AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Reliance Jio Phone Prepaid Plan: ಜಿಯೋದಿಂದ 5 ಹೊಸ ಪ್ರಿಪೇಯ್ಡ್ ಪ್ಲ್ಯಾನ್ ಆರಂಭ; ರೂ. 22 ಕನಿಷ್ಠ

ರಿಲಯನ್ಸ್ ಜಿಯೋ ಫೋನ್ ಗ್ರಾಹಕರಿಗಾಗಿ 5 ಪ್ರೀಪೇಯ್ಡ್ ಪ್ಲ್ಯಾನ್​ಗಳನ್ನು ಪರಿಚಯಿಸಲಾಗಿದೆ. ಅವುಗಳ ಬಗ್ಗೆ ಸಮಗ್ರವಾದ ಮಾಹಿತಿ ಈ ಲೇಖನದಲ್ಲಿ ಇದ್ದು, ಕನಿಷ್ಠ ರೂ. 22ರಿಂದ ಪ್ಲ್ಯಾನ್ ಆರಂಭವಾಗುತ್ತದೆ.

Reliance Jio Phone Prepaid Plan: ಜಿಯೋದಿಂದ 5 ಹೊಸ ಪ್ರಿಪೇಯ್ಡ್ ಪ್ಲ್ಯಾನ್ ಆರಂಭ; ರೂ. 22 ಕನಿಷ್ಠ
ಜಿಯೋ 75 ರೂ. ಪ್ಲ್ಯಾನ್: ಈ ಪ್ಲ್ಯಾನ್​ನಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯ ದೊರೆಯಲಿದೆ. ಜೊತೆಗೆ ಪ್ರತಿದಿನ 50 ಉಚಿತ SMS ಸಿಗಲಿದೆ. ಇನ್ನು ಈ ಪ್ಲ್ಯಾನ್​ನಲ್ಲಿ 200MB ಬೂಸ್ಟರ್ ಜೊತೆಗೆ 3GB ಡೇಟಾ ಸಿಗಲಿದೆ.
Srinivas Mata
| Edited By: |

Updated on:Mar 05, 2021 | 3:44 PM

Share

ರಿಲಯನ್ಸ್​ನಿಂದ ಹೊಸ ಜಿಯೋ ಫೋನ್ ಪ್ರಿಪೇಯ್ಡ್ ಪ್ಲ್ಯಾನ್​ಗಳನ್ನು ಆರಂಭಿಸಲಾಗಿದೆ. ರೂ. 22ರಿಂದ ದರ ಶುರುವಾಗುತ್ತದೆ. ಜಿಯೋ ಫೋನ್ ಬಳಕೆದಾರರಿಗೆ 5 ಹೊಸ ಡೇಟಾ ರೀಚಾರ್ಜ್ ಪ್ಲಾನ್​ಗಳನ್ನು ಟೆಲಿಕಾಂ ಆಪರೇಟರ್ ಜಿಯೋ ಸೇರ್ಪಡೆ ಮಾಡಿದ್ದು, ತಲಾ ರೂ. 22, ರೂ. 52, ರೂ. 72, ರೂ. 102 ಹಾಗೂ ರೂ. 152ರ ಪ್ಲ್ಯಾನ್​ಗಳಿವು. ಈ ಪ್ರಿಪೇಯ್ಡ್ ಪ್ಲ್ಯಾನ್​ಗಳ ಜತೆಗೆ 6ಜಿಬಿ ತನಕ ಹೈ ಸ್ಪೀಡ್ ಡೇಟಾ ನೀಡಲಾಗುತ್ತಿದೆ. ಇದರ ಜತೆಗೆ ಹೊಸದಾಗಿ ರೂ. 749ರ ಆಲ್-ಇನ್-ಒನ್ ಜಿಯೋ ಪ್ಲ್ಯಾನ್ ಇದೆ. ಇದರಲ್ಲಿ ಅನಿಯಮಿತ ಕರೆ ಮತ್ತು ಡೇಟಾ ಅನುಕೂಲಗಳಿವೆ.

