ದುಡ್ಡು ಕೊಟ್ಟು ಫಾಲೋ ಮಾಡಿ.. ಸೂಪರ್ ಫಾಲೋಸ್ ಎಂಬ ಹೊಸ ಸೌಲಭ್ಯ ಪರಿಚಯಿಸಿದ ಟ್ವಿಟರ್
Twitter: ಹಣ ಕೊಟ್ಟು ಫಾಲೋ ಮಾಡುವ ಸೌಲಭ್ಯಕ್ಕೆ ಸೂಪರ್ ಫಾಲೋಸ್ (Super Follows) ಎಂದು ಹೆಸರಿಡಲಾಗಿದ್ದು, ಫಾಲೋವರ್ಸ್ಗಳಿಂದ ಹಣ ಪಡೆದು ಅವರಿಗೆ ಹೆಚ್ಚಿನ ಮಾಹಿತಿ ನೀಡಬಹುದಾಗಿದೆ. ಈ ಸೌಲಭ್ಯದ ಮೂಲಕ ತಾಜಾ ಸುದ್ದಿ ನೀಡುವ ಮಾಧ್ಯಮಗಳು, ಜನಪ್ರಿಯ ವ್ಯಕ್ತಿಗಳು ತಾವು ನೀಡುವ ಮಾಹಿತಿಗೆ ಹಣ ಪಡೆಯಬಹುದಾಗಿದೆ.
ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್ (Twitter) ತನ್ನ ಬಳಕೆದಾರರಿಗೆ ಹೊಸ ಸೌಲಭ್ಯಗಳನ್ನು ನೀಡುವುದಾಗಿ ಘೋಷಿಸಿದೆ. ನೂತನ ಸೌಲಭ್ಯಗಳಡಿಯಲ್ಲಿ ಟ್ವಿಟರ್ ಅಕೌಂಟ್ ಹೊಂದಿರುವವರು ತಾವು ಹಾಕುವ ನಿರ್ದಿಷ್ಟ ಪೋಸ್ಟ್ಗಳಿಗೆ ಫಾಲೋವರ್ಸ್ಗಳಿಂದ ಹಣ ಪಡೆಯಬಹುದಾಗಿದೆ ಮತ್ತು ಆಸಕ್ತಿಗೆ ಅನುಗುಣವಾಗಿ ಒಂದಷ್ಟು ಜನರನ್ನು ಸೇರಿಸಿಕೊಂಡು ಗ್ರೂಪ್ ಮಾಡಿಕೊಳ್ಳುವ ಅವಕಾಶವೂ ಸಿಗಲಿದೆ. ಇತ್ತೀಚಿನ ದಿನಗಳಲ್ಲಿ ಟ್ವಿಟರ್ನಲ್ಲಾಗುತ್ತಿರುವ ಮಹತ್ತರ ಬದಲಾವಣೆಗಳು ಇವಾಗಿದ್ದು, ಬೇರೆ ಸಾಮಾಜಿಕ ಮಾಧ್ಯಮಗಳ ಜೊತೆಗೆ ಸ್ಪರ್ಧೆ ಮಾಡಲು ಈ ಸೌಲಭ್ಯಗಳು ಸಹಕಾರಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹಣ ಕೊಟ್ಟು ಫಾಲೋ ಮಾಡುವ ಸೌಲಭ್ಯಕ್ಕೆ ಸೂಪರ್ ಫಾಲೋಸ್ (Super Follows) ಎಂದು ಹೆಸರಿಡಲಾಗಿದ್ದು, ಫಾಲೋವರ್ಸ್ಗಳಿಂದ ಹಣ ಪಡೆದು ಅವರಿಗೆ ಹೆಚ್ಚಿನ ಮಾಹಿತಿ ನೀಡಬಹುದಾಗಿದೆ. ಈ ಸೌಲಭ್ಯದ ಮೂಲಕ ತಾಜಾ ಸುದ್ದಿ ನೀಡುವ ಮಾಧ್ಯಮಗಳು, ಜನಪ್ರಿಯ ವ್ಯಕ್ತಿಗಳು ತಾವು ನೀಡುವ ಮಾಹಿತಿಗೆ ನಿರ್ದಿಷ್ಟ ಮೊತ್ತದ ಹಣ ಪಡೆಯಬಹುದಾಗಿದೆ. ಟ್ವಿಟರ್ ತನ್ನ ಈ ಸೌಲಭ್ಯಗಳ ಬಗ್ಗೆ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದು ಬಳಕೆದಾರರಲ್ಲಿ ಕುತೂಹಲ ಹುಟ್ಟುಹಾಕಿದೆ.
