ಇಪಿಎಫ್, ಕ್ರೆಡಿಟ್ ಕಾರ್ಡ್, ಎಲ್​ಪಿಜಿ, ಬ್ಯಾಂಕ್ ಡೆಪಾಸಿಟ್ ಇನ್ಷೂರೆನ್ಸ್ ಬಗ್ಗೆ ನಿಮಗೆಷ್ಟು ಗೊತ್ತು?

ನೀವು ಯಾವುದೇ ಹೆಚ್ಚುವರಿ ಹಣ ಪಾವತಿಸದೆ ಕವರ್ ಆಗುವ ನಾಲ್ಕು ಜೀವ ವಿಮೆ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಇಪಿಎಫ್​​ಒ, ಕ್ರೆಡಿಟ್ ಕಾರ್ಡ್, ಎಲ್​ಪಿಜಿ ಹಾಗೂ ಬ್ಯಾಂಕ್ ಡೆಪಾಸಿಟ್ ಮೇಲೆ ದೊರೆಯುವ ಅಂತರ್ಗತ ವಿಮೆಯ ಬಗ್ಗೆ ನಿಮಗೆ ತಿಳಿದಿರಲಿ.

ಇಪಿಎಫ್, ಕ್ರೆಡಿಟ್ ಕಾರ್ಡ್, ಎಲ್​ಪಿಜಿ, ಬ್ಯಾಂಕ್ ಡೆಪಾಸಿಟ್ ಇನ್ಷೂರೆನ್ಸ್ ಬಗ್ಗೆ ನಿಮಗೆಷ್ಟು ಗೊತ್ತು?
ಪ್ರಾತಿನಿಧಿಕ ಚಿತ್ರ
Follow us
|

Updated on: Mar 11, 2021 | 1:03 PM

ನಿಮಗೆ ಗೊತ್ತೆ? ಶೇಕಡಾ 75ರಷ್ಟು ಕ್ರೆಡಿಟ್ ಕಾರ್ಡ್​​ಗಳ ಜತೆಗೆ ಕೆಲವು ಇನ್ಷೂರೆನ್ಸ್ ಅನುಕೂಲಗಳು ಒಳಗೊಂಡಿರುತ್ತವೆ. ಆದರೆ ಈ ಬಗ್ಗೆ ನಮಗೆ ಗೊತ್ತಿರಲ್ಲ. ಅದಕ್ಕೆ ಕಾರಣವೂ ಇದೆ; ಕ್ರೆಡಿಟ್ ಕಾರ್ಡ್​​ಗಳಿಗೆ ಸಂಬಂಧಿಸಿದಂತೆ ಬ್ರೌಷರ್ ಆಗಲೀ ವೆಲ್​ಕಂ ಮೇಲ್ ಆಗಲೀ ನಮ್ಮಲ್ಲಿ ಹಲವರು ಸರಿಯಾಗಿ ಓದಿರಲ್ಲ. ಅಂಥ ಹಲವು ಇನ್-ಬಿಲ್ಟ್ ಪ್ರಯೋಜನಗಳ ಕಡೆಗೆ ಗಮನವೇ ಹೋಗಿರಲ್ಲ. ಅವುಗಳಿಗೆ ಯಾವ ದಾಖಲಾತಿ ಅಗತ್ಯವೂ ಇರಲ್ಲ ಮತ್ತು ಆದ್ದರಿಂದಲೇ ತಿಳಿದುಕೊಳ್ಳುವುದೇ ಇಲ್ಲ. ಈ ದಿನ ಅಂಥ ನಾಲ್ಕು ಉಚಿತ ಇನ್ಷೂರೆನ್ಸ್ ಕವರ್ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗುವುದು.