ಜಿಯೋ ಫೋನ್ ಡೇಟಾ ಪ್ರಿಪೇಯ್ಡ್ ಪ್ಲ್ಯಾನ್​ಗಳಿವು ಪ್ರಿಪೇಯ್ಡ್ ಪ್ಲ್ಯಾನ್ ಮೂಲ ಬೆಲೆ ರೂ. 22ರೊಂದಿಗೆ ಶುರುವಾಗುತ್ತದೆ. ಇದರಲ್ಲಿ 28 ದಿನಗಳಿಗೆ 2 ಜಿಬಿ ಡೇಟಾವನ್ನು ಜಿಯೋಫೋನ್ ಒದಗಿಸುತ್ತದೆ. ಇನ್ನು ರೂ. 52ರ ಡೇಟಾ ರೀಚಾರ್ಜ್ ಪ್ಲ್ಯಾನ್​ಗೆ 6ಜಿಬಿ ಡೇಟಾ 28 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಒಂದು ಸಲ ಈ ಡೇಟಾ ಮುಗಿದು ಹೋದ ಮೇಲೂ ಆನ್​ಲೈನ್​ನಲ್ಲಿ ಕಂಟೆಂಟ್ ಬ್ರೌಸ್ ಮಾಡಬಹುದು. ಆದರೆ ವೇಗ 64kbps ಮಾತ್ರ ಇರುತ್ತದೆ. ಈ ಎರಡೂ ಪ್ಲ್ಯಾನ್​ನಲ್ಲಿ ಜಿಯೋ ಅಪ್ಲಿಕೇಷನ್​ಗಳನ್ನು ಉಚಿತವಾಗಿ ಬಳಸಬಹುದು.

ಜಿಯೋಫೋನ್ ಪ್ಲ್ಯಾನ್​ಗಳಲ್ಲಿ ಕರೆ, ಎಸ್ಸೆಮ್ಮೆಸ್ ಮತ್ತು ಡೇಟಾ ಅನುಕೂಲವೂ ಇರುವಂಥವು: ಕರೆ, ಎಸ್ಸೆಮ್ಮೆಸ್ ಮತ್ತು ಡೇಟಾ ಅನುಕೂಲ ನೀಡುವ ಐದು ಜಿಯೋಫೋನ್ ಪ್ರಿಪೇಯ್ಡ್ ಪ್ಲ್ಯಾನ್​ಗಳಿವೆ. ರೂ. 185 ಜಿಯೋಫೋನ್ ಪ್ಲ್ಯಾನ್. ಇದರಲ್ಲಿ ದಿನಕ್ಕೆ 2ಜಿಬಿ ಡೇಟಾ, ಅಂದರೆ 56 ಜಿಬಿ ಡೇಟಾ ಒಟ್ಟು ಸಿಗುತ್ತದೆ. ಇದರ ಜತೆಗೆ ಅನಿಯಮಿತ ಕರೆ ಮತ್ತು ತಿಂಗಳಿಗೆ 100 ಉಚಿತ ಎಸ್ಸೆಮ್ಮೆಸ್ ಒಳಗೊಂಡಿರುತ್ತದೆ.

