ಮನೆಗೇ ಬಂದು ಲಸಿಕೆ ಹಾಕಿದ ಆರೋಗ್ಯ ಸಿಬ್ಬಂದಿ.. ಸಚಿವ ಬಿ.ಸಿ. ಪಾಟೀಲ್​ರಿಂದ ಇದೆಂಥಾ ದರ್ಬಾರ್..?

ಹೌದು ಇಂದು(ಮಾರ್ಚ್.03) ಬಿ.ಸಿ. ಪಾಟೀಲ್ ನರ್ಸ್​ಗಳನ್ನ ತಮ್ಮ ಮನೆಗೆ ಕರೆಸಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಸಚಿವರಾದ ಮಾತ್ರಕ್ಕೆ ಆರೋಗ್ಯ ಸಿಬ್ಬಂದಿಯನ್ನೇ ತಮ್ಮ ಮನೆಗೆ ಕರೆಸಿ ದರ್ಪ ತೋರಿಸುವುದ ಎಷ್ಟು ಸರಿ ಎಂದು ಕೆಲವರು ಸಚಿವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • TV9 Web Team
  • Published On - 13:13 PM, 2 Mar 2021
ಮನೆಗೇ ಬಂದು ಲಸಿಕೆ ಹಾಕಿದ ಆರೋಗ್ಯ ಸಿಬ್ಬಂದಿ.. ಸಚಿವ ಬಿ.ಸಿ. ಪಾಟೀಲ್​ರಿಂದ ಇದೆಂಥಾ ದರ್ಬಾರ್..?
ಮನೆಯಲ್ಲೇ ಕೊರೊನಾ ಲಸಿಕೆ ಪಡೆದ ಬಿ.ಸಿ. ಪಾಟೀಲ್

ಹಾವೇರಿ: ದೇಶಾದ್ಯಂತ ನಿನ್ನೆಯಿಂದ ಮೂರನೇ ಹಂತದ ವ್ಯಾಕ್ಸಿ‘ನೇಷನ್’ ಆರಂಭವಾಗಿದೆ. ಸ್ವತ: ಪ್ರಧಾನಿ ಮೋದಿ ಆಸ್ಪತ್ರೆಗೆ ಹೋಗಿ ನಿನ್ನೆ(ಮಾರ್ಚ್ 01) ಲಸಿಕೆ ಪಡೆಯೋ ಮೂಲಕ 130 ಕೋಟಿ ಜನರಿಗೆ ಲಸಿಕೆ ಪಡೆಯಲು ಪ್ರೇರೇಪಿಸಿದ್ದಾರೆ. ಆದ್ರೆ ಈ ಮಧ್ಯೆ, ರಾಜ್ಯದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಹಾಗೂ ಅವರ ಕುಟುಂಬ ಸಹ ಲಸಿಕೆ ಹಾಕಿಸಿಕೊಂಡಿದ್ದು ಸಚಿವರ ದೌಲತ್ತಿಗೆ ಆಕ್ರೋಶ ವ್ಯಕ್ತವಾಗಿದೆ.

ಹೌದು ಇಂದು (ಮಾರ್ಚ್ 03) ಬಿ.ಸಿ. ಪಾಟೀಲ್ ನರ್ಸ್​ಗಳನ್ನ ತಮ್ಮ ಮನೆಗೆ ಕರೆಸಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಸಚಿವರಾದ ಮಾತ್ರಕ್ಕೆ ಆರೋಗ್ಯ ಸಿಬ್ಬಂದಿಯನ್ನೇ ತಮ್ಮ ಮನೆಗೆ ಕರೆಸಿ ದರ್ಪ ತೋರಿಸುವುದು ಎಷ್ಟು ಸರಿ ಎಂದು ಕೆಲವರು ಸಚಿವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕರಿಗೆ ಸಮಸ್ಯೆಯಾಗಬಾರದೆಂದು ಬೆಳ್ಳಂ ಬೆಳಗ್ಗೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಎಲ್ಲರಂತೆ ಸರದಿಯಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದ್ರೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಮನೆಗೇ ಲಸಿಕೆ ತರಿಸಿಕೊಂಡಿದ್ದಾರೆ.

