Fact Check: India Is Doing It ವಿಡಿಯೊ ಲಿಂಕ್ ತೆರೆದರೆ ನಿಮ್ಮ ಫೋನ್ ಹ್ಯಾಕ್; ವಾಟ್ಸ್​ಆ್ಯಪ್​ನಲ್ಲಿ ಹರಿದಾಡಿದ್ದು ಸುಳ್ಳು ಸಂದೇಶ

WhatsApp Message Fact Check : ಕಳೆದ ವರ್ಷ ಅರ್ಜೆಂಟಿನಾದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಸಂದೇಶ ವೈರಲ್ ಆಗಿತ್ತು. ಈಗ ಅದೇ ಸಂದೇಶದಲ್ಲಿ ಅರ್ಜೆಂಟಿನಾ ಬದಲು ಭಾರತ ಎಂದು ಬದಲಿಸಿ ಫಾರ್ವರ್ಡ್ ಮಾಡಲಾಗುತ್ತಿದೆ.

Fact Check: India Is Doing It ವಿಡಿಯೊ ಲಿಂಕ್ ತೆರೆದರೆ ನಿಮ್ಮ ಫೋನ್ ಹ್ಯಾಕ್; ವಾಟ್ಸ್​ಆ್ಯಪ್​ನಲ್ಲಿ ಹರಿದಾಡಿದ್ದು ಸುಳ್ಳು ಸಂದೇಶ
ವಾಟ್ಸ್​ಆ್ಯಪ್ ಸಂದೇಶದ ಫ್ಯಾಕ್ಟ್​ಚೆಕ್
Follow us
ರಶ್ಮಿ ಕಲ್ಲಕಟ್ಟ
|

Updated on: Feb 11, 2021 | 3:47 PM

ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ತೋರಿಸುವ ವಿಡಿಯೊವೊಂದನ್ನು ಅವರು ವಾಟ್ಸ್​ಆ್ಯಪ್​ನಲ್ಲಿ ಫಾರ್ವರ್ಡ್ ಮಾಡುತ್ತಿದ್ದಾರೆ. India Is Doing It ಎಂಬ ಶೀರ್ಷಿಕೆಯ ಫೈಲ್ ಅದು. ಅದನ್ನು ತೆರೆದು ನೋಡಬೇಡಿ. ಅದು ನಿಮ್ಮ ಫೋನ್ ನ್ನು 10 ಸೆಕೆಂಡ್ ಗಳಲ್ಲಿ ಹ್ಯಾಕ್ ಮಾಡುತ್ತದೆ. ಇದನ್ನು ಯಾವುದೇ ರೀತಿಯಲ್ಲಿ ತಡೆಯಲು ಸಾಧ್ಯವಿಲ್ಲ. ಈ ಮಾಹಿತಿಯನ್ನು ನೀವು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಕಳುಹಿಸಿ. ಟಿವಿ ಸುದ್ದಿಯಲ್ಲಿಯೂ ಇದೇ ವಿಷಯ ಬಂದಿದೆ ಎಂಬ ಒಕ್ಕಣೆ ಇರುವ ಸಂದೇಶವೊಂದು ವಾಟ್ಸ್ಆ್ಯಪ್ ನಲ್ಲಿ ಹರಿದಾಡುತ್ತಿದೆ.

ಈ ವೈರಲ್ ಸಂದೇಶದ ಫ್ಯಾಕ್ಟ್​ಚೆಕ್ ನಡೆಸಿರುವ ಬೂಮ್​ಲೈವ್ ಇದು ಸುಳ್ಳು ಸಂದೇಶ ಎಂದು ಹೇಳಿದೆ. ಕಳೆದ ವರ್ಷ ಅರ್ಜೆಂಟಿನಾದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದರ ವಿಡಿಯೊ ಲಿಂಕ್ ಕ್ಲಿಕ್ ಮಾಡಿ ನೋಡಿದರೆ 10 ಸೆಕೆಂಡ್​ಗಳಲ್ಲಿ ಫೋನ್ ಹ್ಯಾಕ್ ಆಗುತ್ತದೆ ಎಂಬ ಸಂದೇಶ ಹರಿದಾಡಿತ್ತು. ಇದೀಗ ಅರ್ಜೆಂಟಿನಾ ಬದಲು ಭಾರತ ಎಂದು ಬದಲಿಸಲಾಗಿದೆ.

ಸುಳ್ಳು ಸಂದೇಶ ಎಂದು ಪತ್ತೆ ಹಚ್ಚುವುದು ಹೇಗೆ ನಿಮಗೆ ಬಂದಿರುವ ಸಂದೇಶವನ್ನು ಯಾರು ಕಳಿಸಿದ್ದಾರೆ ಎಂಬುದನ್ನು ಮೊದಲು ನೋಡಿಕೊಳ್ಳಿ. ಈ ಸಂದೇಶ ನಿಜವೇ ಎಂದು ಅವರಲ್ಲಿ ಪ್ರಶ್ನೆ ಕೇಳಿ. ಆಗ ಅವರು ನನಗೆ ಹೀಗೊಂದು ಫಾರ್ವರ್ಡ್ ಸಂದೇಶ ಬಂತು ಅದನ್ನೂ ನಿಮಗೂ ಕಳಿಸಿದ್ದಾರೆ ಎಂದು ಹೇಳಿದರೆ ಆ ಸಂದೇಶವನ್ನು ಕಣ್ಣು ಮುಚ್ಚಿ ನಂಬುವಂತಿಲ್ಲ. ಫಾರ್ವರ್ಡ್ ಮೆಸೇಜ್ ಆಗಿದ್ದರೆ ವಾಟ್ಸ್ಆ್ಯಪ್ ನಲ್ಲಿ ಸಂದೇಶ ಫಾರ್ವರ್ಡ್ ಎಂದು ತೋರಿಸುತ್ತದೆ.

