AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಆಸ್ತಿ ಆದಾಯಕ್ಕೆ ತೆರಿಗೆ: ಹೊಸ ಇನ್ಕಮ್ ಟ್ಯಾಕ್ಸ್ ಮಸೂದೆಯಲ್ಲಿ ಕಾನೂನು ಸ್ಪಷ್ಟತೆ

New Income tax bill passed in Lok Sabha: 1961ರ ಆದಾಯ ತೆರಿಗೆ ಬದಲಾಗಿ ಸರ್ಕಾರ ರೂಪಿಸಿರುವ ಆದಾಯ ತೆರಿಗೆಯ ಹೊಸ ಮಸೂದೆಗೆ ಲೋಕಸಭೆ ಇಂದು ಅನುಮೋದಿಸಿದೆ. ಈ ಮಸೂದೆಯಲ್ಲಿ ಹಲವು ಮಾರ್ಪಾಡುಗಳನ್ನು ತರಲಾಗಿದೆ. ಕೆಲ ಅನಗತ್ಯ ಗೊಂದಲಗಳನ್ನು ನಿವಾರಿಸಲಾಗಿದೆ. ಮನೆ ಬಾಡಿಗೆಯಿಂದ ಬರುವ ಆದಾಯಕ್ಕೆ ತೆರಿಗೆ ವಿಧಿಸುವ ಪ್ರಕರಣಗಳಲ್ಲಿ ಕಾನೂನು ಸ್ಪಷ್ಟತೆ ನೀಡಲಾಗಿದೆ.

ಮನೆ ಆಸ್ತಿ ಆದಾಯಕ್ಕೆ ತೆರಿಗೆ: ಹೊಸ ಇನ್ಕಮ್ ಟ್ಯಾಕ್ಸ್ ಮಸೂದೆಯಲ್ಲಿ ಕಾನೂನು ಸ್ಪಷ್ಟತೆ
ಮನೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 11, 2025 | 5:54 PM

Share

ನವದೆಹಲಿ, ಆಗಸ್ಟ್ 11: ಕೇಂದ್ರ ಸರ್ಕಾರ ವಿವಿಧ ತಿದ್ದುಪಡಿ ಮತ್ತು ಸಲಹೆಗಳನ್ನು ಸೇರಿಸಿ ರೂಪಿಸಿ ಮಂಡಿಸಲಾಗಿರುವ ಹೊಸ ಆದಾಯ ತೆರಿಗೆ ಮಸೂದೆಗೆ (Income tax bill) ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಈ ಹಿಂದೆ ಇದ್ದ ಆದಾಯ ತೆರಿಗೆ ಮಸೂದೆಯ ಬದಲು ಹೊಸ ಮಸೂದೆಯನ್ನು ರೂಪಿಸಲಾಗಿದೆ. 1961ರ ಆದಾಯ ತೆರಿಗೆ ಕಾಯ್ದೆಯ ಬದಲು ಇದು ಜಾರಿಗೆ ಬರುತ್ತದೆ. ಹೊಸ ಮಸೂದೆಯಲ್ಲಿ ಕ್ಲಿಷ್ಟಕರ ಕಾನೂನು ಪರಿಭಾಷೆಯನ್ನು ಸರಳಗೊಳಿಸಲಾಗಿದೆ. ಅನವಶ್ಯಕ ಕಾನೂನುಗಳನ್ನು ನಿವಾರಿಸಲಾಗಿದೆ.

ಮನೆ ಆಸ್ತಿಯಿಂದ ಬಂದ ಆದಾಯಕ್ಕೆ ಇರುವ ತೆರಿಗೆಗೆ ಸಂಬಂಧಿಸಿದ ಎರಡು ಪ್ರಮುಖ ಕಾನೂನುಗಳ ಬಗ್ಗೆ ಹೊಸ ಐಟಿ ಮಸೂದೆಯಲ್ಲಿ ಮಹತ್ವದ ಸ್ಪಷ್ಟೀಕರಣ ಕೊಡಲಾಗಿದೆ. ವಾಸಸ್ಥಳ ಆಸ್ತಿಯ ವಾರ್ಷಿಕ ಮೌಲ್ಯದಿಂದ ಶೇ. 30ರಷ್ಟು ಇರುವ ಸ್ಟ್ಯಾಂಡರ್ಡ್ ಡಿಡಕ್ಷನ್ ಸಂಬಂಧದ ಒಂದು ಕಾನೂನು. ಹಾಗೆಯೇ, ಮನೆ ನಿರ್ಮಾಣಕ್ಕೆ ತೆಗೆದುಕೊಳ್ಳಲಾದ ಹೋಮ್ ಲೋನ್​ನಲ್ಲಿ ನಿರ್ಮಾಣಪೂರ್ವದ ಬಡ್ಡಿಗೆ ಟ್ಯಾಕ್ಸ್ ಡಿಡಕ್ಷನ್ ಲಭ್ಯತೆ ಸಂಬಂಧ ಮತ್ತೊಂದು ಕಾನೂನು ಬಗ್ಗೆ ಹೊಸ ಮಸೂದೆಯಲ್ಲಿ ವಿವರಣೆ ಕೊಡಲಾಗಿದೆ. ಈ ಹಿಂದಿನ ಮಸೂದೆಯಲ್ಲಿ ಈ ಎರಡು ಕಾನೂನುಗಳ ಬಗ್ಗೆ ಸರಿಯಾದ ವಿವರಣೆ ಇರಲಿಲ್ಲ.

