Jio IPL Plans: ಐಪಿಎಲ್​ ವೀಕ್ಷಿಸುವ ಜಿಯೋ ಚಂದಾದಾರರಿಗೆ ಭರ್ಜರಿ ಕೊಡುಗೆ; ರೀಚಾರ್ಜ್​ ಮೇಲೆ ಉಚಿತ 10 ಜಿಬಿ ಡೇಟಾ ನೀಡಲಿದೆ ಜಿಯೋ

Reliance Jio IPL Offer: ಜಿಯೋ ಬಳಕೆದಾರರು ಐಪಿಎಲ್ 2021 ಪಂದ್ಯಗಳನ್ನು ಆನ್‌ಲೈನ್‌ನಲ್ಲಿ ₹401, ₹598 ಮತ್ತು ₹2,599 ರೀಚಾರ್ಜ್ ಮೂಲಕ ಹಾಗೂ ₹499ರಿಂದ ಪ್ರಾರಂಭವಾಗುವ ಆಡ್-ಆನ್ ರೀಚಾರ್ಜ್​ಗಳಲ್ಲಿ ಉಚಿತವಾಗಿ ವೀಕ್ಷಿಸಬಹುದು. ಈ ಜಿಯೋ ರೀಚಾರ್ಜ್ ಪ್ಯಾಕ್‌ಗಳು ಡಿಸ್ನಿ + ಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆ ಹೊಂದಿವೆ.

Jio IPL Plans: ಐಪಿಎಲ್​ ವೀಕ್ಷಿಸುವ ಜಿಯೋ ಚಂದಾದಾರರಿಗೆ ಭರ್ಜರಿ ಕೊಡುಗೆ; ರೀಚಾರ್ಜ್​ ಮೇಲೆ ಉಚಿತ 10 ಜಿಬಿ ಡೇಟಾ ನೀಡಲಿದೆ ಜಿಯೋ
ಇಂಡಿಯನ್ ಪ್ರೀಮಿಯರ್ ಲೀಗ್​ ಶುರುವಾಗಲು ಇನ್ನು ಒಂದು ವಾರ ಮಾತ್ರ ಉಳಿದಿದೆ. ಅತ್ತ ಸ್ಮಾರ್ಟ್​ಫೋನ್ ಬಳಕೆದಾರರು ಮೊಬೈಲ್​ನಲ್ಲೇ ಐಪಿಎಲ್ ವೀಕ್ಷಿಸಲು​ ರಿಚಾರ್ಜ್​ಗಳನ್ನು ಎದುರು ನೋಡುತ್ತಿದ್ದಾರೆ. ಇದರ ಬೆನ್ನಲ್ಲೇ ಜಿಯೋ ತನ್ನ ರಿಚಾರ್ಜ್​ ಪ್ಯಾಕ್​ನಲ್ಲಿ ಉಚಿತ ಡ್ನಿಸ್ನಿ ಹಾಟ್​ ಸ್ಟಾರ್ ಸಬ್ಸ್​ಕ್ರಿಪ್ಷನ್​ ಅನ್ನು ಘೋಷಿಸಿದೆ. ಇದಕ್ಕಾಗಿ ಈ ಹಿಂದಿನಂತೆ ಜಿಯೋ ಮೂರು ರಿಚಾರ್ಜ್ ಪ್ಲ್ಯಾನ್​ಗಳನ್ನು ಮುಂದಿಟ್ಟಿದೆ. ಜಿಯೋ ಪರಿಚಯಿಸಿರುವ ಮೂರು ಪ್ಲ್ಯಾನ್​ಗಳು ಈ ಕೆಳಗಿನಂತಿವೆ.
Follow us
Skanda
| Updated By: preethi shettigar

