿಸಲಾಗದು. ನಿಮ್ಮ ಶಿಸ್ತನ್ನು ಪಾಲಿಸಲಾಗದೇ ಸಹೋದ್ಯೋಗಿಗಳು ಗೊಣಗುವರು. ಕುಟುಂಬವನ್ನು ನಿಭಾಯಿಸುವ ಸಾಮರ್ಥ್ಯವನ್ನು ನೀವು ಬೆಳಸಿಕೊಂಡಿದ್ದೀರಿ. ನಿಮ್ಮ ನಡೆಯನ್ನು ಆಡಿಕೊಳ್ಳುವುದು ನಿಮ್ಮವರಿಗೆ ಸಹಜವಾಗಿರುತ್ತದೆ. ಕೈಗಳು ಶಕ್ತಿಯನ್ನು ಇಂದು ಕಳೆದುಕೊಂಡ ಅನುಭವವಾಗಲಿದೆ. ವೇಗವಾದ ವಾಹನ ಚಾಲನೆಯಿಂದ ದಂಡ ತೆರಬೇಕಾಗಬಹುದು. ಕಾಲಿನ ಬಾಧೆಯಿಂದ ಕಷ್ಟವಾಗುವುದು. ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಪಾಲುದಾರಿಕೆಯಲ್ಲಿ ಅನವಶ್ಯಕ ವಾದವನ್ನು ಮಾಡಬೇಕಾಗುವುದು. ಉದ್ಯಮವು ಬೆಳವಣಿಗೆಯಿಂದ ಸಂತೋಷವಾಗಲಿದೆ.

ಕುಂಭ ರಾಶಿ: ಪರರ ರಹಸ್ಯವನ್ನು ಕೇಳುವ ಕುತೂಹಲವಿರುವುದು. ಇಂದು ನಿಮಗೆ ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಕಡಿಮೆ ಆಗುವುದು. ಬಹಳ ದಿನಗಳ ಅನಂತರ ಹಿರಿಯರ ಭೇಟಿಯಿಂದ ಖುಷಿಯಾಗುವುದು. ಯಂತ್ರೋಪಕರಣಗಳಿಗೆ ನೀವು ಧನವನ್ನು ಕಳೆದುಕೊಳ್ಳುವಿರಿ. ಸಂಗಾತಿಯ ಮಾತನ್ನು ಕೇಳುವ ವ್ಯವಧಾನವು ಇಂದು ಕಡಿಮೆ ಇರುವುದು. ಕಚೇರಿ ಕೆಲಸದಲ್ಲಿ ನೆಮ್ಮದಿ ಇರದು. ಸಾಮಾನ್ಯವಾದ ಕೆಲಸವನ್ನು ಮಾಡಲೂ ಇಂದು ಜಾಡ್ಯ ಬರಬಹುದು. ಕಳೆದುಹೋದ ವಸ್ತುಗಳಿಗೆ ದುಃಖವಾಗುವುದು. ಮಂದಗತಿಯ ನಿಮ್ಮ ಕೆಲಸಕ್ಕೆ ಸಮಯವು ಸಾಲದೆಂದು ಅನ್ನಿಸಲಿದೆ. ಬೇಸರವನ್ನು ನೀವು ನುಂಗಿಕೊಳ್ಳುವುದು ಅಭ್ಯಾಸವಾದ ಸಂಗತಿಯಾಗಿದೆ. ಭೂಮಿಯನ್ನು ಕಳೆದುಕೊಳ್ಳಬೇಕಾಗಬಹುದು. ವಿನಾ ಕಾರಣ ಕಾಲಹರಣ ಮಾಡಲಿದ್ದು ಕಛೇರಿಯ ಕೆಲಸದ ಬಗ್ಗೆಯೇ ಚಿಂತೆ ಇರದು. ಮಾರಾಟದ ವಿಚಾರವಾಗಿ ನೀವು ಬೇರೆ ಊರಿಗೆ ಹೋಗಬೇಕಾಗಬಹುದು. ವಾತರೋಗದಿಂದ ನಿಮಗೆ ಕಷ್ಟವಾಗುವುದು.

ಮೀನ ರಾಶಿ: ಚಿತ್ತವು ಏಕಾಗ್ರವಾಗಿದ್ದಾಗ ಸಣ್ಣ ಕ್ಷುಲ್ಲಕ ಸಂಗತಿಗಳು ಕಾಣಿಸದು. ಅವು ಬಂದರೂ ಗೊತ್ತಾಗದಂತೆ ಹೋಗುವುದು. ಇಂದು ನಿಮ್ಮ ಉದ್ಯೋಗದಲ್ಲಿ ಉತ್ತಮ ಪ್ರಗತಿಯು ಇರುವುದು. ವ್ಯವಹಾರಿಕ ನಷ್ಟವನ್ನು ಸರಿ ಮಾಡಿಕೊಳ್ಳುವ ಬಗೆಯನ್ನು ಚಿಂತಿಸುವಿರಿ. ದೈವಭಕ್ತಿಯ ಕೊರತೆ ಹೆಚ್ಚು ಇರಲಿದೆ. ನಿಮ್ಮ ಮಾತನ್ನು ಬದಲಾಯಿಸುವಿರಿ. ಮನ ಬಂದಂತೆ ವರ್ತನೆಯನ್ನು ನಿಲ್ಲಿಸಿ. ನಿಮ್ಮವರು ನಿಮಗೆ ಹತ್ತಿರವಾಗಲು ಅನೇಕ‌ ಕಾರಣಗಳು ಇರಬಹುದು. ಈ ವಿಚಾರದಲ್ಲಿ ನೀವು ಅಸಹಾಯಕರಾಗುವುದು ಯೋಗ್ಯವಿದೆ.‌ ವಾಹನ ಸಂಚಾರದಲ್ಲಿ ಗಮನಬೇಕು. ಸಂಗಾತಿಯನ್ನು ಹೆಚ್ಚು ಪ್ರೀತಿಸುವ ಅವಕಾಶ ಸಿಗಬಹುದು. ಆಕೆಗೆ ಬೇಕಾದ ವಸ್ತುಗಳನ್ನು ನೀವು ತಂದುಕೊಡುವಿರಿ. ನಿಮ್ಮ ನಡುವೆ ಸಂತೋಷದ ಬಾಂಧವ್ಯ ಇನ್ನಷ್ಟು ಬಿಗಿಯಾಗುವುದು. ಹಳೆಯ ಕೆಲಸದಲ್ಲಿ ಮಂದಗತಿ ಇರಲಿದೆ. ವ್ಯಾಪಾರದಲ್ಲಿ ಅಲ್ಪ ಲಾಭವೇ ಆದರೂ ನೆಮ್ಮದಿ. ಯಾರಿಗೋ ಸಹಾಯ ಮಾಡಲು ಹೋಗಿ ಆಪತ್ತಿನಲ್ಲಿ ಸಿಕ್ಕಿಕೊಳ್ಳಬಹುದು.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