Reliance Jio fiber schemes: ಜಿಯೋ ಫೈಬರ್ನಿಂದ 14 ಅದ್ಭುತ ಪ್ಲ್ಯಾನ್ಗಳು, ಹೆಚ್ಚುವರಿ ವ್ಯಾಲಿಡಿಟಿ
ರಿಲಯನ್ಸ್ ಜಿಯೋ ಫೈಬರ್ನಿಂದ ಬ್ರಾಡ್‌ಬ್ಯಾಂಡ್ ಯೋಜನೆ ಮೇಲೆ ಹೆಚ್ಚುವರಿ ವ್ಯಾಲಿಡಿಟಿ ಮತ್ತು ಆಫರ್ಗಳನ್ನು ಘೋಷಣೆ ಮಾಡಲಾಗಿದೆ. ಒಟ್ಟು 14 ಪ್ಲ್ಯಾನ್ಗಳ ಬಗ್ಗೆ ಮಾಹಿತಿ ಇಲ್ಲಿದೆ.
ರಿಲಯನ್ಸ್ ಜಿಯೋ ವಾರ್ಷಿಕ ಮತ್ತು ಅರ್ಧ ವಾರ್ಷಿಕ ಬ್ರಾಡ್‌ಬ್ಯಾಂಡ್ ಯೋಜನೆಗಳಲ್ಲಿ ಉಚಿತ ಹೈಸ್ಪೀಡ್ ಇಂಟರ್ನೆಟ್ ಮತ್ತು ಕರೆ ಸೌಲಭ್ಯಗಳೊಂದಿಗೆ ಇನ್ನೂ ಅನೇಕ ಅನುಕೂಲಗಳನ್ನು ನೀಡುತ್ತಿದೆ. ಕಂಪೆನಿಯು ತನ್ನ ದೀರ್ಘಾವಧಿಯ ಯೋಜನೆಗಳಲ್ಲಿ 15 ರಿಂದ 30 ದಿನಗಳ ಹೆಚ್ಚುವರಿ ವ್ಯಾಲಿಡಿಟಿಯನ್ನು ಸಹ ನೀಡುತ್ತಿದ್ದು, ಈ ಅನುಕೂಲ ಪಡೆಯುವುದಕ್ಕೆ ಬಳಕೆದಾರರು 6 ತಿಂಗಳು ಅಥವಾ 12 ತಿಂಗಳ ಮೊತ್ತವನ್ನು ಒಂದೇ ಸಲಕ್ಕೆ ಪಾವತಿಸಬೇಕಾಗುತ್ತದೆ. ಇದೀಗ ಹೆಚ್ಚುವರಿ ವ್ಯಾಲಿಡಿಟಿ ನೀಡುವ ಜಿಯೋ ಫೈಬರ್ ಪ್ಲ್ಯಾನ್ಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಜಿಯೋದ 2394 ರೂಪಾಯಿ ಯೋಜನೆಯು ಮೊದಲು 180 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿತ್ತು. ಆದರೆ ಈಗ 195 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಈ ಯೋಜನೆಯಲ್ಲಿ 30mbps ವೇಗದಲ್ಲಿ ಅನಿಯಮಿತ ಡೇಟಾ ಮತ್ತು ಅನಿಯಮಿತ ಕರೆಗಳನ್ನು ಪಡೆಬಹುದು.
4,194 ರೂ ಯೋಜನೆ: ಈ ಯೋಜನೆಯಲ್ಲಿ 100Mbps ವೇಗದಲ್ಲಿ ಅನಿಯಮಿತ ಡೇಟಾ ಮತ್ತು ಅನಿಯಮಿತ ಕರೆ ಪಡೆಯಬಹುದು. ಈ ಮೊದಲು, ಈ ಯೋಜನೆಗೆ 180 ದಿನಗಳ ವ್ಯಾಲಿಡಿಟಿ ಬರುತ್ತಿತ್ತು. ಆದರೆ ಈಗ ಇದರಲ್ಲಿ 195 ದಿನಗಳ ವ್ಯಾಲಿಡಿಟಿ ಪಡೆಯಬಹುದು.
