AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರತಕ್ಷತೆಗೆ ತೆರಳುವಾಗ ಅಡ್ಡಗಟ್ಟಿ ವರನಿಗೆ ಚಾಕು ಇರಿತ ಕೇಸ್​​​ಗೆ ಬಿಗ್ ಟ್ವಿಸ್ಟ್​, ಮದ್ವೆಯಾಗಬೇಕಿದ್ದವಳೇ ವಿಲನ್

ಆರತಕ್ಷತೆಗೆ ತೆರಳುವಾಗ ಅಡ್ಡಗಟ್ಟಿ ವರನಿಗೆ ಚಾಕು ಇರಿತ ಕೇಸ್​​​ಗೆ ಬಿಗ್ ಟ್ವಿಸ್ಟ್​, ಮದ್ವೆಯಾಗಬೇಕಿದ್ದವಳೇ ವಿಲನ್

ರಮೇಶ್ ಬಿ. ಜವಳಗೇರಾ
|

Updated on:Feb 01, 2026 | 10:18 PM

Share

ಕೊಳ್ಳೇಗಾಲದಲ್ಲಿ (Kollegala) ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದ ವರ ರವೀಶ್ ಗೆ ಚಾಕು ಇರಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​ ಸಿಕ್ಕಿದೆ. ರವೀಶ್​​ನ ಮದ್ವೆಯಾಗಬೇಕಿದ್ದ ವಧು ನಯನಾ, ಪ್ರಿಯಕರ ದರ್ಶನ್​, ಓರ್ವ ಅಪ್ರಾಪ್ತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅಸಲಿಯತ್ತು ಬಯಲಾಗಿದೆ. ಮದುವೆ ನಿಲ್ಲಿಸಲು ಪ್ರಿಯಕರನ ಜೊತೆ ಸೇರಿ ನಯನಾ (ರವೀಶ್​​ನ ಮದ್ವೆಯಾಗಬೇಕಿದ್ದ ಯುವತಿ) ಈ ರೀತಿ ಪ್ಲ್ಯಾನ್ ಮಾಡಿದ್ದಾಳೆ ಎನ್ನುವುದು ಕೊಳ್ಳೇಗಾಲ ಪೊಲೀಸ್ ತನಿಖೆಯಲ್ಲಿ ಬಟಾಬಯಲಾಗಿದೆ.​

ಚಾಮರಾಜನಗರ, (ಫೆಬ್ರವರಿ 01): ಕೊಳ್ಳೇಗಾಲದಲ್ಲಿ (Kollegala) ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದ ವರ ರವೀಶ್ ಗೆ ಚಾಕು ಇರಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​ ಸಿಕ್ಕಿದೆ. ರವೀಶ್​​ನ ಮದ್ವೆಯಾಗಬೇಕಿದ್ದ ವಧು ನಯನಾ, ಪ್ರಿಯಕರ ದರ್ಶನ್​, ಓರ್ವ ಅಪ್ರಾಪ್ತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅಸಲಿಯತ್ತು ಬಯಲಾಗಿದೆ. ಮದುವೆ ನಿಲ್ಲಿಸಲು ಪ್ರಿಯಕರನ ಜೊತೆ ಸೇರಿ ನಯನಾ (ರವೀಶ್​​ನ ಮದ್ವೆಯಾಗಬೇಕಿದ್ದ ಯುವತಿ) ಈ ರೀತಿ ಪ್ಲ್ಯಾನ್ ಮಾಡಿದ್ದಾಳೆ ಎನ್ನುವುದು ಕೊಳ್ಳೇಗಾಲ ಪೊಲೀಸ್ ತನಿಖೆಯಲ್ಲಿ ಬಟಾಬಯಲಾಗಿದೆ.​

ತಮಟೆ ಹೊಡೆಯುವ ಕೆಲಸ ಮಾಡ್ತಿದ್ದ ದರ್ಶನ್​ ಎನ್ನುವಾತನನ್ನು ನಯನಾ ಲವ್ ಮಾಡುತ್ತಿದ್ದಳು. ಆದ್ರೆ,​​ ದರ್ಶನ್ ಕೆಲಸದ ಬಗ್ಗೆ ಮನೆಯಲ್ಲಿ ಹೇಳಲು ಹೆದರಿದ್ದಳು. ಹೀಗಾಗಿ ಈ ಮದುವೆ ನೀನೇ ನಿಲ್ಲಿಸು ಎಂದು ನಯನಾ, ಪ್ರಿಯಕರ ದರ್ಶನ್​​ಗೆ ಹೇಳಿದ್ದಳು. ಅದರಂತೆ ಪ್ರಿಯಕರ ದರ್ಶನ್ ಗ್ಯಾಂಗ್, ಜನವರಿ 27ರಂದು ರವೀಶ್ ಕೊಳ್ಳೇಗಾಲದ ಕಲ್ಯಾಣ ಮಂಟಪ್ಪಕ್ಕೆ ತೆರಳುತ್ತಿದ್ದ ಮಾರ್ಗಮಧ್ಯೆಯೇ ಕಾರು ಅಡ್ಡಗಟ್ಟಿದ್ದು, ನೀನು ಮದ್ವೆ ಮನೆಗಲ್ಲ ಸ್ಮಶಾನಕ್ಕೆ ತೆರಳಬೇಕೆಂದು ಚಾಕು, ಡ್ರ್ಯಾಗರ್​​ನಿಂದ ಹಲ್ಲೆ ಪರಾರಿಯಾಗಿತ್ತು. ಬಳಿಕ ರವೀಶ್ ದಾಖಲಾಗಿದ್ದ ಆಸ್ಪತ್ರೆಗೆ ನಯನಾ ಬಂದು ತನ್ನ ಮದುವೆಯಾಗು ಎಂದು ನಾಟಕವಾಡಿದ್ದಳು. ಆದಾಗಲೇ ರವೀಶ್​​ಗೂ ಸಹ ಅನುಮಾನ ಬಂದಿದ್ದರಿಂದ ನಯನಾಳನ್ನು ಮದುವೆಯಾಗಲು ನಿರಾಕರಿಸಿದ್ದ. ಇದೀಗ ನಯನಾಳ ಅಸಲಿ ನೌಟಂಕಿ ಆಟ ಬಯಲಾಗಿದೆ.

ಇದನ್ನೂ ಓದಿ: ಮದ್ವೆ ಆರತಕ್ಷತೆಗೆ ತೆರಳುತ್ತಿದ್ದ ವರನಿಗೆ ಚೂರಿ ಇರಿತ: ಯುವತಿಯ ಮಾಜಿ ಲವರ್​​ ಕೃತ್ಯ ಶಂಕೆ

Published on: Feb 01, 2026 10:18 PM

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More