AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣಾ ಪರ್ವಕಾಲ; ಸಿನಿತಾರೆಯರ ರಾಜಕೀಯ ಸೇರುವ ಹಂಬಲಕ್ಕೆ ನೀರೆರೆದ ಬಂಗಾಳ

West Bengal Assembly elections 2021: ಇದುವರೆಗೆ ಬಂಗಾಳದ ಮನರಂಜನಾ ಉದ್ಯಮವನ್ನು ತೃಣಮೂಲ ಕಾಂಗ್ರೆಸ್​ ತನ್ನ ಬಿಗಿ ಹಿಡಿತದಲ್ಲಿ ಇರಿಸಿಕೊಂಡಿತ್ತು. ಆದರೆ ಇದೀಗ, ಟಾಲಿವುಡ್​ನಲ್ಲಿನ ಕೆಲ​ ಕಲಾವಿದರು ಕೇಸರಿ ಬಣ್ಣ ಬಳಿದುಕೊಳ್ಳುತ್ತಿದ್ದಾರೆ.

ಚುನಾವಣಾ ಪರ್ವಕಾಲ; ಸಿನಿತಾರೆಯರ ರಾಜಕೀಯ ಸೇರುವ ಹಂಬಲಕ್ಕೆ ನೀರೆರೆದ ಬಂಗಾಳ
ಬಿಜೆಪಿ ಸೇರ್ಪಡೆಗೊಂಡ ನಟಿ ಪಾಪಿಯಾ ಅಧಿಕಾರಿ ಮತ್ತು ಯಶ್​ ದಾಸ್​ಗುಪ್ತಾ
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Mar 02, 2021 | 7:21 PM

Share

ಚುನಾವಣೆ ಹತ್ತಿರವಾದಂತೆ ರಾಜಕೀಯ ಪಕ್ಷಗಳ ಕಸರತ್ತು ಸಹಜವಾಗಿ ಜೋರಾಗುತ್ತದೆ. ಕೆಲವರು ಪಕ್ಷ ತೊರೆದರೆ ಇನ್ನು ಕೆಲವರು ಪಕ್ಷ ಸೇರುತ್ತಾರೆ. ರಾಜಕೀಯ ಪಕ್ಷಗಳಿಗೆ ಯಾರನ್ನು ಸೇರಿಸಿಕೊಂಡರೆ ಎಂಬ ಆಲೋಚನೆ; ಜತೆಗೆ ರಾಜಕೀಯವಾಗಿ ಗುರುತಿಸಿಕೊಳ್ಳುವ, ಬೆಳೆಯುವ ಮಹತ್ವಾಕಾಂಕ್ಷೆ ಹೊಂದಿರುವ ಇತರ ವಿವಿಧ ವಲಯದ ವ್ಯಕ್ತಿಗಳೂ ಇಂಥಹುದೇ ಆಲೋಚನೆ ಹೊಂದಿರುತ್ತಾರೆ. ಚುನಾವಣೆ ಎನ್ನುವುದು ರಾಜಕೀಯ ಸೇರುವವರ ಪಾಲಿನ ಪರ್ವ ಕಾಲ. ಇದೇ ಮಾತು ಪಶ್ಚಿಮ ಬಂಗಾಳ ರಾಜಕೀಯಕ್ಕೂ ಅನ್ವಯಿಸುತ್ತದೆ.

