AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Reliance Jioದಿಂದ ಗ್ರಾಹಕರಿಗೆ ಸಿಹಿ ಸುದ್ದಿ! ಜಿಯೋ ಪರಿಚಯಿಸಿದ ಮೂರು ವಿಶೇಷ ಆಫರ್​ಗಳಿವು

ಪ್ರತಿ ತಿಂಗಳು ರಿಚಾರ್ಜ್ ಮಾಡಿ ಮಾಡಿ ಬೇಸತ್ತು ಹೋಗುವ ಬದಲು ಈ ಮಾರ್ಗವನ್ನು ನೀವು ಅನುಸರಿಸಬಹುದಾಗಿದೆ. ಹೊಸ ಫೋನ್, ಸಿಮ್ ಖರೀದಿಸುವವರಿಗೂ ಇಲ್ಲೊಂದು ಆಫರ್ ಇದೆ.

Reliance Jioದಿಂದ ಗ್ರಾಹಕರಿಗೆ ಸಿಹಿ ಸುದ್ದಿ! ಜಿಯೋ ಪರಿಚಯಿಸಿದ ಮೂರು ವಿಶೇಷ ಆಫರ್​ಗಳಿವು
ಜಿಯೋ 888 ರೂ. ಪ್ಲ್ಯಾನ್: ಜಿಯೋ ಪ್ರಿಪೇಯ್ಡ್ ಬಳಕೆದಾರರಿಗೆ 888 ರೂ. ಪ್ರಿಪೇಯ್ಡ್ ರೀಚಾರ್ಜ್ ಆಯ್ಕೆ ನೀಡಿದ್ದು, ಇದರ ವಾಲಿಡಿಟಿ 84 ದಿನಗಳು. ಈ ಪ್ಲ್ಯಾನ್​ನಲ್ಲೂ ಅನಿಯಮಿತ ಕರೆ ಹಾಗೂ ಪ್ರತಿ ದಿನ 2GB ಡೇಟಾ ಸಿಗಲಿದೆ. ಇನ್ನು ಬೋನಸ್ ಆಗಿ 5 ಜಿಬಿ 4 ಜಿ ಡೇಟಾವನ್ನು ಕೂಡ ನೀಡಲಿದೆ. ಅದರೊಂದಿಗೆ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಉಚಿತ ಚಂದಾದಾರಿಕೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್ ಪ್ರವೇಶ ಪಡೆಯಬಹುದು.
TV9 Web
| Updated By: ganapathi bhat|

Updated on:Apr 06, 2022 | 7:30 PM

Share

ಕೊವಿಡ್-19 ಹಾಗೂ ಲಾಕ್​ಡೌನ್ ಕಾರಣದಿಂದ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇನ್ನೇನು ಸ್ವಲ್ಪವೇ ಚೇತರಿಕೆ ಕಾಣಬೇಕು ಎಂಬಷ್ಟರಲ್ಲಿ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇಂಧನ ದರ ಹೆಚ್ಚಳವಾಗುವ ಮೂಲಕ ಉಳಿದ ದಿನಬಳಕೆಯ ಸಾಮಾಗ್ರಿ ಲೆಕ್ಕಾಚಾರವು ಏರುಪೇರಾಗಿದೆ. ಹೀಗಾಗಿ ಮನೆ, ಸಂಸಾರ ಸಂಭಾಳಿಸುವುದು ಕಷ್ಟ ಎಂಬಂತಾಗಿದೆ. ಈ ನಡುವೆ ಮೊಬೈಲ್ ಫೋನ್, ಅಂತರ್ಜಾಲ ಬಳಸುವವರು ಫೋನ್​ಗೆ ರಿಚಾರ್ಜ್ ಮಾಡಿಸಲು ಕಷ್ಟಪಡುವುದಿದೆ. ಫೋನ್ ಇಲ್ಲದವರು ಈಗ ಯಾರೂ ಇಲ್ಲವೇನೋ. ಫೋನ್ ರಿಚಾರ್ಜ್ ಮಾಡುವುದು ಎಲ್ಲರಿಗೂ ಅನಿವಾರ್ಯ.

ಪ್ರತಿ ತಿಂಗಳು ರಿಚಾರ್ಜ್ ಮಾಡಿ ಮಾಡಿ ಬೇಸತ್ತು ಹೋಗುವ ಬದಲು ಈ ಮಾರ್ಗವನ್ನು ನೀವು ಅನುಸರಿಸಬಹುದಾಗಿದೆ. ಹೊಸ ಫೋನ್, ಸಿಮ್ ಖರೀದಿಸುವವರಿಗೂ ಇಲ್ಲೊಂದು ಆಫರ್ ಇದೆ. ಬಳಕೆದಾರರಿಗೆ ವಿಧವಿಧದ ಆಫರ್​ಗಳನ್ನು ನೀಡಿ ಟೆಲಿಕಾಮ್ ವಿಭಾಗದಲ್ಲಿ ಸಂಚಲನ ಮೂಡಿಸಿದ್ದ ರಿಲಯನ್ಸ್ ಜಿಯೋ ಈಗ ಹೊಸ ಆಫರ್​ನ್ನು ಪರಿಚಯಿಸಿದೆ. ವರ್ಷಕ್ಕೆ ಒಂದು ಬಾರಿ ರಿಚಾರ್ಜ್ ಮಾಡಿಸಿಕೊಂಡರೆ ಬಳಿಕ ವರ್ಷಪೂರ್ತಿ ತಲೆಕೆಡಿಸಿಕೊಳ್ಳದೆ, ಆರಾಮಾಗಿರಬಹುದು.

