ಗ್ರಾಹಕರಿಗೆ ಆಕರ್ಷಕ ಆಫರ್​ಗಳನ್ನು ಘೋಷಿಸಿದ ಬಿಎಸ್ಎನ್ಎಲ್, ಕೇವಲ ರೂ.129 ಗಳಿಗೆ 300 ಚ್ಯಾನೆಲ್​ಗಳು!

ಮೊಬೈಲ್ ಫೋನ್​ ಮತ್ತು ಅವುಗಳಿಗೆ ಸಂಬಂಧಿಸಿದ ನೆಟ್​ವರ್ಕ್​ಗಳು-ಕೊರೊನಾ ಪಿಡುಗು ಮನುಕುಲವನ್ನು ಅಪ್ಪಳಿಸುವ ಮೊದಲು ಪ್ರಾಯಶಃ ಅತಿಹೆಚ್ಚು ಚರ್ಚೆಯಲ್ಲಿದ್ದ ವಿಷಯಗಳೆಂದರೆ ಉತ್ಪ್ರೇಕ್ಷೆಯೆನಿಸದು. ಹಾಗಂತ ಇವುಗಳ ಬಗ್ಗೆ ಜನ ಮಾತಾಡುವುದನ್ನು ನಿಲ್ಲಿಸಿದ್ದಾರೆಂದು ಭಾವಿಸಬೇಡಿ, ಅವು ನಿಸ್ಸಂದೇಹವಾಗಿ ನಿರಂತರವಾಗಿ ಚರ್ಚಿಸಲ್ಪಡುವ ಸಂಗತಿಗಳು.ಹಾಗೆ ನೋಡಿದರೆ, ಮೊಬೈಲ್ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದಾಗ ಕೇವಲ ಎರಡು ಸರ್ವಿಸ್ ಪ್ರೊವೈಡರ್​ಗಳು ಅಸ್ತಿತ್ವದಲ್ಲಿದ್ದವು. ಒಂದು ಏರ್​ಟೆಲ್ ಮತ್ತೊಂದು ಸ್ಪೈಸ್. ಎರಡನೆಯದ್ದು ನಂತರದ ದಿನಗಳಲ್ಲಿ ಬೇರೆ ಯಾವುದೋ ದೊಡ್ಡ ಕಂಪನಿಯೊಂದಿಗೆ ವಿಲೀನಗೊಂಡಿತು. ಅದಾದ ಮೇಲೆ ಹಲವಾಯ ಸರ್ವಿಸ್​ ಪ್ರೊವೈಡರ್​ಗಳು-ದೇಶೀಯ ಮತ್ತು […]

ಗ್ರಾಹಕರಿಗೆ ಆಕರ್ಷಕ ಆಫರ್​ಗಳನ್ನು ಘೋಷಿಸಿದ ಬಿಎಸ್ಎನ್ಎಲ್, ಕೇವಲ ರೂ.129 ಗಳಿಗೆ 300 ಚ್ಯಾನೆಲ್​ಗಳು!
ಬಿಎಸ್ಎನ್​ಎಲ್ ಒಟಿಟಿ ಸೇವೆಗಳು
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 19, 2021 | 11:13 PM

ಮೊಬೈಲ್ ಫೋನ್​ ಮತ್ತು ಅವುಗಳಿಗೆ ಸಂಬಂಧಿಸಿದ ನೆಟ್​ವರ್ಕ್​ಗಳು-ಕೊರೊನಾ ಪಿಡುಗು ಮನುಕುಲವನ್ನು ಅಪ್ಪಳಿಸುವ ಮೊದಲು ಪ್ರಾಯಶಃ ಅತಿಹೆಚ್ಚು ಚರ್ಚೆಯಲ್ಲಿದ್ದ ವಿಷಯಗಳೆಂದರೆ ಉತ್ಪ್ರೇಕ್ಷೆಯೆನಿಸದು. ಹಾಗಂತ ಇವುಗಳ ಬಗ್ಗೆ ಜನ ಮಾತಾಡುವುದನ್ನು ನಿಲ್ಲಿಸಿದ್ದಾರೆಂದು ಭಾವಿಸಬೇಡಿ, ಅವು ನಿಸ್ಸಂದೇಹವಾಗಿ ನಿರಂತರವಾಗಿ ಚರ್ಚಿಸಲ್ಪಡುವ ಸಂಗತಿಗಳು.ಹಾಗೆ ನೋಡಿದರೆ, ಮೊಬೈಲ್ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದಾಗ ಕೇವಲ ಎರಡು ಸರ್ವಿಸ್ ಪ್ರೊವೈಡರ್​ಗಳು ಅಸ್ತಿತ್ವದಲ್ಲಿದ್ದವು. ಒಂದು ಏರ್​ಟೆಲ್ ಮತ್ತೊಂದು ಸ್ಪೈಸ್. ಎರಡನೆಯದ್ದು ನಂತರದ ದಿನಗಳಲ್ಲಿ ಬೇರೆ ಯಾವುದೋ ದೊಡ್ಡ ಕಂಪನಿಯೊಂದಿಗೆ ವಿಲೀನಗೊಂಡಿತು.