ಆ ಸಂದೇಶವನ್ನು ಗೂಗಲಲ್ಲಿ ಹುಡುಕಿ ನಿಮಗೆ ಬಂದ ಸಂದೇಶದ ವಿಶ್ವಾಸರ್ಹತೆ ಪತ್ತೆ ಹಚ್ಚಲು ಆ ಸಂದೇಶವನ್ನು ಕಾಪಿ ಮಾಡಿ ಗೂಗಲ್ ನಲ್ಲಿ ಹುಡುಕಿ. ಉದಾಹರಣೆಗೆ ಮೇಲಿನ ಸಂದೇಶ India Is Doing It ಎಂಬುದನ್ನು ಗೂಗಲ್ ಮಾಡಿ. ಇದಕ್ಕೆ ಸಂಬಂಧ ಪಟ್ಟ ಸುದ್ದಿಗಳು ನಿಮಗೆ ಸಿಗುತ್ತವೆ. ಈಗಾಗಲೇ ಇದು ಸುಳ್ಳು ಸುದ್ದಿ ಎಂದು ಹೇಳುವ ಫ್ಯಾಕ್ಟ್​ಚೆಕ್ ವರದಿಯ ಲಿಂಕ್ ಗಳನ್ನು ನೀವಿಲ್ಲಿ ಕಾಣಬಹುದು.

Google search

ಗೂಗಲಲ್ಲಿ ಹೀಗೆ ಹುಡುಕಿ

ರೋಚಕತೆಯ ಸಂದೇಶಗಳನ್ನು ಗಮನಿಸಿ ಸಾಮಾನ್ಯವಾಗಿ ಸುಳ್ಳು ಸುದ್ದಿ ಅಥವಾ ಸಂದೇಶಗಳು ರೋಚಕತೆಯಿಂದ ಕೂಡಿರುತ್ತವೆ. ನಿಮಗೆ ಗೊತ್ತಾ? ಹಾಗಾಗುತ್ತದೆ ಹೀಗಾಗುತ್ತದೆ ಎಂಬ ಪದಗಳೊಂದಿಗೆ ಇರುವ ಈ ಸಂದೇಶಗಳು ಇದುವೇ ನಿಜ ಸಂದೇಶ ಎಂದು ನಂಬಿಸಲು ಪ್ರಯತ್ನಿಸುತ್ತಿರುತ್ತವೆ. ಅಷ್ಟೇ ಅಲ್ಲದೆ ಇದು ತುಂಬಾ ಪ್ರಧಾನ ಸಂಗತಿ, ಇದನ್ನು ನಿಮ್ಮ ಕುಟುಂಬದವರಿಗೆ, ಗೆಳೆಯರಿಗೆ ಫಾರ್ವರ್ಡ್ ಮಾಡಿ ಎಂಬ ವಿನಂತಿಯ ಸಾಲುಗಳು ಇರುತ್ತವೆ. ಸಿಕ್ಕಾಪಟ್ಟೆ ಅಕ್ಷರ ದೋಷವಿರುವ, ಸುದ್ದಿಯ ಮೂಲ ಯಾವುದು ಎಂದು ತಿಳಿಸದೆ ಫಾರ್ವರ್ಡ್ ಆಗುವ ಸಂದೇಶಗಳ ಬಗ್ಗೆಯೂ ಎಚ್ಚರದಿಂದಿರಿ.

ಇದನ್ನೂ ಓದಿ: Fact Check | ಮಿಯಾ ಖಲೀಫಾ ಪೋಸ್ಟರ್​ಗೆ ಕೇಕ್ ತಿನಿಸಿದ ಕಾಂಗ್ರೆಸ್ ಕಾರ್ಯಕರ್ತರು: ಫೋಟೊಶಾಪ್ ಚಿತ್ರ ವೈರಲ್  

ಸುಳ್ಳು ಸುದ್ದಿ ಹರಡದಂತೆ ಎಚ್ಚರಿಸಿ ನಿಮಗೆ ಯಾರಾದರೂ ಸುಳ್ಳು ಸುದ್ದಿ ಅಥವಾ ಸಂದೇಶ ಕಳುಹಿಸಿದ್ದರೆ, ಅದರ ಸತ್ಯಾಸತ್ಯತೆ ತಿಳಿಸುವ ಮಾಹಿತಿಗಳೊಂದಿಗೆ ಅವರ ಸಂದೇಶಕ್ಕೆ ಪ್ರತಿಕ್ರಿಯಿಸಿ. ಸುಳ್ಳು ಸುದ್ದಿಗಳು ಹರಡಬೇಡಿ ಎಂಬ ಕಿವಿಮಾತು ಕೂಡಾ ಹೇಳಿ.

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್