ಸಚಿವ ಬಿ.ಸಿ.ಪಾಟೀಲ್, ಪತ್ನಿ ವನಜಾ ಪಾಟೀಲ್ ಅವರು ಹಾವೇರಿ ಜಿಲ್ಲೆ ಹಿರೇಕೆರೂರಿನ ತಮ್ಮ ನಿವಾಸದಲ್ಲಿ ಆರೋಗ್ಯ ಸಿಬ್ಬಂದಿಯಿಂದ ಮನೆಯಲ್ಲೇ ಕೊವಿಡ್ ಲಸಿಕೆ ಪಡೆದಿದ್ದಾರೆ. ಸಾಮಾನ್ಯವಾಗಿ ಲಸಿಕೆ ಬಳಿಕ 30 ನಿಮಿಷಗಳ ಕಾಲ ನಿಗಾ ವಹಿಸುವ ಅಗತ್ಯವಿರುತ್ತದೆ. ಆದ್ರೆ ಮನೆಯಲ್ಲಿಯೇ ಲಸಿಕೆ ಪಡೆದಿದ್ದು ಏಕೆ? ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ಲಸಿಕೆ ಪಡೆಯುವಾಗ ಮುನ್ನೆಚ್ಚರಿಕೆ ಕ್ರಮಗಳು ಅಗತ್ಯ. ಹೀಗಾಗಿಯೇ ಎಲ್ಲರಿಗೂ ಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಸೂಚನೆ ನೀಡಲಾಗಿದೆ. ಆದ್ರೆ ಸಚಿವ ಬಿ.ಸಿ.ಪಾಟೀಲ್ ತಮ್ಮದೇ ನಿಯಮವನ್ನು ರೂಪಿಸಿಕೊಂಡಿದ್ದಾರೆ.

ಆಸ್ಪತ್ರೆಗೆ ಹೋಗಿ ಲಸಿಕೆ ಪಡೆಯಬೇಕೆಂದು ಗೊತ್ತಿರಲಿಲ್ಲ
ಇನ್ನು ಈ ಬಗ್ಗೆ ಟಿವಿ9ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಮಾರ್ಗಸೂಚಿಯಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ. 30 ನಿಮಿಷಗಳ ಕಾಲ ವಿಶ್ರಾಂತಿ ಪಡೀಬೇಕೆಂದು ಗೊತ್ತಿತ್ತು. ನಿನ್ನೆ ನಾನು ಮನೆಗೆ ತಡವಾಗಿ ಬಂದಿದ್ದೆ. ಕ್ಷೇತ್ರದ ಜನರೂ ಕೂಡ ಬೆಳಗ್ಗೆಯೇ ಮನೆಗೆ ಬಂದಿದ್ದರು. ಹೀಗಾಗಿ ಮನೆಯಲ್ಲಿಯೇ ವೈದ್ಯರಿಂದ ಲಸಿಕೆ ಪಡೆದಿದ್ದೇನೆ. ಆಸ್ಪತ್ರೆಗೆ ಹೋಗಿ ಲಸಿಕೆ ಪಡೆಯಬೇಕೆಂದು ಗೊತ್ತಿರಲಿಲ್ಲ. ಈ ವಿಷಯ ನನಗೆ ಗೊತ್ತಾಗಿದ್ದರೆ ಆಸ್ಪತ್ರೆಗೆ ಹೋಗುತ್ತಿದ್ದೆ. ನನಗೆ ಅನಾರೋಗ್ಯ ಇದ್ದಾಗ ವೈದ್ಯರು ಮನೆಗೆ ಬರ್ತಿದ್ರು. ಅದೇ ರೀತಿ ಇಂದು ವೈದ್ಯರನ್ನು ಕರೆದು ಲಸಿಕೆ ಪಡೆದಿದ್ದೇನೆ ಎಂದು ಹೇಳಿದ್ದಾರೆ.

BC patil wife

ಮನೆಯಲ್ಲೇ ಲಸಿಕೆ ಪಡೆದ ವನಜಾ ಪಾಟೀಲ್

ಇದನ್ನೂ ಓದಿ: Covid 19 Vaccination: ದೆಹಲಿಯ ಏಮ್ಸ್‌ನಲ್ಲಿ ಕೊರೊನಾ ಲಸಿಕೆ ಪಡೆದ ಪ್ರಧಾನಿ ನರೇಂದ್ರ ಮೋದಿ