ನನ್ನ ತಂದೆ ಈಗ ಮೊದಲಿನಂತೆ ಇಲ್ಲ; ಅರ್ಜುನ್ ಸರ್ಜಾ ಬಗ್ಗೆ ಮಗಳು ಐಶ್ವರ್ಯಾ ಮಾತು
Aishwraya Arjun: ಅರ್ಜುನ್ ಸರ್ಜಾ ಅವರು ಕಳೆದ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಕುಟುಂಬ ಎಂದರೆ ಎಲ್ಲಿಲ್ಲದ ಪ್ರೀತಿ. ಈಗ ಅರ್ಜುನ್ ಸರ್ಜಾ ಅವರು ಮಗಳು ಐಶ್ವರ್ಯಾ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು ಆಡಿದ ಮಾತು ಗಮನ ಸೆಳೆದಿದೆ.
ಅರ್ಜುನ್ ಸರ್ಜಾ ಅವರು ಮಗಳು ಐಶ್ವರ್ಯಾ ಮೇಲೆ ಸಾಕಷ್ಟು ಪ್ರೀತಿ ಇಟ್ಟುಕೊಂಡಿದ್ದಾರೆ. ಐಶ್ವರ್ಯಾ ನಟನೆಯ ‘ಸೀತಾ ಪಯಣ’ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಮಾತನಾಡುವಾಗ ಐಶ್ವರ್ಯಾ ಅವರು ತಂದೆ ಅರ್ಜುನ್ ಸರ್ಜಾ ಬಗ್ಗೆ ಮಾತನಾಡಿದ್ದಾರೆ. ‘ನನ್ನ ತಂದೆ ಮೊದಲು ತುಂಬಾನೇ ಸ್ಟ್ರಿಕ್ಟ್ ಆಗಿದ್ದರು. ಆದರೆ, ಈಗ ಅವರು ಮೊದಲಿನಂತೆ ಇಲ್ಲ. ಅವರ ಬಳಿ ಈಗ ಏನು ಬೇಕಾದರೂ ಮಾತನಾಡಬಹುದು’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Feb 12, 2026 09:04 AM

