ಸೀಮಿತ ಓವರ್‌ಗಳ ಸ್ವರೂಪಗಳಲ್ಲಿ ಟೀಮ್ ಇಂಡಿಯಾದ ಭರವಸೆಯ ಲೆಗ್ ಸ್ಪಿನ್ನರ್ ಯಜ್ವೇಂದ್ರ ಚಹಲ್ ಟಿ 20 ಪಂದ್ಯಗಳಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು. ಹರಿಯಾಣದ ಸ್ಪಿನ್ನರ್, ಚಾಹಲ್ ಅವರು 2009 ರಲ್ಲಿ ನಡೆದ ರಾಷ್ಟ್ರೀಯ ಅಂಡರ್ -19 ಕೂಚ್ ಬೆಹರ್ ಟ್ರೋಫಿಯಲ್ಲಿ 34 ವಿಕೆಟ್ ಪಡೆದಾಗ ಮೊದಲ ಬಾರಿಗೆ ಗಮನ ಸೆಳೆದರು. ಜೊತೆಗೆ ಪಂದ್ಯಾವಳಿಯಲ್ಲಿ ಪ್ರಮುಖ ವಿಕೆಟ್ ಪಡೆದವರಾಗಿ ಗಮನ ಸೆಳೆದರು. 2011 ರಲ್ಲಿ ಮುಂಬೈ ಇಂಡಿಯನ್ಸ್ ಸ್ಕ್ವಾಡ್‌ನ ಭಾಗವಾದ ಚಹಲ್, ಚಾಂಪಿಯನ್ಸ್ ಲೀಗ್ ಟಿ 20 ಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಲ್ಲದೆ ಫೈನಲ್‌ನಲ್ಲೂ ಸಹ ಆಡಿದ್ದರು.
2014 ರಿಂದ ಆರ್‌ಸಿಬಿಯ ಭಾಗವಾಗಿರುವ ಚಹಲ್ ಅವರು ಲೀಗ್‌ನ 2015 ಮತ್ತು 2016 ರ ಆವೃತ್ತಿಯಲ್ಲಿ 23 ಮತ್ತು 21 ವಿಕೆಟ್‌ಗಳನ್ನು ಪಡೆದು ಮಿಂಚಿದರು. ನಿಯಮಿತ ಅಂತರದಲ್ಲಿ ವಿಕೆಟ್ ಕಬಳಿಸುವ ಮೂಲಕ, ಚಹಲ್ ಅವರು 2016 ರಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಂಡ ಟೀಮ್ ಇಂಡಿಯಾ ಪರ ಚೊಚ್ಚಲ ಪಂದ್ಯವನ್ನಾಡಿದರು ಮತ್ತು ನಂತರ ಇಂಗ್ಲೆಂಡ್ ವಿರುದ್ಧ ಟಿ 20 ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು.
ಜಿಂಬಾಬ್ವೆ ವಿರುದ್ಧ ಮೊದಲನೇ ಏಕದಿನ ಪಂದ್ಯ ಜೂನ್ 11, 2016ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಮೊದಲನೇ ಏಕದಿನ ಪಂದ್ಯದ ಮೂಲಕ ಅಂತರರಾಷ್ತ್ರೀಯ ಕ್ರಿಕೆಟ್‍ಗೆ ಪಾದಾರ್ಪನೆ ಮಾಡಿದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ಎಸೆದ 10 ಓವರ್ಗಳಲ್ಲಿ ಕೇವಲ 27 ರನ್ ನೀಡಿ ಒಂದು ವಿಕೆಟ್ ಪಡೆದರು. ಜೂನ್ 18, 2016ರಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದ ಮೂಲಕ ಇವರು ಟಿ-20 ಕ್ರಿಕೆಟ್‍ಗೆ ಪಾದಾರ್ಪನೆ ಮಾಡಿದರು. ೦1 ಫೆಬ್ರವರಿ, 2017 ರಲ್ಲಿ ಟಿ-20 ಕ್ರಿಕೆಟ್ ನಲ್ಲಿ 5 ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆ ಪಂದ್ಯದಲ್ಲಿ 25 ರನ್ ನೀಡಿ 6 ವಿಕೆಟ್ಗಳನ್ನ ಪಡೆದರು.
ಐಪಿಎಲ್ನಲ್ಲಿ ಚಹಲ್ ಸಾಧನೆ
ವರ್ಷ | ಪಂದ್ಯ | ಎಸೆತಗಳು | ನೀಡಿರುವ ರನ್ | ಬೆಸ್ಟ್ ಬೌಲಿಂಗ್ | ವಿಕೆಟ್ | ಸರಾಸರಿ | 4 ವಿಕೆಟ್ |
2020 | 15 | 343 | 405 | 3/18 | 21 | 19.28 | 0 |
2019 | 14 | 296 | 386 | 4/38 | 18 | 21 | 1 |
2018 | 14 | 300 | 363 | 2/22 | 12 | 30.25 | 0 |
2017 | 13 | 261 | 333 | 3/16 | 14 | 23.78 | 0 |
2016 | 13 | 295 | 401 | 4/25 | 21 | 19.09 | 1 |
2015 | 15 | 281 | 415 | 3/40 | 23 | 18.04 | 0 |
2014 | 14 | 330 | 386 | 2/17 | 12 | 32.16 | 0 |
2013 | 1 | 24 | 34 | 0/34 | 0 | 0 |
ಅಂತರರಾಷ್ಟ್ರೀಯ ಪಂದ್ಯದಲ್ಲಿ ಚಹಲ್
ಆವೃತ್ತಿ | ಪಂದ್ಯ | ಎಸೆತ | ನೀಡಿರುವ ರನ್ | ವಿಕೆಟ್ | ಬೆಸ್ಟ್ ಬೌಲಿಂಗ್ | ಸರಾಸರಿ | 5 ವಿಕೆಟ್ |
ಏಕದಿನ | 54 | 2893 | 2511 | 92 | 6/42 | 27.29 | 2 |
T20 | 48 | 1125 | 1575 | 62 | 6/25 | 25.4 | 1 |