ಕನ್ನಡ ಚಿತ್ರರಂಗಕ್ಕೆ ಗಾಂಧೀನಗರ ಹೇಗೋ ಬಂಗಾಳಿ ಚಿತ್ರರಂಗಕ್ಕೆ ಟಾಲಿಗಂಜ್. ದಕ್ಷಿಣ ಕೋಲ್ಕತ್ತಾದಲ್ಲಿರುವ ಟಾಲಿಗಂಜ್ ಬೆಂಗಾಳಿ ಚಿತ್ರರಂಗದ ಪಾಲಿಗೆ ಮಹತ್ವದ ಸ್ಥಳ. ಇದೇ ಟಾಲಿಗಂಜ್​ನಿಂದ ಟಾಲಿವುಡ್ ಎಂಬ ಅಂಕಿತ ಪಡೆಯಿತು ಬೆಂಗಾಲಿ ಚಿತ್ರರಂಗ (ತೆಲುಗು ಚಿತ್ರರಂಗವನ್ನೂ ಟಾಲಿವುಡ್ ಎಂದೇ ಕರೆಯಲಾಗುತ್ತದೆ). ಇದುವರೆಗೆ ಬಂಗಾಳದ ಮನರಂಜನಾ ಉದ್ಯಮವನ್ನು ತೃಣಮೂಲ ಕಾಂಗ್ರೆಸ್​ ತನ್ನ ಬಿಗಿಹಿಡಿತದಲ್ಲಿ ಇರಿಸಿಕೊಂಡಿತ್ತು. ಆದರೆ ಇದೀಗ, ಟಾಲಿವುಡ್​ನಲ್ಲಿನ ಕೆಲ​ ಕಲಾವಿದರು ಕೇಸರಿ ಬಣ್ಣ ಬಳಿದುಕೊಳ್ಳುತ್ತಿದ್ದಾರೆ.

ಪಶ್ಚಿಮ ಬಂಗಾಳಿಗರ ಮನಸ್ಸನ್ನು ಶತಪ್ರಯತ್ನ ಮಾಡಿಯಾದರೂ ಗೆಲ್ಲಬೇಕೆಂಬ ಹುಕಿಯಲ್ಲಿ ಬಹು  ಪ್ರಚಾರದಲ್ಲಿ ನಿರತವಾಗಿರುವ ಬಿಜೆಪಿಗೆ ಹಲವು ತಾರಾ ವ್ಯಕ್ತಿಗಳು ಸೇರ್ಪಡೆಯಾಗುತ್ತಿದ್ದಾರೆ. ಚುನಾವಣೆ ಶುರುವಾಗುವ ದಿನ ಮಾರ್ಚ್ 27ಕ್ಕೆ ಇನ್ನೇನು ಒಂದು ತಿಂಗಳೂ ಇಲ್ಲ. ಸ್ಥಳೀಯವಾಗಿ ಪ್ರಬಲ ನಾಯಕರ ಕೊರತೆ ಹೊಂದಿರುವ ಬಿಜೆಪಿಯಲ್ಲಿ ಅವಕಾಶವಿರುವುದನ್ನು ಮನಗಂಡ ಚಿತ್ರರಂಗದ ಸ್ಟಾರ್​ಗಳು ಬಿಜೆಪಿಯತ್ತ ಮುಖಮಾಡುತ್ತಿದ್ದಾರೆ. ಕಳೆದ ಒಂದೇ ವಾರದಲ್ಲಿ ಶ್ರಾವಂತಿ ಚಟರ್ಜಿ ಮತ್ತು ಪಾಯೆಲ್ ಸರ್ಕಾರ್ ಬಿಜೆಪಿ ಧ್ವಜ ಹಿಡಿದಿದ್ದಾರೆ.