ಎಂಪ್ಲಾಯಿ ಡೆಪಾಸಿಟ್ ಲಿಂಕ್ಡ್ ಇನ್ಷೂರೆನ್ಸ್ ನಿಮ್ಮ ಇಪಿಎಫ್ ಖಾತೆಯ ಜತೆಗೆ ಎಂಪ್ಲಾಯಿ ಡೆಪಾಸಿಟ್ ಲಿಂಕ್ಡ್ ಇನ್ಷೂರೆನ್ಸ್ ಸ್ಕೀಮ್ (ಇಡಿಎಲ್​ಐ) ಇರುತ್ತದೆ. ನೀವು ಯಾವುದೇ ಹೆಚ್ಚುವರಿ ಶುಲ್ಕವನ್ನು ಭರಿಸುವ ಅಗತ್ಯ ಇಲ್ಲದೆ ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟದಿಂದ (ಇಪಿಎಫ್​ಒ) ಇಡಿಎಲ್​ಐ ದೊರೆಯುತ್ತದೆ. ಈ ಇನ್ಷೂರೆನ್ಸ್ ವೆಚ್ಚವಾದ ಶೇಕಡಾ 0.50 ಅಥವಾ ಗರಿಷ್ಠ 75 ರೂಪಾಯಿಯನ್ನು ಉದ್ಯೋಗದಾತರೇ ಭರಿಸುತ್ತಾರೆ.

ಕವರೇಜ್: ಇಡಿಎಲ್ ಇನ್ಷೂರೆನ್ಸ್ ಸ್ಕೀಮ್ ಇಪಿಎಫ್ ಕೊಡುಗೆದಾರರಿಗೆ ಜೀವ ವಿಮೆ ಒದಗಿಸುತ್ತದೆ. ಅಂದ ಹಾಗೆ ಕ್ಲೇಮ್ ಮೊತ್ತ ಎಷ್ಟು ಅಂದರೆ, ವೇತನದ 30 ಪಟ್ಟು ಆಗುತ್ತದೆ. ವೇತನದ ಲೆಕ್ಕಾಚಾರಕ್ಕೆ ಮೂಲವೇತನ ಪ್ಲಸ್ ತುಟ್ಟಿ ಭತ್ಯೆ (ಡಿಯರ್​ನೆಸ್ ಅಲೋವೆನ್ಸ್) ಎರಡನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದರ ಜತೆಗೆ 1.5 ಲಕ್ಷ ರೂಪಾಯಿ ಬೋನಸ್ ಅನ್ನು ಕ್ಲೇಮ್ ಮೊತ್ತದ ಜತೆಗೆ ನೀಡಬೇಕು. ಕನಿಷ್ಠ ಮಿತಿ ರೂ. 2.5 ಲಕ್ಷ ಮತ್ತು ಗರಿಷ್ಠ ಕ್ಲೇಮ್ 6 ಲಕ್ಷ ರೂಪಾಯಿ ಎಂದು ಮಿತಿ ಹಾಕಲಾಗಿದೆ.

ಕ್ಲೇಮ್ ಮಾಡುವುದು ಹೇಗೆ?: ಕ್ಲೇಮ್ ಪ್ರಕ್ರಿಯೆ ಶುರು ಮಾಡಲು ಫಾರ್ಮ್ 5 ಭರ್ತಿ ಮಾಡಬೇಕು. ಕ್ಲೇಮ್ ಫೈಲ್ ಮಾಡುವಾಗ ಗಮನದಲ್ಲಿ ಇರಬೇಕಾದದ್ದು ಏನೆಂದರೆ, ಆ ವ್ಯಕ್ತಿಯು ತೀರಿಕೊಳ್ಳುವ ಸಂದರ್ಭದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಲ್ಲಿ ಮಾತ್ರ ಮೃತಪಟ್ಟ ವ್ಯಕ್ತಿಯ ಕ್ಲೇಮ್ ಸ್ವೀಕರಿಸಲಾಗುವುದು. ಕ್ಲೇಮ್ ಅರ್ಜಿಯನ್ನು ಉದ್ಯೋಗದಾತರು ದೃಢೀಕರಿಸಿರಬೇಕು.

