AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ಡಾರ್ಕ್​ ಮೋಡ್​​ನಲ್ಲೂ ಲಭ್ಯ ಗೂಗಲ್​ ಮ್ಯಾಪ್​; ಆ್ಯಂಡ್ರಾಯ್ಡ್​ ಮೊಬೈಲ್​​ನಲ್ಲಿ ಸಿಂಪಲ್​ ಆಗಿ ಸೆಟ್ಟಿಂಗ್ಸ್​​ ಬದಲಿಸಿಕೊಂಡರೆ ಆಯಿತು..

ಮೊದಲು ಗೂಗಲ್​ ಪ್ಲೇ ಸ್ಟೋರ್​ಗೆ ಹೋಗಿ ಹೊಸ ಆವೃತ್ತಿಯ ಗೂಗಲ್​ ಮ್ಯಾಪ್​ ಡೌನ್​ಲೋಡ್ ಮಾಡಿಕೊಳ್ಳಿ. ಈಗಾಗಲೇ ಡೌನ್​ಲೋಡ್​ ಮಾಡಿಕೊಂಡಿದ್ದರೆ ಅಪ್ಡೇಟ್​ ಮಾಡಿಕೊಳ್ಳಬೇಕು.

ಇನ್ಮುಂದೆ ಡಾರ್ಕ್​ ಮೋಡ್​​ನಲ್ಲೂ ಲಭ್ಯ ಗೂಗಲ್​ ಮ್ಯಾಪ್​; ಆ್ಯಂಡ್ರಾಯ್ಡ್​ ಮೊಬೈಲ್​​ನಲ್ಲಿ ಸಿಂಪಲ್​ ಆಗಿ ಸೆಟ್ಟಿಂಗ್ಸ್​​ ಬದಲಿಸಿಕೊಂಡರೆ ಆಯಿತು..
ಡಾರ್ಕ್​ ಮೋಡ್ ಗೂಗಲ್ ಮ್ಯಾಪ್​
Lakshmi Hegde
|

Updated on:Feb 25, 2021 | 6:42 PM

Share

ಅತಿ ಹೆಚ್ಚು ಬಳಕೆಯಲ್ಲಿರುವ ಆ್ಯಪ್​ಗಳಲ್ಲಿ ಒಂದಾದ ಗೂಗಲ್​ ಮ್ಯಾಪ್​ ಇದೀಗ ಆ್ಯಂಡ್ರಾಯ್ಡ್​ ಬಳಕೆದಾರರಿಗೆ ಡಾರ್ಕ್​ ಮೋಡ್​ನಲ್ಲೂ ಲಭ್ಯವಿದೆ. ಮ್ಯಾಪ್​​ಗೆ ಡಾರ್ಕ್​ ಮೋಡ್​ ಸೂಕ್ತವೇ ಎಂಬುದನ್ನು ಕಳೆದ ಸೆಪ್ಟೆಂಬರ್​ನಿಂದಲೂ ಪರೀಕ್ಷೆ ಮಾಡುತ್ತಿತ್ತು. ಇದೀಗ ಅಂತಿಮವಾಗಿ ಮ್ಯಾಪ್​ನ್ನು ಡಾರ್ಕ್​ ಮೋಡ್​ನಲ್ಲಿ ಅಭಿವೃದ್ಧಿಪಡಿಸಿದ್ದಾಗಿ ಮಂಗಳವಾರ ಗೂಗಲ್ ತಿಳಿಸಿದೆ.

ಗೂಗಲ್​ ಮ್ಯಾಪ್​ನ ಬಳಕೆ ಏನು? ಹೇಗೆ ಎಂಬುದನ್ನು ಹೊಸದಾಗಿ ಹೇಳುವುದು ಬೇಡ. ಇತ್ತೀಚಿನ ದಿನಗಳಲ್ಲಂತೂ ಪ್ರತಿಯೊಬ್ಬರೂ ಇದನ್ನ ಬಳಸುತ್ತಾರೆ. ಅಪರಿಚಿತ ಸ್ಥಳಗಳಿಗೆ ಹೋಗುವಾಗ ದಾರಿ ತೋರುವುದಷ್ಟೇ ಅಲ್ಲದೆ, ಆ ಪ್ರದೇಶದಲ್ಲಿ ಎಲ್ಲಿ ಹೋಟೆಲ್​ಗಳಿವೆ? ರೆಸ್ಟೋರೆಂಟ್​, ಪಾರ್ಕ್​, ಲಾಡ್ಜ್​ಗಳು ಎಲ್ಲಿವೆ ಎಂಬುದನ್ನೂ ತೋರಿಸುತ್ತದೆ. ಇದರ ಇನ್ನೂ ಒಂದು ಉಪಯೋಗವೆಂದರೆ ಆದಷ್ಟು ಶಾರ್ಟ್​ಕಟ್​ (ಸನಿಹದ ದಾರಿ)ನ್ನೇ ಮಾರ್ಗದರ್ಶನ ಮಾಡುತ್ತದೆ.