ರೂ. 749ರ ಪ್ಲ್ಯಾನ್ 1 ವರ್ಷದ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ದಿನಕ್ಕೆ 2 GB ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು ತಿಂಗಳಿಗೆ 50 ಎಸ್ಸೆಮ್ಮೆಸ್ ಸಿಗುತ್ತದೆ. ಇನ್ನು 159 ರೂಪಾಯಿಯ ಪ್ರಿಪೇಯ್ಡ್ ಜಿಯೋಫೋನ್ ಪ್ಲ್ಯಾನ್​ಗೆ ದಿನಕ್ಕೆ 1 ಜಿಬಿ ಡೇಟಾ, ಅದೇ ರೀತಿ ರೂ. 125ರ ಪ್ಲ್ಯಾನ್​​ಗೆ ದಿನಕ್ಕೆ 0.5 ಜಿಬಿ ಡೇಟಾ ನಿತ್ಯವೂ ದೊರೆಯುತ್ತದೆ. ಅಂತಿಮವಾಗಿ ರೂ. 75ರ ರೀಚಾರ್ಜ್ ಪ್ಲ್ಯಾನ್​ಗೆ ಗ್ರಾಹಕರಿಗೆ ಒಟ್ಟು 3 ಜಿ.ಬಿ. ಡೇಟಾ ಸಿಗುತ್ತದೆ. 28 ದಿನಗಳ ವ್ಯಾಲಿಡಿಟಿ ಹಾಗೂ ಅನಿಯಮಿತ ಧ್ವನಿ ಕರೆ ಮತ್ತು ತಿಂಗಳಿಗೆ ನೂರು ಎಸ್ಸೆಮ್ಮೆಸ್ ಉಚಿತವಾಗಿ ದೊರೆಯುತ್ತದೆ.

ಜಿಯೋಫೋನ್ ಬಳಕೆದಾರರಿಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯೂರಿಟಿ ಮತ್ತು ಜಿಯೋ ನ್ಯೂಸ್ ಸಿಗುತ್ತದೆ. ಎಲ್ಲ ಪ್ಲ್ಯಾನ್​ಗಳ ಜತೆಗೆ ಈ ಅಪ್ಲಿಕೇಷನ್​ಗಳು ಸಿಗುತ್ತವೆ. ರೂ. 72 ಜಿಯೋಫೋನ್ ಡೇಟಾ ಪ್ಯಾಕ್ ಜತೆಗೆ ಪ್ರತಿ ದಿನ 0.5 ಜಿಬಿ ಡೇಟಾ ದೊರೆಯಲಿದ್ದು, 28 ದಿನಗಳ ವ್ಯಾಲಿಡಿಟಿ ಇದೆ. ರೂ. 102ರ ಪ್ಲ್ಯಾನ್​​ನಲ್ಲಿ ನಿತ್ಯವೂ 1ಜಿಬಿ ಡೇಟಾ 28 ದಿನಗಳ ವ್ಯಾಲಿಡಿಟಿ, ರೂ. 152ರ ಪ್ಲ್ಯಾನ್​ಗೆ 2ಜಿಬಿ ಡೇಟಾ 28 ದಿನಗಳ ವ್ಯಾಲಿಡಿಟಿಯೇ ಇದೆ. 152ರ ಪ್ಲ್ಯಾನ್ ಖರೀದಿ ಮಾಡುವವರಿಗೆ 56 ಜಿಬಿ ಡೇಟಾ ದೊರೆಯುತ್ತದೆ. ಇಲ್ಲಿ ಗಮನಿಸಬೇಕಾದದ್ದೇನೆಂದರೆ, ಕಂಪನಿಯಿಂದ ಈ ಡೇಟಾ ಪ್ರಿಪೇಯ್ಡ್ ಪ್ಲ್ಯಾನ್​ಗಳಿಗೆ ಜಿಯೋ ಫೋನ್ ಬಳಕೆದಾರರಿಗೆ ಯಾವುದೇ ವಾಯ್ಸ್ ಕಾಲಿಂಗ್ ಅಥವಾ ಎಸ್ಸೆಮ್ಮೆಸ್ ಅನುಕೂಲ ಸಿಗಲ್ಲ.

ಇದನ್ನೂ ಓದಿ: Reliance Jio Phone Offer: ಮತ್ತೊಂದು ಕ್ರಾಂತಿಗೆ ಸಿದ್ಧವಾಯ್ತು ಜಿಯೋ, ಕೇವಲ ರೂ. 1,999ಕ್ಕೆ 2 ವರ್ಷಗಳ ತನಕ ಅನಿಯಮಿತ ಸೌಲಭ್ಯ

Published On - 3:41 pm, Fri, 5 March 21

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!