5,994 ರೂ. ಯೋಜನೆ: ಈ ಯೋಜನೆಯ ವ್ಯಾಲಿಡಿಟಿ 180 ದಿನಗಳೊಂದಿಗೆ ಬರುತ್ತಿತ್ತು. ಆದರೆ ಈಗ ಅದಕ್ಕೆ 15 ದಿನಗಳ ಹೆಚ್ಚಿನ ವ್ಯಾಲಿಡಿಟಿ ದೊರೆಯುತ್ತದೆ. 150Mbps ವೇಗದ ಈ ಯೋಜನೆಯಲ್ಲಿ, ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳ ಸೌಲಭ್ಯವನ್ನು ಸಹ ಪಡೆಯಬಹುದು. ಇದಲ್ಲದೆ, 14 ಅಪ್ಲಿಕೇಷನ್‌ಗಳ ಒಟಿಟಿ ಚಂದಾದಾರಿಕೆ ಕೂಡ ದೊರೆಯುತ್ತದೆ.
8,994 ರೂ. ಯೋಜನೆ: ಈ ಯೋಜನೆಯಲ್ಲಿ 300Mbps ವೇಗದಲ್ಲಿ ಅನಿಯಮಿತ ಡೇಟಾ ಮತ್ತು ಕರೆ ಮಾಡುವ ಲಾಭವನ್ನು ಪಡೆಯಬಹುದು. ಇದಲ್ಲದೆ ಉಚಿತ ಒಟಿಟಿ ಚಂದಾದಾರಿಕೆ ಲಾಭವನ್ನು ಸಹ ಪಡೆಯಬಹುದು. ಜತೆಗೆ 180 ದಿನಗಳ ಬದಲಿಗೆ 195 ದಿನಗಳ ವ್ಯಾಲಿಡಿಟಿ ಸಿಗಲಿದೆ.
14,994 ರೂ. ಯೋಜನೆ: ಈ ಯೋಜನೆಯಲ್ಲಿ 180 ದಿನಗಳ ಬದಲಿಗೆ 195 ದಿನಗಳ ವ್ಯಾಲಿಡಿಟಿ ಸಿಗಲಿದೆ. ಅಲ್ಲದೆ, 500Mbps ವೇಗದೊಂದಿಗೆ ಅನಿಯಮಿತ ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯ ದೊರೆಯಲಿದೆ. ಈ ಯೋಜನೆಯೊಂದಿಗೆ 15 ಅಪ್ಲಿಕೇಷನ್‌ಗಳಿಗೆ ಒಟಿಟಿ ಚಂದಾದಾರಿಕೆ ಪಡೆಯಬಹುದು.
23,994 ರೂ. ಯೋಜನೆ: ಈ ಯೋಜನೆಯಲ್ಲಿ 1 ಜಿಬಿಪಿಎಸ್ ವೇಗದಲ್ಲಿ ಅನಿಯಮಿತ ಡೇಟಾ, ಕರೆ ಮತ್ತು ಒಟಿಟಿ ಚಂದಾದಾರಿಕೆಯನ್ನು ಪಡೆಯಬಹುದು. ಇದರೊಂದಿಗೆ 195 ದಿನಗಳ ವ್ಯಾಲಿಡಿಟಿಯನ್ನು ಸಹ ಪಡೆಯಬಹುದು.
50,994 ರೂ. ಯೋಜನೆ: ಈ ಯೋಜನೆಯಲ್ಲಿ 195 ದಿನಗಳ ವ್ಯಾಲಿಡಿಟಿ ಮತ್ತು ಅನಿಯಮಿತ ಕರೆಯೊಂದಿಗೆ, 1 ಜಿಬಿಪಿಎಸ್ ವೇಗದಲ್ಲಿ 6600 ಜಿಬಿ ಡೇಟಾವನ್ನು ಪಡೆಯಬಹುದು. ಇದಲ್ಲದೆ, ಕೆಲವು ಜನಪ್ರಿಯ ಒಟಿಟಿ ಸೇವೆಯ ಲಾಭವೂ ಸಿಗಲಿದೆ.
ಈ ಕೆಳಕಂಡ ಯೋಜನೆಗಳಿಗೆ 30 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಲಭ್ಯವಿದೆ 4,788 ರೂ. ಯೋಜನೆ: ಇದರಲ್ಲಿ 30 ದಿನಗಳ ಹೆಚ್ಚಿನ ವ್ಯಾಲಿಡಿಟಿ ಪಡೆಯಬಹುದು ಮತ್ತು ಒಟ್ಟು 390 ದಿನಗಳವರೆಗೆ ಈ ಪ್ಲ್ಯಾನ್ ಆನಂದಿಸಬಹುದು. 30Mbps ವೇಗದೊಂದಿಗೆ ಡೇಟಾ ಮತ್ತು ಅನಿಯಮಿತ ಕರೆ ಅನುಕೂಲಗಳನ್ನು ಇದು ಹೊಂದಿದೆ.