ಇದೀಗ ಗೂಗಲ್ ಮ್ಯಾಪ್​ನ್ನು ಪರಿಷ್ಕರಿಸಲಾಗಿದ್ದು, ಅದರಲ್ಲಿ ಡಾರ್ಕ್ ಮೋಡ್ ಆಯ್ಕೆಯನ್ನೂ ನೀಡಲಾಗಿದೆ. ನಿಮ್ಮ ಮೊಬೈಲ್​ನಲ್ಲೂ ಡಾರ್ಕ್​ ಮೋಡ್​ ಮ್ಯಾಪ್​ ಬೇಕೆಂದರೆ ಏನು ಮಾಡಬೇಕು ಎಂಬ ವಿವರ ಇಲ್ಲಿದೆ.:

  • ಮೊದಲು ಗೂಗಲ್​ ಪ್ಲೇ ಸ್ಟೋರ್​ಗೆ ಹೋಗಿ ಹೊಸ ಆವೃತ್ತಿಯ ಗೂಗಲ್​ ಮ್ಯಾಪ್​ ಡೌನ್​ಲೋಡ್ ಮಾಡಿಕೊಳ್ಳಿ. ಈಗಾಗಲೇ ಡೌನ್​ಲೋಡ್​ ಮಾಡಿಕೊಂಡಿದ್ದರೆ ಅಪ್ಡೇಟ್​ ಮಾಡಿಕೊಳ್ಳಬೇಕು.
  • ನಂತರ ಬಲಬದಿಯಲ್ಲಿ ಕಾಣುವ ಪ್ರೊಫೈಲ್​ ಮೇಲೆ ಕ್ಲಿಕ್ ಮಾಡಿದರೆ ಸೆಟಿಂಗ್ಸ್​ ಆಯ್ಕೆ ಬರುತ್ತದೆ. ಸೆಟಿಂಗ್ಸ್​ ಮೇಲೆ ಕ್ಲಿಕ್ ಮಾಡಿದರೆ ಅದರಲ್ಲಿ ಥೀಮ್ಸ್​ ಎಂಬ ಆಪ್ಷನ್​ ಬರುತ್ತದೆ. ಅದರಲ್ಲಿ ಹೋಗಿ Always in Dark Themeನ್ನು ಟರ್ನ್ ಆನ್ ಮಾಡಬೇಕು. ಆಗ ನಿಮ್ಮ ಗೂಗಲ್​ ಮ್ಯಾಪ್​ ಡಾರ್ಕ್​ ಮೋಡ್​​ಗೆ ಪರಿವರ್ತನೆಯಾಗುತ್ತದೆ.
  • ಇಲ್ಲ, ಮೊದಲಿನಂತೇ ಲೈಟ್​ ಮೋಡ್​ ಇರಲಿ ಎಂದರೆ ಮತ್ತೆ ಇದೇ ಕ್ರಮ ಅನುಸರಿಸಿ ಹೋಗಿ, Always in light Theme ನ್ನು ಟರ್ನ್​ ಆಫ್​ ಮಾಡಿದರಾಯಿತು.

ಲೈಟ್​ ಮೋಡ್​ನಲ್ಲಿದ್ದಾಗ ಗೂಗಲ್​ ಮ್ಯಾಪ್​ ನೋಡಿಕೊಂಡು ವಾಹನ ಓಡಿಸುವುದರಿಂದ ಸಹಜವಾಗಿಯೇ ಕಣ್ಣಿಗೆ ಆಯಾಸ ಆಗುತ್ತದೆ. ಹಾಗಾಗಿ ಡಾರ್ಕ್ ಮೋಡ್​ ಆಯ್ಕೆಯನ್ನು ತಂದಿದ್ದೇವೆ. ಶೀಘ್ರದಲ್ಲೇ ಜಗತ್ತಿನ ಎಲ್ಲ ಆ್ಯಂಡ್ರಾಯ್ಡ್ ಬಳಕೆದಾರರಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು. ಇದರಿಂದ ಕಣ್ಣಿಗೂ ಹಿತವಾಗಿರುತ್ತದೆ, ಮೊಬೈಲ್​ನ ಬ್ಯಾಟರಿ ಚಾರ್ಜ್​ ಕೂಡ ಉಳಿಯುತ್ತದೆ ಎಂದು ಗೂಗಲ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Fact Check: India Is Doing It ವಿಡಿಯೊ ಲಿಂಕ್ ತೆರೆದರೆ ನಿಮ್ಮ ಫೋನ್ ಹ್ಯಾಕ್; ವಾಟ್ಸ್​ಆ್ಯಪ್​ನಲ್ಲಿ ಹರಿದಾಡಿದ್ದು ಸುಳ್ಳು ಸಂದೇಶ

Published On - 6:41 pm, Thu, 25 February 21

Follow Us
Lakshmi Hegde
Lakshmi Hegde
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