AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮೈಸೂರಿನಲ್ಲಿ ಪುಟ್ಟ ಬಾಲಕಿಯ ಬ್ಯಾಗಿನೊಳಗೆ ನಾಗರ ಹಾವು ಪ್ರತ್ಯಕ್ಷ!

Video: ಮೈಸೂರಿನಲ್ಲಿ ಪುಟ್ಟ ಬಾಲಕಿಯ ಬ್ಯಾಗಿನೊಳಗೆ ನಾಗರ ಹಾವು ಪ್ರತ್ಯಕ್ಷ!

ರಾಮ್​, ಮೈಸೂರು
| Edited By: |

Updated on:Feb 12, 2026 | 7:43 AM

Share

ಮೈಸೂರಿನ ಮಥುರಾನಗರದಲ್ಲಿ ವಿಚಿತ್ರ ಘಟನೆ ನಡೆದಿದೆ. ಶಾಲಾ ಮಗುವಿನ ಬ್ಯಾಗಿನೊಳಗೆ ನಾಗರಹಾವು ಪತ್ತೆಯಾಗಿ ಆತಂಕ ಸೃಷ್ಟಿಸಿದೆ. ಮೈದಾನದಲ್ಲಿ ಇಟ್ಟಿದ್ದ ಬ್ಯಾಗಿನೊಳಗೆ ಹಾವು ಪ್ರವೇಶಿಸಿದೆ. ಶಾಲಾ ಸಿಬ್ಬಂದಿಗಳು ಸ್ನೇಕ್ ಶ್ಯಾಮ್ ಅವರನ್ನು ಕರೆಸಿ ಸುರಕ್ಷಿತವಾಗಿ ಹಾವನ್ನು ರಕ್ಷಿಸಿದ್ದಾರೆ. ಇಂತಹ ಘಟನೆಗಳನ್ನು ತಪ್ಪಿಸಲು ಬಯಲು ಪ್ರದೇಶಗಳಲ್ಲಿ ಬ್ಯಾಗ್ ಇಡುವಾಗ ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.

ಮೈಸೂರು, ಫೆ.12: ಮೈಸೂರಿನಲ್ಲಿ ಒಂದು ಅಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಮಗುವಿನ ಬ್ಯಾಗಿನೊಳಗೆ ನಾಗರ ಹಾವೊಂದು ಪ್ರತ್ಯಕ್ಷವಾಗಿದೆ. ಮೈಸೂರಿನ ಇಲವಾಲದ ಮಥುರಾನಗರದಲ್ಲಿ ಈ ಘಟನೆ ನಡೆದಿದೆ. ಇನ್ನು ಬ್ಯಾಗಿನೊಳಗೆ ಹಾವು ಕಂಡು ಪುಟ್ಟ ಭಯಭೀತಗೊಂಡಿದ್ದಾಳೆ. ಆಡವಾಡುವ ವೇಳೆ ಮೈದಾನದಲ್ಲಿ ಬ್ಯಾಗ್​​ ಇಟ್ಟಿದ್ದಳು, ಈ ವೇಳೆ ಹಾವು ಬ್ಯಾಗಿನ ಒಳಗೆ ಬಂದಿದೆ. ನಂತರ ಸ್ನೇಕ್ ಶಾಮ್ ಅವರನ್ನು ಕರೆಸಿ, ಹಾವಿನ ರಕ್ಷಣೆ ಮಾಡಿದ್ದಾರೆ. ಇನ್ನು ಬಯಲು ಪ್ರದೇಶದಲ್ಲಿ ಬ್ಯಾಗ್ ಇಡುವ ಮುನ್ನ ಎಚ್ಚರ ವಹಿಸುವಂತೆ ಮನವಿ ಮಾಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 12, 2026 07:43 AM
Follow Us
Ram
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More