ಈ ಯೋಜನೆಯಲ್ಲಿ ಜಿಯೋ ಫೋನ್ ಕೊಳ್ಳುವವರಿಗೆ 24 ತಿಂಗಳು ಅಂದರೆ 2 ವರ್ಷಗಳ ತನಕ ಅನಿಯಮಿತ ಕರೆ ಹಾಗೂ ತಿಂಗಳಿಗೆ 2ಜಿಬಿ ಡೇಟಾ ಸಿಗಲಿದೆ. ಇದಲ್ಲದೇ ಇನ್ನೊಂದು ಯೋಜನೆಯೂ ಲಭ್ಯವಿದ್ದು ₹1,499 ಪಾವತಿಸಿದರೆ ಒಂದು ವರ್ಷದವರೆಗೆ ಅನಿಯಮಿತ ಕರೆ ಹಾಗೂ ತಿಂಗಳಿಗೆ 2ಜಿಬಿ ಡೇಟಾ ದೊರೆಯಲಿದೆ. ಇನ್ನು ಈಗಾಗಲೇ ಜಿಯೋ ಫೋನ್ ಬಳಸುತ್ತಿರುವವರಿಗಾಗಿ ₹749ರ ಯೋಜನೆ ಜಾರಿಗೊಳಿಸಿದ್ದು, ಇದರಡಿಯಲ್ಲಿ ಒಂದು ವರ್ಷದವರೆಗೆ ಅನಿಯಮಿತ ಕರೆ ಹಾಗೂ ತಿಂಗಳಿಗೆ 2ಜಿಬಿ ಡೇಟಾ ದೊರೆಯಲಿದೆ.
ಸದರಿ ಯೋಜನೆಗಳ ಮಾಹಿತಿ ನೀಡಿರುವ ರಿಲಯನ್ಸ್ ಜಿಯೋ ಸಂಸ್ಥೆ, ನಾವು ನಮ್ಮ ಪ್ರತಿಸ್ಪರ್ಧಿಗಳಿಗಿಂತ ಅತ್ಯಂತ ಕಡಿಮೆ ದರದಲ್ಲಿ ಸೇವೆ ಒದಗಿಸುತ್ತಿದ್ದೇವೆ. ಇದೇ ಸೌಲಭ್ಯಗಳನ್ನು ಪಡೆಯಲು ಬೇರೆ ನೆಟ್‌ವರ್ಕ್‌ಗಳ ಗ್ರಾಹಕರು ಎರಡೂವರೆ ಪಟ್ಟು ಜಾಸ್ತಿ ಮೊತ್ತ ತೆರುತ್ತಿದ್ದಾರೆ. ದೇಶದಲ್ಲಿ ಇನ್ನೂ 3 ಕೋಟಿಯಷ್ಟು ಜನ 2ಜಿ ಬಳಸುತ್ತಿದ್ದು, 2ಜಿ ಮುಕ್ತ ಭಾರತದ ಕನಸಿನೊಂದಿಗೆ ನಾವು ಈ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ರಿಲಯನ್ಸ್ ಜಿಯೋ ಸಂಸ್ಥೆಯ ನಿರ್ದೇಶಕ ಆಕಾಶ್ ಅಂಬಾನಿ, ತಂತ್ರಜ್ಞಾನ ಮುಂದುವರಿದು 5ಜಿ ಯುಗದತ್ತ ಹೊರಳುತ್ತಿರುವಾಗಲೂ ನಮ್ಮ ದೇಶದ ಅನೇಕರು ಇನ್ನೂ 2ಜಿ ಜಾಲದಲ್ಲೇ ಸಿಲುಕಿಕೊಂಡಿದ್ಧಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಜಿಯೋ ದೊಡ್ಡ ಕ್ರಾಂತಿಯನ್ನೇ ಮಾಡಿ ಬಹುಪಾಲು ಜನರು ಇಂಟರ್ನೆಟ್ ಯುಗಕ್ಕೆ ಕಾಲಿಡುವಂತೆ ಮಾಡಿದೆ. ಅಷ್ಟಾದರೂ ಇನ್ನೂ ಸುಮಾರು 3 ಕೋಟಿ ಗ್ರಾಹಕರು 2ಜಿಯಲ್ಲೇ ಇದ್ದಾರೆ. ಹೀಗಾಗಿ ಈ ಡಿಜಿಟಲ್ ಡಿವೈಡ್ ಹೋಗಲಾಡಿಸಲು ಜಿಯೋ ಸಂಸ್ಥೆ ಈಗ ಮತ್ತೊಂದು ಮಹತ್ತರ ಬದಲಾವಣೆಗೆ ಸಾಕ್ಷಿಯಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಿಯೋಫೋನ್ ಆಫರ್ 2021ರಲ್ಲಿ ಕೇವಲ ₹1999ಕ್ಕೆ 24 ತಿಂಗಳುಗಳ ಅನಿಯಮಿತ ಸೇವೆ ಸಿಗಲಿದೆ. ಆದರೆ, ಇದೇ ಮಾದರಿಯ ಯೋಜನೆಗಳಿಗೆ ಬೇರೆ ನೆಟ್‌ವರ್ಕ್‌ಗಳ ಗ್ರಾಹಕರು ಸರಾಸರಿ ₹5000 ಪಾವತಿಸುತ್ತಿದ್ದಾರೆ. ಆದ್ದರಿಂದ ಜಿಯೋ ಬಿಡುಗಡೆ ಮಾಡುತ್ತಿರುವ ಹೊಸ ಯೋಜನೆಯಿಂದಾಗಿ ಗ್ರಾಹಕರ ಮೇಲೆ ಬೀಳುತ್ತಿರುವ ಅಧಿಕ ಹೊರೆಗೆ ಕಡಿವಾಣ ಬೀಳಲಿದೆ ಎಂದು ತಿಳಿಸಿದ್ದಾರೆ. ಈ ಕೊಡುಗೆಯು ಮಾರ್ಚ್ 1 ರಿಂದ ರಿಲಯನ್ಸ್ ರಿಟೇಲ್ ಮತ್ತು ಜಿಯೋ ರಿಟೇಲರ್ಗಳಲ್ಲಿ ಲಭ್ಯವಿರಲಿದೆ.
ಇದನ್ನೂ ಓದಿ:
ದುಡ್ಡು ಕೊಟ್ಟು ಫಾಲೋ ಮಾಡಿ.. ಸೂಪರ್ ಫಾಲೋಸ್ ಎಂಬ ಹೊಸ ಸೌಲಭ್ಯ ಪರಿಚಯಿಸಿದ ಟ್ವಿಟರ್