ಅದಾದ ಮೇಲೆ ಹಲವಾಯ ಸರ್ವಿಸ್​ ಪ್ರೊವೈಡರ್​ಗಳು-ದೇಶೀಯ ಮತ್ತು ವಿದೇಶೀ ಭಾರತದಲ್ಲಿ ತಲೆಯೆತ್ತಿದವು. ಹೆಚ್ಚು ಕಡಿಮೆ ಅದೇ ಅವಧಿಯಲ್ಲಿ ಭಾರತ ಸರ್ಕಾರ ಅಧೀನದ ಭಾರತ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಸಹ ಅಸ್ತಿತ್ವಕ್ಕೆ ಬಂತು. ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ತೀವ್ರ ಸ್ಫರ್ಧೆ ಹೊರತಾಗಿಯೂ ಬಿಎಸ್​ಎನ್ಎಲ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಗ್ರಾಹಕರಿಗೆ ಸೇವೆಯನ್ನು ಒದಗಿಸುತ್ತಿದೆ.

ಭಾರತ ಸರ್ಕಾರ ಬಿಎಸ್ಎನ್​ಎಲ್ ಸಂಸ್ಥೆಯನ್ನು ಮುಚ್ಚಿಬಿಡಲಿದೆ ಎಂಬ ಊಹಾಪೋಹಗಳು ಹಬ್ಬಿದ್ದು ನಿಜಾವಾದರೂ ಅದನ್ನು ಧೃಡೀಕರಿಸುವ ಹೇಳಿಕೆ ಸರ್ಕಾರದಿಂದಾಗಲೀ, ಸಂಬಂಧಪಟ್ಟ ಸಚಿವರಿಂದಾಗಲೀ ಬಂದಿಲ್ಲ.

ಓಕೆ ವಿಷಯಕ್ಕೆ ಬರುವ. ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಮತ್ತು ಹೊಸ ಅಕರ್ಷಕ ಪ್ಲ್ಯಾನ್​ಗಳನ್ನು ಘೋಷಿಸಿದೆ. ಕಂಪನಿಯು ಓವರ್ ದಿ ಟಾಪ್ ಮಾಧ್ಯಮ ಸೇವೆಗಳನ್ನು ಅತ್ಯಂತ ಅಗ್ಗ ದರದಲ್ಲಿ ಗ್ರಾಹಕರಿಗೆ ಒದಗಿಸಲು ನಿಶ್ಚಯಿಸಿದೆ. ಪ್ರಸ್ತುತವವಾಗಿ ಬಿಎಸ್ಎನ್ಎಲ್​ನ ಌಡ್ ಅನ್ ಪ್ಯಾಕ್​ಗಳು ಎರಡು ಮಾಸಿಕ ದರದಲ್ಲಿ ದೊರೆಯುತ್ತಿವೆ, ರೂ.129 ಮತ್ತು ರೂ.199

ಮೂರು ತಿಂಗಳ ಪ್ಲ್ಯಾನ್ ಖರೀದಿಸುವ ಗ್ರಾಹಕರು ಮೊದಲ 3 ತಿಂಗಳುಗಳಿಗೆ ಮಾಸಿಕ ರೂ.129 ರಂತೆ ಹಣ ಪಾವತಿಸುತ್ತಾರೆ. ಮೂರು ತಿಂಗಳ ನಂತರ ಅವರು ರೂ 199 ಪಾವತಿಸಬೇಕಾಗುತ್ತದೆ.

