Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು
Kannada News Today: ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.
ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್ಸೈಟ್ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ಟಿವಿ9 ಕನ್ನಡ ಡಿಜಿಟಲ್ ನಿಮ್ಮ ಮುಂದೆ ಪ್ರಸ್ತುತ ಪಡಿಸಿದೆ, ನೋಡಿ.
1. ಮನೆಗೇ ಬಂದು ಲಸಿಕೆ ಹಾಕಿದ ಆರೋಗ್ಯ ಸಿಬ್ಬಂದಿ, ಸಚಿವ ಬಿ.ಸಿ. ಪಾಟೀಲ್ರಿಂದ ಇದೆಂಥಾ ದರ್ಬಾರ್? ಬಿ.ಸಿ. ಪಾಟೀಲ್ ನರ್ಸ್ಗಳನ್ನ ತಮ್ಮ ಮನೆಗೆ ಕರೆಸಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಸಚಿವರಾದ ಮಾತ್ರಕ್ಕೆ ಆರೋಗ್ಯ ಸಿಬ್ಬಂದಿಯನ್ನೇ ತಮ್ಮ ಮನೆಗೆ ಕರೆಸಿ ದರ್ಪ ತೋರಿಸುವುದು ಎಷ್ಟು ಸರಿ ಎಂದು ಕೆಲವರು ಸಚಿವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. Link: ಸಚಿವ ಬಿ.ಸಿ. ಪಾಟೀಲ್ರಿಂದ ಇದೆಂಥಾ ದರ್ಬಾರ್..?
2. ಹ್ಯಾಂಡ್ ಶೇಕ್ ಮಾಡಲು ಬಂದ ದಿವ್ಯಾರನ್ನು ಅನಾಮತ್ತು ಎತ್ತಿಕೊಂಡ ಪ್ರಶಾಂತ್ ಸಂಬರಗಿ ಬಿಗ್ ಬಾಸ್ ಮನೆ ಒಳಗೆ ಸೇರಿದ ನಂತರ ಇಬ್ಬರ ನಡುವೆ ಆತ್ಮೀಯತೆ ಬೆಳೆಯುವುದು ಹೊಸದೇನಲ್ಲ. ಈ ಮೊದಲು ಮನೆ ಒಳಗೆ ಹೋದ ಅನೇಕ ನಡುವೆ ಪ್ರೀತಿ ಬೆಳೆದಿದ್ದಿದೆ. ಅದೇ ರೀತಿ ಈಗ ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಜತೆ ಆತ್ಮೀಯತೆ ಬೆಳೆಯುತ್ತಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. Link: ದಿವ್ಯಾರನ್ನು ಅನಾಮತ್ತು ಎತ್ತಿಕೊಂಡ ಪ್ರಶಾಂತ್ ಸಂಬರಗಿ
3. iPhoneಗಳಿಗೆ ಭರ್ಜರಿ ರಿಯಾಯಿತಿ; ತಿಂಗಳಿಗೆ ಕೇವಲ 899 ರೂ ಕಟ್ಟಿ iPhone 6 ಖರೀದಿಸಿ ದುಬಾರಿ ಬೆಲೆಯಿಂದಾಗಿ ಎಲ್ಲರ ಕೈಗೆ ಐಫೋನ್ ಸಿಗುವುದು ಕಷ್ಟ. ಅಂತಹ ಗ್ರಾಹಕರು ತಾವು ನಿರೀಕ್ಷೆ ಮಾಡಿರದ ಬೆಲೆಯಲ್ಲಿ ಈಗ ಐಫೋನ್ ಕೊಳ್ಳಬಹುದು. Link: ಭರ್ಜರಿ ರಿಯಾಯಿತಿ; ತಿಂಗಳಿಗೆ ಕೇವಲ 899 ರೂ ಕಟ್ಟಿ iPhone 6 ಖರೀದಿಸಿ
4. ಈ ಬೆಳಗಾವಿಯ ಕೋಣ ‘ಕರ್ನಾಟಕ ಕಿಂಗ್’ ಬಿರುದಾಂಕಿತ! ದಪ್ಪ ಕಾಲುಗಳು, ದೈತ್ಯಾಕಾರದ ದೇಹವನ್ನು ಹೊಂದಿರುವ ಈ ಕೋಣದ ಹೆಸರು ಗಜೇಂದ್ರ. ಕರ್ನಾಟಕದ ಕಿಂಗ್ ಅಂತಾನೇ ಫೇಮಸ್ ಆಗಿರುವ ಈ ಗಜೇಂದ್ರನ ನಿರ್ವಹಣೆ ಕಷ್ಟ. ಆದರೂ ಮನೆಯ ಮಗನಂತೆ ಸಾಕಿದ್ದಾರೆ ವಿಲಾಸ್ ನಾಯಿಕ ಎಂಬ ರೈತ. Link: ಮನೆ ಮಗನಂತೆ ಕೋಣ ಸಾಕಿರುವ ಬೆಳಗಾವಿ ರೈತ