ಸಾಮಾಜಿಕ ಜಾಲತಾಣಗಳ ಬಳಕೆ ಮಹತ್ವ ಪಡೆದುಕೊಂಡಿರುವ ಈ ಕಾಲಘಟ್ಟದಲ್ಲಿ ಈ ರೀತಿಯ ಸೌಲಭ್ಯಗಳನ್ನು ನೀಡುವುದು ಹೆಚ್ಚಿನ ಫಾಲೋವರ್ಸ್ ಹೊಂದಿರುವವರಿಗೆ ಹಾಗೂ ಜನಪ್ರಿಯ ಮಾಧ್ಯಮ ಸಂಸ್ಥೆಗಳಿಗೆ ತುಸು ಲಾಭದಾಯಕವೇ ಆಗಲಿದ್ದು, Pateron, Facebook, YouTube ಹಾದಿಯಲ್ಲೇ ಮೈಕ್ರೋಬ್ಲಾಗಿಂಗ್ ಆ್ಯಪ್ ಟ್ವಿಟರ್ ಕೂಡ ಸಾಗುತ್ತಿರುವುದು ಈ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗಳಿಗೆ ಕಾರಣವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಟ್ವಿಟರ್ ಪರಿಚಯಿಸಿರುವ ಇನ್ನೊಂದು ಸೌಲಭ್ಯ ಕಮ್ಯುನಿಟೀಸ್ ಸಹ ಫೇಸ್ಬುಕ್ ಗ್ರೂಪ್ಗಳ ರೀತಿಯಲ್ಲೇ ಕಾರ್ಯ ನಿರ್ವಹಿಸಲಿದ್ದು, ಸಮಾನ ಮನಸ್ಕರೆಲ್ಲರೂ ಒಂದು ವೇದಿಕೆಯಲ್ಲಿ ಸಕ್ರಿಯರಾಗಿರುವುದಕ್ಕೆ ಸಹಕಾರಿಯಾಗಲಿದೆ. ತಮ್ಮ ಆಸಕ್ತಿಗೆ ಸಂಬಂಧಿಸಿದ ಹೆಚ್ಚಿನ ಟ್ವೀಟ್ಗಳು ಒಂದೆಡೆ ಸಿಗುವುದರಿಂದ ಇದು ಟ್ವಿಟರ್ ಬಳಕೆದಾರರಿಗೆ ಅನುಕೂಲಕರವಾಗಲಿದೆ ಎನ್ನಲಾಗಿದೆ. ಸದ್ಯ ಈ ಎರಡೂ ಫೀಚರ್ಗಳು ಬಳಕೆದಾರರಿಗೆ ಯಾವಾಗ ಸಿಗಲಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲವಾದರೂ ಬಳಕೆದಾರರ ಕುತೂಹಲ ಹೆಚ್ಚಿಸಿರುವುದಂತೂ ನಿಜ.
Twitter announced the rollout of their new feature, ‘Super Follows.’
Here, users will be able to monetize exclusive content. pic.twitter.com/MVe3uW5U3J
— The Hustle (@TheHustle) February 25, 2021
ಸೋಷಿಯಲ್ ಮೀಡಿಯಾ, ಒಟಿಟಿ, ಡಿಜಿಟಲ್ ಕಂಟೆಂಟ್ ನಿಯಂತ್ರಣಕ್ಕೆ ಕೇಂದ್ರದಿಂದ ಹೊಸ ನಿಯಮ: ನೀವು ತಿಳಿಯಬೇಕಾದ 10 ಅಂಶಗಳು