8,388 ರೂ.ಗಳ ಯೋಜನೆ: 390 ದಿನಗಳವರೆಗೆ ಈ ಯೋಜನೆಯನ್ನು ಸಹ ಆನಂದಿಸಬಹುದು. ಇದರಲ್ಲಿ 100mbps ವೇಗದಲ್ಲಿ ಅನಿಯಮಿತ ಡೇಟಾ ಮತ್ತು ಕರೆ ಅನುಕೂಲಗಳು ದೊರೆಯುತ್ತವೆ.
11,988 ರೂ. ಯೋಜನೆ: ಈ ಯೋಜನೆಯಲ್ಲಿ 390 ದಿನಗಳವರೆಗೆ 150mbps ವೇಗದಲ್ಲಿ ಅನಿಯಮಿತ ಡೇಟಾ ಮತ್ತು ಕರೆ ಅನುಕೂಲಗಳನ್ನು ಪಡೆಯಬಹುದು. ಇದಕ್ಕೂ ಮೊದಲು ಈ ಪ್ಲ್ಯಾನ್ 360 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತಿತ್ತು.
17,988 ಯೋಜನೆ: ಇದಕ್ಕೂ ಮೊದಲು ಈ ಪ್ಲ್ಯಾನ್ ವ್ಯಾಲಿಡಿಟಿ 360 ದಿನ ಇತ್ತು. ಆದರೆ ಈಗ 390 ದಿನಗಳವರೆಗೆ ಪಡೆಯಬಹುದು. ಇದು ಅನಿಯಮಿತ ಕರೆ ಮತ್ತು 300Mbps ವೇಗದೊಂದಿಗೆ ಅನಿಯಮಿತ ಡೇಟಾವನ್ನು ನೀಡುತ್ತದೆ. ಇದರೊಂದಿಗೆ ಒಟಿಟಿ ಚಂದಾದಾರಿಕೆ ಲಾಭವನ್ನು ಸಹ ಪಡೆಯಬಹುದು.
29,988 ರೂ.ಗಳ ಯೋಜನೆ: ಈ ಯೋಜನೆಯಲ್ಲಿ 390 ದಿನಗಳವರೆಗೆ 500Mbps ವೇಗದಲ್ಲಿ ಅನಿಯಮಿತ ಡೇಟಾ ಮತ್ತು ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳನ್ನು ಮಾಡಬಹುದು. ಇದಲ್ಲದೆ, ಒಟಿಟಿ ಚಂದಾದಾರಿಕೆಯನ್ನು ಸಹ ಪಡೆಯಬಹುದು.
47,988 ರೂ. ಯೋಜನೆ: ಈ ಯೋಜನೆಯಲ್ಲಿ 1 ಜಿಬಿಪಿಎಸ್ ವೇಗದಲ್ಲಿ ಅನಿಯಮಿತ ಡೇಟಾ ಮತ್ತು ಕರೆ ಮಾಡಬಹುದು. ಅಲ್ಲದೆ, ಒಟಿಟಿ ಚಂದಾದಾರಿಕೆಯನ್ನು ಸಹ ಸಿಗುತ್ತದೆ.
1,01,988 ರೂ. ಯೋಜನೆ: ಈ ಯೋಜನೆಯಲ್ಲಿ 1 ಜಿಬಿಪಿಎಸ್ ವೇಗದಲ್ಲಿ 6600 ಜಿಬಿ ಹೈಸ್ಪೀಡ್ ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯ ದೊರೆಯುತ್ತದೆ. ಅಲ್ಲದೆ, ಈ ಯೋಜನೆಯಲ್ಲಿ ಒಟಿಟಿ ಅಪ್ಲಿಕೇಷನ್‌ಗಳ ಚಂದಾದಾರಿಕೆ ಸಹ ಪಡೆಯಬಹುದು.
ಇದನ್ನೂ ಓದಿ: Reliance Jio Phone Prepaid Plan: ಜಿಯೋದಿಂದ 5 ಹೊಸ ಪ್ರಿಪೇಯ್ಡ್ ಪ್ಲ್ಯಾನ್ ಆರಂಭ; ರೂ. 22 ಕನಿಷ್ಠ
(Here is the Reliance Jio fiber broadband various schemes with extra validity and data.)