ಕ್ರೆಡಿಟ್ ಕಾರ್ಡ್​​ಗಳ ಜತೆಗೆ ಉಚಿತ ಇನ್ಷೂರೆನ್ಸ್ ಬಹುತೇಕ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್​ಗಳ ಜತೆಗೆ ಉಚಿತ ಇನ್ಷೂರೆನ್ಸ್ ಬರುತ್ತದೆ. ಆದರೆ ಈ ಬಗ್ಗೆ ಬಹಳ ಕಡಿಮೆ ಜನಕ್ಕೆ ಗೊತ್ತಿದೆ. ಅಂದಹಾಗೆ ಶೇಕಡಾ 75ರಷ್ಟು ಕ್ರೆಡಿಟ್ ಕಾರ್ಡ್​ಗಳು ಮತ್ತು ಶೇ 60ರಷ್ಟು ಡೆಬಿಟ್ ಕಾರ್ಡ್​ಗಳ ಜತೆಗೆ ಕೆಲವು ಇನ್ಷೂರೆನ್ಸ್ ಅನುಕೂಲಗಳಿವೆ. ಆದರೆ ಬಹಳ ಮಂದಿಗೆ ಹೀಗೊಂದು ಅನುಕೂಲ ಇದೆ ಎಂಬ ಸಂಗತಿಯೇ ತಿಳಿದಿಲ್ಲ. ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ, ಶೇಕಡಾ 97ರಷ್ಟು ಜನರು ತಮಗೆ ಇನ್ಷೂರೆನ್ಸ್ ಅನುಕೂಲ ಇರುವುದು ಗೊತ್ತೇ ಇಲ್ಲ ಎಂಬ ಉತ್ತರ ನೀಡಿದ್ದಾರೆ.

ಕವರೇಜ್: ವೈಯಕ್ತಿಕ ಅಪಘಾತ ವಿಮೆ ಅಥವಾ ಬ್ಯಾಗೇಜ್ ಕಳೆದುಹೋದಲ್ಲಿ ಪ್ರವಾಸ ವಿಮೆ, ವಿಮಾನ ಪತನವಾಗಿ ಅದರಿಂದ ಸಾವು ಸಂಭವಿಸಿದಲ್ಲಿ ಅಥವಾ ಪ್ರಯಾಣ ದಾಖಲಾತಿಗಳು ಕಳೆದುಹೋದಲ್ಲಿ ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್​​ಗಳು ವಿಮೆ ಹೊಂದಿರುತ್ತವೆ.

ಕ್ಲೇಮ್ ಮಾಡುವುದು ಹೇಗೆ?: ಬ್ಯಾಂಕ್ ಏಜೆಂಟ್ ಅಥವಾ ಇನ್ಷೂರೆನ್ಸ್ ಏಜೆಂಟ್ ಮೂಲಕ ವಿಮೆ ಖರೀದಿ ಮಾಡಿದರೆ ಹೇಗೆ ಕ್ಲೇಮ್ ಮಾಡುತ್ತೀರೋ ಇದು ಕೂಡ ಹಾಗೆ ಮಾಡಬೇಕು. ಕಾರ್ಡ್ ವಿತರಿಸುವ ಕಂಪೆನಿಯೇ ಯಾವ ಹಾಟ್​​ಲೈನ್ ಸಂಖ್ಯೆಗೆ ಕರೆ ಮಾಡಬೇಕು ಮತ್ತು/ಅಥವಾ ಕ್ಲೇಮ್​ಗಳ ಮಾಹಿತಿಯ ದಾಖಲೆ ಹಾಗೂ ಇನ್ಷೂರೆನ್ಸ್ ಕಂಪೆನಿಯ ಸಂಪರ್ಕದ ಮಾಹಿತಿಯನ್ನು ಒದಗಿಸುತ್ತದೆ. ಸಮೀಕ್ಷೆ ಪ್ರಕಾರ, ಹಾಟ್​ಲೈನ್ ಮೂಲಕ ಸಂಪರ್ಕಿಸುವವರ ಸಂಖ್ಯೆಯೇ ಹೆಚ್ಚು.

ಎಲ್​ಪಿಜಿ ಸಿಲಿಂಡರ್ ಜತೆಗೆ ಉಚಿತ ಇನ್ಷೂರೆನ್ಸ್ ಬಹಳ ಮಂದಿ ಗ್ರಾಹಕರಿಗೆ ಗೊತ್ತಿಲ್ಲದ ಸಂಗತಿ ಏನೆಂದರೆ, ತೈಲ ಮಾರ್ಕೆಟಿಂಗ್ ಕಂಪೆನಿಗಳು ಮತ್ತು ಎಲ್​ಪಿಜಿ ಸಿಲಿಂಡರ್​ಗಳ ವಿತರಕರು ಗ್ರಾಹಕರಿಗೆ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಕವರ್ ಒದಗಿಸುತ್ತಾರೆ. ಅಂಕಿ- ಅಂಶಗಳು ಪ್ರಕಾರ, 2016- 17ರಲ್ಲಿ ಎಲ್​ಪಿಜಿ ಸಂಬಂಧಿತ ಅಪಘಾತಗಳು 929 ಆಗಿವೆ. 2017-18ರಲ್ಲಿ 1151 ಆಗಿವೆ. ಅದರಲ್ಲಿ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ಕ್ರಮವಾಗಿ 267 ಮತ್ತು 292. ಇನ್ನು ಆ ಎರಡು ವರ್ಷಗಳಲ್ಲಿ ಪರಿಹಾರವಾಗಿ ಪಾವತಿ ಮಾಡಿರುವುದು ಕ್ರಮವಾಗಿ 22.83 ಕೋಟಿ ರೂಪಾಯಿ ಹಾಗೂ 17.39 ಕೋಟಿ ರೂಪಾಯಿ.