ಪಶ್ಚಿಮ ಬಂಗಾಳದ ಕಿರುತೆರೆ ಮತ್ತು ಚಿತ್ರರಂಗದ ವಲಯದಲ್ಲಿ ನಿರೂಪಕರಾಗಿ ಗುರುತಿಸಿಕೊಂಡಿರುವ ಯಶ್​ ದಾಸ್​ಗುಪ್ತಾ ಅವರಿಗೆ ಫೆಬ್ರವರಿ ಮೂರನೇ ವಾರದಲ್ಲಿ ಬಿಜೆಪಿ ಬಾಗಿಲು ತೆರೆದಿತ್ತು. ‘ಬಿಜೆಪಿ ಸೇರಿದ ತಕ್ಷಣ ಮಮತಾ ಬ್ಯಾನರ್ಜಿ ಅವರ ವಿರುದ್ಧ ಹೇಳಿಕೆ ನೀಡುತ್ತೇನೆ ಎಂದು ಬಯಸಬೇಡಿ. ದೀದಿಯ ಆಶೀರ್ವಾದ ಪಡೆದೇ ಕಮಲ ಪಾಳಯ ಸೇರಿದ್ದಾಗಿ’ ಅವರು ಬಹಿರಂಗವಾಗಿ ಹೇಳಿಕೊಂಡಿದ್ದರು. ಟಿಎಂಸಿ ಸಂಸದೆ ನುಸ್ರತ್ ಜಹಾನ್ ಅವರ ಆಪ್ತರೂ ಆಗಿರುವ ಯಶ್ ದಾಸ್​ಗುಪ್ತಾ ಬಿಜೆಪಿ ಸೇರ್ಪಡೆ ನಿಜಕ್ಕೂ ಕುತೂಹಲದ ನಡೆ.

PAYEL SARKAR AND SRIBANTI CHATERJEE

ಬಿಜೆಪಿ ಸೇರಿರುವ ನಟಿಯರಾದ ಪಾಯೆಲ್ ಸರ್ಕಾರ್ (ಎಡ) ಮತ್ತು ಶ್ರಾವಂತಿ ಚಟರ್ಜಿ (ಬಲ)

ಬಿಜೆಪಿ ಧ್ವಜ ಹಿಡಿದ ನಟಿಯರು ಅದಕ್ಕೂ ಕೆಲ ತಿಂಗಳ ಮುನ್ನವೇ ಬಿಜೆಪಿ ಸೇರಿದ್ದ ಹಿರಿಯ ನಟಿ ಅಂಜನಾ ಬಸು ಅವರ ಮಾತುಗಳನ್ನು ಇಲ್ಲಿ ಉಲ್ಲೇಖಿಸಲೇಬೇಕು. ‘ನಾನು ಬಿಜೆಪಿಗೆ ಬೆಂಬಲ ಘೋಷಿಸಿದ್ದರಿಂದ ನಾನು ನಟಿಸುತ್ತಿದ್ದ ಧಾರಾವಾಹಿ ಪ್ರಸಾರವನ್ನು ಸ್ಥಗಿತಗೊಳಿಸಲಾಗಿತ್ತು. ಬಿಜೆಪಿ ಬೆಂಬಲಿಸಿದ ಕಾರಣದಿಂದ ಯಾವ ನಿರ್ಮಾಪಕರೂ ನನಗೆ ಹೊಸ ಪ್ರಾಜೆಕ್ಟ್​ ನೀಡಲಿಲ್ಲ. ನನ್ನ ಕುರಿತು ತಾರತಮ್ಯ ಧೋರಣೆ ತಳೆಯಲಾಯಿತು. ಇಂತಹ ಧೋರಣೆಗಳು ಕೊನೆಗೊಳ್ಳಬೇಕು’ ಎಂದು ಅಂಜನಾ ಬಸು ಅವರು ಬಿಜೆಪಿಗೆ ಸೇರಿದ ಸಮಾರಂಭದಲ್ಲಿ ಹೇಳಿಕೊಂಡಿದ್ದರು. ಅಂಜನಾ ಬಸು ಅವರ ಜತೆ ಪ್ರಸಿದ್ಧ ನಟಿ, ರಂಗಭೂಮಿ ಕಲಾವಿದೆ ಪಾಪಿಯಾ ಅಧಿಕಾರಿ, ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಸಕ್ರಿಯರಾಗಿರುವ ಸೌಮಿಲಿ ಘೋಷ್ ಬಿಸ್ವಾಸ್ ಸಹ ಬಿಜೆಪಿ ಸೇರ್ಪಡೆಗೊಂಡಿದ್ದರು.

