AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನಿಖೆ ಅಂತ ಧರ್ಮಸ್ಥಳದಲ್ಲಿ ಉತ್ಖನನ ನಡೆಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಲಾಗುತ್ತಿದೆ: ವಿಜಯೇಂದ್ರ

ತನಿಖೆ ಅಂತ ಧರ್ಮಸ್ಥಳದಲ್ಲಿ ಉತ್ಖನನ ನಡೆಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಲಾಗುತ್ತಿದೆ: ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 11, 2025 | 2:59 PM

Share

ಬೆಂಗಳೂರು ಕಾಲ್ತುಳಿತ ಪ್ರಕರಣ ಮತ್ತು ರಾಹುಲ್ ಗಾಂಧಿಯವರ ಮತಗಳ್ಳತನ ಆರೋಪವನ್ನೂ ಸದನದಲ್ಲಿ ಚರ್ಚಿಸುವುದಾಗಿ ಹೇಳಿದ ವಿಜಯೇಂದ್ರ, ಮತಗಳ್ಳತನದ ಆರೋಪ ಮಾಡಿ ರಾಹುಲ್ ಗಾಂಧಿಯವರು ಓಡಿಹೋಗಿದ್ದಾರೆ, ಚುನಾವಣಾ ಆಯೋಗ ಅವರಿಂದ ಸ್ಪಷ್ಟೀಕರಣ ಕೇಳಿದೆ, ವಿಧಾನ ಸಭಾ ಅಧಿವೇಶನವನ್ನ 8-10 ದಿನಗಳಿಗೆ ನಿಗದಿಗೊಳಸುವ ಬದಲು 15-20 ದಿನ ನಡೆಸಿದರೆ ಎಲ್ಲ ಪ್ರಶ್ನೆಗಳಿಗೆ ತಾರ್ಕಿಕ ಅಂತ್ಯ ಕಾಣಿಸಬಹುದು ಎಂದು ವಿಜಯೇಂದ್ರ ಹೇಳಿದರು.

ಬೆಂಗಳೂರು, ಆಗಸ್ಟ್ 11: ಇವತ್ತಿನಿಂದ ವಿಧಾನಸಭಾ ಅಧಿವೇಶನ (Assembly session) ಶುರುವಾಗಿದೆ ಮತ್ತು ಸದನವನ್ನು ಪ್ರವೇಶಿಸುವ ಮೊದಲು ನಮ್ಮ ವರದಿಗಾರನೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಅಧಿವೇಶನದಲ್ಲಿ ಧರ್ಮಸ್ಥಳದ ಪ್ರಕರಣವನ್ನು ಚರ್ಚಿಸಿ ಮುಖ್ಯಮಂತ್ರಿಯವರಿಂದ ಸ್ಪಷ್ಟ ಉತ್ತರ ಪಡೆಯಲಾಗುವುದು ಎಂದು ಹೇಳಿದರು. ಸರ್ಕಾರ ಪ್ರಕರಣದ ತನಿಖೆಗಾಗಿ ಎಸ್​ಐಟಿ ರಚನೆ ಮಾಡಿದಾಗ ನಾವೂ ಕ್ರಮವನ್ನು ಸ್ವಾಗತಿಸಿದ್ದೆವು. ಆದರೆ ತನಿಖೆಯ ನೆಪದಲ್ಲಿ ಅಲ್ಲಿ ಅಗೆಯುವುದನ್ನು ಬಿಟ್ಟರೆ ಬೇರೇನೂ ಆಗುತ್ತಿಲ್ಲ, ಧರ್ಮಸ್ಥಳ ಮಂಜುನಾಥ ಸಹಸ್ರಾರು ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ಇದರಿಂದ ಧಕ್ಕೆಯಾಗುತ್ತಿದೆ, ಹಾಗಾಗಿ ಸರ್ಕಾರದ ಉತ್ತರ ಪಡೆಯುವುದು ಅತ್ಯವಶ್ಯಕವಾಗಿದೆ ಎಂದು ವಿಜಯೇಂದ್ರ ಹೇಳಿದರು.

ಇದನ್ನೂ ಓದಿ:  ರಾಷ್ಟ್ರದ ಸಾಂವಿಧಾನಿಕ ಸಂಸ್ಥೆಗಳನ್ನು ಕಾಂಗ್ರೆಸ್ ನಾಯಕರು ಅಪಮಾನಿಸುತ್ತಿದ್ದಾರೆ: ಬಿವೈ ವಿಜಯೇಂದ್ರ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