ಕವರೇಜ್: ಎಲ್​ಪಿಜಿ ಸಿಲಿಂಡರ್ ಅಪಘಾತದಲ್ಲಿ ಸಾವು ಸಂಭವಿಸಿದರೆ ವೈಯಕ್ತಿಕ ಅಪಘಾತ ವಿಮೆ ಒಬ್ಬ ವ್ಯಕ್ತಿಗೆ ರೂ. 6 ಲಕ್ಷ ಕವರ್ ಆಗುತ್ತದೆ. ಇದರ ಜತೆಗೆ ವೈದ್ಯಕೀಯ ವೆಚ್ಚ ಒಬ್ಬ ವ್ಯಕ್ತಿಗೆ ರೂ. 2 ಲಕ್ಷ ಕವರ್ ಆಗುತ್ತದೆ. ಇದೇ ರೀತಿಯ ಮೊತ್ತವು ಆಸ್ತಿ ಹಾನಿಗೂ ಅನ್ವಯಿಸುತ್ತದೆ. ವಿತರಕರಿಂದ ವಿತರಕರಿಂದ ಕವರೇಜ್ ಬದಲಾವಣೆ ಆಗುವುದರಿಂದ ಈ ಬಗ್ಗೆ ಡೀಲರ್ ಬಳಿ ಪರಿಶೀಲಿಸಿಕೊಳ್ಳಬೇಕು.

ಕ್ಲೇಮ್ ಮಾಡುವುದು ಹೇಗೆ?: ಅಪಘಾತವನ್ನು ಮೊದಲಿಗೆ ಪೊಲೀಸ್ ಠಾಣೆಯಲ್ಲಿ ವರದಿ ಮಾಡಬೇಕು. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅನಿಲ ವಿತರಕರಿಗೆ ಮಾಹಿತಿ ಮುಟ್ಟಿಸಿ, ಕ್ಲೇಮ್ ತೀರುವಳಿ ಪ್ರಕ್ರಿಯೆ ಶುರು ಮಾಡಲು ತಿಳಿಸಬೇಕು. ಘಟನೆ ನೀಡಿದ ಎಷ್ಟು ಸಮಯದೊಳಗೆ ಈ ಬಗ್ಗೆ ನೀಡಬೇಕು ಎಂಬ ಪ್ರಶ್ನೆಗೆ, ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅಥವಾ ಘಟನೆ ನಡೆದ 90 ದಿನದೊಳಗಾಗಿ ಎಂಬ ಮಾಹಿತಿ ಸಿಗುತ್ತದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಬೇಕಾದ ಹೆಚ್ಚುವರಿ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಇದರ ಜತೆಗೆ ಒಂದು ಇನ್ಷೂರೆನ್ಸ್ ಕಂಪೆನಿಯಿಂದ ಮತ್ತೊಂದಕ್ಕೆ ಷರತ್ತು, ನಿಬಂಧನೆಗಳು ಬದಲಾಗುತ್ತವೆ.

ಡೆಪಾಸಿಟ್ ಇನ್ಷೂರೆನ್ಸ್: ಒಂದು ವೇಳೆ ಬ್ಯಾಂಕ್​ಗಳು ಹಣ ಹಿಂತಿರುಗಿಸದಿದ್ದಲ್ಲಿ ರೂ. 5 ಲಕ್ಷದ ತನಕ ನಿಮ್ಮ ಬ್ಯಾಂಕ್ ಠೇವಣಿಗಳಿಗೆ ಇನ್ಷೂರೆನ್ಸ್ ಇದೆ. ಈ ಮಿತಿಯು ಉಳಿತಾಯ ಖಾತೆ, ಚಾಲ್ತಿ ಖಾತೆ, ನಿಶ್ಚಿತ ಠೇವಣಿ ಮತ್ತು ಸಂಚಿತ ನಿಧಿ ಹೀಗೆ ಎಲ್ಲ ಖಾತೆಗಳಿಗೂ ಅನ್ವಯಿಸುತ್ತದೆ. ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಒದಗಿಸುವ ಕವರ್ ಇದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಂಗಸಂಸ್ಥೆ ಆಗಿದೆ. ಡೆಪಾಸಿಟ್ ಇನ್ಷೂರೆನ್ಸ್ ಪ್ರೀಮಿಯಂ ಅನ್ನು ಇನ್ಷೂರ್ಡ್ ಬ್ಯಾಂಕ್ ಪಾವತಿಸುತ್ತದೆ.

