ಗ್ರಾಹಕರ ಕ್ಲೇಮ್ ಸೆಟಲ್ಮೆಂಟ್: ಬ್ಯಾಂಕುಗಳಿಗೆ ಆರ್ಬಿಐ ಕರಡು ನಿಯಮಗಳಿವು…
RBI draft rules on claim settlement: ಬ್ಯಾಂಕ್ ಅಕೌಂಟ್, ಡೆಪಾಸಿಟ್, ಲಾಕರ್ಗಳಲ್ಲಿನ ಆಸ್ತಿಗೆ ಕ್ಲೇಮ್ ಸಲ್ಲಿಸಿದಾಗ ಸೆಟಲ್ಮೆಂಟ್ ಮಾಡುವ ವಿಧಾನಗಳನ್ನು ಆರ್ಬಿಐ ಸರಳಗೊಳಿಸಿದೆ. ಬ್ಯಾಂಕುಗಳು ಕ್ಲೇಮ್ ಅನ್ನು ತ್ವರಿತವಾಗಿ ಸೆಟಲ್ಮೆಂಟ್ ಮಾಡದೇ ಹೋದರೆ ದಂಡ ಎದುರಿಸಬೇಕಾಗುತ್ತದೆ. ಆರ್ಬಿಐ ಈ ಕರಡು ನಿಯಮಗಳನ್ನು ಸಾರ್ವತ್ರಿಕ ಅವಗಾಹನೆಗೆ ಮುಕ್ತಗೊಳಿಸಿದು, ಸಾರ್ವಜನಿಕ ಅಭಿಪ್ರಾಯಗಳನ್ನು ಆಹ್ವಾನಿಸಿದೆ.

ಆರ್ಬಿಐ
ನವದೆಹಲಿ, ಆಗಸ್ಟ್ 11: ಡೆಪಾಸಿಟ್ ಅಕೌಂಟ್, ಲಾಕರ್ಸ್ಗೆ ಸಂಬಂಧಿಸಿದ ಕ್ಲೇಮ್ಗಳ ಸೆಟಲ್ಮೆಂಟ್ಗೆ ನಿಯಮಗಳನ್ನು ಸರಳ ಹಾಗೂ ಬಿಗಿಗಿಳಿಸುವ ಪ್ರಯತ್ನದಲ್ಲಿ ಆರ್ಬಿಐ (RBI) ಇದೆ. ಈ ಸಂಬಂಧ ರಿಸರ್ವ್ ಬ್ಯಾಂಕ್ ಕರಡು ನಿಯಮಗಳನ್ನು ರೂಪಿಸಿದೆ ಇಂದು ಬಿಡುಗಡೆ ಮಾಡಿದೆ. ಖಾತೆದಾರರು ಮೃತಪಟ್ಟಾಗ ಅವರ ವಾರಸುದಾರರು ಸಲ್ಲಿಸುವ ಕ್ಲೇಮ್ಗಳನ್ನು ಸೆಟಲ್ ಮಾಡುವ ಸಂಬಂಧದ ನಿಯಮಗಳಿವು. ಈ ಕರಡು ನಿಯಮಗಳ ಬಗ್ಗೆ ಅಭಿಪ್ರಾಯ ನೀಡುವಂತೆ ಆರ್ಬಿಐ ಸಾರ್ವಜನಿಕರಿಗೆ ಆಹ್ವಾನಿಸಿದೆ.
ಕ್ಲೇಮ್ ಸೆಟಲ್ಮೆಂಟ್ ಸಂಬಂಧ ಆರ್ಬಿಐ ರೂಪಿಸಿದ ಕರಡು ನಿಯಮಗಳು
- ಡೆಪಾಸಿಟ್ ಸಂಬಂಧಿಸಿದ ಕ್ಲೇಮ್ಗಳಿಗೆ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದ 15 ದಿನದೊಳಗೆ ಬ್ಯಾಂಕುಗಳು ಸೆಟಲ್ ಮಾಡಬೇಕು.
