AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಸಿಐಸಿಐ ಬ್ಯಾಂಕ್​ನಲ್ಲಿ ಮಿನಿಮಮ್ ಬ್ಯಾಲನ್ಸ್ 50,000 ರೂ ಕಡ್ಡಾಯ; ಇಲ್ಲಿದೆ ಇತರೆಲ್ಲಾ ಶುಲ್ಕಗಳ ವಿವರ

ICICI bank increases minimum balance to Rs 50,000: ಐಸಿಐಸಿಐ ಬ್ಯಾಂಕ್​ನಲ್ಲಿ ಆಗಸ್ಟ್ 1ರಿಂದ ಸೇವಿಂಗ್ಸ್ ಅಕೌಂಟ್ ತೆರೆದವರು ಮಿನಿಮಮ್ ಬ್ಯಾಲನ್ಸ್ ಆಗಿ 50,000 ರೂ ಕಾಯ್ದುಕೊಳ್ಳುವುದು ಕಡ್ಡಾಯ. ಹಳೆಯ ಗ್ರಾಹಕರಿಗೆ ಮಿನಿಮಮ್ ಬ್ಯಾಲನ್ಸ್ 10,000 ರೂ ಮುಂದುವರಿಯಲಿದೆ. ಗ್ರಾಮೀಣ ಭಾಗದಲ್ಲಿ ಹೊಸ ಗ್ರಾಹಕರು 10,000 ರೂ, ಹಾಗು ಅರೆನಗರದಲ್ಲಿನ ಗ್ರಾಹಕರು 25,000 ರೂ ಮಿನಿಮಮ್ ಬ್ಯಾಲನ್ಸ್ ಹೊಂದಿರಬೇಕು.

ಐಸಿಐಸಿಐ ಬ್ಯಾಂಕ್​ನಲ್ಲಿ ಮಿನಿಮಮ್ ಬ್ಯಾಲನ್ಸ್ 50,000 ರೂ ಕಡ್ಡಾಯ; ಇಲ್ಲಿದೆ ಇತರೆಲ್ಲಾ ಶುಲ್ಕಗಳ ವಿವರ
ಐಸಿಐಸಿಐ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 10, 2025 | 12:57 PM

Share

ನವದೆಹಲಿ, ಆಗಸ್ಟ್ 10: ಐಸಿಐಸಿಐ ಬ್ಯಾಂಕ್ (ICICI bank) ತನ್ನಲ್ಲಿನ ಹೊಸ ಖಾತೆಗಳಿಗೆ ಮಿನಿಮಮ್ ಬ್ಯಾಲನ್ಸ್ ಅನ್ನು ಬರೋಬ್ಬರಿ 50,000 ರೂಗೆ ಏರಿಸಿದೆ. ಆಗಸ್ಟ್ 1ರಿಂದಲೇ ಇದು ಮೆಟ್ರೋ ಹಾಗೂ ನಗರ ಭಾಗದಲ್ಲಿರುವ ಅದರ ಗ್ರಾಹಕರಿಗೆ ಅನ್ವಯ ಆಗುತ್ತದೆ. ಆಗಸ್ಟ್ 1 ಹಾಗು ನಂತರ ನಗರ ಭಾಗದಲ್ಲಿ ಐಸಿಐಸಿಐ ಬ್ಯಾಂಕ್​ನಲ್ಲಿ ಸೇವಿಂಗ್ಸ್ ಅಕೌಂಟ್ ತೆರೆದವರು ಮಾಸಿಕ ಸರಾಸರಿ ಬ್ಯಾಲನ್ಸ್ ಅನ್ನು ಕನಿಷ್ಠ 50,000 ರೂನಷ್ಟು ಇಡಬೇಕಾಗುತ್ತದೆ. ಬ್ಯಾಂಕ್​ನ ವೆಬ್​ಸೈಟ್​ನಲ್ಲಿ ಈ ಸಂಬಂಧ ಪ್ರಕಟಣೆ ನೀಡಲಾಗಿದೆ.

ಗ್ರಾಮೀಣ ಭಾಗದ ಗ್ರಾಹಕರಿಗೆ ಮಿನಿಮಮ್ ಬ್ಯಾಲನ್ಸ್ ಅನ್ನು 10,000 ರೂಗೆ ಏರಿಸಲಾಗಿದೆ. ಸೆಮಿ ಅರ್ಬನ್ ಅಥವಾ ಅರೆ ನಗರ ಪ್ರದೇಶದಲ್ಲಿರುವ ಹೊಸ ಗ್ರಾಹಕರು 25,000 ರೂ ಮಿನಿಮಮ್ ಬ್ಯಾಲನ್ಸ್ ಹೊಂದಿರಬೇಕು ಎನ್ನಲಾಗಿದೆ.