ಇದನ್ನೂ ಓದಿ: ಗ್ರಾಹಕರ ಕ್ಲೇಮ್ ಸೆಟಲ್ಮೆಂಟ್: ಬ್ಯಾಂಕುಗಳಿಗೆ ಆರ್​ಬಿಐ ಕರಡು ನಿಯಮಗಳಿವು…

ಮನೆ ಆಸ್ತಿ ಆದಾಯಕ್ಕೆ ಶೇ. 30 ಡಿಡಕ್ಷನ್ ಹೇಗೆ?

ಹೊಸ ಆದಾಯ ತೆರಿಗೆ ಮಸೂದೆಯಲ್ಲಿನ 22ನೇ ಭಾಗದ 1ಎನಲ್ಲಿ ಈ ಬಗ್ಗೆ ಸ್ಪಷ್ಟತೆ ಕೊಡಲಾಗಿದೆ. ಮನೆ ಆಸ್ತಿಯಿಂದ ಬರುವ ವಾರ್ಷಿಕ ಆದಾಯಕ್ಕೆ ಪ್ರಾಪರ್ಟಿ ಟ್ಯಾಕ್ಸ್ ಮೊತ್ತವನ್ನು ಕಡಿಮೆ ಮಾಡಿದ ಬಳಿಕ ಉಳಿಯುವ ವಾರ್ಷಿಕ ಮೌಲ್ಯದ ಹಣಕ್ಕೆ ಶೇ. 30ರಷ್ಟು ಡಿಡಕ್ಷನ್ ಪಡೆಯಬಹುದು ಎಂದು ತಿಳಿಸಲಾಗಿದೆ.

22(2) ನಿಯಮವು ನಿರ್ಮಾಣಪೂರ್ವ ಬಡ್ಡಿ ವೆಚ್ಚಕ್ಕೆ ಡಿಡಕ್ಷನ್ ಅವಕಾಶ ಕೊಡುತ್ತದೆ. ಸ್ವಂತ ವಾಸಕ್ಕೆ ಹಾಗೂ ಬಾಡಿಗೆ ಕೊಟ್ಟ ವಾಸಸ್ಥಳಕ್ಕೆ ಈ ಡಿಡಕ್ಷನ್ ಲಭ್ಯ ಇರುತ್ತದೆ ಎಂದು ಈ ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ಡಿಡಕ್ಷನ್ ಹೇಗಿರುತ್ತೆ? ಇಲ್ಲಿದೆ ಉದಾಹರಣೆ

ನಿಮ್ಮ ವಾಸಸ್ಥಳ ಕಟ್ಟಡದಿಂದ ವರ್ಷಕ್ಕೆ 2 ಲಕ್ಷ ರೂ ಬಾಡಿಗೆ ಆದಾಯ ಪಡೆಯುತ್ತೀರಿ ಎಂದಿಟ್ಟುಕೊಳ್ಳಿ. ಆ ಮನೆಗೆ ಪ್ರಾಪರ್ಟಿ ಟ್ಯಾಕ್ಸ್ 5,000 ರೂ ಕಟ್ಟಿರುತ್ತೀರಿ ಎಂದು ಭಾವಿಸೋಣ. ಈಗ ನಿಮ್ಮ ಬಾಡಿಗೆ ಆದಾಯ ಮೌಲ್ಯ 1,95,000 ರೂ ಆಗುತ್ತದೆ. ಇದಕ್ಕೆ ಶೇ. 30ರಷ್ಟು ಸ್ಟ್ಯಾಂಡರ್ಡ್ ಡಿಡಕ್ಷನ್ ಲಭ್ಯ ಇರುತ್ತದೆ. ಈ ಮೇಲಿನ ಉಲ್ಲೇಖದಲ್ಲಿ ಅದು 58,500 ರೂ ಆಗುತ್ತದೆ.

ಇದನ್ನೂ ಓದಿ: ಮ್ಯುಚುವಲ್ ಫಂಡ್ ಕಂಪನಿಗಳು ಟ್ರಾನ್ಸಾಕ್ಷನ್ ಶುಲ್ಕ, ಕಮಿಷನ್ ಕೊಡಬೇಕಿಲ್ಲ: ಸೆಬಿ ಕ್ರಮ

ಮನೆಯ ಮೈಂಟೆನೆನ್ಸ್ ಇತ್ಯಾದಿ ವೆಚ್ಚಕ್ಕೆ ಈ ಡಿಡಕ್ಷನ್ ನೀಡಲಾಗುತ್ತದೆ. ಅಂದರೆ, 1,95,000 – 58,500 = 1,36,500 ರೂ ಆಗುತ್ತದೆ.

ನೀವು ಮನೆ ಮೇಲೆ ಸಾಲ ತೆಗೆದುಕೊಂಡಿದ್ದರೆ ಅದಕ್ಕೆ ಬಡ್ಡಿ ಮೊತ್ತವೇ ಒಂದು ವರ್ಷದಲ್ಲಿ 70,000 ರೂ ಆಗಿದ್ದರೆ ಆಗ ಅದನ್ನೂ ಕಳೆಯಬೇಕಾಗುತ್ತದೆ. ಅಂದರೆ, 1,36,500 – 70,0000 = 66,500. ನಿಮ್ಮ ಬಾಡಿಗೆ ಆದಾಯವು 2,00,000 ರೂ ಬದಲು 66,500 ರೂಗೆ ಇಳಿಯುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್