ಎಲ್ಲ ಶಾಸಕರನ್ನು ಮಂತ್ರಿ ಮಾಡೋದು ಸಾಧ್ಯವಿಲ್ಲ, ಆಕಾಂಕ್ಷಿಗಳು ಅರ್ಥಮಾಡಿಕೊಳ್ಳಬೇಕು: ಆರ್ ವಿ ದೇಶಪಾಂಡೆ
ಎಲ್ಲ ಸ್ವಾಮೀಜಿಗಳ ಬಗ್ಗೆ ತನಗೆ ಗೌರವ ಇದೆ ಎನ್ನುವ ದೇಶಪಾಂಡೆ, ಯಾವ್ಯಾವ ಸ್ವಾಮಿ ಏನು ಹೇಳಿದ್ದಾರೆ ಅಂತ ಒಂದು ಪಟ್ಟಿ ಮಾಡಿ ಎಂದರು. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಭೇಟಿಗೆ ಹೆಚ್ಚಿನ ಅರ್ಥ ಕಲ್ಪಿಸದ ದೇಶಪಾಂಡೆ, ಸರ್ಕಾರದ ಕೆಲಸ ನಿಮಿತ್ತ ಅಲ್ಲಿಗೆ ಹೋಗಿರಬಹುದು ಎಂದರು.
ಬೆಂಗಳೂರು, ಜುಲೈ 8: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಶಾಸಕ ಆರ್ ವಿ ದೇಶಪಾಂಡೆ ಇಂದು ರಂದೀಪ್ ಸುರ್ಜೇವಾಲಾ (Randeep Surjewala) ಅವರನ್ನು ಭೇಟಿಯಾಗುವುದಾಗಿ ಹೇಳಿದರು. ಯಾಕೆ ಕರೆದಿದ್ದಾರೋ ಗೊತ್ತಿಲ್ಲ, ಕುಶಲೋಪರಿ ವಿಚಾರಿಸಲು ಕರೆದಿರಬಹುದು ಎಂದು ನಗುತ್ತಾ ಹೇಳಿದರು. ನಿಮ್ಮ ಪಕ್ಷದ ಶಾಸಕರಿಗೆ ಮಂತ್ರಿಯಾಗುವ ಹಂಬಲ ಹೆಚ್ಚುತ್ತಿದೆಯಲ್ಲ ಸಾರ್ ಅಂತ ಅವರನ್ನು ಕೇಳಿದಾಗ, ಹಂಬಲ, ಆಸೆ ಇಟ್ಟುಕೊಳ್ಳೋದು ತಪ್ಪೇನಲ್ಲ, ಅದರೆ ಎಷ್ಟು ಜನ ಶಾಸಕರನ್ನು ಮಂತ್ರಿ ಮಾಡಲು ಸಾಧ್ಯ? ವಿಧಾನ ಸಭೆಯ ಬಲ 224 ಮತ್ತು ಒಬ್ಬ ನಾಮ ನಿರ್ದೇಶಿತ ಶಾಸಕ ಸೇರಿದರೆ 225, ಸಂಪುಟದಲ್ಲಿ ಗರಿಷ್ಠ 35 ಸಚಿವರನ್ನು ನೇಮಕ ಮಾಡಬಹುದು ಅಷ್ಟೇ, ಶಾಸಕರು ಅದನ್ನು ಅರ್ಥಮಾಡಿಕೊಳ್ಳಬೇಕು ಎಂದು ದೇಶಪಾಂಡೆ ಹೇಳಿದರು.
ಇದನ್ನು ಓದಿ: ನಿಲ್ಲದ ಸತೀಶ್ ಸೈಲ್ ಮತ್ತು ಆರ್ ವಿ ದೇಶಪಾಂಡೆ ನಡುವಿನ ಜಟಾಪಟಿ, ಅಸಮಾಧಾನ ಹೊರಹಾಕಲು ಕೆಡಿಪಿ ಸಭೆಯೇ ವೇದಿಕೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