ಹಳೆಯ ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಇದು ಅನ್ವಯ ಆಗಲ್ಲ

ಐಸಿಐಸಿಐ ಬ್ಯಾಂಕ್​ನಲ್ಲಿ ಈ ಮೊದಲು ಕನಿಷ್ಠ ಬ್ಯಾಲನ್ಸ್ 10,000 ರೂ ಇತ್ತು. ಹಳೆಯ ಗ್ರಾಹಕರಿಗೆ, ಅಂದರೆ, ಆಗಸ್ಟ್ 1ಕ್ಕಿಂತ ಮುನ್ನ ಯಾರು ಆ ಬ್ಯಾಂಕಲ್ಲಿ ಉಳಿತಾಯ ಖಾತೆ ತೆರೆದಿದ್ದರೋ ಅವರಿಗೆ ಮಿನಿಮಮ್ ಬ್ಯಾಲನ್ಸ್ 10,000 ರೂ ನಿಯಮ ಮುಂದುವರಿಯುತ್ತದೆ.

ಅರೆ ನಗರ ಪ್ರದೇಶ ಹಾಗೂ ಗ್ರಾಮೀಣ ಭಾಗದಲ್ಲಿರುವ ಐಸಿಐಸಿಐ ಬ್ಯಾಂಕ್ ಗ್ರಾಹಕರು ತಮ್ಮ ಸೇವಿಂಗ್ಸ್ ಅಕೌಂಟ್​ಗಳಲ್ಲಿ ಕನಿಷ್ಠ ಬ್ಯಾಲನ್ಸ್ ಆಗಿ 5,000 ರೂ ಇಟ್ಟುಕೊಂಡಿರಬೇಕು. ಇದು ಆಗಸ್ಟ್ 1ಕ್ಕಿಂತ ಮುಂಚೆ ಅಕೌಂಟ್ ತೆರೆದವರಿಗೆ ಇರುವ ಸೌಲಭ್ಯ.

ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ ಬರೆ, ಭಾರತಕ್ಕೆ ಸಿಕ್ಕಿರುವ ದೊಡ್ಡ ಅವಕಾಶ: ಅಮಿತಾಭ್ ಕಾಂತ್

ಮಿನಿಮಮ್ ಬ್ಯಾಲನ್ಸ್ ಇಲ್ಲದಿದ್ದರೆ ಎಷ್ಟು ದಂಡ?

ಸೇವಿಂಗ್ಸ್ ಅಕೌಂಟ್​ನಲ್ಲಿ ಸರಾಸರಿ ಮಿನಿಮಮ್ ಬ್ಯಾಲನ್ಸ್ ಅನ್ನು ಇಟ್ಟುಕೊಳ್ಳದಿದ್ದರೆ 500 ರೂ ಅಥವಾ ಶೇ. 6ರಷ್ಟು ದಂಡ ಹಾಕಲಾಗುತ್ತದೆ. ಶೇ. 6 ಎಂದರೆ, ಮಿನಿಮಮ್ ಬ್ಯಾಲನ್ಸ್ ಮೊತ್ತಕ್ಕೆ ಎಷ್ಟು ಹಣ ಕೊರತೆ ಬೀಳುತ್ತದೋ ಆ ಹಣಕ್ಕೆ ವಿಧಿಸಲಾಗುವ ದಂಡ. ದಂಡದ ಮೊತ್ತ 500 ರೂ ದಾಟುವುದಿಲ್ಲ.

ಉದಾಹರಣೆಗೆ, ನಿಮ್ಮ ಅಕೌಂಟ್​ಗೆ ಮಿನಿಮಮ್ ಬ್ಯಾಲನ್ಸ್ 50,000 ರೂ ಇದೆ ಎಂದಿಟ್ಟುಕೊಳ್ಳಿ. ಅಕೌಂಟ್​ನಲ್ಲಿ ಮಿನಿಮಮ್ ಬ್ಯಾಲನ್ಸ್ 40,000 ರೂ ಮಾತ್ರವೇ ಇದ್ದಿರುತ್ತದೆ. ಕೊರತೆ ಇರುವ 10,000 ರೂ ಹಣಕ್ಕೆ ಶೇ 6 ಎಂದರೆ 600 ರೂ ಆಗುತ್ತದೆ. ಇಲ್ಲಿ 600 ರೂ ಬದಲು 500 ರೂ ದಂಡ ಹಾಕಲಾಗುತ್ತದೆ.