5. ಕಾಮೋತ್ತೇಜಕವಂತೆ ಕತ್ತೆ ಮಾಂಸ; ಜೀವ ಉಳಿಸಿಕೊಳ್ಳುವುದೇ ಕಷ್ಟವಾಗಿಬಿಟ್ಟಿದೆ ಈಗ ಈ ಮೂಕಪ್ರಾಣಿಗೆ ಕತ್ತೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದ್ದರಿಂದ ಕತ್ತೆಗಳ ಸಂಖ್ಯೆ ಆಂಧ್ರ ಪ್ರದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೆ ಈ ಕತ್ತೆಗಳ ಹತ್ಯೆ, ಮಾಂಸ ಮಾರಾಟದ ಅಕ್ರಮ ದಂಧೆ ಮಾಡುವವರ ಜಾಲ ಬೆಳೆಯುತ್ತಲೇ ಇದೆ. Link: ಜೀವ ಉಳಿಸಿಕೊಳ್ಳುವುದೇ ಕಷ್ಟವಾಗಿಬಿಟ್ಟಿದೆ ಈಗ ಈ ಮೂಕಪ್ರಾಣಿಗೆ
6. ಕೊರೊನಾ ಲಸಿಕೆ ಹಾಕಿಸಿಕೊಂಡ 102 ವರ್ಷದ ನಿವೃತ್ತ ಸೇನಾಧಿಕಾರಿ ನೀಡಿದ 2 ಕಾರಣಗಳಿವು ಹಿರಿಯ ಯೋಧರು ಲಸಿಕೆ ಪಡೆದು ಮಾತನಾಡಿರುವ ವಿಡಿಯೊವನ್ನು ರಾಜ್ಯದ ಆರೋಗ್ಯ ಸಚಿವರು ಹಂಚಿಕೊಂಡಿದ್ದಾರೆ. ಹಿರಿಯ ವ್ಯಕ್ತಿ ರಾಜ್ಯದ ಇತರರಿಗೂ ಮಾದರಿ ಆಗಬೇಕು ಎಂದು ಡಾ.ಕೆ. ಸುಧಾಕರ್ ಆಶಯ ವ್ಯಕ್ತಪಡಿಸಿದ್ದಾರೆ. Link: ಕೊರೊನಾ ಲಸಿಕೆ ಹಾಕಿಸಿಕೊಂಡ 102 ವರ್ಷದ ನಿವೃತ್ತ ಸೇನಾಧಿಕಾರಿ ನೀಡಿದ 2 ಕಾರಣಗಳಿವು
7. ಅಚ್ಚರಿಗೆ ಕಾರಣವಾದ ಕಲಬುರಗಿ ಜೋಳ ಬೆಳೆ: ಜೋಳದ ಬೀಜಕ್ಕೆ ಬಂತು ಬಲು ಡಿಮ್ಯಾಂಡ್ ಕಳೆದ ಮೂರು ತಲೆಮಾರುಗಳಿಂದ ಯಳಮೇಲಿ ಕುಟುಂಬ ಕೃಷಿ ಮಾಡಿಕೊಂಡು ಬಂದಿದೆ. ಪ್ರತಿ ವರ್ಷ ಜೋಳ ಬೆಳೆಯುತ್ತಾರೆ. ಆದರೆ ಈ ಬಾರಿ ಬೆಳೆದಿರುವ ಜೋಳ ಎಲ್ಲರ ಅಚ್ಚರಿಗೆ ಕಾರಣವಾಗಿದೆ. Link: ಜೋಳದ ಬೀಜಕ್ಕೆ ಬಂತು ಬಲು ಡಿಮ್ಯಾಂಡ್
8. ಅನೂಪ್ ಭಂಡಾರಿ ಹುಟ್ಟುಹಬ್ಬಕ್ಕೆ ವಿಕ್ರಾಂತ್ ರೋಣ ಕಿಚ್ಚನಿಂದ ಶುಭ ಹಾರೈಕೆ ‘ನೀವೊಬ್ಬ ಅತ್ಯುತ್ತಮ ವ್ಯಕ್ತಿ. ಪ್ರಾಮಾಣಿಕವಾಗಿ ನೀವು ಮಾಡುವ ಎಲ್ಲ ಕೆಲಸವೂ ನಿಮ್ಮ ವ್ಯಕ್ತಿತ್ವ ಏನೆಂಬುದನ್ನು ತಿಳಿಸುತ್ತದೆ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಅಭಿಮಾನಿಗಳಿಂದಲೂ ಅನೂಪ್ಗೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. Link: Anup Bhandari Birthday
9. ಶುಭಾ ಪೂಂಜಾಗೆ ಅಶ್ಲೀಲ ಕಮೆಂಟ್ ಬಿಗ್ ಬಾಸ್ನಲ್ಲಿರುವ ಶುಭಾ ಪೂಂಜಾಗೆ ಅಶ್ಲೀಲ ಕಮೆಂಟ್; ನಿಮಗೂ ಅಕ್ಕ-ತಂಗಿ ಇದ್ದಾರೆ ಅಲ್ವೇ? ನಟಿ ಪ್ರಶ್ನೆ! Link: ನಿಮಗೂ ಅಕ್ಕತಂಗಿ ಇದ್ದಾರೆ ಅಲ್ವೇ
ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.
Published On - 6:42 pm, Tue, 2 March 21