ಶಿಖರ್ ಧವನ್, ರಹಾನೆ, ಸ್ಟೀವ್ ಸ್ಮಿತ್, ಅಶ್ವಿನ್ ಸಖತ್ ಸ್ಟೆಪ್ಸ್; ದೆಹಲಿ ಕ್ಯಾಪಿಟಲ್ಸ್ ಟೀಂ ಆಟಗಾರರ ಭರ್ಜರಿ ಡ್ಯಾನ್ಸ್ ನೋಡಿ
ನೃತ್ಯ ಮಾಡಿದವರಲ್ಲಿ ಯಾರು ಸೂಪರ್ ಆಗಿ ನೃತ್ಯ ಮಾಡಿದ್ದಾರೆ ಎಂಬ ನಿಮ್ಮ ಉತ್ತರಗಳನ್ನು ಕಮೆಂಟ್ ಮಾಡಿ ಎಂದು ಅವರು ಬರೆದುಕೊಂಡಿದ್ದಾರೆ. ಸ್ಟೀವ್ ಸ್ಮಿತ್, ಕ್ರಿಸ್ ವೋಕ್ಸ್, ರಿಷಭ್ ಪಂತ್, ಅಜಿಂಕ್ಯ ರಹಾನೆ ಮತ್ತು ರವಿಚಂದ್ರನ್ ಅಶ್ವಿನ್ರಿಗೆ ಟ್ಯಾಗ್ ಮಾಡುವ ಮೂಲಕ ಶಿಖರ್ ಧವನ್ ಪೋಸ್ಟ್ ಹಂಚಿಕೊಂಡಿದ್ದಾರೆ.
ಐಪಿಎಲ್ ಕ್ರಿಕೆಟ್ ಟೂರ್ನಿಯ ಚೆನ್ನೈ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ ಪಡೆಯುವುದರ ಮೂಲಕ ಶನಿವಾರ ದೆಹಲಿ ಕ್ಯಾಪಿಟಲ್ಸ್ ಪಂದ್ಯವನ್ನು ಗೆದ್ದಿತ್ತು. ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿ, 190 ರನ್ ದಾಖಲಿಸಿ ಭಾರೀ ಜಯಗಳಿಸಿಕೊಂಡಿತ್ತು. ಈ ಬಗ್ಗೆ ಸಂಭ್ರಮ ಹಂಚಿಕೊಂಡಿರುವ ಶಿಖರ್ ಧವನ್ ತಾವು ನೃತ್ಯ ಮಾಡಿದ ವಿಡಿಯೋವನ್ನು ಸೋಮವಾರ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
ಶಿಖರ್ ಧವನ್ ತಮಿಳಿನ ಜನಪ್ರಿಯ ಹಾಡು ‘ವಾಥಿ ಕಮಿಂಗ್’ಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಹಾಡಿನ ಬೀಟ್ಗೆ ಮಸ್ತ್ಆಗಿ ಕುಣಿದ ದೃಶ್ಯವನ್ನು ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಇವರು ನೃತ್ಯ ಮಾಡುವಾಗ ಆಟಗಾರ ಸ್ಟೀವ್ ಸ್ಮಿತ್, ಕ್ರಿಸ್ ವೋಕ್ಸ್, ರಿಷಭ್ ಪಂತ್, ಅಜಿಂಕ್ಯ ರಹಾನೆ ಮತ್ತು ರವಿಚಂದ್ರನ್ ಅಶ್ವಿನ್ ಎಲ್ಲರೂ ‘ಮಾಸ್ಟರ್’ ಚಿತ್ರದ ಹಾಡಿನ ಡ್ಯಾನ್ಸ್ಗೆ ಸಾತ್ ನೀಡಿದ್ದಾರೆ.
ನೃತ್ಯ ಮಾಡಿದವರಲ್ಲಿ ಯಾರು ಸೂಪರ್ ಆಗಿ ನೃತ್ಯ ಮಾಡಿದ್ದಾರೆ ಎಂಬ ನಿಮ್ಮ ಉತ್ತರಗಳನ್ನು ಕಮೆಂಟ್ ಮಾಡಿ ಎಂದು ಅವರು ಬರೆದುಕೊಂಡಿದ್ದಾರೆ. ಸ್ಟೀವ್ ಸ್ಮಿತ್, ಕ್ರಿಸ್ ವೋಕ್ಸ್, ರಿಷಭ್ ಪಂತ್, ಅಜಿಂಕ್ಯ ರಹಾನೆ ಮತ್ತು ರವಿಚಂದ್ರನ್ ಅಶ್ವಿನ್ರಿಗೆ ಟ್ಯಾಗ್ ಮಾಡುವ ಮೂಲಕ ಶಿಖರ್ ಧವನ್ ಪೋಸ್ಟ್ ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರು ಅಂದವಾಗಿ ಸ್ಟೆಪ್ ಹಾಕಿದ್ದಾರೆ. ಇನ್ನಿತರರು ಕ್ರಿಸ್ ವೋಕ್ಸ್ ಅವರೊಂದಿಗೆ ನೃತ್ಯ ಮಾಡಿದ್ದಾರೆ ಎಂದು ಅಭಿಮಾನಿಗಳು ಪೋಸ್ಟ್ನಲ್ಲಿ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: 2021 ರ ಐಪಿಎಲ್ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಭ್ ಪಂತ್ ಮುನ್ನಡೆಸಲಿದ್ದಾರೆ!
IPL 2021: ಡೆಲ್ಲಿ ಕ್ಯಾಪಿಟಲ್ಸ್ಗೆ ಆಘಾತ! ಕೊರೊನಾಗೆ ತುತ್ತಾದ ಅಕ್ಷರ್ ಪಟೇಲ್.. ಆತಂಕದಲ್ಲಿ ಧವನ್, ಪಂತ್