ಕ್ಯಾಷ್ ಡೆಪಾಸಿಟ್ ಮತ್ತು ವಿತ್​ಡ್ರಾಗೆ ಶುಲ್ಕ

ಐಸಿಐಸಿಐ ಬ್ಯಾಂಕ್​ನಲ್ಲಿ ಕ್ಯಾಷ್ ವಹಿವಾಟುಗಳಿಗೆ ವಿಧಿಸುವ ಸರ್ವಿಸ್ ಚಾರ್ಜ್​ಗಳನ್ನು ಪರಿಷ್ಕರಿಸಲಾಗಿದೆ. ಬ್ಯಾಂಕ್ ಕಚೇರಿಯಲ್ಲಿ ಮತ್ತು ಕ್ಯಾಷ್ ರೀಸೈಕ್ಲರ್ ಮೆಷಿನ್​ಗಳಲ್ಲಿ ಗ್ರಾಹಕರು ತಮ್ಮ ಅಕೌಂಟ್​ಗೆ ಶುಲ್ಕರಹಿತವಾಗಿ ಮೂರು ಬಾರಿ ಕ್ಯಾಷ್ ಡೆಪಾಸಿಟ್ ಮಾಡಲು ಅವಕಾಶ ಇದೆ. ಹೆಚ್ಚುವರಿ ಕ್ಯಾಷ್ ಡೆಪಾಸಿಟ್​ಗೆ 150 ರೂ ಶುಲ್ಕ ಇರುತ್ತದೆ.

ಇದನ್ನೂ ಓದಿ: ತಿಂಗಳಿಗೆ 2 ಲಕ್ಷ ರೂ ಸ್ಟೈಪೆಂಡ್; ಶಾಲಾ ಮಕ್ಕಳಾದರೂ ಪರವಾಗಿಲ್ಲ; ವರ್ಕ್ ಫ್ರಂ ಹೋಮ್; ರೆಫರ್ ಮಾಡಿದವರಿಗೆ ಐಫೋನ್ ಗಿಫ್ಟ್

ಹಾಗೆಯೇ, ಒಂದು ತಿಂಗಳಲ್ಲಿ ಒಂದು ಲಕ್ಷ ರೂವರೆಗೆ ಕ್ಯಾಷ್ ಡೆಪಾಸಿಟ್ ಮಾಡಬಹುದು. ಅದಕ್ಕಿಂತ ಮೇಲ್ಪಟ್ಟ ವಹಿವಾಟಾದರೆ, ಪ್ರತೀ ಹೆಚ್ಚುವರಿ 1,000 ರೂಗೆ 3.50 ರೂ ಅಥವಾ 150 ರೂ, ಯಾವುದು ಗರಿಷ್ಠವೋ ಅಷ್ಟು ಶುಲ್ಕ ಹಾಕಲಾಗುತ್ತದೆ. ಮೂರನೇ ವ್ಯಕ್ತಿ ಬಂದು ಕ್ಯಾಷ್ ಡೆಪಾಸಿಟ್ ಮಾಡುತ್ತಾರೆಂದರೆ ಗರಿಷ್ಠ 25,000 ರೂಗೆ ಮಾತ್ರ ಅವಕಾಶ ಇದೆ.

ಕ್ಯಾಷ್ ವಿತ್​ಡ್ರಾಯಲ್ ಶುಲ್ಕದಲ್ಲಿ ಪರಿಷ್ಕರಣೆ

ಐಸಿಐಸಿಐ ಬ್ಯಾಂಕ್​ನ ಕಚೇರಿಯಲ್ಲಿ ತಿಂಗಳಿಗೆ ಮೂರು ಬಾರಿ ಶುಲ್ಕರಹಿತವಾಗಿ ಕ್ಯಾಷ್ ವಿತ್​ಡ್ರಾ ಮಾಡಲು ಅವಕಾಶ ಇದೆ. ಹೆಚ್ಚುವರಿ ವಿತ್​ಡ್ರಾಯಲ್​ಗೆ 150 ರೂ ಶುಲ್ಕ ಹಾಕಲಾಗುತ್ತದೆ.