BSNL

ಬಿಎಸ್ಎನ್ಎಲ್

ಓವರ್ ದಿ ಟಾಪ್ ಮಾಧ್ಯಮ ಸೇವೆಗಳನ್ನು ಬಿಎಸ್ಎನ್​ಎಲ್ ಮಾಸಿಕ ರೂ 129ರ ದರದಲ್ಲಿ ಒದಗಿಸುತ್ತಿದೆ.

ಌಡ್ ಅನ್ ಪ್ಯಾಕ್​ಗಳು ಒಟಿಟಿ ಪ್ಲಾಟ್​ಫರ್ಮ್​ಗಳಿಗೆ ಗ್ರಾಹಕರನ್ನು ಚಂದಾದಾರರನ್ನಾಗಿ ಪರಿವರ್ತಿಸುತ್ತವೆ. ಸೋನಿಲಿವ್, ವೂಟ್ ಸೆಲೆಕ್ಟ್​, ಝೀ5 ಪ್ರೀಮಿಯಮ್, ಯುಪ್​ಟಿಬಿ (ಎಲ್ಲ ಎನ್​ಸಿಎಫ್ ಚ್ಯಾನೆಲ್​ಗಳು) ಯುಪ್ ಟಿವಿ, ಮೂವೀಸ್ ಮುಂತಾದವುಗಳನ್ನು ನೋಡಬಹುದಾಗಿದೆ.

ಈ ಪ್ಲ್ಯಾನ್​ನಲ್ಲಿ ಗ್ರಾಹಕರು ಮಾಸಿಕ ರೂ.129 ರಲ್ಲಿ 300 ಕ್ಕೂ ಹೆಚ್ಚು ಲೈವ್ ಟಿವಿ ವಾಹಿನಿಗಳನ್ನು ವೀಕ್ಷಿಸಬಹುದು. ಒಂದು ತಿಂಗಳ ಅವಧಿಯಲ್ಲಿ 8,000 ಸಿನಿಮಾಗಳನ್ನು 500 ಕ್ಕೂ ಹೆಚ್ಚು ಟಿವಿ ಶೋಗಳನ್ನು ಅವರು ನೋಡಬಹುದು.

ಈ ಎಲ್ಲ ಆಫರ್​ಗಳನ್ನು ಯುಪ್​ಟಿವಿ ಌಪ್ ಅಡಿಯಲ್ಲಿ ಗ್ರಾಹಕರಿಗೆ ಒದಗಿಸಲಾಗುತ್ತಿದೆಯೆಂದು ಬಿಎಸ್ಎನ್ಎಲ್ ಹೇಳಿದೆ. ಬಿಎಸ್ಎನ್ಎಲ್ ಇಂಟರ್​ನೆಟ್ ಡಾಟಾ ಪ್ರಪಂಚದಾದ್ಯಂತ ಅಗ್ಗ ದರದಲ್ಲಿ ಸಿಗುತ್ತಿದೆ. ಮಾರುಕಟ್ಟೆಯಲ್ಲಿರುವ ಭಾರೀ ಸ್ಫರ್ಧೆ ನಡುವೆಯೂ ಬಿಎಸ್ಎನ್ಎಲ್ ಎಲ್ಲರಿಗಿಂತ ಕಡಿಮೆ ದರದಲ್ಲಿ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತಿದೆ. ಜಿಯೊ, ಏರ್​ಟೆಲ್​, ವಿಐ ಮೊದಲಾದ ಹೆಸರಾಂತ ಕಂಪನಿಗಳಿಗಿಂತ ಅಗ್ಗ ದರದಲ್ಲಿ ಬಿಎಸ್ಎನ್ಎಲ್ ಸೇವೆಗಳನ್ನು ನೀಡುತ್ತಿದೆ.

ಇದನ್ನೂ ಓದಿ: Reliance Jio ದಿಂದ ಗ್ರಾಹಕರಿಗೆ ಸಿಹಿ ಸುದ್ದಿ! ಜಿಯೋ ಪರಿಚಯಿಸಿದ ಮೂರು ವಿಶೇಷ ಆಫರ್​ಗಳಿವು

Published On - 11:13 pm, Fri, 19 March 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್