- ಠೇವಣಿಗಳಿಗೆ ನಾಮಿನಿಯನ್ನು ಹೆಸರಿಸಲಾಗಿದ್ದರೆ, ಇಂಡೆಮ್ನಿಟಿ ಬಾಂಡ್ ಅಥವಾ ವಾರಸುದಾರಿಕೆ ಪ್ರಮಾಣ ಪತ್ರ ಇತ್ಯಾದಿ ಕಾನೂನು ದಾಖಲೆಗಳನ್ನು ಕೇಳುವ ಅಗತ್ಯ ಇಲ್ಲ. ಕ್ಲೇಮ್ ಫಾರ್ಮ್, ಡೆತ್ ಸರ್ಟಿಫಿಕೇಟ್, ನಾಮಿನಿಯ ಐಡಿ ಪ್ರೂಫ್ ಮತ್ತು ವಿಳಾಸದ ಪ್ರೂಫ್ ದಾಖಲೆಗಳನ್ನು ಕೊಟ್ಟರೆ ಸಾಕು.
- ಖಾತೆಗಳಿಗೆ ನಾಮಿನಿ ಹೆಸರಿಸಿಲ್ಲದಿದ್ದರೆ ಸರಳ ವಿಧಾನಗಳನ್ನು ಅನುಸರಿಸಬೇಕು. 15 ಲಕ್ಷ ರೂವರೆಗಿನ ಠೇವಣಿಗಳಿಗೆ ಸರಳ ವಿಧಾನ ಇರಬೇಕು. ಹೆಚ್ಚಿನ ಮೊತ್ತಕ್ಕೆ ಪ್ರಮಾಣಪತ್ರ ಇತ್ಯಾದಿ ಹೆಚ್ಚುವರಿ ದಾಖಲೆಗಳನ್ನು ನೀಡಬೇಕಾಗಬಹುದು.
- ಖಾತೆದಾರರು ನಾಪತ್ರೆಯಾಗಿದ್ದು ಸತ್ತಿರುವ ಶಂಕೆ ಇದ್ದರೆ ಕೋರ್ಟ್ನಿಂದ ಆದೇಶ ತರಬೇಕಾಗಬಹುದು.
ಇದನ್ನೂ ಓದಿ: ಐಸಿಐಸಿಐ ಬ್ಯಾಂಕ್ನಲ್ಲಿ ಮಿನಿಮಮ್ ಬ್ಯಾಲನ್ಸ್ 50,000 ರೂ ಕಡ್ಡಾಯ; ಇಲ್ಲಿದೆ ಇತರೆಲ್ಲಾ ಶುಲ್ಕಗಳ ವಿವರ
- ಸೇಫ್ ಕಸ್ಟಡಿ ಆಸ್ತಿಗಳ ವಿಚಾರಕ್ಕೆ ಬಂದರೆ, ಕ್ಲೇಮ್ಗೆ ಪೂರಕವಾದ ದಾಖಲೆಗಳನ್ನು ಸಲ್ಲಿಸಿ 15 ದಿನದೊಳಗೆ ಇನ್ವೆಂಟರಿ ಪ್ರಕ್ರಿಯೆ ಶುರುವಾಗಬೇಕು. ವಿಳಂಬವಾದರೆ ಬ್ಯಾಂಕುಗಳು ದಂಡ ತೆರಬೇಕು. ಠೇವಣಿಗಳಿಗೆ ಬ್ಯಾಂಕ್ ದರದಲ್ಲಿ ಬಡ್ಡಿ ಹಾಗೂ ವಿಳಂಬ ಅವಧಿಗೆ ಹೆಚ್ಚುವರಿ ಶೇ. 4 ದಂಡ ತೆರಬೇಕು. ಲಾಕರ್ ಆಗಿದ್ದರೆ, ಬ್ಯಾಂಕುಗಳು ದಿನಕ್ಕೆ 5,000 ರೂ ದಂಡ ತೆರಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