ಒಂದು ತಿಂಗಳಲ್ಲಿ ಒಟ್ಟಾರೆಯಾಗಿ 1 ಲಕ್ಷ ರೂವರೆಗೆ ಕ್ಯಾಷ್ ವಿತ್​ಡ್ರಾ ಮಾಡಬಹುದು. ಇದಕ್ಕಿಂತ ಮೇಲ್ಪಟ್ಟು ಹಣ ವಿತ್​ಡ್ರಾ ಮಾಡುವುದಾದರೆ 1,000 ರೂಗೆ ಮೂರೂವರೆ ರೂ ಅಥವಾ 150 ರೂ, ಯಾವುದು ಗರಿಷ್ಠವೋ ಆ ಶುಲ್ಕ ಅನ್ವಯ ಆಗುತ್ತದೆ.

ಇದನ್ನೂ ಓದಿ: ವಿದ್ಯುತ್ ಅವಲಂಬನೆ ತಪ್ಪಿಸುವ ಪಿಎಂ ಕುಸುಮ್ ಯೋಜನೆಗೆ ಕರ್ನಾಟಕದ ರೈತರಿಂದ ನೀರಸ ಪ್ರತಿಕ್ರಿಯೆ; ಏನಿದು ಸ್ಕೀಮ್?

ಬ್ಯಾಂಕ್ ಕಾರ್ಯಾವಧಿ ಹೊರಗೆ, ಅಂದರೆ ಸಂಜೆ 4:30ರಿಂದ ಬೆಳಗ್ಗೆ 9ರವರೆಗೆ ಹಾಗು ಬ್ಯಾಂಕ್ ರಜಾದಿನಗಳಲ್ಲಿ ನೀವು ಕ್ಯಾಷ್ ಅಕ್ಸೆಪ್ಟರ್ ಅಥವಾ ಕ್ಯಾಷ್ ರೀಸೈಕ್ಲರ್ ಮೆಷಿನ್​ಗಳ ಮೂಲಕ ಕ್ಯಾಷ್ ಡೆಪಾಸಿಟ್ ಮಾಡಿದರೆ, ಹಾಗೂ ಒಂದು ತಿಂಗಳಲ್ಲಿ ಈ ರೀತಿಯ ಡೆಪಾಸಿಟ್​ಗಳ ಮೊತ್ತ 10,000 ರೂಗಿಂತ ಹೆಚ್ಚಾಗಿದ್ದಲ್ಲಿ ಆಗ ಪ್ರತೀ ಡೆಪಾಸಿಟ್​ಗೂ 50 ರೂ ಶುಲ್ಕ ಇರುತ್ತದೆ. ಇದು ರೆಗ್ಯುಲರ್ ಆದ ಕ್ಯಾಷ್ ಟ್ರಾನ್ಸಾಕ್ಷನ್ ಶುಲ್ಕವಲ್ಲದೆ ಹೆಚ್ಚುವರಿಯಾಗಿ ವಿಧಿಸುವ ಶುಲ್ಕ.

ಎಟಿಎಂಗಳಲ್ಲಿ ನಡೆಸುವ ವಹಿವಾಟುಗಳಿಗೆ ಶುಲ್ಕ

ಬೆಂಗಳೂರು ಸೇರಿದಂತೆ ಆರು ಮೆಟ್ರೋ ನಗರಗಳಲ್ಲಿ ಐಸಿಐಸಿಐ ಬ್ಯಾಂಕ್​ದಲ್ಲದ ಎಟಿಎಂಗಳಲ್ಲಿ ತಿಂಗಳಿಗೆ ಮೂರು ಬಾರಿ ಶುಲ್ಕರಹಿತವಾಗಿ ಟ್ರಾನ್ಸಾಕ್ಷನ್ ಮಾಡಬಹುದು. ಅದಕ್ಕಿಂತ ಮೇಲ್ಪಟ್ಟ ಸಂಖ್ಯೆಯಲ್ಲಿ ಕ್ಯಾಷ್ ವಿತ್​ಡ್ರಾ ಮಾಡಿರೆ ಪ್ರತೀ ವಹಿವಾಟಿಗೆ 23 ರೂ ಶುಲ್ಕ ಇರುತ್ತದೆ. ಬ್ಯಾಲನ್ಸ್ ಪರಿಶೀಲನೆ ಇತ್ಯಾದಿ ನಾನ್-ಫೈನಾನ್ಷಿಯಲ್ ಟ್ರಾನ್ಸಾಕ್ಷನ್ ಆದರೆ ಪ್ರತೀ ವಹಿವಾಟಿಗೆ 8.5 ರೂ ಶುಲ್ಕ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:50 pm, Sun, 10 August 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!