AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಹಣಕಾಸಿನ ಈ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ

ಹೆಚ್ಚಿನವರು ತಮ್ಮ ವೈಯಕ್ತಿಕ ಜೀವನದ ಕುರಿತ ಸಾಕಷ್ಟು ಮಾಹಿತಿಯನ್ನು ಸ್ನೇಹಿತರು, ಸಂಬಂಧಿಕರೊಂದಿಗೆ ಹಂಚಿಕೊಳ್ಳುತ್ತಾರೆ. ಆದರೆ ಹೀಗೆ ಎಲ್ಲಾ ವಿಚಾರಗಳನ್ನು ಎಲ್ಲರೊಂದಿಗೂ ಹೇಳಿಕೊಂಡು ಬರುವುದು ಸರಿಯಲ್ಲ. ಅದರಲ್ಲೂ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಈ ಒಂದಷ್ಟು ವೈಯಕ್ತಿಯ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದಂತೆ. ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ಅವುಗಳನ್ನು ಗೌಪ್ಯವಾಗಿಯೇ ಇಟ್ಟುಕೊಳ್ಳಬೇಕು.

ನಿಮ್ಮ ಹಣಕಾಸಿನ ಈ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
|

Updated on:Jul 08, 2025 | 5:52 PM

Share

ನಮ್ಮ ವೈಯಕ್ತಿಯ ಜೀವನಕ್ಕೆ  ಸಂಬಂಧಿಸಿದಂತಹ ಒಂದಷ್ಟು ಸೀಕ್ರೆಟ್‌ ((personal life secrets) ವಿಷಯಗಳು ನಮ್ಮ ಬಳಿ ಇದ್ದರೆಯೇ ಚೆಂದ.  ಆ ವಿಷಯಗಳನ್ನು ಇತರರ ಬಳಿ ಹಂಚಿಕೊಳ್ಳಬಾರದು. ಹೀಗಿದ್ದರೂ ಕೂಡಾ ಅನೇಕರು ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಸ್ನೇಹಿತರು ಅಥವಾ ಸಂಬಂಧಿಕರ ಬಳಿ ಶೇರ್‌ ಮಾಡಿಕೊಳ್ಳುತ್ತಾರೆ. ಆದರೆ ಪ್ರತಿಯೊಂದು ವಿಷಯವನ್ನು ಹೀಗೆ ಎಲ್ಲರೊಂದಿಗೂ ಹಂಚಿಕೊಳ್ಳುವುದು ಸರಿಯಲ್ಲ. ಅದರಲ್ಲೂ ನಿಮ್ಮ ಹಣಕಾಸಿನ ವಿಚಾರಕ್ಕೆ (financial secrets) ಸಂಬಂಧಪಟ್ಟ ಈ ಒಂದಷ್ಟು ಸೀಕ್ರೆಟ್‌ಗಳನ್ನು ಎಷ್ಟೇ ಕ್ಲೋಸ್‌ ಆಗಿ ಇರುವವರ ಬಳಿಯೂ ಹೇಳಿಕೊಳ್ಳಬಾರದಂತೆ. ಹಾಗಿದ್ರೆ ಹಣದ ವಿಷಯಕ್ಕೆ ಸಂಬಂಧಿಸಿದ ಯಾವೆಲ್ಲಾ ವಿಚಾರಗಳನ್ನು ಗೌಪ್ಯವಾಗಿ ಇಟ್ಟುಕೊಳ್ಳಬೇಕು ಎಂಬುದನ್ನು ತಿಳಿಯಿರಿ.

ಹಣಕಾಸಿನ ಈ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ:

ಸಂಬಳ: ನಿಮ್ಮ ಸಂಬಳದ ಬಗ್ಗೆ ಯಾರಿಗೂ ಹೇಳಬೇಡಿ. ನಿಮ್ಮ ಮಾಸಿಕ ಆದಾಯವು ಸಂಪೂರ್ಣವಾಗಿ ವೈಯಕ್ತಿಕವಾಗಿದೆ. ಹೀಗೆ ಸಂಬಂಧಿಕರ ಬಳಿ ನಿಮ್ಮ ಆದಾಯದ ಬಗ್ಗೆ ಹೇಳಿದಾಗ ಸಂಬಳ ಹೆಚ್ಚಿದ್ದರೆ ಅವರು ನಿಮ್ಮ ಬಳಿ ಸಾಲ ಕೇಳುವ ಸಾಧ್ಯತೆ ಇರುತ್ತದೆ,  ಕಮ್ಮಿ ಸಂಬಳ ಇದ್ರೆ ನಿಮ್ಮ ಬಗ್ಗೆ ಕೀಳಾಗಿ ಮಾತನಾಡುವ ಸಾಧ್ಯತೆ ಇರುತ್ತದೆ.

ಉಳಿತಾಯ: ನಿಮ್ಮ ಸೇವಿಂಗ್ಸ್‌ ಮತ್ತು ಹಣಕಾಸು ಯೋಜನೆ  ಸಂಪೂರ್ಣವಾಗಿ ನಿಮ್ಮ ವೈಯಕ್ತಿಕವಾಗಿದೆ. ಈ  ಉಳಿತಾಯದ ಬಗ್ಗೆ  ನಿಮ್ಮ ಮನೆಯವರನ್ನು ಹೊರತು ಪಡಿಸಿ, ಯಾರಿಗೂ ಹೇಳಬೇಡಿ. ನಿಮ್ಮ ಬಳಿ ಹಣಯಿದೆ ಎಂದರೆ ಸಾಲ ಕೇಳುವವರೂ ಹೆಚ್ಚಾಗುತ್ತಾರೆ.