Updated on: Apr 09, 2021 | 12:52 PM

ಕ್ರಿಕೆಟ್​ ಪ್ರೇಮಿಗಳಿಗೆ ರಸದೌತಣ ನೀಡುವ ಹಬ್ಬ ಎಂದೇ ಹೆಸರುವಾಸಿಯಾದ ಐಪಿಎಲ್​ ಇಂದಿನಿಂದ ಆರಂಭವಾಗುತ್ತಿದೆ. ಕೆಲ ವರ್ಷಗಳ ಹಿಂದೆ ಟಿವಿ ಮುಂದೆ ಕುಳಿತು ಕ್ರಿಕೆಟ್​ ನೋಡುವುದೇ ದೊಡ್ಡ ಸಂಭ್ರಮವಾಗಿತ್ತು. ಆದರೆ, ಇಂಟರ್ನೆಟ್ ಕ್ರಾಂತಿ ಆದ ನಂತರ ಈಗಂತೂ ಎಲ್ಲರೂ ಮೊಬೈಲ್​ನಲ್ಲಿಯೇ, ತಾವಿದ್ದ ಜಾಗದಲ್ಲೇ ಪಂದ್ಯಾವಳಿಗಳನ್ನು ವೀಕ್ಷಿಸಿ ಆನಂದಿಸುತ್ತಾರೆ. ಇಂತಹ ಕ್ರಿಕೆಟ್ ಪ್ರೇಮಿಗಳಿಗಾಗಿಯೇ ಟೆಲಿಕಾಂ ಕ್ಷೇತ್ರದ ದೈತ್ಯ ರಿಲಯನ್ಸ್ ಜಿಯೋ ಕಂಪೆನಿ ಹೊಸ ಯೋಜನೆಗಳನ್ನು ಜಾರಿಗೊಳಿಸಿದೆ

ಐಪಿಎಲ್​ 2021 ಪಂದ್ಯಗಳನ್ನು ವೀಕ್ಷಿಸಲು ಜಿಯೋ ತನ್ನ ಗ್ರಾಹಕರಿಗೆ ರೀಚಾರ್ಜ್​ ಮೇಲೆ ಹೆಚ್ಚುವರಿಯಾಗಿ ಉಚಿತ 10 ಜಿಬಿ ಡೇಟಾ ಮತ್ತು ಡಿಸ್ನಿ + ಹಾಟ್​ಸ್ಟಾರ್ ಚಂದಾದಾರಿಕೆ ನೀಡಲಿದೆ. ಇದು ಆಯ್ದ ಕೆಲ ಜಿಯೋ ಪ್ರೀಪೇಯ್ಡ್​ ಪ್ಲಾನ್​ಗಳಿಗೆ ಮಾತ್ರ ಅನ್ವಯವಾಗಲಿದೆ. ಇದರೊಂದಿಗೆ ಜಿಯೋ ಕ್ರಿಕೆಟ್​ ಆ್ಯಪ್​ ಎಂಬ ಹೊಸ ಆ್ಯಪ್​ ಕೂಡಾ ಬಿಡುಗಡೆಯಾಗಿದ್ದು, ಜಿಯೋ ಫೋನ್​ ಬಳಸುವ ಎಲ್ಲಾ ಗ್ರಾಹಕರಿಗೂ ಇದು ಲಭ್ಯವಿರಲಿದೆ. ಇದರಲ್ಲಿ ಕ್ರಿಕೆಟ್​ ಸ್ಕೋರ್ ನೋಡುವ ಜೊತೆಗೆ, ಕೆಲ ಸ್ಪರ್ಧೆಗಳಲ್ಲಿ ಭಾಗವಹಿಸಲು ಗ್ರಾಹಕರಿಗೆ ಅವಕಾಶವನ್ನೂ ನೀಡಲಾಗಿದೆ. ಐಪಿಎಲ್​ ಸಂದರ್ಭದಲ್ಲಿ ಜಿಯೋ ಜಾರಿಗೊಳಿಸಿದ ಯೋಜನೆಗಳು ಯಾವುವು? ಅವುಗಳಿಂದ ಬಳಕೆದಾರರಿಗೆ ಸಿಗುವ ಲಾಭಗಳೇನು? ಎಷ್ಟು ಹಣ ಪಾವತಿಸಿದರೆ ಉತ್ತಮ? ಯಾವುದು ಒಳ್ಳೆಯ ಯೋಜನೆ? ಎಂಬೆಲ್ಲಾ ಗೊಂದಲಗಳು ನಿಮಗಿದ್ದರೆ ಜಿಯೋ ಚಾಲ್ತಿಯಲ್ಲಿಟ್ಟಿರುವ ಕೆಲ ಯೋಜನೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಐಪಿಎಲ್​ ವೀಕ್ಷಿಸಲು ಜಿಯೋ ಯೋಜನೆಗಳು (ಬೆಲೆ ₹401ರಿಂದ ಪ್ರಾರಂಭ) ಜಿಯೋ ಬಳಕೆದಾರರು ಐಪಿಎಲ್ 2021 ಪಂದ್ಯಗಳನ್ನು ಆನ್‌ಲೈನ್‌ನಲ್ಲಿ ₹401, ₹598 ಮತ್ತು ₹2,599 ರೀಚಾರ್ಜ್ ಮೂಲಕ ಹಾಗೂ ₹499 ರಿಂದ ಪ್ರಾರಂಭವಾಗುವ ಆಡ್-ಆನ್ ರೀಚಾರ್ಜ್​ಗಳಲ್ಲಿ ಉಚಿತವಾಗಿ ವೀಕ್ಷಿಸಬಹುದು. ಈ ಜಿಯೋ ರೀಚಾರ್ಜ್ ಪ್ಯಾಕ್‌ಗಳು ಡಿಸ್ನಿ + ಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆ ಹೊಂದಿವೆ.

