SBI Multi Option Deposit Scheme: ಎಸ್​ಬಿಐ ಮಲ್ಟಿ ಆಪ್ಷನ್ ಡೆಪಾಸಿಟ್ ಸ್ಕೀಮ್ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳಿವು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಮಲ್ಟಿ ಆಪ್ಷನ್ ಡೆಪಾಸಿಟ್ ಸ್ಕೀಮ್ ಎಂಬ ನಿಶ್ಚಿತ ಕಾಲಾವಧಿಯ ಠೇವಣಿ ಯೋಜನೆಯನ್ನು ಶುರು ಮಾಡಲಾಗಿದೆ. ಈ ಸ್ಕೀಂ ಬಗ್ಗೆ 10 ಪಾಯಿಂಟ್​ಗಳಲ್ಲಿ ಖಾತೆ ತೆರೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

SBI Multi Option Deposit Scheme: ಎಸ್​ಬಿಐ ಮಲ್ಟಿ ಆಪ್ಷನ್ ಡೆಪಾಸಿಟ್ ಸ್ಕೀಮ್ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳಿವು
ಸಾಂದರ್ಭಿಕ ಚಿತ್ರ
Follow us
Srinivas Mata
| Updated By: guruganesh bhat

Updated on: Mar 11, 2021 | 2:33 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬಹಳ ಆಸಕ್ತಿಕರವಾದ ಮಲ್ಟಿ ಆಪ್ಷನ್ ಡೆಪಾಸಿಟ್ ಸ್ಕೀಮ್ (ಎಂಒಡಿಎಸ್) ಇದೆ. ಇವು ಟರ್ಮ್ ಡೆಪಾಸಿಟ್. ಅಂದರೆ ನಿಶ್ಚಿತವಾದ ಕಾಲಾವಧಿಗೆ ಎಂದು ಇಡುವ ಮೊತ್ತ. ಉಳಿತಾಯ ಅಥವಾ ಚಾಲ್ತಿ ಖಾತೆ ಜತೆಗೆ ಇದು ಜೋಡಣೆ ಆಗಿರುತ್ತದೆ. ಉಳಿದ ನಿಶ್ಚಿತ ಠೇವಣಿಗಳಂತಲ್ಲದೆ (ಫಿಕ್ಸೆಡ್ ಡೆಪಾಸಿಟ್) ಯಾವುದೇ ಸಂದರ್ಭದಲ್ಲಿ 1000 ರೂಪಾಯಿಯ ಗುಣಕದಲ್ಲಿ ನಿಮಗೆ ಹಣ ಬೇಕಾದಾಗ ತೆಗೆದುಕೊಳ್ಳಬಹುದು. ಎಂಒಡಿಎಸ್ ಖಾತೆಯಲ್ಲಿ ಉಳಿಯುವ ಮೊತ್ತಕ್ಕೆ ನೀವು ಟರ್ಮ್ ಡೆಪಾಸಿಟ್ ಮಾಡುವ ಹೊತ್ತಿನಲ್ಲಿ ಇದ್ದ ಬಡ್ಡಿ ದರವೇ ಸಿಗುತ್ತದೆ.