ಬಂಗಾಳಿ ಚಿತ್ರರಂಗದ ಹಿರಿಯ ನಟ ಮತ್ತು ತೃಣಮೂಲ ಕಾಂಗ್ರೆಸ್​ ಪಕ್ಷದಿಂದ ಶಾಸಕರಾಗಿದ್ದ ಚಿರಂಜೀತ್ ಚಕ್ರವರ್ತಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಅವರು ಟಿಎಂಸಿ ತ್ಯಜಿಸಿ ಬಿಜೆಪಿ ಸೇರುವ ಕುರಿತು ಊಹಾಪೋಹಗಳು ಹುಟ್ಟಿಕೊಂಡರೂ ಅವುಗಳನ್ನು ಚಿರಂಜೀತ್ ಚಕ್ರವರ್ತಿ ಅಲ್ಲಗಳೆದಿದ್ದರು. ಟಿಎಂಸಿ ಪಕ್ಷವನ್ನು ತೊರೆದರೂ ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ. ಮುಂಚಿನಂತೆ ಚಿತ್ರರಂಗದಲ್ಲಿ ಸಕ್ರಿಯವಾಗುತ್ತೇನೆ. ಮತ್ತು ರಾಜಕೀಯ ರಹಿತ ಜೀವನ ನಡೆಸುತ್ತೇನೆ ಎಂದು ಅವರು ತಮ್ಮ ಮುಂದಿನ ದಾರಿಯನ್ನು ಸ್ಪಷ್ಟಪಡಿಸಿದ್ದರು.

ಫೆಬ್ರವರಿಯಲ್ಲಿ ರಾಜ್ಯ ಬಿಜೆಪಿ ನಾಯಕ ಅನಿರ್ಭನ್ ಗಂಗೂಲಿ, ಬಂಗಾಳಿ ಚಿತ್ರರಂಗದ ಕಲಾವಿದ ಪ್ರೊಸೆಂಜಿತ್ ಚಟರ್ಜಿ ಅವರನ್ನು ಭೇಟಿಯಾಗಿದ್ದರು. ಈ ಭೇಟಿ ರಾಜಕೀಯವಾಗಿ ಹಲವು ವಿಶ್ಲೇಷಣೆ ಪಡೆದುಕೊಂಡಿತಾದರೂ ಅನಿರ್ಭನ್ ಗಂಗೂಲಿ ಈ ಭೇಟಿಯ ಹಿಂದೇ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದಿದ್ದರು.

JUNE MALLIA AND SAYONI GHOSH

ನಟಿ ಜೂನ್ ಮಾಲಿಯಾ (ಎಡ) ಮತ್ತು ಸಯೋನಿ ಘೋಷ್ (ಬಲ) ಅವರ ಜನಪ್ರಿಯತೆ ಟಿಎಂಸಿಗೆ ಎಷ್ಟು ನೆರವಾಗಲಿದೆ?

ಹಿಂದೆಬಿದ್ದಿಲ್ಲ ತೃಣಮೂಲ ಕಾಂಗ್ರೆಸ್ ತೃಣಮೂಲ ಕಾಂಗ್ರೆಸ್ ಸಹ ಚಿತ್ರೋದ್ಯಮದ ತಾರಾಮಣಿಗಳನ್ನು ಆಯಸ್ಕಾಂತದಂತೆ ಸೆಳೆಯುತ್ತಿದೆ. ಪಶ್ಚಿಮ ಬಂಗಾಳ ಮಹಿಳಾ ಆಯೋಗದ ಸದಸ್ಯೆಯೂ ಆಗಿರುವ ನಟಿ ಜೂನ್ ಮಾಲಿಯಾ, ವರ್ಜಿನ್ ಮೊಹಿತೋ ಮತ್ತು ಡಾನ್ಸ್ ಬಾಂಗ್ಲಾ ಡಾನ್ಸ್ ಕಾರ್ಯಕ್ರಮಗಳಿಂದ ಒಳ್ಳೆಯ ಜನಪ್ರಿಯತೆ ಗಳಿಸಿದವರು. ಕೆಲ ತಿಂಗಳ ಹಿಂದೆ ಅವರು ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ. ಗಾಯಕಿ, ನಟಿ ಸಯೋನಿ ಘೋಷ್ ಸಹ ದೀದಿ ಪಕ್ಷ ಸೇರಿದ್ದಾರೆ.