ಪ್ರಿಪೇಯ್ಡ್ ಗ್ರಾಹಕರಿಗಾಗಿ ಜಿಯೋ ಯೋಜನೆಗಳ ಸಂಪೂರ್ಣ ವಿವರಗಳು ಇಲ್ಲಿವೆ ಜಿಯೋ ₹401 ರೀಚಾರ್ಜ್ ಯೋಜನೆ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ 28 ದಿನಗಳ ಮಾನ್ಯತೆ ದಿನಕ್ಕೆ 3 ಜಿಬಿ ಡೇಟಾ + ಉಚಿತ 6 ಜಿಬಿ ಡೇಟಾ ಉಚಿತ ಕರೆ ಸೌಲಭ್ಯ, ದಿನಕ್ಕೆ 100 ಎಸ್‌ಎಂಎಸ್

ಜಿಯೋ ₹598 ರೀಚಾರ್ಜ್ ಯೋಜನೆ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ 56 ದಿನಗಳ ಮಾನ್ಯತೆ 112 ಜಿಬಿ ಡೇಟಾ ಉಚಿತ ಕರೆ ಸೌಲಭ್ಯ, ದಿನಕ್ಕೆ 100 ಎಸ್‌ಎಂಎಸ್

ಜಿಯೋ ₹2,599 ರೀಚಾರ್ಜ್ ಯೋಜನೆ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ 365 ದಿನಗಳ ಮಾನ್ಯತೆ ದಿನಕ್ಕೆ 2 ಜಿಬಿ ಡೇಟಾ + ಉಚಿತ 10 ಜಿಬಿ ಡೇಟಾ ಉಚಿತ ಕರೆ ಸೌಲಭ್ಯ, ದಿನಕ್ಕೆ 100 ಎಸ್‌ಎಂಎಸ್

ಜಿಯೋ ₹612 ಆಡ್-ಆನ್ ರೀಚಾರ್ಜ್ ಯೋಜನೆ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ 72 ಜಿಬಿ ಡೇಟಾ 6,000 ನಿಮಿಷಗಳ ಜಿಯೋ ಕರೆಗಳು ಪ್ರಾಥಮಿಕ ಪ್ಯಾಕ್‌ನ ಸಿಂಧುತ್ವದವರೆಗೆ ಇರುತ್ತದೆ

ಜಿಯೋ ₹1,004 ಆಡ್-ಆನ್ ರೀಚಾರ್ಜ್ ಯೋಜನೆ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ 120 ದಿನಗಳ ಸಿಂಧುತ್ವ 200 ಜಿಬಿ ಡೇಟಾ

ಜಿಯೋ ₹1,206 ಆಡ್-ಆನ್ ರೀಚಾರ್ಜ್ ಯೋಜನೆ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆ 180 ದಿನಗಳ ಮಾನ್ಯತೆ 240 ಜಿಬಿ ಡೇಟಾ

ಇದನ್ನೂ ಓದಿ: Ishan Kishan IPL 2021 MI Team Player: ದ್ರಾವಿಡ್​ ಪಟ್ಟಾ ಶಿಷ್ಯ ಕಿಶನ್​.. ಈ ಬಾರಿಯ ಐಪಿಎಲ್​ನ ಪ್ರಮುಖ ಕೇಂದ್ರ ಬಿಂದು! 

Reliance Jio fiber schemes: ಜಿಯೋ ಫೈಬರ್​ನಿಂದ 14 ಅದ್ಭುತ ಪ್ಲ್ಯಾನ್​ಗಳು, ಹೆಚ್ಚುವರಿ ವ್ಯಾಲಿಡಿಟಿ

(Jio offers upto 10 GB Free Data on Disney Plus Hotstar pack for IPL 2021)

Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