ಇದನ್ನೂ ಓದಿ
Image
ಇಂತಹವರಿಗೆ ಯಾವತ್ತಿಗೂ ಸಾಲ ಕೊಡಬಾರದಂತೆ
Image
ಕೆಲಸದ ಹೊರತಾಗಿ ಹೆಚ್ಚುವರಿ ಹಣ ಗಳಿಸೋದು ಹೇಗೆ? ಇಲ್ಲಿವೆ ನೋಡಿ ಅದ್ಭುತ ಸಲಹೆ
Image
ಶಾಪಿಂಗ್‌ ಮಾಡುವಾಗ ಹಣ ಉಳಿಸಲು ಈ ಸಲಹೆ ಪಾಲಿಸಿ
Image
ವಾರದ ಯಾವ ದಿನ ಚಿನ್ನ ಖರೀದಿಸಿದರೆ ಒಳ್ಳೆಯದು ಗೊತ್ತಾ

ಹೂಡಿಕೆಗಳು: ನಿಮ್ಮ ಹೂಡಿಕೆಗಳ ಬಗ್ಗೆ ನಿಮ್ಮ ಸ್ನೇಹಿತರು, ಸಂಬಂಧಿಕರಿಗೆ  ಹೇಳಬೇಡಿ. ನೀವು ಎಲ್ಲಿ ಹೂಡಿಕೆ ಮಾಡುತ್ತೀರಿ, ಎಷ್ಟು ಹೂಡಿಕೆ ಮಾಡುತ್ತೀರಿ ಎಂದು ಯಾರಿಗೂ ಹೇಳಬೇಡಿ. ಹೀಗೆ ಹೇಳುವುದರಿಂದ ಅವರು ಅನಗತ್ಯ ಸಲಹೆಗಳನ್ನು ನೀಡುತ್ತಾರೆ.  ಇದರಿಂದ ನೀವು ತಪ್ಪಾದ ಕಡೆ ಹೂಡಿಕೆ ಮಾಡುವ ಸಾಧ್ಯತೆ ಇರುತ್ತದೆ.

ಸಾಲಗಳು: ಉಳಿತಾಯ ಮಾತ್ರವಲ್ಲ ನಿಮ್ಮ ಸಾಲದ ಬಗ್ಗೆಯೂ ಯಾರೊಂದಿಗೂ ಶೇರ್‌ ಮಾಡಬಾರದು. ನೀವು ಸಾಲದ ಬಗ್ಗೆ ಹೇಳಿಕೊಂಡಾಗ ಅದರಲ್ಲೂ ವಿಶೇಷವಾಗಿ ಸಂಬಂಧಿಕರ ಬಳಿ ಹೇಳಿಕೊಂಡಾಗ ಅವರು ನಿಮ್ಮನ್ನು ಕೀಳಾಗಿ ಕಾಣುವ ಅಥವಾ ಚುಚ್ಚು ಮಾತನಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಆಸ್ತಿ, ಸಂಪತ್ತು: ನಿಮ್ಮ ಪಿತ್ರಾರ್ಜಿತ ಆಸ್ತಿ ಆಗಿರಬಹುದು ಅಥವಾ ನೀವೇ ಕಷ್ಟಪಟ್ಟು ಗಳಿಸಿರುವ ಸಂಪತ್ತಿನ ಬಗ್ಗೆಯೂ ಯಾರೊಂದಿಗೂ ಹೇಳಬೇಡಿ.  ಈ ವಿಷಯಗಳ ಬಗ್ಗೆ ಹೇಳುವುದರಿಂದ ಅವರು ನಿಮ್ಮಿಂದ ಸಹಾಯ ಕೇಳುವ, ಸಾಲ ಕೇಳುವ  ಸಾಧ್ಯತೆ ಹೆಚ್ಚಿರುತ್ತದೆ.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಇಂತಹವರಿಗೆ ಹಣವನ್ನು ಸಾಲ ಕೊಡಬೇಡಿ; ಯಾಕೆ ಗೊತ್ತಾ?

ಹಣಕಾಸಿನ ವಂಚನೆ: ನೀವು ಹಿಂದೆ ಹಣಕಾಸಿನ ವಂಚನೆಗಳಿಗೆ ಒಳಗಾಗಿದ್ದರೆ, ನಿಮಗಾದ ವಂಚನೆಯ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳಬೇಡಿ. ಏಕೆಂದರೆ ಭವಿಷ್ಯದಲ್ಲಿ ಯಾವುದೋ ಒಂದು ರೀತಿಯಲ್ಲಿ ನೀವು ನಂಬಿದವರೇ ನಿಮಗೆ ವಂಚನೆ ಮಾಡುವ ಸಾಧ್ಯತೆ ಇರುತ್ತದೆ.

ಸಂಗಾತಿಯ ಗಳಿಕೆ: ನಿಮ್ಮ ಸಂಗಾತಿ ಆಗಿರಬಹುದು ಅಥವಾ ನಿಮ್ಮ ಮನೆಯ ಸದಸ್ಯರ ಆದಾಯದ ಬಗ್ಗೆಯೂ ಹೊರಗಿನ ಯಾರ ಬಳಿಯೂ ಹಂಚಿಕೊಳ್ಳಬಾರದಂತೆ. ಇದು ಸಂಪೂರ್ಣವಾಗಿ ನಿಮ್ಮ ವೈಯಕ್ತಿಯ ವಿಷಯವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:51 pm, Tue, 8 July 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