ಎಸ್​ಬಿಐ ಮಲ್ಟಿ ಆಪ್ಷನ್ ಡೆಪಾಸಿಟ್ ಯೋಜನೆ ಬಗ್ಗೆ ಗೊತ್ತಿರಬೇಕಾದ 10 ಸಂಗತಿಗಳು: 1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಂಒಡಿಎಸ್ ಖಾತೆ ಸೃಷ್ಟಿಸುವುದಕ್ಕೆ ಕನಿಷ್ಠ ನಿಶ್ಚಿತ ಠೇವಣಿ 10,000 ರೂಪಾಯಿ ಬೇಕಾಗುತ್ತದೆ. ಆ ನಂತರ 1000 ರೂಪಾಯಿ ಗುಣಕದಲ್ಲಿ ಹಣ ಹೆಚ್ಚಿಸಿಕೊಳ್ಳುತ್ತಾ ಸಾಗಬಹುದು. 2. ಎಸ್​ಬಿಐ ಎಂಒಡಿಎಸ್ ಖಾತೆ ಠೇವಣಿಗೆ ಗರಿಷ್ಠ ಮೊತ್ತದ ಮಿತಿ ಇಲ್ಲ. 3. ಎಸ್​ಬಿಐನ ಎಂಒಡಿಎಸ್ ಖಾತೆಗೆ ಕಾಲಾವಧಿ ಠೇವಣಿಗಳಿಗೆ ಅನ್ವಯ ಆಗುವಂತೆಯೇ ಬಡ್ಡಿ ದರ ಇರುತ್ತದೆ. ಸಾಮಾನ್ಯ ಗ್ರಾಹಕರಿಗೆ ಶೇ 2.9ರಿಂದ ಶೇ 5.4ರ ಮಧ್ಯೆ ಎಸ್​ಬಿಐ ಎಫ್​ಡಿ ದರ ಸಿಗುತ್ತದೆ. 4. ಎಸ್​ಬಿಐನ ಎಂಒಡಿಎಸ್ ಖಾತೆಗೆ ಕನಿಷ್ಠ ಕನಿಷ್ಠ 1 ವರ್ಷ ಮತ್ತು ಗರಿಷ್ಠ 5 ವರ್ಷಗಳ ಅವಧಿಗೆ ಠೇವಣಿ ಮಾಡಬೇಕು. 5. ಎಸ್​ಬಿಐನ ಎಂಒಡಿಎಸ್ ಖಾತೆಯಿಂದ ಅವಧಿಪೂರ್ವವಾಗಿ ವಿಥ್ ಡ್ರಾ ಮಾಡಬಹುದು. 5 ಲಕ್ಷ ರೂಪಾಯಿಯೊಳಗಿನ ಎಫ್​.ಡಿ.ಗೆ ದಂಡ ಶುಲ್ಕವಾಗಿ ಶೇ 0.50 (ಎಲ್ಲ ಅವಧಿಗೂ) ಹಾಕಲಾಗುತ್ತದೆ. 5 ಲಕ್ಷ ರೂಪಾಯಿ ಮೇಲ್ಪಟ್ಟು 1 ಕೋಟಿ ರೂಪಾಯಿಯೊಳಗಿದ್ದರೆ ಶೇಕಡಾ 1ರಷ್ಟು (ಎಲ್ಲ ಅವಧಿಗೂ) ದಂಡ ಬೀಳುತ್ತದೆ. ಒಂದು ವೇಳೆ ಎಂಒಡಿಯನ್ನು ಮುರಿದಲ್ಲಿ ದಂಡ ಹಾಕಿದ ನಂತರ ಬಡ್ಡಿ ಪಾವತಿಸಲಾಗುತ್ತದೆ ಮತ್ತು ಬಾಕಿ ಮೊತ್ತಕ್ಕೆ ಮೂಲ ಬಡ್ಡಿ ದರವೇ ಮುಂದುವರಿಯಲಿದೆ. 7 ದಿನಕ್ಕಿಂತ ಕಡಿಮೆ ಅವಧಿಯ ಠೇವಣಿಗೆ ಬಡ್ಡಿ ನೀಡುವುದಿಲ್ಲ. 6. ವೈಯಕ್ತಿಕವಾಗಿ, ಜಂಟಿಯಾಗಿ, ಅಪ್ರಾಪ್ತರ ಹೆಸರಲ್ಲಿ (ತಾವಾಗಿಯೇ ಅಥವಾ ಪೋಷಕರ ಮೂಲಕವಾಗಿ), ಹಿಂದೂ ಅವಿಭಕ್ತ ಕುಟುಂಬದ ಕರ್ತ, ಸಂಸ್ಥೆ, ಕಂಪೆನಿ, ಸ್ಥಳೀಯ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳು ಎಸ್​ಬಿಐನ ಎಂಒಡಿಎಸ್ ಖಾತೆಯನ್ನು ತೆರೆಯಬಹುದು. 7. ಎಸ್​ಬಿಐ ಮಲ್ಟಿ ಆಪ್ಷನ್ ಡೆಪಾಸಿಟ್ ಸ್ಕೀಮ್​​ಗೆ ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್ (ಟಿಡಿಎಸ್) ಅನ್ವಯ ಆಗುತ್ತದೆ. 8. ಎಸ್​ಬಿಐನ ಎಂಒಡಿಎಸ್ ಖಾತೆ ಮೇಲೆ ಸಾಲವನ್ನು ಸಹ ಪಡೆಯಬಹುದು. ಹೀಗೆ ಸಾಲ ತೆಗೆದುಕೊಂಡ ಮೇಲೆ ಆ ನಿರ್ದಿಷ್ಟ ಖಾತೆಯಲ್ಲಿ ಹಣ ಮುರಿದುಕೊಳ್ಳುವುದಕ್ಕೆ ಅವಕಾಶ ನೀಡಲ್ಲ. 9. ಎಸ್​ಬಿಐನ ಎಂಒಡಿಎಸ್ ಖಾತೆಗೆ ನಾಮಿನೇಷನ್ ವ್ಯವಸ್ಥೆ ಇದೆ. 10. ಆನ್​ಲೈನ್ ಮೂಲಕ ಅಥವಾ ನಿಮಗೆ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹತ್ತಿರ ಶಾಖೆಗೆ ಭೇಟಿ ನೀಡುವ ಮೂಲಕ ಎಂಒಡಿಎಸ್ ಖಾತೆ ತೆರೆಯಬಹುದು.