ಕವರೇಜ್: ಈ ಪಾಲಿಸಿ ಅಡಿಯಲ್ಲಿ ಠೇವಣಿದಾರರ ಅಸಲು ಮತ್ತು ಬಡ್ಡಿ ಎರಡೂ ಸೇರಿ 5 ಲಕ್ಷ ರೂಪಾಯಿ ತನಕ ಇನ್ಷೂರ್ಡ್ ಆಗಿರುತ್ತದೆ. ಒಂದು ವೇಳೆ ಬ್ಯಾಂಕ್ ಮುಚ್ಚಿದಲ್ಲಿ, ಪರವಾನಗಿ ಸ್ಥಗಿತವಾದಲ್ಲಿ ಅಥವಾ ವಿಲೀನವಾದಲ್ಲಿ ಈ ಇನ್ಷೂರೆನ್ಸ್ ಅನ್ವಯಿಸುತ್ತದೆ. ಒಂದು ವೇಳೆ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್​​ನಲ್ಲಿ ಠೇವಣಿ ಇದ್ದಲ್ಲಿ ಪ್ರತಿ ಬ್ಯಾಂಕ್​ನಲ್ಲಿ ಇರುವ ಠೇವಣಿಗೆ ಇನ್ಷೂರೆನ್ಸ್ ಪ್ರತ್ಯೇಕವಾಗಿ ಅನ್ವಯ ಆಗುತ್ತದೆ. ಒಂದು ವೇಳೆ ಒಂದೇ ಬ್ಯಾಂಕ್​ನ ವಿವಿಧ ಶಾಖೆಯಲ್ಲಿ ಹಣ ಇಟ್ಟಿದ್ದಲ್ಲಿ ಆಗ ಸರಾಸರಿ ಬ್ಯಾಲೆನ್ಸ್ ಒಟ್ಟು ಮಾಡಿ, ಗರಿಷ್ಠ 5 ಲಕ್ಷ ರೂಪಾಯಿ ಪಾವತಿಸಲಾಗುತ್ತದೆ.

ಕ್ಲೇಮ್ ಮಾಡುವುದು ಹೇಗೆ: ಒಂದು ವೇಳೆ ಬ್ಯಾಂಕ್ ಮುಚ್ಚಿದಲ್ಲಿ ಡಿಐಸಿಜಿಸಿಯಿಂದ ಲಿಕ್ವಿಡೇಟರ್​ಗೆ ಹಣ ಪಾವತಿಸಬೇಕು. ಪ್ರತಿ ಠೇವಣಿದಾರರಿಗೂ ತಲಾ 5 ಲಕ್ಷ ರೂಪಾಯಿ ಪಾವತಿಸಬೇಕಾಗುತ್ತದೆ. ಆ ಮೊತ್ತವನ್ನು ಲಿಕ್ವಿಡೇಟರ್ ಆದವರು ಕ್ಲೇಮ್ ಪಟ್ಟಿ ಸಲ್ಲಿಸಿದ ಎರಡು ತಿಂಗಳ ಒಳಗಾಗಿ ನೀಡಬೇಕು. ಆ ನಂತರ ಲಿಕ್ವಿಡೇಟರ್ ಆದವರು ಕ್ಲೇಮ್ ಮೊತ್ತವನ್ನು ಠೇವಣಿದಾರರಿಗೆ ಹಿಂತಿರುಗಿಸಬೇಕು.

ಇದನ್ನೂ ಓದಿ: Postal Life Insurance Bonus: ಅಂಚೆ ವಿಮೆ ಬೋನಸ್ ಘೋಷಣೆ ಮಾಡಿದ ಸರ್ಕಾರ

ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