ಕಂಪೆನಿಯ ಮಾಹಿತಿ ಪ್ರಕಾರ, ಜಿಯೋ ನೀಡುವ ಆಫರ್ ನಿನ್ನೆಯಿಂದ (ಮಾರ್ಚ್ 1) ಆರಂಭವಾಗಿದೆ. ಈ ಆಫರ್​ನಂತೆ ಗ್ರಾಹಕರು ₹ 1,999ಕ್ಕೆ ಹೊಸ ಫೋನ್ ಪಡೆಯಬಹುದಾಗಿದೆ. ಜತೆಗೆ ಎರಡು ವರ್ಷಗಳಿಗೆ ಅನ್​ಲಿಮಿಟೆಡ್ ಕರೆ ಮಾಡುವ ಸೌಲಭ್ಯವನ್ನು ಜಿಯೋ ನೀಡಲಿದೆ. ಇಷ್ಟೇ ಅಲ್ಲದೆ ಹೆಚ್ಚಿನ ಆಫರ್​ಗಳನ್ನೂ ಬಳಕೆದಾರರು ಪಡೆಯಬಹುದಾಗಿದೆ. ಅವುಗಳು ಯಾವುವು ಎಂದು ವಿವರಿಸಲಾಗಿದೆ.

₹ 1,999 ಜಿಯೋಫೋನ್ ಖರೀದಿಸಿದರೆ ಉಳಿದದ್ದೆಲ್ಲವೂ ಉಚಿತ ಈ ಆಫರ್ ಜಿಯೋದ ಹೊಸ ಬಳಕೆದಾರರಿಗೆ ಮಾತ್ರ ಲಭ್ಯವಿರಲಿದೆ. ಗ್ರಾಹಕರು ಮೊದಲ ಬಾರಿಗೆ ಜಿಯೋಫೋನ್ ಖರೀದಿಸಿದರೆ ಕೆಲ ಆಫರ್​ಗಳು ಸಿಗಲಿವೆ. ಅನ್​ಲಿಮಿಟೆಡ್ ಕರೆ ಸೌಲಭ್ಯ ಮತ್ತು ತಿಂಗಳಿಗೆ 2GB ಡಾಟಾ ಲಭ್ಯವಾಗಲಿದೆ.

₹ 1499 ಫೋನ್​ನೊಂದಿಗೆ 1 ವರ್ಷ ಎಲ್ಲವೂ ಉಚಿತ ಈ ಆಫರ್ ಕೂಡ ಜಿಯೋದ ಹೊಸ ಗ್ರಾಹಕರಿಗೆ ಮಾತ್ರ ಸಿಗಲಿದೆ. ಹೊಸದಾಗಿ ₹ 1499 ಜಿಯೋ ಫೋನ್ ಖರೀದಿ ಮಾಡಿದವರಿಗೆ ಅನ್​ಲಿಮಿಟೆಡ್ ಕಾಲ್ ಸೌಲಭ್ಯ ಮತ್ತು ತಿಂಗಳಿಗೆ 2GB ಹೈ ಸ್ಪೀಡ್ ಡಾಟಾ ಸೇವೆ ಸಿಗಲಿದೆ.

₹ 749 ಆಕರ್ಷಕ ಆಫರ್​ಗಳು ಈ ಆಫರ್ ಈಗಾಗಲೇ ಜಿಯೋಫೋನ್ ಗ್ರಾಹಕರಾದವರಿಗೂ ಲಭ್ಯವಾಗಲಿದೆ. ಈ ಪ್ಲಾನ್​ನಂತೆ ಅನ್​ಲಿಮಿಟೆಡ್ ಕರೆ, ತಿಂಗಳಿಗೆ 2GB ಹೈ ಸ್ಪೀಡ್ ಡಾಟಾ ಲಭ್ಯವಾಗಲಿದೆ. 749₹ಗೆ ಒಂದು ವರ್ಷದ ಅವಧಿಗೆ ಈ ಸೇವೆ ಸಿಗಲಿದೆ. ಬಳಕೆದಾರರು ಈ ಎಲ್ಲಾ ಆಫರ್​ಗಳನ್ನು ಎಲ್ಲಾ ರಿಲಯನ್ಸ್ ಹಾಗೂ ಜಿಯೋ ಸ್ಟೋರ್​ಗಳಿಂದ ಪಡೆಯಬಹುದಾಗಿದೆ.

ಇದನ್ನೂ ಓದಿ: Debit Credit Card: ಆನ್​ಲೈನ್ ಶಾಪಿಂಗ್​ಗೆ ನೀವು ಕಾರ್ಡ್ ಬಳಸ್ತೀರಾ? ಮೋಸ ಆಗದಿರಲು ಹೀಗೆ ಮಾಡಿ

ಇದನ್ನೂ ಓದಿ: ಇಂಧನ ದರ ಏರಿಕೆ ಬಿಸಿ ತಡೆಯದೆ ಪೆಟ್ರೋಲ್ ಇಂಜಿನ್ ಬದಲು ಬ್ಯಾಟರಿ ಅಳವಡಿಕೆ! ಹೀಗೆ ಮಾಡಬಹುದೇ?

Published On - 5:48 pm, Tue, 2 March 21