Mobile Phone Radiation: ಎಚ್ಚರ, ಈ ಸ್ಮಾರ್ಟ್ಫೋನ್ಗಳು ಅತಿಹೆಚ್ಚು ರೇಡಿಯೇಷನ್ ಹೊರ ಸೂಸುತ್ತವೆ
Xiaomi MI A1 ಮೊಬೈಲ್ ಅತಿಹೆಚ್ಚು ವಿಕಿರಣ ಸೂಸುವ ಮೊಬೈಲ್ ಆಗಿದೆ. ಇದರ ಎಸ್ಎಆರ್ ಪ್ರಮಾಣ 1.75 W/KG (ವ್ಯಾಟ್ ಪ್ರತಿ ಕೆಜಿ) ಇದೆ.
ನಾವು ಬಳಕೆ ಮಾಡುವ ಮೊಬೈಲ್ಗಳು ರೇಡಿಯೇಷನ್ ಹೊರ ಸೂಸುತ್ತವೆ. ಇದು ನಮಗೆ ಗೊತ್ತಿಲ್ಲದೆ ನಮ್ಮ ದೇಹದ ಮೇಲೆ ನೇರ ಪರಿಣಾಮ ಬೀರುತ್ತಲೇ ಇರುತ್ತದೆ. ಕೆಲವು ಮೊಬೈಲ್ಗಳು ಅತಿ ಹೆಚ್ಚು ವಿಕಿರಣ ಹೊರ ಸೂಸಿದರೆ, ಇನ್ನೂ ಕೆಲವು ಕಡಿಮೆ ವಿಕಿರಣ ಸೂಸುವಂಥವು. ಹಾಗಾದರೆ, 2021ರ ಅತಿ ಹೆಚ್ಚು ರೇಡಿಯೇಷನ್ ಹೊರ ಹಾಕುವ ಮೊಬೈಲ್ಗಳು ಯಾವವು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. ಮೊಬೈಲ್ ವಿಕಿರಣಗಳ ಕುರಿತು ಜರ್ಮನ್ ಫೆಡರಲ್ ಆಫೀಸ್ ಅಧ್ಯಯನ ನಡೆಸಿ ವರದಿ ಒಂದನ್ನು ಸಿದ್ಧಪಡಿಸಿದೆ. ಮೊಬೈಲ್ ಹೊರ ಸೂಸುವ ವಿಕಿರಣಗಳನ್ನು ಅಳೆಯಲು Specific absorption rate (SAR) ಬಳಕೆ ಮಾಡಲಾಗುತ್ತದೆ. ಅಂದರೆ, ಮನುಷ್ಯನ ದೇಹ ಮೊಬೈಲ್ ಸಂಪರ್ಕಕ್ಕೆ ಬಂದಾಗ ಪ್ರತಿ ಯುನಿಟ್ಗೆ ಎಷ್ಟು ರೆಡಿಯೋ ವಿಕಿರಣ ಹೀರಿಕೊಳ್ಳುತ್ತದೆ ಎನ್ನುವುದನ್ನು ಎಸ್ಎಆರ್ ಹೇಳುತ್ತದೆ. ಎಸ್ಎಆರ್ ಪ್ರಮಾಣ ಹೆಚ್ಚು ಇದ್ದರೆ ಮಾನವನ ದೇಹಕ್ಕೆ ಅಪಾಯ.
Xiaomi MI A1 ಮೊಬೈಲ್ ಅತಿಹೆಚ್ಚು ವಿಕಿರಣ ಸೂಸುವ ಮೊಬೈಲ್ ಆಗಿದೆ. ಇದರ ಎಸ್ಎಆರ್ ಪ್ರಮಾಣ 1.75 W/KG (ವ್ಯಾಟ್ ಪ್ರತಿ ಕೆಜಿ) ಇದೆ. OnePlus 5T ಮೊಬೈಲ್ ಎಸ್ಎಆರ್ ಪ್ರಮಾಣ 1.68 W/KG ಇದೆ. Xiaomi MI Max 3 ಎಸ್ಎಆರ್ ಪ್ರಮಾಣ 1.58 W/KG ಆಗಿದೆ. ಉಳಿದಂತೆ OnePlus 6T (1.55 W/KG ), HTC U12 Life (1.48 W/KG ) Xiami Mi Mix 3 (1.45 W/KG ), Xiaomi MI MIX 3 (1.45 W/KG ), Goggle Pixel 3 XL (1.39 W/KG ) ಎಸ್ಎಆರ್ ಹೊಂದಿದೆ. ಇನ್ನು ಅತಿ ಹೆಚ್ಚು ವಿಕಿರಣ ಹೊರಸೂಸುವ ಸಾಲಿನಲ್ಲಿ IPhone 7, OnuPlus 5, Google Pixel 3, Redmi Note 5 ಮೊಬೈಲ್ ಕೂಡ ಇದೆ.
ಇನ್ನು ಅತಿ ಕಡಿಮೆ ವಿಕಿರಣ ಸೂಸುವ ಮೊಬೈಲ್ ಕೂಡ ಇದೆ. Samsung Galaxy Note 8 ಅತಿ ಕಡಿಮೆ ಅಂದರೆ ಕೇವಲ 0.17 W/KG ಎಸ್ಎಆರ್ ರೇಟ್ ಹೊಂದಿದೆ. ಸ್ಯಾಮ್ಸಂಗ್ ಕಂಪೆನಿಯ ಸಾಕಷ್ಟು ಮೊಬೈಲ್ಗಳು ಕಡಿಮೆ ವಿಕಿರಣ ಸೂಸುತ್ತದೆ ಎಂದು ಅಧ್ಯಯನ ಹೇಳಿದೆ.
ಇದನ್ನೂ ಓದಿ: World Cancer Day 2021 ಕ್ಯಾನ್ಸರ್ಗೆ ಕಾರಣಗಳು ಒಂದೆರಡಲ್ಲ.. ಬೊಜ್ಜು, ಅತಿಯಾದ ತೂಕದಿಂದಲೂ ಅಪಾಯ !