ಎಸ್​ಬಿಐನ ಎಂಒಡಿಎಸ್ ಖಾತೆ ತೆರೆಯುವುದು ಹೇಗೆ? 1. ಎಸ್​ಬಿಐ ಆನ್​ಲೈನ್​ಗೆ ಲಾಗ್​ ಇನ್ ಆಗಿ 2. ಫಿಕ್ಸೆಡ್ ಡೆಪಾಸಿಟ್ ವಿಭಾಗದಲ್ಲಿ ಕ್ಲಿಕ್ ಆದ ಮೇಲೆ ಓಪನ್ ಮಾಡಿ 3. ಇಲ್ಲಿ ಇ- ಟಿಡಿಆರ್/ಇ-ಎಸ್​ಟಿಡಿಆರ್ (ಎಫ್​ಡಿ) ಕ್ಲಿಕ್ ಮಾಡಿ 4. ಈಗ ಇ- ಟಿಡಿಆರ್/ಇ-ಎಸ್​ಟಿಡಿಆರ್ (ಎಂಒಡಿ) ಮಲ್ಟಿ ಆಪ್ಷನ್ ಡೆಪಾಸಿಟ್ ಆಯ್ಕೆ ಮಾಡಿಕೊಂಡು, ಮುಂದಿನ ಹಂತಕ್ಕೆ ತೆರಳಿ 5. ನಿಮ್ಮ ಡೆಬಿಟ್ ಖಾತೆ ಸಂಖ್ಯೆ ಅಯ್ಕೆ ಮಾಡಿಕೊಳ್ಳಿ, ಎಂಒಡಿ ಖಾತೆ ನಮೂದಿಸಿ, ಟಿಡಿಆರ್ ಅಥವಾ ಎಸ್​ಟಿಡಿಆರ್​ ಡೆಪಾಸಿಟ್ ಆಯ್ಕೆ ಮಾಡಿಕೊಂಡು, ಎಂಒಡಿ ಅವಧಿ ಆಯ್ಕೆ ಮಾಡಿಕೊಂಡು, ಸಲ್ಲಿಕೆಯಾಗಬೇಕು. 6. ನಿಮ್ಮ ಎಂಒಡಿ ತೆರೆಯುವ ಮನವಿ ಖಾತ್ರಿ ಮಾಡಿ.

ಇದನ್ನೂ ಓದಿ: ಇಪಿಎಫ್, ಕ್ರೆಡಿಟ್ ಕಾರ್ಡ್, ಎಲ್​ಪಿಜಿ, ಬ್ಯಾಂಕ್ ಡೆಪಾಸಿಟ್ ಇನ್ಷೂರೆನ್ಸ್ ಬಗ್ಗೆ ನಿಮಗೆಷ್ಟು ಗೊತ್ತು?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್