ಕಂಚನ್ ಮಲ್ಲಿಕ್ ಅವರದ್ದು ಬಂಗಾಳಿ ಕಿರುತೆರೆಯಲ್ಲಿ ದೊಡ್ಡ ಹೆಸರು. ಜತೆಗೆ ಅವರ ಸಿನಿಮಾಗಳೂ ಜನಪ್ರಿಯ. ತೃಣಮೂಲ ಕಾಂಗ್ರೆಸ್ ಸೇರಿರುವ ಅವರು, ದೀದಿ ಮತ್ತೆ ಅಧಿಕಾರ ಪಡೆಯಲು ತಮ್ಮ ಜನಪ್ರಿಯತೆಯನ್ನು ಎಷ್ಟರ ಮಟ್ಟಿಗೆ ಬಳಸುತ್ತಾರೆ ಎಂಬುದನ್ನು ನೋಡಲು ಕಾಯಬೇಕಿದೆ.

ಕ್ರಿಕೇಟಿಗ ಮನೋಜ್ ತಿವಾರಿ ಅವರ ಹೆಸರು ಬಂಗಾಳದ ಆಚೆಗೂ ಜನಪ್ರಿಯ. ಬಲಗೈ ದಾಂಡಿಗರಾಗಿರುವ ಅವರು, ಕೋಲ್ಕತ್ತಾ ನೈಟ್ ರೈಡರ್ಸ್​, ಕಿಂಗ್ಸ್ ಇಲವೆನ್ ಪಂಜಾಬ್ ಮತ್ತು ಪುಣೆ ಸೂಪರ್​ಜೈಂಟ್ಸ್ ತಂಡಗಳಲ್ಲಿ ಆಡಿರುವ ಅವರು ಟಿಎಂಸಿಗೆ ಬೆಂಬಲ ಘೋಷಿಸಿದ್ದಾರೆ.

MANOJ TIWARI

ಮೈದಾನದಲ್ಲಿ ರನ್ ಗಳಿಸಿದಂತೆ ಮತ ಗಳಿಸುವರೇ ಕ್ರಿಕೇಟಿಗ ಮನೋಜ್ ತಿವಾರಿ?

ಯಾವುದೇ ತಾರಾಮಣಿಗಳು ಪಕ್ಷ ಸೇರಿದರೂ ತಮ್ಮ ಜನಪ್ರಿಯತೆ ಬಳಸಿಕೊಂಡು ಮತಬೇಟೆ ನಡೆಸಲು ಎಷ್ಟರಮಟ್ಟಿಗೆ ಯಶ ಕಾಣುತ್ತಾರೆ ಎಂಬುದು ಬಹಳ ಮುಖ್ಯ. ಏಕೆಂದರೆ ದಿಗ್ಗಜ ನಟರೇ ಚುನಾವಣೆಯಲ್ಲಿ ಮುಗ್ಗರಿಸಿ ಬಿದ್ದ ಹಲವು ಉದಾಹರಣೆಗಳು ಭಾರತೀಯ ರಾಜಕೀಯದಲ್ಲಿದೆ. ಪರದೆಯ ಮೇಲಿನ ಜನಪ್ರಿಯತೆಯೇ ಬೇರೆ; ಚುನಾವಣೆಯೇ ಬೇರೆ.ಇದು ಮತದಾರರು ಎಲ್ಲಾ ಕಾಲದಲ್ಲೂ ನೆನಪಿಡುವ ಸತ್ಯ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಘೋಷಣೆಗಳ ಪ್ರವಾಹ: ಬಿಜೆಪಿಗೆ ಬೇಕಾಯ್ತು ಇಟಲಿ ಮೂಲದ ಹಾಡಿನ ಸಹಾಯ

Published On - 7:21 pm, Tue, 2 March 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